For Quick Alerts
ALLOW NOTIFICATIONS  
For Daily Alerts

ಜೀವನದಲ್ಲಿ ಎಲ್ಲವೂ ಬೇಕೆನ್ನುವ ದುರಾಸೆಯ ರಾಶಿಚಕ್ರಗಳು!

By Deepu
|

ಪ್ರತಿಯೊಬ್ಬರಿಗೂ ಆಸೆ ಎನ್ನುವುದು ಇದ್ದೇ ಇರುವುದು. ಅದು ಇಲ್ಲದೇ ಹೋದಲ್ಲಿ ಆತ ಪರಿತ್ಯಾಗಿ ಎನ್ನಬಹುದು. ಮನುಷ್ಯನಲ್ಲಿ ಆಸೆ ಇರಬೇಕು. ಆದರೆ ದುರಾಸೆ ಇರಬಾರದು ಎಂದು ಬುದ್ಧ ಕೂಡ ಹೇಳಿದ್ದಾನೆ. ಕೆಲವೊಂದು ರಾಶಿಯವರಲ್ಲಿ ಈ ದುರಾಸೆಯು ಎದ್ದು ಕಾಣುವುದು. ಇವರಿಗೆ ಭೂಮಿ ಮೇಲಿರುವಂತಹ ಪ್ರತಿಯೊಂದು ವಸ್ತುಗಳು, ಸುಖ, ಸಂಪತ್ತು ಬೇಕು. ತನ್ನದಲ್ಲದೇ ಇರುವ ವಸ್ತುಗಳು ಕೂಡ ಇವರಿಗೆ ಬೇಕು.

ಇಂತಹ ರಾಶಿಚಕ್ರಗಳ ಬಗ್ಗೆ ಜ್ಯೋತಿಷ್ಯವು ಏನು ಹೇಳುತ್ತದೆ ಎಂದು ನಿಮಗೆ ಈ ಲೇಖನದಲ್ಲಿ ತಿಳಿಸಿ ಕೊಡಲಿದ್ದೇವೆ. ಇದು ಕೇವಲ ಭವಿಷ್ಯ ಮಾತ್ರ. ಇದರಿಂದ ನೀವು ಬೇಸರ ಪಡಬೇಕಾಗಿಲ್ಲ. ಇದರಲ್ಲಿ ನಿಮ್ಮ ರಾಶಿಯಿದ್ದರೆ ಆಗ ಖಂಡಿತವಾಗಿಯೂ ಬೇಸರಪಡಬೇಡಿ....

ವೃಷಭ

ವೃಷಭ

ವೃಷಭ ರಾಶಿಯವರು ಜೀವನವನ್ನು ಪ್ರೀತಿಸುವರು. ಎಲ್ಲಾ ಸಮಯದಲ್ಲಿ ಇವರು ಏನಾದರೂ ಹೊಸತನ್ನು ಅನುಭವಿಸಲು ಇಷ್ಟಪಡುವರು ಮತ್ತು ಇನ್ನೊಂದು ಕಡೆಯಲ್ಲಿ ಇವರು ತಮ್ಮ ಸ್ಥಾನ ಕಸಿದುಕೊಳ್ಳಲು ಯಾರಾದರೂ ಬಂದರೆ ಅದಕ್ಕೂ ತಯಾರಾಗಿ ಇರುವರು. ಇವರು ಆಹಾರವನ್ನು ಪ್ರೀತಿಸುವರು ಮತ್ತು ಹೊಸ ರುಚಿ ಮತ್ತು ತುಂಬಾ ದುಬಾರಿ ಭೋಜನವನ್ನು ಆನಂದಿಸಲು ಇವರು ದುರಾಸೆಗೆ ಒಳಗಾಗುವರು. ಇನ್ನು ಈ ರಾಶಿಯವರು ವೃಷಭ ರಾಶಿಯವರು ಹುಟ್ಟು ಜಗಳಗಂಟರಲ್ಲ. ಬೇರೆಯವರಿಂದ ಅಪಾಯವಾದಾಗ, ಬೆದರಿಕೆ ಬಂದಾಗ ಮಾತ್ರ ಇವರು ಕೋಪೋದ್ರೆಕ್ತಗೊಳ್ಳುತ್ತಾರೆ. ಪದೇ ಪದೇ ಜಗಳ ಮಾಡುವ ಸ್ವಭಾವ ಇವರದ್ದಲ್ಲ. ಆದರೆ ವೃಷಭ ರಾಶಿಯವರೊಡನೆ ಇದ್ದ ಒಪ್ಪಂದ ಮುರಿದರೆ ಸ್ವಲ್ಪ ಸಮಯದವರೆಗೆ ನೀವು ಅವರಿಂದ ದೂರ ಉಳಿಯುವುದೇ ಲೇಸು. ಒಂದು ವೇಳೆ ತಮ್ಮ ತಪ್ಪಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿ ವೃಷಭ ರಾಶಿಯವರಲ್ಲಿ ಇರುವುದಿಲ್ಲ ಯಾಕೆಂದರೆ ಅವರು ತಾವು ತಪ್ಪು ಎಸಗುವುದು ಬಹಳ ವಿರಳವೆಂದು ಭಾವಿಸಿರುತ್ತಾರೆ. ಜೊತೆಗೆ ಅವರು ತಮ್ಮ ವಾದದಲ್ಲಿ ಬಹಳ ವಿಶ್ವಾಸ ಹೊಂದಿರುತ್ತಾರೆ. ಒಂದು ವೇಳೆ ಸಾಕ್ಷ್ಯಾಧಾರಗಳು ತಮ್ಮ ವಿರುದ್ಧವಿದ್ದರೂ ಬಹಳ ಬೇಗನೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಇವರು ಯೋಗ್ಯರಿರುತ್ತಾರೆ. ಹಾಗಾಗಿ ವೃಷಭ ರಾಶಿಯವರೊಡನೆ ಕಾಲೆಳೆದು ಜಗಳಕ್ಕೆ ನಿಲ್ಲುವಾಗ ಜಾಗರೂಕರಾಗಿರಿ.

ಸಿಂಹ

ಸಿಂಹ

ಸಿಂಹ ರಾಶಿಯವರು ಯಾವಾಗಲೂ ತಮ್ಮ ಚತರು ವ್ಯಕ್ತಿತ್ವ ತೋರಿಸಲು ಬಯಸುವರು. ಇವರು ಯಾವಾಗಲೂ ಲೋಪದೋಷ ಮತ್ತು ಚತುರತೆಯಿಂದ ಹೊರಬರುವ ಮಾರ್ಗ ನೋಡುತ್ತ ಲಿರುವರು. ತುಂಬಾ ದೊಡ್ಡದು ಮತ್ತು ಹೊಳಪಿನ ವಸ್ತುಗಳನ್ನು ಖರೀದಿಸುವರು. ಇದರ ಹೊರತಾಗಿ ಇವರು ಜೀವನದ ಸ್ಪರ್ಧೆಯಲ್ಲಿ ಇವರು ತುಂಬಾ ಸ್ಪರ್ಧಾತ್ಮಕವಾಗಿರುವರು. ಇನ್ನು ಈ ರಾಶಿಯವರಿಗೆ ಹೆದರಿಕೆ ಅನ್ನುವುದು ಇವರ ಜಾಯಮಾನದಲ್ಲೇ ಇಲ್ಲ. ಸಿಂಹರಾಶಿಯವರನ್ನು ನೀವು ನಿಮ್ಮ ಪ್ರೀತಿಯ ಫ್ರೆಂಡ್ ಎಂದು ಪರಿಗಣಿಸಬಹುದು ಆದರೆ ಅದರ ಜೊತೆಜೊತೆಗೆ ನಿಮ್ಮ ಎದುರಾಳಿ ಎಂದು ಕೂಡ ಅಂದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದಾಗ ಅದನ್ನು ಸುಲಭದಲ್ಲೇ ಪರಿಹರಿಸಿಕೊಳ್ಳಬಹುದು ಆದರೂ ಸಿಂಹ ರಾಶಿಯವರು ಅದನ್ನು ಸುಲಭದಲ್ಲಿ ಪರಿಹರಿಸಿಕೊಳ್ಳಲು ಬಿಡುವುದಿಲ್ಲ. ಕೆಟ್ಟ ಭಾಷೆಗಳು, ಮುಖ ಕೆಂಪಗಾಗುವಂತ ಆರೋಪಗಳು ಇವರೊಡನೆ ವಾದಿಸುವಾಗ ಬಂದುಬಿಡುತ್ತೆ. ಹೆಚ್ಚು ಸಮರ್ಥಿಸಿ ಕೊಳ್ಳಲು ಹೊರಟರೆ ಆರೋಪಗಳು ಹೆಚ್ಚಾಗುತ್ತಾ ಸಾಗುತ್ತೆ. ಹಾಗಾಗಿ ಇವರನ್ನು ಜಗಳದಿಂದ ಕಟ್ಟಿಹಾಕಲು ಸಾಧ್ಯವಿಲ್ಲ ಬದಲಾಗಿ ಭಾವನೆಗಳಿಂದ ಎದುರಿಸ ಬೇಕಷ್ಟೇ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡದೆ ಸೂಕ್ಷ್ಮವಾಗಿ ಇವರೊಡನೆ ವ್ಯವಹರಿಸುವುದು ಸೂಕ್ತ.

ವೃಶ್ಚಿಕ

ವೃಶ್ಚಿಕ

ಇವರಿಗೆ ಆಕರ್ಷಣೆಯ ಕೇಂದ್ರವಾಗಲು ತುಂಬಾ ದುರಾಸೆ ಯಿರುವುದು. ಇವರು ತಮ್ಮ ಸಂಗಾತಿ ಇತರರೊಂದಿಗೆ ಹರಟುವುದು ಅಥವಾ ಹೊರಗಡೆ ಹೋಗುವುದನ್ನು ಇಷ್ಟಪಡಲ್ಲ. ಇವರು ತುಂಬಾ ಹೊಟ್ಟೆಕಿಚ್ಚಿನವರು ಮತ್ತು ಇವರ ಹೊಟ್ಟೆಕಿಚ್ಚು ಇವರನ್ನು ತುಂಬಾ ದುರಾಸೆಯ ವ್ಯಕ್ತಿಯನ್ನಾಗಿ ಮಾಡುವುದು. ಪ್ರೀತಿಪಾತ್ರರ ಬಗ್ಗೆ ಇವರು ಗೀಳು ಹೊಂದಿರುವರು. ಇನ್ನೊಂದೆಡೆ ಯಲ್ಲಿ ಇವರಿಗೆ ಪರಿಸ್ಥಿತಿ ಮೇಲೆ ನಿಯಂತ್ರಣ ಸಿಗದೇ ಇದ್ದಾಗ ಅವರು ಅದನ್ನು ಬದಲಾಯಿಸಿ ತಮ್ಮ ಆಸೆಗಳನ್ನು ಈಡೇರಿಸಿ ಕೊಳ್ಳುವರು. ಬೇರೆಯವರ ಬೇಡಿಕೆಗೆ ಇವರು ಗಮನ ಹರಿಸುವುದು ಕಡಿಮೆ ಮತ್ತು ತಮ್ಮ ಬಗ್ಗೆಯೇ ಯೋಚಿಸುವರು. ಇನ್ನು ಈ ರಾಶಿಯವರು ಇವರು ದೊಡ್ಡ ಹೋರಾಟಗಾರರಲ್ಲ. ಆದರೆ ಅವರಿಗೆ ನಿವೇನಾದರೂ ತಪ್ಪು ಮಾಡಿದ್ದೀರಿ ಅಥವಾ ರಕ್ಷಣಾ ವಲಯದ ಮೇಲೆ ದಾಳಿ ಮಾಡಿದ್ದೀರಿ ಎಂದು ಅನಿಸಿದರೆ ಆಗ ನೀವು ಏನು ತಪ್ಪು ಮಾಡುತ್ತಿದ್ದೀರಿ ಎಂದು ನಿಮಗೆ ಮನವರಿಕೆ ಮಾಡಿಕೊಡುವರು. ನೀವು ತಪ್ಪು ಮಾಡಿದ್ದೀರಿ ಎಂದು ಮನವರಿಕೆ ಮಾಡಿಕೊಳ್ಳುವ ಮೊದಲೇ ಅವರ ವಾದವು ಶೂನ್ಯದಿಂದ 60ರ ತನಕ ತಲುಪುವುದು. ನೀವು ವಾದ ಕೊನೆಗೊಳಿಸುವಂತೆ ಅವರು ಮಾಡಬಹುದು. ಇದರಿಂದ ನಿಮಗೆ ತುಂಬಾ ನೋವಾಗಲೂ ಬಹುದು.

 ಮಕರ

ಮಕರ

ಮಕರ ರಾಶಿಯವರು ತನ್ನ ಉದ್ಯೋಗಿಗಳಿಗೆ ದೊಡ್ಡ ಮಟ್ಟದ ಬೋನಸ್ ನೀಡುವಂತಹ ಮಾಲಕನಿದ್ದಂತೆ. ಇವರು ಅಷ್ಟು ಮಟ್ಟದ ಸ್ವಾರ್ಥಿಗಳಲ್ಲ. ಎಲ್ಲಾ ಕಷ್ಟದ ಕೆಲಸಗಳಿಂದ ಬರುವ ಪ್ರತಿಫಲವು ತಮಗೆ ಸಿಗಬೇಕೆಂದು ಅವರು ನಂಬುವುದಿಲ್ಲ ಮತ್ತು ಇದಕ್ಕೆ ಪ್ರತಿಫಲ ನೀಡ ಬೇಕೆಂದು ಬಯಸುವರು. ಇವರು ಬಯಸಿದಂತೆ ಕೆಲಸವು ಆಗದೇ ಇದ್ದರೆ ಆಗ ಅದನ್ನು ಮಾಡಲು ಇವರು ಯಾವುದೇ ಹಂತಕ್ಕೂ ಹೋಗಬಹುದು. ಇನ್ನು ಇನ್ನು ಎಲ್ಲಾ ರಾಶಿ ಚಕ್ರಗಳಲ್ಲಿ ಅತ್ಯಂತ ಶ್ರಮಜೀವಿಗಳಾಗಿ ಕೆಲಸ ಮಾಡುವ ರಾಶಿಚಕ್ರದವರು ಯಾರೆಂದು ನೋಡಿದರೆ ಮಕರ ರಾಶಿಯವರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರಿಗೆ ಕೆಲಸ ದೊಡ್ಡದಾಗಿರಲಿ ಅಥವಾ ಚಿಕ್ಕದೇ ಆಗಿರಲಿ, ಮಾಡುವ ಕೆಲಸದಲ್ಲಿ ಅತ್ಯಂತ ಶ್ರದ್ಧೆ ಹಾಗೂ ತಲ್ಲೀನತೆಯನ್ನು ತೋರುತ್ತಾರೆ. ಈ ರಾಶಿಯವರನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಮೇಕೆಗೆ ಹೋಲಿಸುತ್ತಾರೆ. ಮೇಕೆಯು ಅತ್ಯಂತ ಶ್ರಮಜೀವಿ. ಹಾಗೂ ಗಟ್ಟಿಯಾದ ತಲೆಯನ್ನು ಹೊಂದಿರುತ್ತಾರೆ. ಇವರು ಮಾಡುವ ಕೆಲಸದಲ್ಲಿ ಪರಿಪೂರ್ಣತೆ ಯೊಂದಿಗೆ ಗುರಿಯನ್ನು ತಲುಪುತ್ತಾರೆ. ಅಷ್ಟೇ ಅಲ್ಲದೆ ಇವರಿಗೆ ಕೆಲಸ ಮಾಡಲು ಆಯ್ಕೆಯ ಅಗತ್ಯವಿರುವುದಿಲ್ಲ. ಎಲ್ಲಾ ಕೆಲಸವನ್ನು ಸುಸೂತ್ರವಾಗಿ ನೆರವೇರಿಸುತ್ತಾರೆ. ಅವರು ಮಾಡುವ ಕೆಲಸದಲ್ಲಿ ಶ್ರದ್ಧೆ ಇಟ್ಟು ಮಾಡುವುದರಿಂದ ಕೆಲಸದಲ್ಲಿ ಪರಿಪೂರ್ಣತೆ ಇರುವುದನ್ನು ಗಮನಿಸಬಹುದು.

English summary

Greedy Zodiac Signs Who Want Everything In Life

There are few people we all have come across whose one trait separates them from the rest, and it is all about being greedy! These individuals seem to be so greedy that they would want everything in their lives, things that sometimes are not even meant for them; they want to get their hands on them.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more