Latest Updates
-
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ!
ಈ ಗ್ರಾಮದಲ್ಲಿ ಪುರುಷರು ಮಹಿಳೆಯರ ಬಟ್ಟೆ ಧರಿಸಿ ಮಲಗುತ್ತಾರೆ! ಯಾಕೆ ಗೊತ್ತೇ?
ಕೆಲವೊಂದು ಸಲ ಮೂಢನಂಬಿಕೆಗಳು ಕೂಡ ನಿಜವಾಗುತ್ತದೆಯಾ ಎನ್ನುವ ಪ್ರಶ್ನೆಗಳು ಕಾಡುವುದು ಇದೆ. ಈ ಲೇಖನ ಓದಿದ ಬಳಿಕ ಅದನ್ನು ನಿರ್ಧಿರಿಸುವುದು ನಿಮಗೆ ಬಿಟ್ಟಿರುವುದು. ಯಾಕೆಂದರೆ ಥೈಲ್ಯಾಂಡ್ ನ ಗ್ರಾಮವೊಂದರಲ್ಲಿ ಕೆಲವೇ ವಾರಗಳಲ್ಲಿ ಮಲಗಿದ್ದಲ್ಲೇ ಕೆಲವು ಪುರುಷರು ಮೃತಪಟ್ಟರು. ಇದು ವಿಧವೆ ಮಹಿಳೆಯೊಬ್ಬಳ ಪ್ರೇತದ ಕಾಟವೆಂದು ಅಲ್ಲಿನ ಜನರು ನಂಬಿದ್ದಾರೆ... ಮುಂದೆ ಓದಿ

83 ಸೆ.ಮೀ. ಉದ್ದದ ಶಿಶ್ನಗಳನ್ನು ಮನೆಯ ಹೊರಗಡೆ ಇಡುತ್ತಾರಂತೆ!
ಸಾವಿನ ಬಳಿಕ ತನ್ನೊಂದಿಗೆ ಪುರುಷರನ್ನು ಕರೆದೊಯ್ಯಲು ಆಕೆ ಹೀಗೆ ಮಾಡುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ಭೂತ ಬಾಧೆ ನಿವಾರಣೆ ಮಾಡಲು ಗ್ರಾಮಸ್ಥರು ಸುಮಾರು 83 ಸೆ.ಮೀ. ಉದ್ದದ ಶಿಶ್ನಗಳನ್ನು ಮನೆಯ ಹೊರಗಡೆ ಇಟ್ಟಿದ್ದಾರೆ. ಇದರಿಂದ ವಿಧವೆ ಮಹಿಳೆಯ ಭೂತವು ಬೇರೆಡೆ ಹೋಗುತ್ತದೆ ಎನ್ನುವ ನಂಬಿಕೆ. ಇನ್ನು ಕೆಲವು ಮನೆಗಳಲ್ಲಿ ಪುರುಷರು ಮಲಗುವಾಗ ಮಹಿಳೆಯ ಬಟ್ಟೆ ಧರಿಸಿ ಮಲಗುವರು. ಈ ವಿಧಾನಗಳಿಂದ ಸ್ವಲ್ಪ ಮಟ್ಟಿಗೆ ಪರಿಹಾರ ಸಿಕ್ಕಿದೆ ಎನ್ನುವರು ಇಲ್ಲಿನ ಗ್ರಾಮಸ್ಥರು.

ಶಿಶ್ನಗಳ ಪ್ರತಿಕೃತಿ ತಯಾರಿಸಿ ಅದನ್ನು ನೇತಾಡಿಸುತ್ತಾರಂತೆ!
ಥಾಯ್ಲೆಂಡ್ ನ ನಖೊನ್ ಫಾನೊಮ್ ಗ್ರಾಮದ ಜನರು ವಿಧವೆ ಮಹಿಳೆಯ ಭೂತದ ಬಗ್ಗೆ ಎಷ್ಟು ಭೀತಿಗೊಳಗಾಗಿದ್ದಾರೆ ಎಂದರೆ ಅಲ್ಲಿನ ಪುರುಷರನ್ನು ಮೇಕಪ್ ಮಾಡಿಸಿ, ಮಹಿಳೆಯರ ಬಟ್ಟೆ ಧರಿಸಿ ಮಲಗಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ ತಮ್ಮ ಮನೆಯ ಮುಂದೆ ದೊಡ್ಡ ದೊಡ್ಡ ಆಕಾರದ ಶಿಶ್ನಗಳ ಪ್ರತಿಕೃತಿ ತಯಾರಿಸಿ ಅದನ್ನು ನೇತಾಡಿಸುತ್ತಿದ್ದಾರೆ.

ಪುರುಷರು ಹಠಾತ್ ಆಗಿ ಮೃತಪಡುತ್ತಾರಂತೆ!
ಕೆಲವೇ ವಾರಗಳಲ್ಲಿ ತುಂಬಾ ಆರೋಗ್ಯವಾಗಿದ್ದ ಪುರುಷರು ಹಠಾತ್ ಆಗಿ ಮೃತಪಟ್ಟ ಬಳಿಕ ಸುಮರು 90 ಮಂದಿ ಭೀತಿಯಿಂದಾಗಿ ಗ್ರಾಮವನ್ನೇ ಬಿಟ್ಟು ತೆರಳಿದ್ದಾರೆ. ವಿಧವೆ ಮಹಿಳೆಯ ಭೂತವು ಗ್ರಾಮದಲ್ಲಿ ತುಂಬಾ ಆತಂಕವನ್ನು ಉಂಟು ಮಾಡಿದೆ. ಇದು ನಿದ್ರಿಸಿರುವ ಪುರುಷರ ಕನಸಿನಲ್ಲಿ ಬಂದು ಅವರನ್ನು ಉದ್ರೇಕಿಸಿ ಸಾವಿನೆಡೆಗೆ ಕರೆದೊಯ್ಯುತ್ತಿದೆ ಎನ್ನುತ್ತಾರೆ ಇಲ್ಲಿನ ಜನರು.

ಇಲ್ಲಿ ಅತಿಯಾದ ಮೂಢನಂಬಿಕೆ
ಅತಿಯಾಗಿ ಮೂಢನಂಬಿಕೆಯಲ್ಲಿರುವಂತಹ ಇಲ್ಲಿನ ಗ್ರಾಮಸ್ಥರು ಸುಮಾರು 80 ಸೆ.ಮೀ. ಉದ್ದದ ಶಿಶ್ನದ ಪ್ರತಿಕೃತಿಯ ಜತೆಗೆ ಕೆಂಪು ಬಟ್ಟೆಗಳನ್ನು ಮನೆಯ ಮುಂದೆ ನೇತುಹಾಕುತ್ತಿದ್ದಾರೆ. ಇಲ್ಲಿ ಪುರುಷರು ಯಾರು ಇಲ್ಲ ಎಂದು ಕೆಲವು ಮಂದಿ ಮನೆ ಮುಂದೆ ಬರೆದಿದ್ದಾರೆ ಮತ್ತು ಇನ್ನು ಕೆಲವರು ತಮ್ಮ ಪತಿ ಮಹಿಳೆಯರ ಬಟ್ಟೆ ಧರಿಸಿ ಮಲಗುವಂತೆ ಮಾಡಿದ್ದಾರೆ. ಆದರೆ ಈ ಕ್ರಮಗಳ ಬಳಿಕ ಗ್ರಾಮದಲ್ಲಿ ಯಾವೊಬ್ಬ ಪುರುಷನು ಮೃತಪಟ್ಟಿಲ್ಲವೆಂದು ಹೇಳಲಾಗುತ್ತಿದೆ.

ವಿಧವೆಯ ಭೂತವೇ ಗ್ರಾಮವನ್ನು ಕಾಡುತ್ತಿದೆಯಂತೆ
68ರ ಹರೆಯದ ನೊಂಗ್ ಅಯು ಎನ್ನುವವರ ಪ್ರಕಾರ ವಿಧವೆಯ ಭೂತವೇ ಗ್ರಾಮವನ್ನು ಕಾಡುತ್ತಿದೆ. ಇದು ಈ ಗ್ರಾಮ ಮಾತ್ರವಲ್ಲದೆ ಹತ್ತಿರದ ಗ್ರಾಮದಲ್ಲೂ ಭೀತಿ ಮೂಡಿಸಿದೆ. ಅಲ್ಲಿ ಕೂಡ ಆರೋಗ್ಯವಂತ ಪುರುಷರು ಮೃತಪಟ್ಟಿದ್ದಾರೆ. ಇದು ಯಾಕೆಂದು ಯಾರಿಗೂ ತಿಳಿದಿಲ್ಲ. ಆದರೆ ಗ್ರಾಮದ ಹಿರಿಯರ ಪ್ರಕಾರ ಯುವಕರು ಸಾಯುವರು. ಈಗ ಇಲ್ಲಿ ಯಾವ ಪುರುಷನು ಉಳಿದುಕೊಂಡಿಲ್ಲವೆಂದು ಆಕೆ ಹೇಳುತ್ತಾಳೆ.

ದು ಮಂದಿ ಆರೋಗ್ಯವಂತ ಪುರುಷರು ನಿದ್ರೆಯಲ್ಲೇ ಸಾವನ್ನಪ್ಪಿದ್ದರಂತೆ
ಈ ತಿಂಗಳ ಆರಂಭದಲ್ಲಿ ಐದು ಮಂದಿ ಆರೋಗ್ಯವಂತ ಪುರುಷರು ನಿದ್ರೆಯಲ್ಲೇ ಸಾವನ್ನಪ್ಪಿದ್ದರು. ರಾತ್ರಿ ವೇಳೆ ಸ್ನಾನ ಮಾಡಿ ಮಲಗಿದ ಬಳಿಕ ನಿದ್ರೆಯಲ್ಲೇ ಅವರು ಸಾವನ್ನಪ್ಪಿದ್ದಾರೆ. ದೊಡ್ಡ ಗಾತ್ರದ ಶಿಶ್ನವು ಪುರುಷತ್ವ ಮತ್ತು ಬಲದ ಸಂಕೇತವಾಗಿದೆ ಮತ್ತು ಇದು ವಿಧವೆಯ ಭೂತದಿಂದ ಪುರುಷರನ್ನು ರಕ್ಷಿಸುವುದು. ಕೆಲವು ಪುರುಷರು ಮಹಿಳೆಯರ ಬಟ್ಟೆ ಧರಿಸಿ ಮಲಗಿರುವ ಕಾರಣದಿಂದ ಭೂತವು ಗೊಂದಲಕ್ಕೆ ಒಳಗಾಗುವುದು ಎನ್ನುತ್ತಾರೆ ಇಲ್ಲಿನವರು.

ಐದು ಮಂದಿ ಆರೋಗ್ಯವಂತ ಪುರುಷರು ನಿದ್ರೆಯಲ್ಲೇ ಸಾವನ್ನಪ್ಪಿದ್ದರಂತೆ
ದೈಹಿಕವಾಗಿ ತುಂಬಾ ಬಲಿಷ್ಠರಾಗಿದ್ದ 40ರ ಹರೆಯದ ಇಬ್ಬರು ಪುರುಷರು ಮೊದಲು ಸಾವನ್ನಪ್ಪಿದರು. ಇವರಿಗೆ ಯಾವುದೇ ರೀತಿಯ ಅನಾರೋಗ್ಯವಿರಲಿಲ್ಲ ಎಂದು 36ರ ಹರೆಯದ ಪಿಯಟಿಡಾ ವಾಯಿ ಹೇಳುತ್ತಾರೆ. ಇವರು ದಿನನಿತ್ಯದಂತೆ ರಾತ್ರಿ ವೇಳೆ ಸ್ನಾನ ಮಾಡಿಕೊಂಡು ಮಲಗಿದರು. ಆದರೆ ಬೆಳಗ್ಗೆ ಕುಟುಂಬಿಕರು ನೋಡುವಾಗ ಮೃತಪಟ್ಟಿದ್ದರು.

ಶಿಶ್ನದ ಪ್ರತಿಕೃತಿಯು ಪುರುಷತ್ವದ ಸಂಕೇತವಾಗಿದೆ
ನನ್ನ ಮಗನಿಗೆ ತನ್ನ ತಂದೆ ಸಾಯುತ್ತಾರೆನ್ನುವ ಭೀತಿಯಿದೆ. ನಮ್ಮ ಮನೆಯ ಹೊರಗಡೆ ಸ್ಕೇರ್ ಕ್ರೌಗಳನ್ನು ಇಟ್ಟಿದ್ದೇವೆ. ಇದರ ಮೇಲೆ ಮನೆಯಲ್ಲಿ ಪುರುಷರು ಇಲ್ಲವೆಂದು ಬರೆದಿದ್ದೇವೆ. ಶಿಶ್ನದ ಪ್ರತಿಕೃತಿಯು ಪುರುಷತ್ವದ ಸಂಕೇತವಾಗಿದೆ. ಇದನ್ನು ಮನೆಯ ಹೊರಗಡೆ ನೇತು ಹಾಕಿದ ಬಳಿಕ ಯಾವ ಪುರುಷನೂ ಇದುವರೆಗೆ ಮೃತಪಟ್ಟಿಲ್ಲ. ಗ್ರಾಮಸ್ಥರು ಇದನ್ನು ಮಾಡುತ್ತಲಿದ್ದಾರೆ ಮತ್ತು ನಮಗೆ ಇದರ ಬಗ್ಗೆ ನಂಬಿಕೆಯಿದೆ ಎನ್ನುತ್ತಾರೆ ವಾಯಿ.

ಇಲ್ಲಿ ಈಗಾಗಲೇ ಐದು ಮಂದಿ ಮೃತಪಟ್ಟಿದ್ದಾರಂತೆ
ಈ ಗ್ರಾಮವು ವಾಸಿಸಲು ತುಂಬಾ ಶಾಂತಿಯುತವಾಗಿತ್ತು. ಆದರೆ ಇತ್ತೀಚಿನ ಘಟನೆಗಳು ಎಲ್ಲರಿಗೆ ಆಘಾತ ಉಂಟು ಮಾಡಿದೆ. ಆರೋಗ್ಯವಂತ ಪುರುಷರ ಸಾವಿಗೆ ವಿಧವೆ ಮಹಿಳೆಯ ಭೂತವು ಕಾರಣವಾಗುತ್ತಿದೆ ಎನ್ನುವುದನ್ನು ನಾನು ನಂಬಿದ್ದೇನೆ. ಇಲ್ಲಿ ಈಗಾಗಲೇ ಐದು ಮಂದಿ ಮೃತಪಟ್ಟಿದ್ದಾರೆ. ನನ್ನ ಪತ್ನಿ ಮತ್ತು ಮಗು, ನಾನು ಸಾಯುತ್ತೇನೆಂದು ಭೀತಿಯಲ್ಲಿದ್ದಾರೆ.

80 ಸೆ.ಮೀ. ಉದ್ದದ ದೊಡ್ಡ ಶಿಶ್ನದ ಆಕೃತಿಯು ಭೂತ!
ಸ್ಕೇರ್ ಕ್ರೌ ನನ್ನನ್ನು ರಕ್ಷಿಸುತ್ತದೆ ಎಂದು ಅವರು ನಂಬಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಹೀಗೆ ಮಾಡಲಾಗುತ್ತಿದೆ ಎಂದು 53ರ ಹರೆಯದ ಜಾನಿ ತಿಳಿಸಿದ್ದಾರೆ. 80 ಸೆ.ಮೀ. ಉದ್ದದ ದೊಡ್ಡ ಶಿಶ್ನದ ಆಕೃತಿಯು ಭೂತವು ಬಂದಾಗ ಹೆದರಿಸುತ್ತದೆ ಮತ್ತು ಇದನ್ನು ದಾಟಿ ಮುಂದೆ ಬರಲಾಗದು. ಇದರಿಂದ ಭೂತವು ದೂರವಿದ್ದು, ನಾವು ಸುರಕ್ಷಿತರಾಗಿರುತ್ತೇವೆ ಎಂದು ಅವರು ಹೇಳುತ್ತಾರೆ.
All Image courtesy-https://www.mirror.co.uk



Click it and Unblock the Notifications











