For Quick Alerts
ALLOW NOTIFICATIONS  
For Daily Alerts

2018ರಲ್ಲಿ ರಾಶಿ ಚಕ್ರ: ನಿಮ್ಮ ಭವಿಷ್ಯ ಹೀಗೂ ಬದಲಾವಣೆ ಕಾಣಬಹುದು...

By Manu
|

ಭವಿಷ್ಯದಲ್ಲಿ ವಿವಿಧ ಬದಲಾವಣೆಗಳು ನಡೆಯುತ್ತಲೇ ಇರುತ್ತದೆ. ಅದಕ್ಕಾಗಿ ನಾವು ಮಾನಸಿಕವಾಗಿ ತಯಾರಾಗಿರಬೇಕು ಎನ್ನುವುದನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದಿರುತ್ತಾರೆ. ಆದರೆ ಹೀಗೆ ನಡೆಯುತ್ತದೆ ಅಥವಾ ಬದಲಾವಣೆಗೆ ನಾವು ಹೇಗೆ ವರ್ತಿಸಬೇಕು ಎನ್ನುವುದನ್ನು ಯಾರು ತಿಳಿದಿರುವುದಿಲ್ಲ. ಬಂದ ಸನ್ನಿವೇಶಗಳನ್ನು ಸ್ವೀಕರಿಸುತ್ತಾ ಸಾಗುವುದು ಜೀವನ. ಅದರಲ್ಲಿ ಕಷ್ಟಗಳಿರಬಹುದು ಅಥವಾ ಸುಖವೇ ಆಗಿರಬಹುದು. ಉಂಟಾಗುವ ಬದಲಾವಣೆಗಳಿಗೆ ವಿಶೇಷ ಶಕ್ತಿಗಳಲಾದ ಗ್ರಹಗತಿಗಳು ಎನ್ನುವುದನ್ನು ಯಾರೂ ಮರೆಯುವಂತಿಲ್ಲ.

ಹೌದು, ಈ ವರ್ಷ ಅಂದರೆ 2018ರಲ್ಲಿ ವಿವಿಧ ಗ್ರಹಗಳು ಕೆಲವು ರಾಶಿ ಚಕ್ರಗಳಿಂದ ಚಲನೆಯನ್ನು ಪಡೆದುಕೊಂಡಿವೆ. ಇನ್ನೂ ಕೆಲವು ಗ್ರಹಗಳು ಹೊಸ ಮನೆಯನ್ನು ಪ್ರವೇಶ ಪಡೆಯುತ್ತದೆ. ಈ ಬದಲಾವಣೆಯು ರಾಶಿ ಚಕ್ರದ ಮೇಲೆ ಗಣನೀಯವಾದ ಪರಿಣಾಮ ಬೀಳುತ್ತದೆ ಎಂದು ಹೇಳಗಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗತಿಗಳ ಬದಲಾವಣೆ ಈ ವರ್ಷ ಅನುಕೂಲಕರ ಪರಿಸ್ಥಿತಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿದೆ. ಅವು ಎಲ್ಲಾ ರಾಶಿಚಕ್ರಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಲಾಗುತ್ತಿದೆ. ಈ ಒಂದು ವಿಶೇಷ ಬದಲಾವಣೆಯಿಂದ ನಿಮ್ಮ ರಾಶಿ ಚಕ್ರದಲ್ಲಿ ಯಾವೆಲ್ಲಾ ಬದಲಾವಣೆಗಳು ನಡೆಯಬಹುದು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಕಾತುರದಲ್ಲಿದ್ದರೆ ಈ ಮುಂದೆ ನೀಡಿರುವ ರಾಶಿ ಭವಿಷ್ಯದ ವಿವರಣೆಯನ್ನು ಪರಿಶೀಲಿಸಿ...

ಮೇಷ

ಮೇಷ

2018ರ ವರ್ಷ ಮೇಷ ರಾಶಿಯವರಿಗೆ ಅತ್ಯಂತ ಅದೃಷ್ಟಕರವಾದ ವರ್ಷ ಎಂದು ಹೇಳಬಹುದು. ಈ ವರ್ಷ ನೀವು ನಿಮ್ಮ ಮನೆಯನ್ನು ನವೀಕರಿಸುವುದು ಅಥವಾ ಹೊಸ ಮನೆಯ ಖರೀದಿ ಮಾಡುವ ಆಕಾಂಕ್ಷೆಯನ್ನು ಹೊಂದುವಿರಿ. ನಿಮ್ಮ ಕನಸು ನನಸಾಗುವ ಸಾಧ್ಯತೆಗಳೂ ಹೆಚ್ಚಿವೆ. ವೃತ್ತಿ ಜೀವನದಲ್ಲಿ ಕೆಲವು ಪ್ರಶಂಸೆ, ಪ್ರಚಾರ ಅಥವಾ ವರ್ಗಾವಣೆಯಮೂಲಕ ಧನಾತ್ಮಕ ಬದಲಾವಣೆಯನ್ನು ಅನುಭವಿಸುವಿರಿ. ಒಟ್ಟಿನಲ್ಲಿ ಈ ವರ್ಷ ನಿಮಗೆ ಉತ್ತಮ ವರ್ಷವಾಗುವುದು. ಈ ರಾಶಿಯವರು ಜೀವನವನ್ನು ಸದಾ ಧನಾತ್ಮಕರೂಪದಲ್ಲಿ ಕಾಣುತ್ತಾರೆ ಹಾಗೂ ಸದಾ ಜೀವನದಲ್ಲಿ ಆಶಾವಾದಿಗಳಾಗಿರುತ್ತಾರೆ. ಇವರು ಹೆಚ್ಚಾಗಿ ಸ್ವಂತ ವ್ಯಕ್ತಿತ್ವವುಳ್ಳವರಾಗಿದ್ದು ಯಾವುದೇ ಹಂಗಿನಲ್ಲಿ ಇರಲು ಇಚ್ಛಿಸುವುದಿಲ್ಲ. ನಿಮಗೆ ಅದೃಷ್ಟ ತರುವ ಗುಣವೆಂದರೆ ಪ್ರಯಾಣ! ಪ್ರತಿಸಲವೂ ಯಾವುದಾದರೂ ಹೊಸ ಸ್ಥಳಕ್ಕೆ ಪ್ರಯಾಣಿಸಿದಾಗಲೂ ಅಲ್ಲಿಂದ ಏನಾದರೊಂದು ಹೊಸತನ್ನು ಕಲಿಯುವುದು ನಿಮ್ಮ ಜಾಯಾಮಾನವಾಗಿದೆ. ಸುತ್ತ ಮುತ್ತಲಿನವರಲ್ಲಿನ ಉತ್ತಮ ಗುಣಗಳನ್ನೇ ಕಾಣುವ ನೀವು ಎಲ್ಲರ ಮೆಚ್ಚುಗೆಯ ವ್ಯಕ್ತಿಯಾಗುತ್ತೀರಿ. ಇವರಿಗೆ ಗಾಢ ಬಣ್ಣಗಳಾದ ಕೆಂಪು ಮತ್ತು ಕಿತ್ತಳೆ ಬಣ್ಣವು ಮಂಗಳವನ್ನು ತರುತ್ತದೆ. ಅದೃಷ್ಟ ಚಿಹ್ನೆಗಳೆಂದರೆ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು. ಮೇಷ ರಾಶಿಯವರು ಅತ್ಯಂತ ಶ್ರಮಜೀವಿಗಳಾಗಿರುತ್ತಾರೆ. ಅವರು ಬಯಸಿದ್ದನ್ನು ಪಡೆಯಲು ಹೆಚ್ಚು ಶ್ರಮ ಪಡುತ್ತಾರೆ. ಜೊತೆಗ ಮಧ್ಯದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗುತ್ತಾರೆ. ಗ್ರೀಕ್ ಶಾಸ್ತ್ರದ ಇವರ ಅದೃಷ್ಟದ ಸಂಕೇತ ಕೀಲಿ. ಕೀಲಿಯನ್ನು ಸ್ವರ್ಗಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಇದನ್ನು ಸ್ವರ್ಗಕ್ಕೆ ದಾರಿ ಎಂದು ನಂಬಲಾಗುವುದು. ಕೀಯು ಆರೋಗ್ಯ ಮತ್ತು ಸಮೃದ್ಧಿಯ ಮೂಲ.

ವೃಷಭ

ವೃಷಭ

2018ರಲ್ಲಿ ವೃಷಭ ರಾಶಿಯವರು ಅನೇಕ ಸವಾಲುಗಳನ್ನು ಎದುರಿಸ ಬೇಕಾಗುವುದು. ನೀವು ನಿರೀಕ್ಷಿಸಿದ ಮಟ್ಟದಲ್ಲಿ ನಿಮ್ಮ ವ್ಯಾಪಾರ ವಹಿವಾಟುಗಳು ನಡೆಯಲಾರವು. ಹಾಗಾಗಿ ನೀವು ಉನ್ನತ ಮಟ್ಟ ಏರಲು ಹಾಗೂ ನಿಮ್ಮ ಗುರಿಯನ್ನು ತಲುಪಲು ಅಧಿಕ ಶ್ರಮವನ್ನು ವಹಿಸಬೇಕು ಎಂದು ಹೇಳಲಾಗುತ್ತದೆ. ಕೆಲಸದ ಆರಂಭದಲ್ಲಿ ತಂದೆ ಅಥವಾ ಮನೆಯ ಹಿರಿಯ ಜನರಿಂದ ಅಡ್ಡಿ ಉಂಟಾಗುವ ಸಾಧ್ಯತೆಗಳಿವೆ. ಈ ರಾಶಿಯ ಜನರಿಗೆ ವಿಶಾಲವಾದ ಹೃದಯವಿದ್ದು ಎಲ್ಲಾ ಪ್ರಸಂಗಗಳಲ್ಲಿ ತಾಳ್ಮೆಯಿಂದ ವ್ಯವಹರಿಸುವ ಶಕ್ತಿಯಿದೆ. ಹತ್ತಿರದಿಂದ ಬಲ್ಲವರು ನಿಮ್ಮ ನಿಷ್ಠೆ ಮತ್ತು ನಂಬುಗೆಯನ್ನು ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಪುಸ್ತಕ. ಪ್ರತಿಬಾರಿ ನೀವು ಒಂದು ಪುಸ್ತಕವನ್ನು ಓದಿದಾಗ ಅದರಿಂದ ನಿಮಗೆ ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ. ಇವರಿಗೆ ಶುಕ್ರವಾರ ಶುಭವನ್ನು ತರುತ್ತಾನೆ. ಆತನ ನೆಚ್ಚಿನ ವಸ್ತು ತಾಮ್ರ. ತಾಮ್ರದಿಂದ ತಯಾರಿಸಿದ ಆಭರಣಗಳನ್ನು ಧರಿಸುವುದರಿಂದ ಶುಭ ಉಂಟಾಗುವುದು. ಭೂಮಿಯು ಇವರಿಗೆ ಶುಭ ಸಂಕೇತವಾಗಿದ್ದರಿಂದ ಭೂಮಿಗೆ ಸಮಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಇವರ ಅದೃಷ್ಟ ಸಂಖ್ಯೆ 7. ಇದು ಆಧ್ಯಾತ್ಮಿಕವಾಗಿ ವಿಕಸನಗೊಂಡ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಗಣಿತದ ಪ್ರಕಾರ 7 ಅತ್ಯಂತ ಉತ್ತಮ ಹೆಜ್ಜೆಯೆಂದು ಕಂಡು ಬರುತ್ತದೆ. ಮತ್ತು ಅದನ್ನು ಅತ್ಯಂತ ಶಕ್ತಿಯುತ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ.

ಮಿಥುನ

ಮಿಥುನ

2018ರಲ್ಲಿ ಮಿಥುನ ರಾಶಿಯವರರಿಗೆ ಅತ್ಯಂತ ಉತ್ತಮವಾದ ವರ್ಷವಾಗಲಿದೆ. ಕಲೆ, ವಿನ್ಯಾಸ, ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವೃತ್ತಿಯನ್ನು ತೊಡಗಿಸಿಕೊಂಡವರಿಗೆ ಉತ್ತಮ ಲಾಭ ಮತ್ತು ಶ್ರೆಯಸ್ಸು ಉಂಟಾಗುವುದು. ಸ್ಪಲ್ಪ ದಿನಗಳ ಕಾಲ ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದುವ ಸಾಧ್ಯತೆಗಳಿವೆ. ಸೂಕ್ತ ರೀತಿಯಲ್ಲಿ ಗೊಂದಲವನ್ನು ಪರಿಹರಿಸಿಕೊಂಡರೆ ಸಮಸ್ಯೆಗಳು ಬಗೆಹರಿಯುವುದು. ಈ ವರ್ಷ ವಿದ್ಯಾರ್ಥಿಗಳು ಸಕಾರಾತ್ಮಕ ಬದಲಾವಣೆಯನ್ನು ಅನುಭವಿಸುವರು. ಈ ರಾಶಿಯ ಜನರು ಸದಾ ಚಟುವಟಿಕೆಯುಳ್ಳವರಾಗಿದ್ದು ಸ್ನೇಹಪರ ಮತ್ತು ತಮಾಷೆಯ ವ್ಯಕ್ತಿತ್ವದವರಾಗಿದ್ದಾರೆ. ಇವರ ಕಲ್ಪನೆ ವಿಪರೀತ ತೂಪ ಪಡೆದು ಇದಕ್ಕೆ ವಿಚಿತ್ರವಾದ ಉತ್ತರವನ್ನೂ ಪಡೆಯುವಲ್ಲಿ ಸಫಲಾರಾಗುತ್ತಾರೆ. ಈ ರಾಶಿಯ ಜನರಿಗೆ ಅದೃಷ್ಟ ತರುವ ಗುಣವೆಂದರೆ ಅವರ ಕುಟುಂಬ. ಪ್ರತಿ ಬಾರಿ ವಿಚಿತ್ರ ಕಲ್ಪನೆಯ ಕಾರಣ ಅಸಂಭವವನ್ನು ಸಾಧಿಸಲು ಹೋಗಿ ತೊಂದರೆಗೆ ಒಳಗಾದಾಗ ನಿಮ್ಮ ಕುಟುಂಬವೇ ನಿಮ್ಮನ್ನು ರಕ್ಷಿಸುತ್ತದೆ.ಇವರಿಗೆ ಅದೃಷ್ಟವು ಗಾಳಿ, ರೆಕ್ಕೆಯ ಚಿಹ್ನೆ ಹಾಗೂ ಪಕ್ಷಿಗಳು. ಈ ಎಲ್ಲದರ ಸಂಕೇತ ವಾದ ವಸ್ತುಗಳನ್ನು ಇಟ್ಟುಕೊಳ್ಳುವುದು ಮತ್ತು ಪಕ್ಷಿಯನ್ನು ಸಾಕುವುದರಿಂದ ಕೆಟ್ಟ ಅದೃಷ್ಟವನ್ನು ಓಡಿಸಿ. ಒಳ್ಳೆಯ ಅದೃಷ್ಟವನ್ನು ಪಡೆದು ಕೊಳ್ಳಬಹುದು. ಗ್ರೀಕ್ ಶಾಸ್ತ್ರದ ಈ ರಾಶಿಯವರು ಮಲಗುವ ಕೋಣೆ ಹಾಗೂ ಕಾರುಗಳಲ್ಲಿ ಅಲಂಕಾರಿ ವಸ್ತುಗಳನ್ನು ಇಡಲು ಬಯಸುತ್ತಾರೆ. ಇದು ಚಿಕ್ಕ ವಿಷಯ ಎನಿಸಬಹುದು ಆದರೆ ಅವರಿಗೆ ಈ ಸಂಗತಿಯೇ ಅದ್ಭುತವನ್ನು ಸೃಷ್ಟಿ ಮಾಡಿಕೊಡುತ್ತದೆ.

ಕರ್ಕ

ಕರ್ಕ

ಪ್ರೀತಿ, ಮದುವೆ ಮತ್ತು ಸಂಬಂಧಗಳ ವಿಚಾರದಲ್ಲಿ ಕರ್ಕ ರಾಶಿಯವರಿಗೆ 2018 ಅಷ್ಟು ಉತ್ತಮವಾದ ಫಲಿತಾಂಶವನ್ನು ನೀಡದು. ವಿದೇಶಯಾನ ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ಆರೋಗ್ಯವೂ ವರ್ಷ ಪೂರ್ತಿ ಉತ್ತಮ ಸ್ಥಿತಿಯಲ್ಲಿ ಇರುವುದು. ಕುಂಟ, ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದುವಿರಿ. ಈ ರಾಶಿಯ ಜನರು ನಿಷ್ಠಾವಂತರು ಹಾಗೂ ನಂಬಿಕೆಗೆ ಅರ್ಹರಾದ ಜನರಾಗಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮನ್ನು ನಂಬಿದವರನ್ನು ಕೈಬಿಡದ ಗುಣ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ತಳೆಯಲು ಸಾಧ್ಯವಾಗುತ್ತದೆ. ಆದರೆ ನೀವು ಸೂಕ್ಷ್ಮಸ್ವಭಾವದವರೂ ಆಗಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸಾಕುಪ್ರಾಣಿ. ಇದು ನಿಮಗೆ ನಿಷ್ಠೆಯಿಂದಿದ್ದು ಸದಾ ನಿಮ್ಮ ಬೆಂಗಾವಲಿಗಿರುತ್ತದೆ. ಈ ಪ್ರಾಣಿಗಳ ಸಾಂಗತ್ಯದಲ್ಲಿ ನೀವು ಸುಖ, ನೆಮ್ಮದಿಯನ್ನು ಪಡೆಯುತ್ತೀರಿ. ಇವರ ಅದೃಷ್ಟದ ಚಿಹ್ನೆಗಳು ನಕ್ಷತ್ರ ಮೀನು, ಮೀನು, ಡಾಲ್‍ಫಿನ್. ಇವರು ನೀರಿನಲ್ಲಿರುವಂತಹ ವಸ್ತುಗಳಾದ ಚಿಪ್ಪುಗಳು, ಮುತ್ತುಗಳಂತಹ ವಸ್ತುಗಳನ್ನು ಧರಿಸುವುದರಿಂದ ಅತ್ಯಂತ ಸಂತೋಷ ಲಭಿಸುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರು ಸದಾ ಸಂತೋಷದಿಂದ ಇರಲು ಬಯಸುತ್ತಾರೆ. ಇವರ ಲಕ್ಕಿ ಅದೃಷ್ಟವು ನಗು ಎಂದೇ ಹೇಳಬಹುದು. ಪ್ರಾಣಿಗಳನ್ನು ಪ್ರೀತಿಸುವ ಇವರು ವಿಶಾಲ ಮನಸ್ಸನ್ನು ಹೊಂದಿರುತ್ತಾರೆ. ಇವರ ಒಂದು ಕಿರು ನಗೆಯೇ ಅನೇಕರನ್ನು ಆಕರ್ಷಿಸುತ್ತದೆ. ಲೇಡಿ ಬಗ್ ಇವರ ಅದೃಷ್ಟದ ಸಂಕೇತ. ಲೇಡಿ ಬಗ್ ಈ ರಾಶಿಯವರ ದಿನವನ್ನು ಗಂಭೀರವವಾಗಿ ಪ್ರಕಾಶಿಸುತ್ತದೆ. ಅಲ್ಲದೆ ಸಂತೋಷ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.

ಸಿಂಹ

ಸಿಂಹ

ಇವರು 2018ರಲ್ಲಿ ಅನೇಕ ಸವಾಲುಗಳನ್ನು ಎದುರಿಸುವರು. ಆದರೂ ಅನೇಕ ವಿಚಾರಗಳು ಸರಾಗವಾಗಿ ನೆರವೇರುತ್ತವೆ. ನಿಮ್ಮ ಕಿರಿಯ ಸಹೋದರರು ಅನಾರೋಗ್ಯವನ್ನು ಅನುಭವಿಸುವ ಸಾಧ್ಯತೆಗಳಿವೆ. ಕೆಲವು ಕೆಲಸದ ಪ್ರಯುಕ್ತ ವಿದೇಶಯಾನ ಕೈಗೊಳ್ಳುವ ಸಾಧ್ಯತೆಗಳಿವೆ. ಆರೋಗ್ಯವೂ ಉತ್ತಮ ಸ್ಥಿತಿಯಲ್ಲಿರುವುದು. ಆದರೆ ಮಲಗುವ ಪದ್ಧತಿ ಮತ್ತು ಭಂಗಿಯನ್ನು ಸೂಕ್ತ ರೀತಿಯಲ್ಲಿ ಅನುಸರಿಸಿಕೊಳ್ಳಿ. ನಿಮ್ಮ ವಿವಾಹಿತ ಜೀವನವು ಉತ್ತಮ ಸ್ಥಿತಿಯಲ್ಲಿರುವುದು. ಈ ರಾಶಿಯ ಜನರು ಸಿಂಹದಂತೆಯೇ ದೃಢನಿಶ್ಚಯವುಳವರು ಮತ್ತು ದಿಟ್ಟ ಸ್ವಭಾವದವರಾಗಿರುತ್ತಾರೆ. ನಿಮಗೆ ಬಹಳಷ್ಟು ಕನಸುಗಳಿದ್ದು ಮಹತ್ವಾಕಾಂಕ್ಷಿಗಳೂ ಆಗಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ನೇಹ. ವಿಶೇಷವಾಗಿ ನಿಮ್ಮ ಜೀವನಸಂಗಾತಿ ಅಥವಾ ಪ್ರಾಣಸ್ನೇಹಿತ/ಸ್ನೇಹಿತೆಯ ಸ್ನೇಹಕ್ಕೆ ನೀವು ಅತಿಹೆಚ್ಚಿನ ಪ್ರಾಮುಖ್ಯತೆ ನೀಡುತ್ತೀರಿ. ಇವರ ಸಾಂಗತ್ಯದಲ್ಲಿ ನೀವು ಹೆಚ್ಚಿನ ಸಂತೋಷ ಮತ್ತು ನೆಮ್ಮದಿ ಪಡೆಯುತ್ತೀರಿ. ಇವರು ಸೂರ್ಯನ ಆಕಾರದಲ್ಲಿರುವ ಆಭರಣವನ್ನು ಧರಿಸಬೇಕು. ಅದು ಒಳ್ಳೆಯ ಅದೃಷ್ಟವನ್ನು ತಂದು ಕೊಡುವುದು. ಬೆಕ್ಕಿನ ಚಿಹ್ನೆಯು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸನ್ನು ತಂದುಕೊಡುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಚಿತ್ತಾಕರ್ಷಕ ಮತ್ತು ಹೊಳೆಯುವ ಹರಳುಗಳು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತವೆ. ಜೆಮ್‍ಸ್ಟೋನ್ ಅಥವಾ ನೀಲಿ ಮಣಿ ಇವರಿಗೆ ಅತ್ಯಂತ ಅದೃಷ್ಟದ ವಸ್ತು ಎಂದು ಪರಿಗಣಿಸಲಾಗುತ್ತದೆ.

ಕನ್ಯಾ

ಕನ್ಯಾ

ಕನ್ಯಾ ರಾಶಿಯವರಿಗೆ 2018ರ ವರ್ಷ ಹೆಚ್ಚು ಆಸಕ್ತಿದಾಯಕವಾದ ವರ್ಷವಾಗಲಿದೆ. ನಿಮ್ಮ ಆರ್ಥಿಕ ಹರಿವು ಅಥವಾ ಹಣದ ಸ್ಥಿತಿಯು ಉತ್ತಮವಾಗುವುದು. ನೀವು ಮಾಡುವ ಕೆಲಸಗಳನ್ನು ಹಿರಿಯರು ಗುರುತಿಸಿ ಪ್ರಶಂಸಿಸುವರು. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಸಂಬಳದ ಹೆಚ್ಚಳವನ್ನು ಅನುಭವಿಸುವಿರಿ. ಸಾಲವನ್ನು ಪಡೆಯುವುದರ ಬಗ್ಗೆ ದೂರವಿರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ. ಮಕ್ಕಳ ಕಾಳಜಿಯನ್ನು ವಹಿಸಿ. ಈ ರಾಶಿಯ ಜನರು ಇತರರಿಗಿಂತ ಎರಡು ಹೆಜ್ಜೆ ಮುಂದಿರುತ್ತಾರೆ. ಇದಕ್ಕೆ ನೀವು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಗುಣವೇ ಕಾರಣ. ನೀವು ಸಾಮಾನ್ಯವಾಗಿ ಎಲ್ಲರಿಗೂ ಸಹಾಯ ಮಾಡುವ ಮನಸ್ಸುಳ್ಳವರಾಗಿದ್ದು ವ್ಯವಹಾರಿಕ ಅಥವಾ ಕಾರ್ಯರೂಪದ ಕೆಲಸಗಳನ್ನೇ ಹಮ್ಮಿಕೊಳ್ಳುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಒಂಟಿತನ. ಒಂಟಿಯಾಗಿದ್ದಾಗ ನೀವು ನಡೆಸುವ ಚಿಂತನೆ ಮತ್ತು ವಿಮರ್ಶೆಗಳ ಪರಿಣಾಮವಾಗಿ ನಿಮ್ಮಲ್ಲಿ ಬಹಳವಾದ ಸಂಗತಿಗಳು ಹೊಮ್ಮುತ್ತವೆ. ಯಾರೇ ಎಷ್ಟೇ ಸಲಹೆಗಳನ್ನು ನೀಡಿದರೂ ನೀವು ಒಂಟಿಯಾಗಿದ್ದಾಗ ತಳೆದ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ. ಇವರಿಗೆ ಭೂಮಿಯು ಅತ್ಯಂತ ಅದೃಷ್ಟದ ಚಿಹ್ನೆಯಾಗಿದೆ. ಸೇಬು ದ್ರಾಕ್ಷಿ, ಪೀಚ್ ಹಣ್ಣುಗಳನ್ನು ಸಂಕೇತಿಸುವ ಹಣ್ಣುಗಳನ್ನು ಧರಿಸುವುದರಿಂದ ಅದೃಷ್ಟವನ್ನು ಪಡೆದುಕೊಳ್ಳಬಹುದು. ಗ್ರೀಕ್ ಶಾಸ್ತ್ರದ ಪ್ರಕಾರ ದುಷ್ಟ ಕಣ್ಣುಗಳೇ ಈ ರಾಶಿಯವರಿಗೆ ಅತ್ಯಂತ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ದುಷ್ಟ ಕಣ್ಣುಗಳು ಸುತ್ತಲಿರುವ ಕೆಟ್ಟ ಶಕ್ತಿಯಿಂದ ರಕ್ಷಿಸುತ್ತದೆ. ಸುತ್ತಲಿನ ಶಕ್ತಿಯು ಹೆಚ್ಚು ಸಂವೇದನಾ ಶೀಲವಾಗಿರುತ್ತದೆ.

ತುಲಾ

ತುಲಾ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2018ರ ವರ್ಷ ನಿಮಗೆ ಅತ್ಯುತ್ತಮ ವರ್ಷವಾಗಲಿದೆ. ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆ, ಶ್ರಮ ಹಾಗೂ ನಿರತವಾದ ಪ್ರಯತ್ನದಿಂದ ನಿಮ್ಮ ಯಶಸ್ಸನ್ನು ಸಾಧಿಸುವಿರಿ. ಈ ವರ್ಷ ವೃತ್ತಿ ವಿಚಾರದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಅತ್ಯಂತ ಉತ್ತಮ ಫಲಿತಾಂಶವನ್ನು ಅನುಭವಿಸಲಿದ್ದೀರಿ. ನೀವು ನಿಮ್ಮ ಸಹೋದ್ಯೋಗಿಗಳೊಂದಿಗೆ ಮತ್ತು ಮೇಲಾಧಿಕಾರಿಗಳೊಂದಿಗೆ ಉತ್ತಮ ರೀತಿಯ ಸೌಹಾರ್ದವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ. ಈ ರಾಶಿಯ ಜನರು ಶಾಂತಿಪ್ರಿಯರಾಗಿದ್ದು ಆದರ್ಶವಾದಿಗಳಾಗಿರುತ್ತಾರೆ. ನಿಮ್ಮ ಸುತ್ತಮುತ್ತ ಶಾಂತಿ ಮತ್ತು ಸೌಹಾರ್ದತೆ ಪಡೆಯಲು ಸದಾ ಯತ್ನಿಸುತ್ತಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ಹೂವುಗಳು. ನಿಮ್ಮ ಸುತಮುತ್ತ ಹೂವುಗಳಿರುವಂತೆ ಮತ್ತ ಸದಾ ನಗುನಗುತಾ ಇರುವಂತೆ ನೋಡಿಕೊಳ್ಳುತ್ತೀರಿ. ಅಂತೆಯೇ ಸದಾ ಹಸನ್ಮುಖಿಯಾಗಿರಲು ಹೂವುಗಳ ನಡುವೆಯೇ ಇರಲು ಇಚ್ಛಿಸುತ್ತೀರಿ. ಇವರಿಗೆ ಪಕ್ಷಿ ಮತ್ತು ಗಾಳಿಯ ಚಿಹ್ನೆಯು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ. ವ್ಯವಹಾರವು ಉತ್ತಮ ಪಡಿಸಿಕೊಳ್ಳಲು ಈ ಚಿಹ್ನೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿರಬೇಕು. ಗ್ರೀಕ್ ಶಾಸ್ತ್ರದ ಪ್ರಕಾರ ಇವರಿಗೆ ತ್ರಿಕೋನವನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಈ ಚಿಹ್ನೆಯನ್ನು ಮಾನವ ಮತ್ತು ದೇವರ ನಡುವಿನ ಸಂಬಂಧವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗುತ್ತಿದೆ. ಇದು ಜಗತ್ತಿನ ಸಮತೋಲನವನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರಿಗೆ ತ್ರಿಕೋನವೇ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುವುದು.

ವೃಶ್ಚಿಕ

ವೃಶ್ಚಿಕ

ಈ ವರ್ಷ ನಿಮಗೆ ಮಿಶ್ರ ಫಲಗಳಿಂದ ಕೂಡಿದೆ. ನಿಮಗೆ ಕೆಲವು ವಿಚಾರದಲ್ಲಿ ಅನಗತ್ಯ ಹಣವನ್ನು ವ್ಯಯಿಸಬೇಕಾಗುವುದು. ನಿಮ್ಮ ಸುತ್ತಲಿನ ಜನರೊಂದಿಗೆ ಸ್ನೇಹ ಮತ್ತು ಸೌಹಾರ್ದದಿಂದ ವರ್ತಿಸಿ. ಮಕ್ಕಳು ಸಮಾಜದಲ್ಲಿ ಯಾವ ರೀತಿ ವರ್ತಿಸುತ್ತಿದ್ದಾರೆ ಎನ್ನುವುದರ ಕುರಿತು ಕಾಳಜಿ ವಹಿಸಿ. ನಿಮಗೆ ಈ ವರ್ಷ ವಿಶ್ರಾಂತಿಯನ್ನು ಕಡಿಮೆ ಪ್ರಮಾಣದಲ್ಲಿ ಅನುಭವಿಸಬೇಕಾಗುವುದು. ಈ ರಾಶಿಯ ಜನರು ಕ್ರಿಯಾತ್ಮಕರಾಗಿದ್ದು ತಾವಂದುಕೊಂಡಿದ್ದನ್ನೇ ಸಾಧಿಸುವ ಛಲವುಳ್ಳವರಾಗಿರುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ವಂತಿಕೆ. ನಿಮ್ಮ ಸ್ವಂತಿಕೆಯ ಮೇರೆಯಂತೆಯೇ ನಡೆಯುವ ನಿಮಗೆ ಬೇರೆಯವರಿಂದ ಎರವಲು ಪಡೆದ ಯಾವುದೇ ಕ್ರಮ ಇಷ್ಟವಾಗುವುದಿಲ್ಲ. ಇವರಿಗೆ ನೀರು ಮತ್ತು ಚಂದ್ರನ ಆಜೃತಿಯು ಹೆಚ್ಚು ಅದೃಷ್ಟವನ್ನು ತಂದು ಕೊಡುತ್ತದೆ. ಸ್ಟಾರ್ ಆಕಾರದ ಬೆಳ್ಳಿಯ ಆಭರಣ ಧರಿಸಿದರೆ ಯಶಸ್ಸು ನಿಮ್ಮ ಜೊತೆಗೆ ಇರುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರ ಅದೃಷ್ಟದ ಸಂಕೇತವು ಕುದುರೆ ಲಾಳ ಎನ್ನಲಾಗುತ್ತದೆ. ಹೆಚ್ಚಿನ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿಯನ್ನು ದೂರವಿರಿಸಲು ಕುದುರೆ ಲಾಳವು ಹೆಚ್ಚು ಸಹಕಾರಿಯಾಗಿರುತ್ತದೆ. ಯು ಚಿಹ್ನೆಯಲ್ಲಿರುವ ವಸ್ತುವು ಅದೃಷ್ಟ ಹಾಗೂ ಸಮೃದ್ಧಿಯನ್ನು ತರುವುದು.

ಧನು

ಧನು

ಈ ವರ್ಷ ನಿಮಗೆ ಹಣದ ವಿಚಾರದಲ್ಲಿ ಲಾಭದಾಯಕವಾಗಿರುತ್ತದೆ. ವರಮಾನದ ಭವಿಷ್ಯ ಸುಧಾರಣೆ ಮತ್ತು ಬೆಳವಣಿಗೆಯನ್ನು ಕಾಣುತ್ತದೆ. ನಿಮ್ಮ ನಿರ್ಧಾರಗಳಿಗೆ ಕುಟುಂಬದವರು ಸಮ್ಮತಿ ಸೂಚಿಸುವರು. ಜಗಳ ಅಥವಾ ಯಾವುದೇ ಸನ್ನಿವೇಶಗಳಲ್ಲಿ ನೀವು ಆಡುವ ಮಾತು ಮತ್ತು ಶಬ್ದಗಳ ಮೇಲೆ ಹಿಡಿತ ಇರುವಂತೆ ನೋಡಿಕೊಳ್ಳಿ. ಈ ರಾಶಿಯ ಜನರು ಸದಾ ಧನಾತ್ಮಕ ಚಿಂತನೆ ನಡೆಸುವವರಾಗಿದ್ದು ಜೀವನದ ಚಿಕ್ಕ ಪುಟ್ಟ ತೊಂದರೆಗಳಿಗೆ ಇವರು ಕಿಂಚಿತ್ತೂ ಚಿಂತಿಸುವುದಿಲ್ಲ.ಯಾವುದೇ ಪರಿಸ್ಥಿತಿಗೆ ಒಳಗಾದರೂ ಇದರಿಂದ ಹೊರಬರಲು ಸತತ ಪ್ರಯತ್ನ ನಡೆಸುತ್ತಲೇ ಇರುತ್ತಾರೆ.ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಬಾಲ್ಯದ ಗೆಳೆಯರು. ನಿಮ್ಮ ಬಾಲ್ಯದ ಗೆಳೆತನವನ್ನು ಇಡಿಯ ಜೀವಮಾನ ಕಾಪಾಡುವ ನಿಮಗೆ ಬಾಲ್ಯದ ನೆನಪುಗಳು ಅತಿಹೆಚ್ಚಿನ ಸಂತೋಷ ನೀಡುತ್ತದೆ.ಇವರಿಗೆ ಬಿಲ್ಲು, ಬಾಣ, ಹೃದಯದ ಚಿಹ್ನೆಯು ಅದೃಷ್ಟದ ಸಂಕೇತ. ಇವುಗಳನ್ನು ಹೊಂದಿರುವ ಆಕೃತಿಯನ್ನು ಆಭರಣದಲ್ಲಿ ಧರಿಸಿದರೆ ಉತ್ತಮ ಫಲವನ್ನು ಪಡೆಯಬಹುದು. ಗ್ರೀಕ್ ಶಾಸ್ತ್ರದ ಪ್ರಕಾರ ಧಾರ್ಮಿಕ ಸಂಪ್ರದಾಯಗಳಲ್ಲಿ ಅನೇಕ ಅದೃಷ್ಟದ ಮೋಡಿಗಳನ್ನು ನೋಡಬಹುದು. ಈ ರಾಶಿಯವರು ಧಾರ್ಮಿಕ ಮತ್ತು ತೆರೆದ ಮನಸ್ಸಿನವರಾಗಿರುತ್ತಾರೆ. ಮೊಲದ ಪಾದದ ಚಿಹ್ನೆಗಳು ಈ ರಾಶಿಯವರಿಗೆ ಹೆಚ್ಚಿನ ಅದೃಷ್ಟವನ್ನು ತಂದುಕೊಡುತ್ತದೆ.

ಮಕರ

ಮಕರ

ವರ್ಷವು ವೃತ್ತಿಪರ ಬೆಳವಣಿಗೆಯ ವಿಷಯದಲ್ಲಿ ಅತ್ಯಂತ ಧನಾತ್ಮಕವಾಗಿರುತ್ತದೆ. ವೃತ್ತಿಪರ ಮಟ್ಟದಲ್ಲಿ ನೀವು ಕೆಲವು ಧನಾತ್ಮಕ ಬದಲಾವಣೆಗಳನ್ನು ಅನುಭವಿಸಬಹುದು. ಮನೆ ಮತ್ತು ಕೆಲಸದಲ್ಲಿ ಧನಾತ್ಮಕತೆಯನ್ನು ನಿರ್ವಹಿಸಲಾಗುವುದು. ನಿಮ್ಮ ವೈಯಕ್ತಿಕ ಸಂಬಂಧಗಳು ಈ ವರ್ಷ ಹಿಂಭಾಗದ ಸ್ಥಾನವನ್ನು ಪಡೆದುಕೊಳ್ಳಬಹುದು. ಧರ್ಮ ಮತ್ತು ತತ್ತ್ವಶಾಸ್ತ್ರದ ಆಸಕ್ತಿಯು ಈ ವರ್ಷ ಹೆಚ್ಚಾಗಬಹುದು. ಈ ರಾಶಿಯ ಜನರು ವ್ಯವಹಾರ ಕುಶಲರಾಗಿದ್ದು ಕೆಲಸವನ್ನು ಹೇಗೆ ಮಾಡಿಸಿಕೊಳ್ಳಬೇಕು ಎಂದು ಗೊತ್ತಿರುವ ಜನರಾಗಿದ್ದಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಿನೇಮಾ ವೀಕ್ಷಣೆ. ಸಿನೇಮಾ ಅಥವಾ ನೆಚ್ಚಿನ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ಮುಳುಗುವ ನೀವು ಆ ಲೋಕದಲ್ಲಿಯೇ ಮುಳುಗಿಬಿಡುತ್ತೀರಿ. ಜೀವನದಲ್ಲಿ ಯಾವಾಗ ತೊಂದರೆ ಕಾಡಿತೋ ಆಗೆಲ್ಲಾ ಈ ಸಿನೆಮಾದಲ್ಲಿ ಎದುರಾದ ಸನ್ನಿವೇಶದಲ್ಲಿ ನಾಯಕ ಅನುಸರಿಸಿದ ನೀತಿಯನ್ನೇ ಅನುಸರಿಸಿ ಈ ತೊಂದರೆಯಿಂದ ಬಿಡುಗಡೆ ಪಡೆಯಲು ಯತ್ನಿಸುತ್ತೀರಿ. ಕಲ್ಲು, ಗುಲಾಬಿ ಸ್ಫಟಿಕ ಇವರಿಗೆ ಅದೃಷ್ಟದ ಸಂಕೇತ. ಇವುಗಳನ್ನು ನೀವು ಧರಿಸುವ ಆಭರಣದಲ್ಲಿ ಸೇರಿಸಿಕೊಂಡರೆ ಉತ್ತಮ ಫಲವನ್ನು ಪಡೆಯಬಹುದು. ಗ್ರೀಕ್ ಶಾಸ್ತ್ರದ ಪ್ರಕಾರ ನಾಲ್ಕೆಲಗ ಈ ರಾಶಿಯವರಿಗೆ ಅದೃಷ್ಟದ ಚಿಹ್ನೆ. ನಾಲ್ಕೆಲಗವನ್ನು ನಂಬಿಕೆ, ಭರವಸೆ, ಪ್ರೀತಿ, ಆರೋಗ್ಯ, ಖ್ಯಾತಿ ಹಾಗೂ ಸಂಪತ್ತನ್ನು ಸೂಚಿಸುತ್ತದೆ ಎನ್ನಲಾಗುವುದು. ಮಕರ ರಾಶಿಯವರಿಗೆ ನಾಲ್ಕೆಲಗವು ಅತ್ಯಂತ ಅದೃಷ್ಟವನ್ನು ತರುವ ವಸ್ತು ಎಂದು ಹೇಳಲಾಗುತ್ತದೆ.

ಕುಂಭ

ಕುಂಭ

2018 ರಲ್ಲಿ ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಸಂಬಂಧಗಳು ಸುಧಾರಿಸ ಬಹುದು. ನೀವು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ಪಡೆದುಕೊಳ್ಳಲು ಆರಂಭಿಸಬಹುದು. ಹೂಡಿಕೆಗಳು ಲಾಭದಾಯಕವಾಗುತ್ತವೆ. ಹಣದ ಹರಿವು ಉತ್ತಮವಾಗಿರುವುದರಿಂದ ನಿಮ್ಮ ಸಾಲಗಳನ್ನು ತೆರವುಗೊಳಿಸಲು ನಿಮಗೆ ಅವಕಾಶ ಸಿಗಬಹುದು. ಈ ರಾಶಿಯ ವ್ಯಕ್ತಿಗಳು ಮಾನವತಾವಾದಿಗಳಾಗಿದ್ದು ಸುತ್ತಮುತ್ತಲ ಜನರಲ್ಲಿ ನೋವು ಕಾಣಲು ಇಷ್ಟಪಡುವುದಿಲ್ಲ. ಇವರ ಕಷ್ಟಗಳಿಗೆ ಸ್ಪಂದಿಸುವ ನೀವು ಸದಾ ನಿಮ್ಮ ಕೈಲಾದ ಸಹಾಯವನ್ನು ಮಾಡಲು ಯತ್ನಿಸುತ್ತಿರುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನೀರು. ನಿಮ್ಮ ಸುತ್ತ ಮುತ್ತ ನೀರು ಇದ್ದಾಗ ನೀವು ಸದಾ ಶಾಂತರಾಗಿ ಉದ್ವೇಗರಹಿತರಾಗಿರುತ್ತೀರಿ. ಇವರಿಗೆ ರೆಕ್ಕೆಯನ್ನು ಹೊಂದಿರುವ ಜೀವಿಗಳ ಚಿಹ್ನೆಯು ಅದೃಷ್ಟವನ್ನು ತಂದುಕೊಡುತ್ತವೆ. ಲೇಡಿ ಬಗ್ ಆಕೃತಿಯು ಆಭರಣದಲ್ಲಿ ಧರಿಸಿದರೆ ಒಳ್ಳೆಯದು. ಗ್ರೀಕ್ ಶಾಸ್ತ್ರದ ಪ್ರಕಾರ ಕುಂಬರಾಶಿಯವರಿಗೆ ಕ್ರಿಕೆಟ್ಸ್ ಬಹಳ ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಪುರಾತನ ಕಾಲದಿಂದಲೂ ಇದನ್ನು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಇವರು ಮನೆಯಲ್ಲಿ, ಕೈಚೀಲದ ಮೇಲೆ ಅಥವಾ ಬೀರುಗಳ ಮೇಲೆ ಈ ಚಿಹ್ನೆಯನ್ನು ಹೊಂದಿದ್ದರೆ ಉತ್ತಮ ಅದೃಷ್ಟ ಒಲಿದು ಬರುವುದು.

ಮೀನ

ಮೀನ

2018 ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಯನ್ನು ತರುವುದು. ನಿಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಧನಾತ್ಮಕ ಬದಲಾವಣೆ ಉಂಟಾಗುವುದು. ಉತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಲು ಕೆಲಸದ ಸ್ಥಳದಲ್ಲಿ ಪ್ರಯತ್ನವನ್ನು ಹೆಚ್ಚಿಸಬೇಕು. ನಿಮ್ಮ ಮಕ್ಕಳು ನಿಮ್ಮ ನಿರ್ಣಯಗಳನ್ನು ಬೆಂಬಲಿಸುವುದಿಲ್ಲ. ಈ ರಾಶಿಯ ಜನರು ಸಹಾನುಭೂತಿ ತೋರುವ ವ್ಯಕ್ತಿಗಳಾಗಿದ್ದು ಜನರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಸಮಯ ವಿನಿಯೋಗಿಸುವುದರಲ್ಲಿಯೇ ಪರಿಪೂರ್ಣತೆಯನ್ನು ಅನುಭವಿಸುತ್ತಾರೆ. ಜನರನ್ನು ಅವರಿದ್ದ ಹಾಗೇ ಸ್ವೀಕರಿಸುವ ನಿಮ್ಮ ಪರಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಂಗೀತ. ನಿಮ್ಮ ಮನೋಭಾವವನ್ನು ಉತ್ತಮಗೊಳಿಸಲು ಸಂಗೀತ ನಡೆಯುತ್ತಿದ್ದರೆ ಸಾಕಾಗುತ್ತದೆ. ಸಂಗೀತದ ಅಲೆ ಸುತ್ತ ತೇಲುತ್ತಿರುವಾಗ ನಿಮಗೆ ಹೊಸ ವಿಷಯಗಳು ಹೊಳೆಯುತ್ತವೆ ಹಾಗೂ ಹೆಚ್ಚು ಕ್ರಿಯಾತ್ಮಕರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇವರ ಅದೃಷ್ಟದ ಆಯ್ಕೆ ಬೆಳ್ಳಿ ಮತ್ತು ಪಚ್ಚೆ ಹರಳು. ಇವುಗಳನ್ನು ಆಭರಣದಲ್ಲಿ ಧರಿಸಿದರೆ ಜೀವನದಲ್ಲಿ ಮಂಗಳ ಉಂಟಾಗುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಕನಸು ಕಾಣುವುದೇ ಅದೃಷ್ಟದ ಸಂಕೇತ. ಕೆಟ್ಟ ಕನಸುಗಳನ್ನು ವಿಶ್ಲೇಶಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವು ಕನಸು ಕಾಣುವುದರಿಂದಲೇ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎನ್ನಲಾಗುವುದು.

English summary

Future-horoscope-predictions-2018-based-on-zodiac-sign

2018 is going to be an important year for every zodiac sign possibly because of the various astrological events happening in the year. The interactions, movements and positions of the different planets is going to have a deep effect in the prospects and life of every zodiac sign. Here is a future horoscope prediction based on Zodiac Sign.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more