ರಾಶಿ ಭವಿಷ್ಯ: ಈ 'ಅದೃಷ್ಟ ವಸ್ತುಗಳು' ನಿಮ್ಮ ಬಳಿಯಿದ್ದರೆ, ಮುಟ್ಟಿದೆಲ್ಲಾ ಚಿನ್ನ!

Subscribe to Boldsky

ಜೀವನದಲ್ಲಿ ಯಶಸ್ಸನ್ನು ಕಾಣಬೇಕೆಂದರೆ ಕೇವಲ ಶ್ರಮಪಟ್ಟು ದುಡಿದರೆ ಸಾಲದು. ಶ್ರಮದ ಜೊತೆ ಅದೃಷ್ಟವು ಇರಬೇಕಾಗುತ್ತದೆ. ಅದೃಷ್ಟ ಕೈ ಕೊಟ್ಟಿತು ಎಂದಾದರೆ ನಾವೆಷ್ಟೇ ಕಷ್ಟಪಟ್ಟರೂ ಬೇಕಾದ್ದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮನುಷ್ಯನ ಜೀವನದಲ್ಲಿ ಅದೃಷ್ಟ ಎನ್ನುವುದು ಮಹತ್ತರವಾದ ಪಾತ್ರವಹಿಸುತ್ತದೆ ಎಂದು ಹೇಳಲಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿ ತನ್ನ ಹುಟ್ಟಿದ ಸಮಯಕ್ಕೆ ಅನುಗುಣವಾಗಿ ವಿಶೇಷವಾದ ನಕ್ಷತ್ರ ಹಾಗೂ ರಾಶಿಯನ್ನು ಹೊಂದಿರುತ್ತಾನೆ. ಈ ರಾಶಿ ಮತ್ತು ನಕ್ಷತ್ರಗಳಿಗೆ ಕೆಲವು ಅದೃಷ್ಟದ ಸಂಕೇತಗಳಿರುತ್ತವೆ. ಅವುಗಳನ್ನು ನಾವು ಗುರುತಿಸಿ, ನಮ್ಮಲ್ಲಿ ಇಟ್ಟುಕೊಂಡರೆ ಅದೃಷ್ಟವು ನಮ್ಮ ಜೊತೆ ಸದಾ ಕಾಲ ಇರುವುದು.

ಆ ಅದೃಷ್ಟದ ವಸ್ತುಗಳು ಕೇವಲ ಒಂದು ಬಗೆಯ ವಸ್ತುಗಳಿಗೆ ಸೀಮಿತವಾಗಿರುವುದಿಲ್ಲ. ಅವು ಕೆಲವು ಚಿಹ್ನೆಗಳು, ಬಣ್ಣ, ವಸ್ತು, ಮುತ್ತು, ಹವಳ, ಕಲ್ಲು, ಹರಳು, ಖನಿಜ ಸೇರಿದಂತೆ ವಿಭಿನ್ನ ಆಯ್ಕೆಯನ್ನು ಹೊಂದಿರುತ್ತದೆ. ಅಂತಹವುಗಳನ್ನು ರಾಶಿ ಹಾಗೂ ನಕ್ಷತ್ರಕ್ಕೆ ಅನುಗುಣವಾಗಿ ನಮ್ಮ ಬಳಿ ಇಟ್ಟುಕೊಂಡಿರಬೇಕು. ಆಗ ಅದೃಷ್ಟವು ನಮ್ಮನ್ನು ಹಿಂಬಾಲಿಸುವುದು... ಮುಂದೆ ಓದಿ...

ಮೇಷ (Mar 20 - Apr 19)

ಮೇಷ (Mar 20 - Apr 19)

ಜ್ಯೋತಿಷ್ಯದ ಪ್ರಕಾರ, ಗುರು ಗ್ರಹವು ನಿಮ್ಮ 7ನೇ ಮನೆಯನ್ನು ಪ್ರವೇಶಿಸಲಿದ್ದಾನೆ. ಆಗ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಹೊಂದುವುದನ್ನು ನೀವು ಕಾಣುತ್ತೀರಿ. ಹೊಸ ಹೊಸ ಯೋಜನೆಗಳು ನಿಮ್ಮ ಮನಸ್ಸಿಗೆ ಬರುವುದು. ಅದನ್ನು ಸಕಾರಗೊಳಿಸಿಕೊಳ್ಳಲು ಇದು ಸೂಕ್ತ ಸಮಯ ಎನ್ನುವುದನ್ನು ಅರಿಯಬೇಕು. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಬಹುದು. ಅದು ನಿಮ್ಮ ಸಂಬಳ ಹೆಚ್ಚುವುದಾಗಿರಬಹುದು ಅಥವಾ ಇತರ ವ್ಯಾಪಾರದ ಮೂಲಕ ಆಗಿರಬಹುದು.

ಮೇಷ (21 ಮಾರ್ಚ್–19 ಏಪ್ರಿಲ್)

ಮೇಷ (21 ಮಾರ್ಚ್–19 ಏಪ್ರಿಲ್)

ಇವರಿಗೆ ಗಾಢ ಬಣ್ಣಗಳಾದ ಕೆಂಪು ಮತ್ತು ಕಿತ್ತಳೆ ಬಣ್ಣವು ಮಂಗಳವನ್ನು ತರುತ್ತದೆ. ಅದೃಷ್ಟ ಚಿಹ್ನೆಗಳೆಂದರೆ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು. ಮೇಷ ರಾಶಿಯವರು ಅತ್ಯಂತ ಶ್ರಮಜೀವಿಗಳಾಗಿರುತ್ತಾರೆ. ಅವರು ಬಯಸಿದ್ದನ್ನು ಪಡೆಯಲು ಹೆಚ್ಚು ಶ್ರಮ ಪಡುತ್ತಾರೆ. ಜೊತೆಗ ಮಧ್ಯದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗುತ್ತಾರೆ. ಗ್ರೀಕ್ ಶಾಸ್ತ್ರದ ಇವರ ಅದೃಷ್ಟದ ಸಂಕೇತ ಕೀಲಿ. ಕೀಲಿಯನ್ನು ಸ್ವರ್ಗಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಇದನ್ನು ಸ್ವರ್ಗಕ್ಕೆ ದಾರಿ ಎಂದು ನಂಬಲಾಗುವುದು. ಕೀಯು ಆರೋಗ್ಯ ಮತ್ತು ಸಮೃದ್ಧಿಯ ಮೂಲ.

ವೃಷಭ

ವೃಷಭ

ಜ್ಯೋತಿಷ್ಯದ ಪ್ರಕಾರ, ಗುರು ಗ್ರಹದ ಪರಿವರ್ತನೆಯಿಂದ ಹೊಸ ಕೆಲಸದ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಅದನ್ನು ಸ್ವೀಕರಿಸಲು ಇದು ಉತ್ತಮ ಸಮಯ ಎನ್ನುವುದನ್ನು ನೀವು ತಿಳಿಯಬೇಕು. ವೃತ್ತಿಯ ಆರಂಭದಲ್ಲಿ ನಿಮಗೆ ಲವಲವಿಕೆಯಿರುತ್ತದೆ. ಈ ರಾಶಿಯವರು ಬೇರೆಯವರಿಂದ ಸಾಲ ಅಥವಾ ಎರವಲು ಹಣವನ್ನು ಪಡೆದುಕೊಳ್ಳಬಾರದು.

ವೃಷಭ

ವೃಷಭ

ಇವರಿಗೆ ಶುಕ್ರ ಶುಭವನ್ನು ತರುತ್ತಾನೆ. ಆತನ ನೆಚ್ಚಿನ ವಸ್ತು ತಾಮ್ರ. ತಾಮ್ರದಿಂದ ತಯಾರಿಸಿದ ಆಭರಣಗಳನ್ನು ಧರಿಸುವುದರಿಂದ ಶುಭ ಉಂಟಾಗುವುದು. ಭೂಮಿಯು ಇವರಿಗೆ ಶುಭ ಸಂಕೇತವಾಗಿದ್ದರಿಂದ ಭೂಮಿಗೆ ಸಮಬಂಧಿಸಿದ ವಿಚಾರದಲ್ಲಿ ಯಶಸ್ಸು ದೊರೆಯುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಇವರ ಅದೃಷ್ಟ ಸಂಖ್ಯೆ 7. ಇದು ಆಧ್ಯಾತ್ಮಿಕವಾಗಿ ವಿಕಸನಗೊಂಡ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಗಣಿತದ ಪ್ರಕಾರ 7 ಅತ್ಯಂತ ಉತ್ತಮ ಹೆಜ್ಜೆಯೆಂದು ಕಂಡು ಬರುತ್ತದೆ. ಮತ್ತು ಅದನ್ನು ಅತ್ಯಂತ ಶಕ್ತಿಯುತ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಪುರಾತನ ಗ್ರೀಕರು ಇದನ್ನು ಪರಿಪೂರ್ಣ ಸಂಖ್ಯೆ ಎಂದು ಪರಿಗಣಿಸುತ್ತಾರೆ. ವೃಷಭ ರಾಶಿಯವರು ಹೆಚ್ಚಿನದಾಗಿ ಗಣಿತದಲ್ಲಿ ಆಸಕ್ತಿ ಹಾಗೂ ಪ್ರೀತಿಯನ್ನು ಹೊಂದಿರುತ್ತಾರೆ ಎನ್ನಲಾಗುವುದು.

ಮಿಥುನ

ಮಿಥುನ

ಗುರು ಗ್ರಹವು 5ನೇ ಮನೆಯ ಪ್ರವೇಶ ಹೊಂದುವುದು ಎಂದು ಜ್ಯೋತಿಷ್ಯ ಹೇಳುವುದು. ಈ ರಾಶಿಯ ಪೋಷಕರು ಚಂದ್ರನ ಪ್ರಭಾವಕ್ಕೆ ಒಳಗಾಗಿದ್ದರೆ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುವರು. ಈ ರಾಶಿಯವರು ತಮ್ಮ ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುವುದು. ಅಲ್ಲದೆ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು.

ಮಿಥುನ

ಮಿಥುನ

ಇವರಿಗೆ ಅದೃಷ್ಟವು ಗಾಳಿ, ರೆಕ್ಕೆಯ ಚಿಹ್ನೆ ಹಾಗೂ ಪಕ್ಷಿಗಳು. ಈ ಎಲ್ಲದರ ಸಂಕೇತ ವಾದ ವಸ್ತುಗಳನ್ನು ಇಟ್ಟುಕೊಳ್ಳುವುದು ಮತ್ತು ಪಕ್ಷಿಯನ್ನು ಸಾಕುವುದರಿಂದ ಕೆಟ್ಟ ಅದೃಷ್ಟವನ್ನು ಓಡಿಸಿ. ಒಳ್ಳೆಯ ಅದೃಷ್ಟವನ್ನು ಪಡೆದು ಕೊಳ್ಳಬಹುದು. ಗ್ರೀಕ್ ಶಾಸ್ತ್ರದ ಈ ರಾಶಿಯವರು ಮಲಗುವ ಕೋಣೆ ಹಾಗೂ ಕಾರುಗಳಲ್ಲಿ ಅಲಂಕಾರಿ ವಸ್ತುಗಳನ್ನು ಇಡಲು ಬಯಸುತ್ತಾರೆ. ಇದು ಚಿಕ್ಕ ವಿಷಯ ಎನಿಸಬಹುದು ಆದರೆ ಅವರಿಗೆ ಈ ಸಂಗತಿಯೇ ಅದ್ಭುತವನ್ನು ಸೃಷ್ಟಿ ಮಾಡಿಕೊಡುತ್ತದೆ.

ಕರ್ಕ

ಕರ್ಕ

ಗುರುವು ನಾಲ್ಕನೇ ಮನೆಗೆ ಕಾಲಿಡುತ್ತಾನೆ. ಈ ಸಮಯದಲ್ಲಿ ಕೌಟುಂಬಿಕ ಜೀವನವೂ ಉತ್ತಮ ಸ್ಥಿತಿಯಲ್ಲಿರುವುದು ಎಂದು ಜ್ಯೋತಿಷ್ಯ ಹೇಳುತ್ತದೆ. ಸಂಗಾತಿಯೊಂದಿಗಿನ ಇವರ ಸಂಬಂಧವೂ ಉತ್ತಮವಾಗಿರುತ್ತದೆ. ಅಲ್ಲದೆ ಸಂಬಂಧಗಳಲ್ಲಿ ಹೆಚ್ಚು ಖುಷಿಯನ್ನು ಅನುಭವಿಸುತ್ತಾರೆ. ವೃತ್ತಿ ಜೀವನದಲ್ಲಿ ಉದ್ಯೋಗ ಬದಲಾವಣೆ ಅಥವಾ ಹೊಸ ಪ್ರದೇಶಗಳಿಗೆ ವರ್ಗಾವಣೆ ಹೊಂದುವ ಬದಲಾವಣೆಯನ್ನು ಎದುರಿಸಬೇಕಾಗುವುದು.

ಕರ್ಕ

ಕರ್ಕ

ಇವರ ಅದೃಷ್ಟದ ಚಿಹ್ನೆಗಳು ನಕ್ಷತ್ರ ಮೀನು, ಮೀನು, ಡಾಲ್‍ಫಿನ್. ಇವರು ನೀರಿನಲ್ಲಿರುವಂತಹ ವಸ್ತುಗಳಾದ ಚಿಪ್ಪುಗಳು, ಮುತ್ತುಗಳಂತಹ ವಸ್ತುಗಳನ್ನು ಧರಿಸುವುದರಿಂದ ಅತ್ಯಂತ ಸಂತೋಷ ಲಭಿಸುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರು ಸದಾ ಸಂತೋಷದಿಂದ ಇರಲು ಬಯಸುತ್ತಾರೆ. ಇವರ ಲಕ್ಕಿ ಅದೃಷ್ಟವು ನಗು ಎಂದೇ ಹೇಳಬಹುದು. ಪ್ರಾಣಿಗಳನ್ನು ಪ್ರೀತಿಸುವ ಇವರು ವಿಶಾಲ ಮನಸ್ಸನ್ನು ಹೊಂದಿರುತ್ತಾರೆ. ಇವರ ಒಂದು ಕಿರು ನಗೆಯೇ ಅನೇಕರನ್ನು ಆಕರ್ಷಿಸುತ್ತದೆ. ಲೇಡಿ ಬಗ್ ಇವರ ಅದೃಷ್ಟದ ಸಂಕೇತ. ಲೇಡಿ ಬಗ್ ಈ ರಾಶಿಯವರ ದಿನವನ್ನು ಗಂಭೀರವವಾಗಿ ಪ್ರಕಾಶಿಸುತ್ತದೆ. ಅಲ್ಲದೆ ಸಂತೋಷ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.

ಸಿಂಹ

ಸಿಂಹ

ಗುರು ಗ್ರಹವು ಮೂರನೇ ಮನೆಯಲ್ಲಿ ಪರಿವರ್ತನೆ ಹೊಂದುತ್ತಿದೆ. ಇದರ ಪರಿಣಾಮವಾಗಿ ವಿಶೇಷ ವ್ಯಕ್ತಿಗಳನ್ನು ನೀವು ಭೇಟಿ ಮಾಡುವ ಸಾಧ್ಯತೆಗಳಿವೆ. ನೀವು ಯಾವುದಾದರೂ ಸಂಬಂಧಗಳಲ್ಲಿದ್ದರೆ ಈಗ ನಿಮಗೆ ಒಳ್ಳೆಯ ಸಮಯ ಎನ್ನಬಹುದು. ನಿಮ್ಮ ಉತ್ತಮ ಶ್ರಮಕ್ಕೆ ಮೆಚ್ಚುಗೆ ಪಡೆದುಕೊಳ್ಳುವುದರಿಂದ, ವೃತ್ತಿ ಕ್ಷೇತ್ರದಲ್ಲೂ ನಿಮಗೆ ಉತ್ತಮ ಸಮಯ ಇದು ಎಂದು ಹೇಳಬಹುದು.

ಸಿಂಹ

ಸಿಂಹ

ಇವರು ಸೂರ್ಯನ ಆಕಾರದಲ್ಲಿರುವ ಆಭರಣವನ್ನು ಧರಿಸಬೇಕು. ಅದು ಒಳ್ಳೆಯ ಅದೃಷ್ಟವನ್ನು ತಂದು ಕೊಡುವುದು. ಬೆಕ್ಕಿನ ಚಿಹ್ನೆಯು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸನ್ನು ತಂದುಕೊಡುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಚಿತ್ತಾಕರ್ಷಕ ಮತ್ತು ಹೊಳೆಯುವ ಹರಳುಗಳು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತವೆ. ಜೆಮ್‍ಸ್ಟೋನ್ ಅಥವಾ ನೀಲಿ ಮಣಿ ಇವರಿಗೆ ಅತ್ಯಂತ ಅದೃಷ್ಟದ ವಸ್ತು ಎಂದು ಪರಿಗಣಿಸಲಾಗುತ್ತದೆ.

ಕನ್ಯಾ

ಕನ್ಯಾ

ಗ್ರಹಗಳ ಪರಿವರ್ತನೆಯಿಂದ ನಿಮ್ಮ ಕುಟುಂಬ ಜೀವನವು ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ. ಕುಟುಂಬದವರೊಂದಿಗೆ ಸಮಯ ಕಳೆಯಲು ಸುಂದರ ರಜಾ ದಿನಗಳು ನಿಮಗಾಗಿ ಸಂಗ್ರಹವಾಗಿವೆ. ನೀವು ಆರ್ಥಿಕವಾಗಿ ಹೆಚ್ಚು ಸ್ವತಂತ್ರರೂ ಹಾಗೂ ಸಮರ್ಥರೂ ಎಂದು ತೋರಿಸಲು ಇದೊಂದು ಉತ್ತಮ ಸಮಯ. ಆದರೆ ಅಪಾಯಕಾರಿ ಹೂಡಿಕೆಯಲ್ಲಿ ಕೈಹಾಕದಿರುವಂತೆ ಕಾಳಜಿ ವಹಿಸಬೇಕು.

ಕನ್ಯಾ

ಕನ್ಯಾ

ಇವರಿಗೆ ಭೂಮಿಯು ಅತ್ಯಂತ ಅದೃಷ್ಟದ ಚಿಹ್ನೆಯಾಗಿದೆ. ಸೇಬು ದ್ರಾಕ್ಷಿ, ಪೀಚ್ ಹಣ್ಣುಗಳನ್ನು ಸಂಕೇತಿಸುವ ಹಣ್ಣುಗಳನ್ನು ಧರಿಸುವುದರಿಂದ ಅದೃಷ್ಟವನ್ನು ಪಡೆದುಕೊಳ್ಳಬಹುದು. ಗ್ರೀಕ್ ಶಾಸ್ತ್ರದ ಪ್ರಕಾರ ದುಷ್ಟ ಕಣ್ಣುಗಳೇ ಈ ರಾಶಿಯವರಿಗೆ ಅತ್ಯಂತ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ದುಷ್ಟ ಕಣ್ಣುಗಳು ಸುತ್ತಲಿರುವ ಕೆಟ್ಟ ಶಕ್ತಿಯಿಂದ ರಕ್ಷಿಸುತ್ತದೆ. ಸುತ್ತಲಿನ ಶಕ್ತಿಯು ಹೆಚ್ಚು ಸಂವೇದನಾ ಶೀಲವಾಗಿರುತ್ತದೆ.

ತುಲಾ

ತುಲಾ

ಮೊದಲ ಮನೆಯಲ್ಲಿಯೇ ಗುರು ಗ್ರಹದ ಪರಿವರ್ತನೆ ಹಾಗೂ ಚಂದ್ರನ ಪ್ರಭಾವದಿಂದ ಕೂಡಿರುವ ನಿಮ್ಮ ಜೀವನ ಅತ್ಯಂತ ಸಂತೋಷಕರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವೂ ಹೆಚ್ಚು ಖುಷಿಯನ್ನು ನೀಡುತ್ತದೆ. ಪ್ರಪಂಚವನ್ನು ಸುತ್ತುವಂತಹ ಅವಕಾಶಗಳು ನಿಮಗೆ ದೊರೆಯುತ್ತದೆ. ಇದು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಇದೊಂದು ಒಳ್ಳೆಯ ಸಮಯ ಎಂದು ಹೇಳಬಹುದು.

ತುಲಾ

ತುಲಾ

ಇವರಿಗೆ ಪಕ್ಷಿ ಮತ್ತು ಗಾಳಿಯ ಚಿಹ್ನೆಯು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ. ವ್ಯವಹಾರವು ಉತ್ತಮ ಪಡಿಸಿಕೊಳ್ಳಲು ಈ ಚಿಹ್ನೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿರಬೇಕು. ಗ್ರೀಕ್ ಶಾಸ್ತ್ರದ ಪ್ರಕಾರ ಇವರಿಗೆ ತ್ರಿಕೋನವನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಈ ಚಿಹ್ನೆಯನ್ನು ಮಾನವ ಮತ್ತು ದೇವರ ನಡುವಿನ ಸಂಬಂಧವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗುತ್ತಿದೆ. ಇದು ಜಗತ್ತಿನ ಸಮತೋಲನವನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರಿಗೆ ತ್ರಿಕೋನವೇ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುವುದು.

ವೃಶ್ಚಿಕ

ವೃಶ್ಚಿಕ

12ನೇ ಮನೆಯಲ್ಲಿ ಗುರು ಗ್ರಹದ ಪ್ರವೇಶ ಆಗುವುದರಿಂದ ವ್ಯಕ್ತಿ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಹೆಚ್ಚು ಒಲವನ್ನು ತೋರುತ್ತಾನೆ ಎಂದು ಹೇಳಲಾಗುವುದು. ಪ್ರೀತಿ ಪಾತ್ರರು ಹಾಗೂ ಪೋಷಕರೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

ವೃಶ್ಚಿಕ

ವೃಶ್ಚಿಕ

ಇವರಿಗೆ ನೀರು ಮತ್ತು ಚಂದ್ರನ ಆಜೃತಿಯು ಹೆಚ್ಚು ಅದೃಷ್ಟವನ್ನು ತಂದು ಕೊಡುತ್ತದೆ. ಸ್ಟಾರ್ ಆಕಾರದ ಬೆಳ್ಳಿಯ ಆಭರಣ ಧರಿಸಿದರೆ ಯಶಸ್ಸು ನಿಮ್ಮ ಜೊತೆಗೆ ಇರುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರ ಅದೃಷ್ಟದ ಸಂಕೇತವು ಕುದುರೆ ಲಾಳ ಎನ್ನಲಾಗುತ್ತದೆ. ಹೆಚ್ಚಿನ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿಯನ್ನು ದೂರವಿರಿಸಲು ಕುದುರೆ ಲಾಳವು ಹೆಚ್ಚು ಸಹಕಾರಿಯಾಗಿರುತ್ತದೆ. ಯು ಚಿಹ್ನೆಯಲ್ಲಿರುವ ವಸ್ತುವು ಅದೃಷ್ಟ ಹಾಗೂ ಸಮೃದ್ಧಿಯನ್ನು ತರುವುದು.

ಧನು

ಧನು

11ನೇ ಮನೆಯಲ್ಲಿ ಗುರು ಗ್ರಹದ ಪರಿವರ್ತನೆ ಹಾಗೂ ಚಂದ್ರನ ಉತ್ತಮ ಸಂಚಾರದಿಂದ ಇದೊಂದು ಉತ್ತಮ ಸಮಯ ನಿಮಗೆ ಎಂದು ಹೇಳಬಹುದು. ಈ ರಾಶಿಯವರು ಪ್ರಪಂಚದಾದ್ಯಂತ ಸುತ್ತಿ ಹೆಚ್ಚಿನ ಜ್ಞಾನ ಪಡೆದುಕೊಳ್ಳುವರು. ವೈಯಕ್ತಿಕ ಜೀವನದಲ್ಲಿ ಮಕ್ಕಳು ಇವರಿಗೆ ಹೆಚ್ಚು ಖುಷಿಯನ್ನು ನೀಡುತ್ತಾರೆ. ಜೊತೆಗೆ ಈ ಅಪೂರ್ವ ಸಮಯವು ನಿಮಗೆ ಅಪಾರ ಸಂತೋಷವನ್ನು ತಂದುಕೊಡುವುದು.

ಧನು

ಧನು

ಇವರಿಗೆ ಬಿಲ್ಲು, ಬಾಣ, ಹೃದಯದ ಚಿಹ್ನೆಯು ಅದೃಷ್ಟದ ಸಂಕೇತ. ಇವುಗಳನ್ನು ಹೊಂದಿರುವ ಆಕೃತಿಯನ್ನು ಆಭರಣದಲ್ಲಿ ಧರಿಸಿದರೆ ಉತ್ತಮ ಫಲವನ್ನು ಪಡೆಯಬಹುದು. ಗ್ರೀಕ್ ಶಾಸ್ತ್ರದ ಪ್ರಕಾರ ಧಾರ್ಮಿಕ ಸಂಪ್ರದಾಯಗಳಲ್ಲಿ ಅನೇಕ ಅದೃಷ್ಟದ ಮೋಡಿಗಳನ್ನು ನೋಡಬಹುದು. ಈ ರಾಶಿಯವರು ಧಾರ್ಮಿಕ ಮತ್ತು ತೆರೆದ ಮನಸ್ಸಿನವರಾಗಿರುತ್ತಾರೆ. ಮೊಲದ ಪಾದದ ಚಿಹ್ನೆಗಳು ಈ ರಾಶಿಯವರಿಗೆ ಹೆಚ್ಚಿನ ಅದೃಷ್ಟವನ್ನು ತಂದುಕೊಡುತ್ತದೆ.

ಮಕರ

ಮಕರ

ಹತ್ತನೇ ಮನೆಯಲ್ಲಿ ಗುರುವು ಪ್ರವೇಶಿಸುವುದರಿಂದ ವೃತ್ತಿ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುವಿರಿ. ಹೊಸ ಕೆಲಸದ ಭಾಗ್ಯ ನಿಮಗೆ ಒದಗಿಬರುವುದು. ಆದರೆ ಆರಂಭದಲ್ಲಿ ಸ್ವಲ್ಪ ತೊಂದರೆಯನ್ನು ಎದುರಿಸುವ ಸಾಧ್ಯತೆಗಳಿರುತ್ತವೆ. ಆದರೆ ಒಳ್ಳೆಯ ಸಮಯವು ನಿಮ್ಮ ಪರವಾಗಿ ಇರುವುದು.

ಮಕರ

ಮಕರ

ಕಲ್ಲು, ಗುಲಾಬಿ ಸ್ಫಟಿಕ ಇವರಿಗೆ ಅದೃಷ್ಟದ ಸಂಕೇತ. ಇವುಗಳನ್ನು ನೀವು ಧರಿಸುವ ಆಭರಣದಲ್ಲಿ ಸೇರಿಸಿಕೊಂಡರೆ ಉತ್ತಮ ಫಲವನ್ನು ಪಡೆಯಬಹುದು. ಗ್ರೀಕ್ ಶಾಸ್ತ್ರದ ಪ್ರಕಾರ ನಾಲ್ಕೆಲಗ ಈ ರಾಶಿಯವರಿಗೆ ಅದೃಷ್ಟದ ಚಿಹ್ನೆ. ನಾಲ್ಕೆಲಗವನ್ನು ನಂಬಿಕೆ, ಭರವಸೆ, ಪ್ರೀತಿ, ಆರೋಗ್ಯ, ಖ್ಯಾತಿ ಹಾಗೂ ಸಂಪತ್ತನ್ನು ಸೂಚಿಸುತ್ತದೆ ಎನ್ನಲಾಗುವುದು. ಮಕರ ರಾಶಿಯವರಿಗೆ ನಾಲ್ಕೆಲಗವು ಅತ್ಯಂತ ಅದೃಷ್ಟವನ್ನು ತರುವ ವಸ್ತು ಎಂದು ಹೇಳಲಾಗುತ್ತದೆ.

ಕುಂಬ

ಕುಂಬ

ಗುರುವು 9ನೇ ಮನೆಯನ್ನು ಪ್ರವೇಶಿಸುತ್ತಿರುವುದರಿಂದ ನಿಮಗೆ ವಿದೇಶ ಪ್ರಯಾಣ ಮಾಡುವ ಅವಕಾಶವಿದೆ ಎಂದು ಜ್ಯೋತಿಷ್ಯ ಹೇಳುತ್ತದೆ. ತೀರ್ಮಾನಕ್ಕೆ ಬರಲು ಮುಂಚಿತವಾಗಿ ಸಾಧಕ ಬಾಧಕಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು. ವೈವಾಹಿಕ ಜೀವನ ಅಥವಾ ವಿವಾಹದ ವಿಚಾರದಲ್ಲಿ ನಿಧಾನಗತಿಯನ್ನು ತಡೆಯಲು ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಬೇಕು.

ಕುಂಬ

ಕುಂಬ

ಇವರಿಗೆ ರೆಕ್ಕೆಯನ್ನು ಹೊಂದಿರುವ ಜೀವಿಗಳ ಚಿಹ್ನೆಯು ಅದೃಷ್ಟವನ್ನು ತಂದುಕೊಡುತ್ತವೆ. ಲೇಡಿ ಬಗ್ ಆಕೃತಿಯು ಆಭರಣದಲ್ಲಿ ಧರಿಸಿದರೆ ಒಳ್ಳೆಯದು. ಗ್ರೀಕ್ ಶಾಸ್ತ್ರದ ಪ್ರಕಾರ ಕುಂಬರಾಶಿಯವರಿಗೆ ಕ್ರಿಕೆಟ್ಸ್ ಬಹಳ ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಪುರಾತನ ಕಾಲದಿಂದಲೂ ಇದನ್ನು ಅದೃಷ್ಟದ ಸಂಕೇತ ಎಂದು ನಂಬಲಾಗಿದೆ. ಇವರು ಮನೆಯಲ್ಲಿ, ಕೈಚೀಲದ ಮೇಲೆ ಅಥವಾ ಬೀರುಗಳ ಮೇಲೆ ಈ ಚಿಹ್ನೆಯನ್ನು ಹೊಂದಿದ್ದರೆ ಉತ್ತಮ ಅದೃಷ್ಟ ಒಲಿದು ಬರುವುದು.

ಮೀನ

ಮೀನ

ಗುರುವು 8ನೇ ಮನೆಗೆ ಕಾಲಿಡುತ್ತಿದ್ದಾನೆ. ಈ ಸಮಯವು ಇವರಿಗೆ ಹೆಚ್ಚು ನಿರಾಸೆಯನ್ನು ತಂದೊಡ್ಡುವುದು ಎಂದು ಹೇಳಲಾಗುತ್ತದೆ. ಜೀವನದಲ್ಲಿ ಮುಂದೆ ಬರಲು ಸಾಕಷ್ಟು ಪ್ರಯತ್ನ ಪಡಬೇಕಾಗುವುದು. ವೃತ್ತಿ ಜೀವನದಲ್ಲಿ ಉತ್ತಮ ಕೆಲಸ ನಿರ್ವಹಿಸುವುದರಿಂದ ಉತ್ತಮ ಸಮಯವು ನಿಮ್ಮದಾಗಿರುತ್ತದೆ.

ಮೀನ

ಮೀನ

ಇವರ ಅದೃಷ್ಟದ ಆಯ್ಕೆ ಬೆಳ್ಳಿ ಮತ್ತು ಪಚ್ಚೆ ಹರಳು. ಇವುಗಳನ್ನು ಆಭರಣದಲ್ಲಿ ಧರಿಸಿದರೆ ಜೀವನದಲ್ಲಿ ಮಂಗಳ ಉಂಟಾಗುವುದು. ಗ್ರೀಕ್ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಕನಸು ಕಾಣುವುದೇ ಅದೃಷ್ಟದ ಸಂಕೇತ. ಕೆಟ್ಟ ಕನಸುಗಳನ್ನು ವಿಶ್ಲೇಸಿಸುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಇವು ಕನಸು ಕಾಣುವುದರಿಂದಲೇ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಎನ್ನಲಾಗುವುದು.

For Quick Alerts
ALLOW NOTIFICATIONS
For Daily Alerts

    English summary

    Find Out Your Lucky Charm According To Zodiac Sign...

    For thousands of years, lucky charms have been used to usher in some positive vibes for people. Lucky charms are still as prevalent in our society as they were for our ancestors. Lucky Charms based on your Zodiac Signs works wonders - once you have an idea what is your Lucky Charm, just get one for yourself and see if it can create some magic in your life.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more