Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೀನು ಫ್ರೆಶ್ ಆಗಿದೆ ಎಂದು ತೋರಿಸಲು, ಮೀನಿಗೆ ಕೃತಕ ಕಣ್ಣು ಅಂಟಿಸಿ ಮೋಸ ಮಾಡಿದ ವ್ಯಾಪಾರಿ!

ನಾವು ಮಾರುಕಟ್ಟೆಗೆ ಹೋಗಿ ಯಾವುದಾದರೂ ಡಬ್ಬ ಅಥವಾ ಪ್ಯಾಕೇಟ್ ನಲ್ಲಿರುವ ಆಹಾರವನ್ನು ಖರೀದಿ ಮಾಡುವ ಮೊದಲು ಅದರ ಎಕ್ಸ್ ಪಯರಿ ಡೇಟ್ ಯಾವಾಗ ಇದೆ ಎಂದು ಸರಿಯಾಗಿ ಪರೀಕ್ಷಿಸಿಕೊಳ್ಳುತ್ತೇವೆ. ಆದರೆ ಎಲ್ಲಾ ಸಂದರ್ಭದಲ್ಲೂ ನಾವು ಹೀಗೆ ಮಾಡಲು ಬರುವುದಿಲ್ಲ. ಕೆಲವೊಂದು ಸಲ ನಾವು ಮಾರುಕಟ್ಟೆಯಲ್ಲಿ ಖರೀದಿಸುವಂತಹ ವಸ್ತುಗಳಿಗೆ ಯಾವುದೇ ಎಕ್ಸ್ ಪಯರಿ ಡೇಟ್ ಅನ್ನುವುದು ಇರಲ್ಲ.
ಹಣ್ಣುಗಳು, ತರಕಾರಿಗಳು, ಮೀನು, ಮಾಂಸ ಇತ್ಯಾದಿಗಳು. ಇವುಗಳಿಗೆ ಯಾವುದೇ ಎಕ್ಸ್ ಪಯರಿ ಡೇಟ್ ಇರಲ್ಲ. ಹೀಗಿದ್ದರೂ ನಾವು ಅದನ್ನು ಗಮನಿಸಿ ತಾಜಾವಾಗಿದ್ದರೆ ಮಾತ್ರ ಖರೀದಿಸುತ್ತೇವೆ. ಆದರೆ ನಮ್ಮನ್ನು ವಂಚಿಸಲು ಕೆಲವು ವ್ಯಾಪಾರಿಗಳು ಮೀನುಗಳು ತಾಜಾವಾಗಿದೆ ಎಂದು ತೋರಿಸಿಕೊಡಲು ಏನಾದರೂ ಬೆರಸುವರು.

ದಕ್ಷಿಣ ಭಾರತದಲ್ಲಿ ಮೀನುಗಳಿಗೆ ಫಾರ್ಮಲಿನ್ ರಾಸಾಯನಿಕ ಬೆರೆಸಿ ತಾಜಾವಾಗಿ ಇಡುತ್ತಾರೆ ಎನ್ನುವ ಸುದ್ದಿಯು ಹಬ್ಬಿತ್ತು. ಆದರೆ ಇಲ್ಲೊಬ್ಬ ವ್ಯಕ್ತಿಯು ಮೀನುಗಳಿಗೆ ಕೃತಕ ಕಣ್ಣುಗಳನ್ನು ಅಂಟಿಸಿಟ್ಟು ಗ್ರಾಹಕರನ್ನು ವಂಚಿಸಲು ಯತ್ನಿಸಿರುವಂತಹ ವೀಡಿಯೋ ಈಗ ವೈರಲ್ ಆಗಿದ್ದು, ಹೀಗೂ ಉಂಟೆ ಎನ್ನುವ ಪ್ರಶ್ನೆ ಮಾತ್ರ ಖಂಡಿತವಾಗಿಯೂ ಮೀನು ಪ್ರಿಯರಲ್ಲಿ ಬಂದಿದೆ. ಇದರ ಬಗ್ಗೆ ಮತ್ತಷ್ಟು ತಿಳಿಯಿರಿ.

ಕುವೈಟ್ ನಲ್ಲಿ ಈ ಘಟನೆ ನಡೆದಿದೆ...
ಈ ಘಟನೆಯು ಕುವೈಟ್ ನ ಸ್ಥಳೀಯ ಮಾರುಕಟ್ಟೆಯಲ್ಲಿ ನಡೆದಿರುವುದು. ಇಲ್ಲಿನ ವ್ಯಾಪಾರಿಯೊಬ್ಬ ಗ್ರಾಹಕರನ್ನು ವಂಚಿಸಲು ನಕಲಿ ಪ್ಲಾಸ್ಟಿಕ್ ಕಣ್ಣುಗಳನ್ನು ಮೀನಿಗೆ ಅಂಟಿಸಿ ಅದು ತಾಜಾ ಇದೆ ಎಂದು ತೋರಿಸಲು ಯತ್ನಿಸಿದ್ದಾನೆ.

ಅಂಗಡಿ ಮುಚ್ಚಲಾಗಿದೆ
ಗ್ರಾಹಕರಿಗೆ ವ್ಯಾಪಾರಿಯು ವಂಚಿಸುತ್ತಿದ್ದಾನೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳಿಗೆ ತಿಳಿದ ಬಳಿಕ ಈ ಅಂಗಡಿ ಮುಚ್ಚಲಾಗಿದೆ. ಕಣ್ಣಿಗೆ ಅಂಟಿಸಿರುವಂತಹ ಪ್ಲಾಸ್ಟಿಕ್ ಕಣ್ಣುಗಳು ಕಿತ್ತು ಬರಲು ಆರಂಭಿಸಿದ ಚಿತ್ರಗಳು ಪ್ರಸಾರಗೊಂಡ ಬಳಿಕ ಕ್ರಮ ತೆಗೆದುಕೊಳ್ಳಲಾಗಿದೆ. ಮೀನಿನ ಹಳದಿ ಕಣ್ಣು ಮತ್ತು ವಿಡಿಯೋ ವೈರಲ್ ಆಗಿದೆ.
ಮಿಶ್ರ ಪ್ರತಿಕ್ರಿಯೆ
ಈ ಘಟನೆ ನಡೆದು ಕೆಲವು ದಿನಗಳು ಕಳೆದಿದೆ. ಆದರೆ ಇಂಟರ್ನೆಟ್ ನಲ್ಲಿ ಇದರ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನು ನೋಡಿದ ನೆಟ್ಟಿಗರು ದಂಗಾಗಿದ್ದಾರೆ. ಗ್ರಾಹಕರನ್ನು ವಂಚಿಸಿರುವುದಕ್ಕೆ ದೊಡ್ಡ ಮಟ್ಟದ ದಂಡ ಕಟ್ಟಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆದರೆ ಕೆಲವರು ವ್ಯಾಪಾರಿಯ ಕ್ರಿಯಾತ್ಮಕ ಚಿಂತನೆಯಿಂದ ತುಂಬಾ ಆಕರ್ಷಿತರಾಗಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ
ವ್ಯಾಪಾರಿಯ ವಂಚನೆಯಿಂದ ಆಕ್ರೋಶಿತಗೊಂಡಿರುವ ನೆಟ್ಟಿಗರು ಹೀಗೆ ಬರೆದಿದ್ದಾರೆ. ನೀವು ಯಾಕೆ ಅಷ್ಟು ಗಡಿಬಿಡಿ ಮಾಡುತ್ತಲಿದ್ದೀರಿ? ಮೀನಿನ ಕಣ್ಣು ತುಂಬಾ ದುರ್ಬಲವಾಗಿದೆ. ಅದು ಅಷ್ಟೇ. ಕುವೈಟ್ ನಲ್ಲಿರುವ ಇತರ ಮೀನು ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಸಿಗುವಂತಹ ``ಮೀನುಗಳಿಗೆ ಯಾವುದೇ ರೀತಿಯ ಕಾಸ್ಮೆಟಿಕ್ ವರ್ಧಕ ಅಳವಡಿಸದೆ ತಾಜಾವಾಗಿದೆ'' ಮತ್ತು ಯಾವುದೇ ಬಣ್ಣದ ಲೆನ್ಸ್ ಅಳವಡಿಸಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ಕಳುಹಿಸಿ.



Click it and Unblock the Notifications
