ಈ ರಾಶಿಯವರು ನಂಬಿಕೆಗೆ ಅರ್ಹ ವ್ಯಕ್ತಿಗಳು, ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ!

Posted By: Deepu
Subscribe to Boldsky

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಇರುತ್ತವೆ. ಕೆಲವರಲ್ಲಿ ಒಳ್ಳೆಯ ಗುಣಗಳು ಹೆಚ್ಚಾಗಿದ್ದರೆ ಕೆಲವರಲ್ಲಿ ಕೆಟ್ಟ ಗುಣಗಳು ಹೆಚ್ಚಾಗಿರುತ್ತವೆ. ಯಾರು ಉತ್ತಮ ನಡತೆ ಹಾಗೂ ಒಳ್ಳೆಯ ಗುಣಗಳನ್ನು ತೋರುತ್ತಾರೋ ಅಂತಹವರು ಸಮಾಜದಲ್ಲಿ ಗಣ್ಯವ್ಯಕ್ತಿಗಳು ಎನಿಸಿಕೊಳ್ಳುತ್ತಾರೆ. ಯಾರು ಸದಾ ಕೆಟ್ಟ ಕೆಲಸ ಹಾಗೂ ದುರ್ಬುದ್ಧಿಯನ್ನು ತೋರುತ್ತಾರೋ ಅಂತವರು ಸದಾ ಎಲ್ಲರಿಂದಲೂ ನಿಂದನೆ ಹಾಗೂ ದೂಷಣೆಗೆ ಒಳಗಾಗುತ್ತಾರೆ. ಅಲ್ಲದೆ ಅವರಿಂದಲೇ ಸಮಾಜ ಘಾತುಕ ಕೆಲಸಗಳು ನಡೆಯುತ್ತದೆ.

ವ್ಯಕ್ತಿಯ ಸ್ವಭಾವವು ಮೂಲತಃ ರಾಶಿ ಚಕ್ರಗಳ ಆಧಾರದ ಮೇಲೆಯೇ ನಿಂತಿರುತ್ತದೆ. ಹಾಗಾಗಿ ನಾವು ಕೆಲವೊಮ್ಮೆ ಅಂದರೆ ನಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳನ್ನು ಆಯ್ಕೆ ಮಾಡುವಾಗ ಉತ್ತಮ ವ್ಯಕ್ತಿಗಳನ್ನು ಬಯಸುವುದು ಸಹಜ. ನಮ್ಮ ನಂಬಿಕೆ ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳಲು ನಾವು ಆಯ್ಕೆ ಮಾಡಿಕೊಂಡ ವ್ಯಕ್ತಿಯ ನಡತೆಯು ಉತ್ತಮವಾಗಿರ ಬೇಕಾಗುತ್ತದೆ. ಅದಕ್ಕಾಗಿಯೇ ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಕೆಲವು ರಾಶಿಯವರು ಎಂತಹ ಸಂದರ್ಭದಲ್ಲೇ ಆದರೂ ನಂಬಿಕಾರ್ಹ ವ್ಯಕ್ತಿಗಳಾಗಿ ಉಳಿಯುತ್ತಾರೆ. ಅವರು ಯಾವುದೇ ಕಾರಣಕ್ಕೂ ಮೋಸವನ್ನು ಮಾಡುವುದಿಲ್ಲ ಎಂದು ಹೇಳುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಗುಣಗಳೇನು ಎನ್ನುವುದರ ಬಗ್ಗೆ ಇನ್ನಷ್ಟು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.... 

ಮಕರ

ಮಕರ

ಮಕರ ರಾಶಿಯವರು ಭೂಮಿಯ ಚಿಹ್ನೆಯನ್ನು ಒಳಗೊಂಡಿರುತ್ತಾರೆ. ಶ್ರಮ ಜೀವಿಗಳಾದ ಇವರು ಯಾವುದೇ ಕಾರಣಕ್ಕೂ ಇನ್ನೊಬ್ಬರ ಭರವಸೆಗೆ ಮೋಸವನ್ನು ಮಾಡುವುದಿಲ್ಲ. ನಿಷ್ಠಾವಂತರಾದ ಇವರು ತಮ್ಮ ಸಂಬಂಧದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತಾರೆ. ಡೇಟಿಂಗ್ ಚಾಟ್‍ಗಳ ಮೂಲಕ ಸಂಬಂಧವನ್ನು ಬಯಸುವವರು ಈ ರಾಶಿಚಕ್ರದವರನ್ನು ಆಯ್ಕೆ ಮಾಡಿಕೊಳ್ಳಬಹುದು. ಇವರು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಯೋಗ್ಯ ವ್ಯಕ್ತಿಗಳಾಗಿರುತ್ತಾರೆ. ಮಕರ ಅತ್ಯಂತ ಸ್ಥಿರ ಮತ್ತು ಶಾಂತ ಚಿಹ್ನೆಗಳಲ್ಲಿ ಒಂದಾಗಿದೆ. ಅವರು ತಮ್ಮ ಪಾಲುದಾರರೊಂದಿಗೆ ಪ್ರಾಮಾಣಿಕವಾಗಿರಲು ಹೆದರುವುದಿಲ್ಲ ಮತ್ತು ಇತರರ ಭಾವನೆಗಳೊಂದಿಗೆ ಆಟವಾಡುವುದನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅವರು ತಮ್ಮ ಪಾಲುದಾರರನ್ನು ಪ್ರೀತಿಯಿಂದ ಕಾಣುತ್ತಾರೆ. ಜೊತೆಗೆ ಹೊಂದಾಣಿಕೆಯ ಸ್ವಭಾವವನ್ನು ತೋರಿಸುವರು. ಮಕರ ರಾಶಿಯವರು ಸಂಬಂಧಗಳಲ್ಲಿ ವಿಧೇಯತೆಯನ್ನು ಉಂಟುಮಾಡುತ್ತಾರೆ. ಕೆಲವು ದಂಪತಿಗಳು ಶಾಶ್ವತ ಪ್ರೀತಿಯಿಂದ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಅವರ ದ್ವೇಷವು ವಿರಳವಾಗಿ ಅವರನ್ನು ದಾಂಪತ್ಯ ದ್ರೋಹವನ್ನು ಕ್ಷಮಿಸಲು ಅನುವು ಮಾಡಿಕೊಡುತ್ತದೆ. ಇನ್ನು ಇವರು ಬೇರೆಯವರಿಗೆ ಹೇಗೆ ಬೇಕೋ ಹಾಗೇ ವರ್ತಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ. ತಮ್ಮ ಕನಸನ್ನು ಸಾಧಿಸುವ ಚಲವನ್ನು ಹೊಂದಿರುತ್ತಾರೆ. ಯಾವ ಬಗೆಯ ಕನಸನ್ನು ಹೊಂದಿರಬೇಕು ಎನ್ನುವುದರ ಬಗ್ಗೆಯೂ ಹೆಚ್ಚು ಜ್ಞಾನವನ್ನು ಪಡೆದು ಕೊಂಡಿರುತ್ತಾರೆ.

 ಕುಂಭ

ಕುಂಭ

ಸ್ವತಂತ್ರರಾಗಿರಲು ಇಷ್ಟ ಪಡುವ ನಿಷ್ಠಾವಂತ ವ್ಯಕ್ತಿಗಳಾಗಿರುತ್ತಾರೆ. ಈ ರಾಶಿಯವರು ಸಂಬಂಧಗಳಲ್ಲಿ ನಿಖರತೆ ಹಾಗೂ ಬದ್ಧತೆಯನ್ನು ಹೊಂದಿರುತ್ತಾರೆ. ತನ್ನ ನಂಬಿದವರಿಗೆ ಯಾವುದೇ ಕಾರಣಕ್ಕೂ ಮೋಸ ಗೈಯುವ ಕೆಲಸಕ್ಕೆ ಮುಂದಾಗುವುದಿಲ್ಲ. ಕ್ರಿಯಾಶೀಲರು ಹಾಗೂ ಬಹಳ ವಾತ್ಯಲ್ಯ ತೋರುವ ವ್ಯಕ್ತಿಗಳಾಗಿರುತ್ತಾರೆ.

ಮೀನ

ಮೀನ

ಈ ರಾಶಿಯವರು ಪ್ರಣಯ ಪೂರ್ವಕರಾದ ಕನಸುಗಾರರು. ಇವರು ಸದಾ ಕನಸಿನ ಲೋಕದಲ್ಲಿಯೇ ಉಳಿಯುವವರಾಗಿರುತ್ತಾರೆ. ಇವರು ತಮ್ಮ ಸಂಬಂಧಗಳ ಬಗ್ಗೆ ಅಥವಾ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುವುದಿಲ್ಲ. ತಮ್ಮ ನಂಬಿದವರಿಗೆ ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳಾಗಿರುತ್ತಾರೆ.

ವೃಷಭ

ವೃಷಭ

ಭೂಮಿಯ ಚಿಹ್ನೆಯನ್ನು ಹೊಂದಿರುವ ಇನ್ನೊಂದು ರಾಶಿಚಕ್ರದವರು ಎಂದರೆ ವೃಷಭ ರಾಶಿ ಚಕ್ರದವರು. ತಮ್ಮನ್ನು ನಂಬಿದವರಿಗೆ ಹಾಗೂ ಸಂಗಾತಿಗಳಿಗೆ ನಿಷ್ಠೆ ಮತ್ತು ವಿಶ್ವಾಸಾರ್ಹ ವ್ಯಕ್ತಿಗಳಾಗಿ ಉಳಿಯುತ್ತಾರೆ. ಉತ್ತಮ ನಡತೆ ಹಾಗೂ ಸ್ವಭಾವವನ್ನು ಹೊಂದಿರುವ ವ್ಯಕ್ತಿಗಳಲ್ಲಿ ವೃಷಭ ರಾಶಿಯವರು ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಇನ್ನು ಸಂಬಂಧದಲ್ಲಿ ಶಾಂತತೆ ಮತ್ತು ಅತ್ಯಂತ ನಿಷ್ಠಾವಂತ ರಾಶಿಚಕ್ರ ಚಿಹ್ನೆಗಳಲ್ಲಿ ವೃಷಭ ರಾಶಿಯು ಒಂದು. ಈ ರಾಶಿಚಕ್ರದ ಚಿಹ್ನೆಯು ಪ್ರೀತಿ, ಆರೈಕೆ, ಸ್ಥಿರತೆಯನ್ನು ನಿರ್ಣಯಿಸುವುದಕ್ಕೆ ಹೆಸರುವಾಸಿಯಾಗಿದೆ. ತಮ್ಮ ಮೊಂಡುತನದ ಸ್ವಭಾವದ ಕಾರಣದಿಂದ ಅವರು ಕೆಟ್ಟ ಕ್ಷಣಗಳಲ್ಲಿ ತಮ್ಮ ಸಂಬಂಧಕ್ಕಾಗಿ ಹೋರಾಡುತ್ತಾರೆ. ಆದಾಗ್ಯೂ ಅವರು ಸಾಮಾನ್ಯವಾಗಿ ಸಾಕಷ್ಟು ಸ್ವಾಮ್ಯ ಸೂಚಕರಾಗಿದ್ದಾರೆ ಮತ್ತು ನಿಯಂತ್ರಿಸುತ್ತಾರೆ. ಪಾಲುದಾರರೊಂದಿಗೆ ಬಹಳ ಪ್ರೀತಿ ಹಾಗೂ ತನ್ನದೆಂದುಕೊಳ್ಳುವರು. ಸಂಗಾತಿಯಿಂದ ದೂರಾಗುವುದನ್ನು ಸಂಪೂರ್ಣವಾಗಿ ವಿರೋಧಿಸುವರು. ಇವರು ಅತ್ಯಂತ ಸ್ಥಿರ ಮತ್ತು ವಿಶ್ವಾಸಾರ್ಹ ವ್ಯಕ್ತಿಗಳು. ಇವರು ತಮ್ಮ ಸುತ್ತಲಿನ ಪರಿಸರವನ್ನು ಸ್ಥಿರತೆಯಿಂದ ಹಾಗೂ ವಿಶ್ವಾಸಾರ್ಹವಾಗಿ ಕಾಣುತ್ತಾರೆ. ದೊಡ್ಡದು ಅಥವಾ ಚಿಕ್ಕದು ಎನ್ನುವ ತಾರತಮ್ಯವನ್ನು ತೋರುವುದಿಲ್ಲ.ಎಲ್ಲಾ ವಿಚಾರಕ್ಕೂ ಸಮಾನ ಸ್ಥಾನಮಾನವನ್ನು ನೀಡುತ್ತಾರೆ. ಈ ರಾಶಿಯ ಜನರಿಗೆ ವಿಶಾಲವಾದ ಹೃದಯವಿದ್ದು ಎಲ್ಲಾ ಪ್ರಸಂಗಗಳಲ್ಲಿ ತಾಳ್ಮೆಯಿಂದ ವ್ಯವಹರಿಸುವ ಶಕ್ತಿಯಿದೆ. ಹತ್ತಿರದಿಂದ ಬಲ್ಲವರು ನಿಮ್ಮ ನಿಷ್ಠೆ ಮತ್ತು ನಂಬುಗೆಯನ್ನು ಇಷ್ಟ ಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಪುಸ್ತಕ. ಪ್ರತಿಬಾರಿ ನೀವು ಒಂದು ಪುಸ್ತಕವನ್ನು ಓದಿದಾಗ ಅದರಿಂದ ನಿಮಗೆ ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ. ಅಲ್ಲದೆ ಇವರಿಗೆ ಹೊಂದಿಕೆಯಾಗುವಂತಹ ವೃತ್ತಿಗಳೆಂದರೆ ಹಣಕಾಸು, ಲೆಕ್ಕಪತ್ರ ನಿರ್ವಹಣಿ, ಇಂಟೀರಿಯರ್ ಡಿಸೈನ್, ನರ್ಸಿಂಗ್, ಇಂಜಿನಿಯರಿಂಗ್, ಕಾನೂನು, ಮಾರ್ಕೆಟಿಂಗ್ ಮತ್ತು ಪಿಆರ್ ವೃತ್ತಿ ಮಾಡಬಹುದಾಗಿದೆ.

ಕರ್ಕ

ಕರ್ಕ

ಈ ರಾಶಿಯವರು ಅತ್ಯುತ್ತಮ ಪೋಷಕ ಗುಣವನ್ನು ಹೊಂದಿದವರಾಗಿರುತ್ತಾರೆ. ಅಲ್ಲದೆ ಭಾವನಾತ್ಮಕ ಸ್ವಭಾವದವರಾದ ಇವರು ತಮ್ಮ ಪ್ರೀತಿ ಪಾತ್ರರ ಬಗ್ಗೆ ಬದ್ಧರಾಗಿರುತ್ತಾರೆ. ಯಾವುದೇ ಮೋಸದ ಕೃತ್ಯವನ್ನು ಎಸಗದ ವ್ಯಕ್ತಿಗಳಾಗಿರುತ್ತಾರೆ. ತಾವು ನುಡಿದಂತೆ ನಡೆದುಕೊಳ್ಳುವ ಉತ್ತಮ ಪ್ರವೃತ್ತಿ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇನ್ನು ಕರ್ಕ ಅತ್ಯಂತ ನಿಷ್ಠಾವಂತ ರಾಶಿಚಕ್ರ ಚಿಹ್ನೆಗಳಲ್ಲಿ ಒಂದಾಗಿದೆ. ಈ ಜಾತಕದಲ್ಲಿ ಜನಿಸಿದ ಜನರು ಪ್ರೀತಿಯಲ್ಲಿ ಬಿದ್ದರೆ, ಪ್ರಣಯ ಸಂಬಂಧಗಳಲ್ಲಿ ಅಥವಾ ವೈವಾಹಿಕ ಜೀವನದಲ್ಲಿ ಸಂಗಾತಿಗೆ ಶೇ. 100% ಬದ್ಧರಾಗಿರುತ್ತಾರೆ. ಹೌದು, ಕರ್ಕ ರಾಶಿಯವರು ಬಹಳ ಅರ್ಥಗರ್ಭಿತ ಮತ್ತು ಒಳನೋಟವುಳ್ಳ ವ್ಯಕ್ತಿಗಳಾಗಿರುತ್ತಾರೆ. ಆದ್ದರಿಂದ ಅವರ ಪಾಲುದಾರರು ತಮ್ಮ ಮೇಲೆ ಮೋಸ ಮಾಡುತ್ತಿದ್ದಾರೆ ಅಥವಾ ಏನನ್ನಾದರೂ ಮರೆಮಾಡುತ್ತಿದ್ದಾರೆ ಎಂದು ಕಂಡುಹಿಡಿಯಲು ಕಷ್ಟವಾಗುವುದಿಲ್ಲ. ಅವರು ಬದ್ಧತೆ ಮತ್ತು ಆತ್ಮವಿಶ್ವಾಸವನ್ನು ಗೌರವಿಸುವಂತೆಯೇ, ಅದೇ ರೀತಿ ಸ್ವೀಕರಿಸಲು ಒತ್ತಾಯಿಸುತ್ತಾರೆ. ಅವರು ಪ್ರೀತಿಪಾತ್ರರನ್ನು ಮೋಸಗೊಳಿಸಿದ್ದರೆ ಮತ್ತು ಅವರು ಕ್ಷಮಿಸಲು ಅಥವಾ ಹೊರಬರಲು ಕಷ್ಟವಾಗಬಹುದು. ಇವರು ಯಾವುದೇ ಕಾರಣಕ್ಕೂ ನಂಬಿಕೆ ದ್ರೋಹ ಮಾಡರು. ಇನ್ನು ಇವರಿಗೆ ಇವರಿಗೆ ಪ್ರೀತಿಯನ್ನು ಸೃಷ್ಟಿಸುವ ಮಾಂತ್ರಿಕ ಶಕ್ತಿಯಿದೆ ಎಂದು ಹೇಳಬಹುದು. ಇವರು ಬಹಳ ಸೂಕ್ಷ್ಮ ಹಾಗೂ ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಇವರು ಜನರ ನಡುವೆ ಹಾಗೂ ಕೆಲವು ಸಂದರ್ಭಗಳಲ್ಲಿ ಸುಲಭವಾಗಿ ಅನುಭೂತಿಯನ್ನು ಪಡೆದು ಕೊಳ್ಳುತ್ತಾರೆ. ಹಾಗಾಗಿ ಬಹು ಸುಲಭವಾಗಿ ಪ್ರೀತಿಯನ್ನು ಸೃಷ್ಟಿಸಬಲ್ಲರು.

English summary

five meanest zodiac signs Of Astrology, we can trust

Many of us get tempted to cheat, but who's likely to actually go through with it? Whether you're into astrology or not, a person's zodiac sign can be very telling when it comes to everything from their career to their favorite sex position. And according to a new survey the dating site for extramarital affairs, there are five zodiac signs who more likely to cheat over anyone else. While different astrologers may disagree on which signs are likely to cheat based on their own personal interpretation of the signs.
Story first published: Thursday, January 18, 2018, 23:31 [IST]