ಸೆಕ್ಸ್ ಬಳಿಕ ಪುರುಷರು ಧೂಮಪಾನ ಮಾಡುವುದು ಯಾಕೆ?

By Deepu

ಒಬ್ಬ ವ್ಯಕ್ತಿಯು ಮತ್ತೊಬ್ಬನಿಗಿಂತ ಭಿನ್ನವಾಗಿರುವನು. ಅದೇ ರೀತಿ ಲೈಂಗಿಕ ಕ್ರಿಯೆಯಲ್ಲಿ ಕೂಡ. ಲೈಂಗಿಕ ಕ್ರಿಯೆಯ ಬಳಿಕ ಜನರು ಏನು ಮಾಡುತ್ತಾರೆ ಎನ್ನುವ ಬಗ್ಗೆ ಹಲವರಲ್ಲಿ ಪ್ರಶ್ನೆಗಳು ಕಾಡುತ್ತಲಿರುತ್ತದೆ. ಇದು ಸಹಜ. ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಈ ಲೇಖನ. ಕೆಲವರು ಲೈಂಗಿಕ ಕ್ರಿಯೆ ಬಳಿಕ ಗಾಢವಾಗಿ ನಿದ್ರೆ ಮಾಡುವರು, ಇನ್ನು ಕೆಲವರಿಗೆ ಹಸಿವಾಗಿ ತಿಂಡಿ ತಿನ್ನಬಹುದು. ಇನ್ನುಳಿದವರಲ್ಲಿ ಕೆಲವರು ಧೂಮಪಾನ ಮಾಡಬಹುದು.

ಕೆಲವರು ಲೈಂಗಿಕ ಕ್ರಿಯೆ ಬಳಿಕ ನೇರವಾಗಿ ಧೂಮಪಾನ ಮಾಡುವರು. ಆದರೆ ಹೀಗೆ ಮಾಡಲು ಕಾರಣವೇನು? ಧೂಮಪಾನ ಮಾಡಲು ಹೋಗುವ ಜನರ ಬಗ್ಗೆ ಮಾಹಿತಿ ನಿಮ್ಮಲ್ಲಿ ನಾವು ಹಂಚಿಕೊಳ್ಳಲಿದ್ದೇವೆ. ಇದನ್ನು ಮಾಡಬೇಕೆಂಬ ಬಯಕೆ ಅಥವಾ ಇಚ್ಛೆ ಅವರಲ್ಲಿ ಇರುವುದಿಲ್ಲ. ಆದರೆ ಇದಕ್ಕೆ ಒಂದು ಇತಿಹಾಸವೇ ಇದೆ. ಇದಕ್ಕೆ ಕಾರಣವೇನೆಂದು ನೀವು ತಿಳಿಯಿರಿ....

ಇದು ಆರಂಭವಾಗಿರುವುದು….

ಇದು ಆರಂಭವಾಗಿರುವುದು….

ಇದು 1960 ಮತ್ತು 70ರ ಅಂತ್ಯದಲ್ಲಿ ಆರಂಭವಾಗಿರುವುದು. ಅಂದಿನ ದಿನಗಳಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ನಿರ್ಮಾಪಕರು ತುಂಬಾ ನಿಕಟ ದೃಶ್ಯಗಳನ್ನು ತೋರಿಸುತ್ತಿರಲಿಲ್ಲ ಮತ್ತು ಇದರಿಂದ ನಟನಟಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರು ಎನ್ನುವ ಸಂಕೇತವಾಗಿ ಪುರುಷರು ಧೂಮಪಾನ ಮಾಡುವುದನ್ನು ತೋರಿಸಲಾಯಿತು. ಇಲ್ಲಿಂದ ಅದು ಮುಂದುವರಿಯಿತು...

ಧೂಮಪಾನ ಸಮನಾರ್ಥಕವಾಯಿತು…

ಧೂಮಪಾನ ಸಮನಾರ್ಥಕವಾಯಿತು…

ಹಾಸಿಗೆಯಲ್ಲಿ ಸಂಗಾತಿ ಜತೆಗೆ ಇರುವಾಗ ಪುರುಷನು ಧೂಮಪಾನ ಮಾಡುವುದು ಅವರಿಬ್ಬರಲ್ಲಿ ಲೈಂಗಿಕ ಕ್ರಿಯೆ ನಡೆದಿದೆ ಎನ್ನುವುದ ಸೂಚಕವಾಯಿತು. ಇದು ಪ್ರತಿಯೊಂದು ಸಿನಿಮಾದಲ್ಲೂ ಕಾಣಿಸತೊಡಗಿತು. ಇದೇ ದೃಶ್ಯಗಳು ಜನರ ಮನಸ್ಸಿನಲ್ಲಿ ಬೇರೂರಿತು ಮತ್ತು ಹೆಚ್ಚಿನವರು ಲೈಂಗಿಕ ಕ್ರಿಯೆ ಬಳಿಕ ಧೂಮಪಾನ ಮಾಡಲು ಆರಂಭಿಸಿದರು.

ಇದು ಸುಖವೆಂದು ಭಾವಿಸಲಾಯಿತು…

ಇದು ಸುಖವೆಂದು ಭಾವಿಸಲಾಯಿತು…

ಧೂಮಪಾನ ಮಾಡುವಂತಹ ಜನರಲ್ಲಿ ನಿಮಗೆ ಧೂಮಪಾನ ಮಾಡಲು ಹೆಚ್ಚು ಖುಷಿಯ ಸಮಯ ಯಾವುದೆಂದು ಕೇಳಿದರೆ, ಅವರು ಊಟದ ಬಳಿಕ ಎನ್ನುವರು. ಊಟದ ಬಳಿಕ ಧೂಮಪಾನ ಮಾಡುವುದು, ಊಟದ ಬಳಿಕ ಸಿಹಿ ಸೇವಿಸಿದಂತೆ ಅವರಿಗೆ ಖುಷಿ ನೀಡುವುದು. ಅವರಿಗೆ ಇದರಿಂದ ಹೆಚ್ಚು ಸುಖ ಸಿಗುವುದೆಂದು ಅವರು ಭಾವಿಸುವರು.

ನಿಕೋಟಿನ್ ಅಗತ್ಯತೆ

ನಿಕೋಟಿನ್ ಅಗತ್ಯತೆ

ಪ್ರತಿನಿತ್ಯ ಧೂಮಪಾನ ಮಾಡಿದರೆ ನಿಕೋಟಿನ್ ಸೇವನೆ ಅತಿಯಾಗಿರುವುದು ಮತ್ತು ದೇಹವು ಒಂದು ಸಿಗರೇಟ್ ನಿಂದ ಪಡೆದ ನಿಕೋಟಿನ್ ಖಾಲಿಯಾಗುವ ವೇಳೆ ಮತ್ತೊಂದಕ್ಕೆ ಬಯಕೆ ವ್ಯಕ್ತಪಡಿಸುವುದು.

ಇದು ಮಾನಸಿಕ ಚಟುವಟಿಕೆ

ಇದು ಮಾನಸಿಕ ಚಟುವಟಿಕೆ

ಲೈಂಗಿಕ ಕ್ರಿಯೆ ಎನ್ನುವುದು ಮಾನಸಿಕ ಹಾಗೂ ದೈಹಿಕ ಕ್ರಿಯೆಯಾಗಿದೆ. ಇದಕ್ಕೆ ಹೆಚ್ಚಿನ ಏಕಾಗ್ರತೆ ಮತ್ತು ಶ್ರಮ ಬೇಕಾಗುವುದು. ಇದರಿಂದ ನಿಮಗೆ ತೃಪ್ತಿ ಸಿಕ್ಕಿದಾಗ ದೇಹಕ್ಕೆ ಆಯಾಸವಾಗಿರುವುದು. ಈ ಹಂತದಲ್ಲಿ ನಿಕೋಟಿನ್ ಮಟ್ಟವು ತೀವ್ರವಾಗಿ ಕುಸಿದಿರುವುದು. ಮತ್ತೊಂದು ಸಿಗರೇಟನ್ನು ದೇಹವು ಬಯಸುತ್ತಲಿರುವುದು. ಲೈಂಗಿಕ ಕ್ರಿಯೆ ಬಳಿಕ ಧೂಮಪಾನವು ದೇಹಕ್ಕೆ ತುಂಬಾ ತೃಪ್ತಿ ನೀಡುವುದು.

ಸುಖದ ಮಟ್ಟ

ಸುಖದ ಮಟ್ಟ

ಲೈಂಗಿಕ ಕ್ರಿಯೆ ಬಳಿಕ ಸಂಗಾತಿಗಳು ಕಳೆಯುವ ಸಮಯವು ಭಾಂದವ್ಯ ಹೆಚ್ಚಿಸುವುದು. ಈ ಹಂತದಲ್ಲಿ ಇಬ್ಬರು ಕೂಡ ಸುಖದಿಂದ ಇರುವರು ಮತ್ತು ಭಾವನಾತ್ಮಕವಾಗಿ ತುಂಬಾ ಹತ್ತಿರವಾಗುವರು. ಇಬ್ಬರು ಕೂಡ ಧೂಮಪಾನಿಗಳಾಗಿದ್ದರೆ ಆಗ ಲೈಂಗಿಕ ಕ್ರಿಯೆ ಬಳಿಕ ಇಬ್ಬರು ಧೂಮಪಾನ ಮಾಡಬಹುದು ಮತ್ತು ಅವರು ಜತೆಯಾಗಿ ಧೂಮಪಾನ ಮಾಡುವುದರಿಂದ ಅವರ ಭಾಂದವ್ಯ ಮತ್ತಷ್ಟು ಹೆಚ್ಚಬಹುದು. ಆದರೆ ಲೈಂಗಿಕ ಕ್ರಿಯೆ ಬಳಿಕ ಧೂಮಪಾನ ಮಾಡುವುದಕ್ಕಿಂತ ಕೆಲವೊಂದು ನೈಸರ್ಗಿಕ ಆಹಾರಗಳನ್ನು ಸೇವಿಸುವುದರಿಂದ ದಾಂಪತ್ಯ ಸುಖವನ್ನು ಹೆಚ್ಚಿಸುವುದರ ಜೊತೆಗೆ ವೀರ್ಯದ ಗುಣಮಟ್ಟಗಳನ್ನು ಹೆಚ್ಚಿಸುತ್ತವೆ, ನಿಮಿರುವಿಕೆಯ ದೋಷಗಳನ್ನು ಸರಿಪಡಿಸುತ್ತವೆ ಮತ್ತು ಲೈಂಗಿಕ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತವೆ.

ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಬಿಸಿ ಹಾಲು ಕುಡಿಯಿರಿ

ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಬಿಸಿ ಹಾಲು ಕುಡಿಯಿರಿ

ಹಾಲು ತಾಜಾ ಹಾಗೂ ಕೊಬ್ಬು ಸಹಿತ ಆಹಾರಗಳಾಡ ಹಾಲು, ಕ್ರೀಂ, ಬೆಣ್ಣೆ ಮೊದಲಾದವು ಲೈಂಗಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸುತ್ತವೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನ ಸೇವನೆ ಈ ನಿಟ್ಟಿನಲ್ಲಿ ಅದ್ಭುತಗಳನ್ನೇ ಸಾಧಿಸುತ್ತದೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಗಳು ಸಹಾ ಪುರುಷರ ಲೈಂಗಿಕ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ B5 ಹಾಗೂ B6 ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಮೊಟ್ಟೆಯಲ್ಲಿರುವ ಪ್ರೋಟೀನುಗಳು, ವಿಟಮಿನ್ನುಗಳು ಒಟ್ಟಾರೆ ಆರೋಗ್ಯದ ಜೊತೆಗೇ ಲೈಂಗಿಕ ಆರೋಗ್ಯವನ್ನೂ ಉತ್ತಮವಾಗಿರಿಸಲು ನೆರವಾಗುತ್ತವೆ.

ಚಾಕಲೇಟು

ಚಾಕಲೇಟು

ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ನೆಚ್ಚಿನ ಚಾಕಲೇಟು ಸಹಾ ಒಂದು ಇದರಲ್ಲಿರುವ ಥಿಯೋಬ್ರೋಮೈನ್ ಎಂಬ ಪೋಷಕಾಂಶ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನಲ್ಲಿ ಸಮೃದ್ಧವಾಗಿರುವ ಎಲ್-ಸಿಟ್ರಲ್ಲೈನ್ ಎಂಬ ಅಮೈನೊ ಆಮ್ಲವು ನಿಮಿರುವಿಕೆಯನ್ನು ಗಟ್ಟಿಗೊಳಿಸುತ್ತದೆಯಂತೆ. ಈ ಅಮೈಒ ಆಮ್ಲವು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗು ದೇಹದಲ್ಲಿ ನೈಟ್ರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಕಲ್ಲಂಗಡಿಯು ನಿಮ್ಮ ಶಿಶ್ನದ ಆರೋಗ್ಯವನ್ನು ಹೆಚ್ಚಿಸಲು ಇರುವ ಅತ್ಯುತ್ತಮ ಆಹಾರ ಪದಾರ್ಥವಾಗಿರುತ್ತದೆ.

ಶುಂಠಿ

ಶುಂಠಿ

ಈ ಮಸಾಲೆ ಪದಾರ್ಥವು ನಿಮ್ಮ ಲೈಂಗಿಕ ಜೀವನವನ್ನು ಗಣನೀಯವಾಗಿ ಸುಧಾರಿಸುತ್ತದೆ. ಅದರಲ್ಲಿಯೂ ಇದು ನಿಮಿರುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಶುಂಠಿಯು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ, ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿಮಿರುವಿಕೆಯ ದೋಷವನ್ನು ಸರಿಪಡಿಸುತ್ತದೆ. ಒಂದು ಟೀಸ್ಪೂನ್ ಶುಂಠಿಯನ್ನು ಪ್ರತಿದಿನ ಕೆಲವು ವಾರಗಳವರೆಗೆ ಸೇವಿಸಿ. ಇದರಿಂದ ಟೆಸ್ಟೋಸ್ಟಿರೋನ್ ಮಟ್ಟಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.

ದಾಳಿಂಬೆ

ದಾಳಿಂಬೆ

ದಾಳಿಂಬೆಯು ತನ್ನಲ್ಲಿರುವ ಆಂಟಿಆಕ್ಸಿಡೆಂಟ್ ಕಾರಣವಾಗಿ ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ದಾಳಿಂಬೆಯನ್ನು ಸೇವಿಸುವುದರಿಂದ ನಿಮಿರುವಿಕೆಯ ದೋಷವನ್ನು ಸರಿಪಡಿಸಿಕೊಳ್ಳಬಹುದು ಮತ್ತು ನಿಮ್ಮ ಶಿಶ್ನವನ್ನು ಗಟ್ಟಿಗೊಳಿಸಬಹುದು. ದಾಳಿಂಬೆಯು ರಕ್ತವನ್ನು ಶುದ್ಧಿಗೊಳಿಸುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ. ಜೊತೆಗೆ ಇದು ಅನಿಮಿಯಾಗೂ ಸಹ ಒಳ್ಳೆಯದು.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

ಕೆಂಪು ವೈನ್ ಟ್ರೈ ಮಾಡಿ!

ಕೆಂಪು ವೈನ್ ಟ್ರೈ ಮಾಡಿ!

ಮದ್ಯದ ವ್ಯಸನಿಗಳಿಗೆ ಇದೊಂದು ಉತ್ತಮ ಪರ್ಯಾಯವಾಗಿದೆ. ದಿನಕ್ಕೆ ಒಂದು ಅಥವಾ ಎರಡು ಲೋಟ ಕೆಂಪು ವೈನ್ ಕುಡಿಯುವ ಮೂಲಕ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ.

English summary

Ever Wondered Why People Smoke After Sex?

What is the first thing that couples do after making love? While some love to sleep, some like to eat something because they are hungry, there are those who tend to smoke. But the most common thing that one can think of after making love is the couple heading to have a smoke, but what makes people smoke straight after having sex? Well, we are here to share the details of why most of the people prefer to smoke. This is not something that people crave or wish to do, but it has a history of its own as well. Check out the reasons on why people smoke right after having sex.
X
Desktop Bottom Promotion