ರಾಶಿಭವಿಷ್ಯ: ನಿಮ್ಮ ಜೀವನಕ್ಕೆ ಅಗತ್ಯವಾದ ಸಲಹೆಗಳನ್ನು ಓದಿ

Posted By: Deepu
Subscribe to Boldsky

ಜೀವನದಲ್ಲಿ ಕೆಲವೊಮ್ಮೆ ಯಾವುದೇ ಗೊತ್ತು ಗುರಿ ಇಲ್ಲದೆಯೇ ಸಾಗುತ್ತಿರುತ್ತೇವೆ. ಪ್ರಮುಖವಾಗಿ ಇಂತಹದ್ದೇ ಕೆಲಸವನ್ನು ಮಾಡಬೇಕು ಎನ್ನುವ ಯಾವುದೇ ಕಟ್ಟುಪಾಡುಗಳಿಗೆ ಅಥವಾ ಕಡಿವಾಣಗಳಿಗೆ ಒಳಗಾಗುವುದಿಲ್ಲ. ಹಾಗಾಗಿ ಸನ್ನಿವೇಶಗಳು ನಮ್ಮನ್ನು ಹೇಗೆ ದೂಡಿಕೊಂಡು ಸಾಗುತ್ತದೆಯೋ ಆ ಮುಖವಾಗಿ ಸಾಗುತ್ತೇವೆ. ಆದರೆ ಇದು ಜೀವನದಲ್ಲಿ ಜವಾಬ್ದಾರಿಗಳ ಹೊರೆ ಇಲ್ಲದಿರುವಾಗ ಸರಿಹೋಗಬಹುದು. ಆದರೆ ಕೆಲವು ಜವಾಬ್ದಾರಿಗಳು ನಮ್ಮ ಮೇಲಿದೆ ಎಂದಾಗ ನಾವು ಹಾಗೆ ಬದುಕಲು ಸಾಧ್ಯವಿಲ್ಲ.

ಅವನು/ಅವಳ ರಾಶಿಚಕ್ರದ ಚಿಹ್ನೆಯ ಪ್ರಕಾರ ಪ್ರತಿಯೊಬ್ಬರಿಗೂ ಅಗತ್ಯವಾದ ಜೀವನದ ಬದಲಾವಣೆಯ ಸುಳಿವು ಹಾಗೂ ಸಲಹೆಗಳನ್ನು ಬೋಲ್ಡ್ ಸ್ಕೈ ಈ ಲೇಖನದಲ್ಲಿ ಪರಿಚಯಿಸಿದೆ. ಈ ಸಲಹೆಗಳು ವ್ಯಕ್ತಿ ಉತ್ತಮ ಗುಣವನ್ನು ಕಲಿಯಲು ಮತ್ತು ಜೀವನದಲ್ಲಿ ಅನಗತ್ಯ ತೊಂದರೆಯಿಂದ ಪಾರಗಲು ಸಹಾಯಮಾಡುತ್ತವೆ. ನಿಮಗೂ ನಿಮ್ಮ ರಾಶಿ ಚಕ್ರದ ಅನುಸಾರ ಸಲಹೆಯನ್ನು ಪರಿಶೀಲಿಸಬೇಕು ಎನಿಸಿದರೆ ಈ ಮುಂದೆ ನೀಡಿರುವ ವಿವರಣೆಯನ್ನು ಅರಿಯಿರಿ....

ವೃಷಭ: 21 ಏಪ್ರಿಲ್ -21 ಮೇ

ವೃಷಭ: 21 ಏಪ್ರಿಲ್ -21 ಮೇ

ಪ್ರತಿಯೊಂದಕ್ಕೂ ಜಗಳವಾಡುವುದು ಸರಿಯೇ ಎಂಬುದನ್ನು ಇವರು ಅರಿತುಕೊಳ್ಳಬೇಕು. ತಾವು ಗೆಲ್ಲುವ ಉದ್ದೇಶಕ್ಕಾಗಿ ಜಗಳವಾಡುತ್ತಿದ್ದರೆ ಸುತ್ತಲಿನ ಜನರೊಂದಿಗೆ ವೈಮನಸ್ಸಿನಿಂದ ಇರಬೇಕಾಗುತ್ತದೆ. ಹಾಗಾಗಿ ಇವರು ಇತರರೊಂದಿಗೆ ಹೇಗೆ ಮಾತನಾಡಬೇಕು ಎನ್ನುವುದನ್ನು ಕಲಿಯಬೇಕು. ಆಗ ಜನರು ನಿಮ್ಮನ್ನು ಹೇಗೆ ನೋಡುತ್ತಾರೆ ಎನ್ನುವುದು ಅರಿವಾಗುತ್ತದೆ.

ಮಿಥುನ: ಮೇ 21 ಜೂನ್ 20

ಮಿಥುನ: ಮೇ 21 ಜೂನ್ 20

ಇವರಿಗೆ ಇವರ ನೋವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಕಟುವಾದ ಹೇಳಿಕೆ ಹಾಗೂ ತಮಾಷೆ ಮಾಡುವುದರ ಮೂಲಕ ಅದನ್ನು ಮರೆಮಾಚುತ್ತಾರೆ. ಸಮಸ್ಯೆ ಎನ್ನುವುದು ಪ್ರತಿಯೊಬ್ಬರ ಬಾಳಲ್ಲೂ ಇರುತ್ತದೆ. ಅದನ್ನು ಸೂಕ್ತ ಸಮಯದಲ್ಲಿ ವ್ಯಕ್ತಪಡಿಸುವುದರಿಂದ ಯಾವುದೇ ತೊಂದರೆ ಉಂಟಾಗದು ಎನ್ನುವುದನ್ನು ಅರಿತುಕೊಳ್ಳಬೇಕಿದೆ.

ಕರ್ಕ: ಜೂನ್ 21-ಜುಲೈ 22

ಕರ್ಕ: ಜೂನ್ 21-ಜುಲೈ 22

ಇವರು ಎಲ್ಲಾ ಬಗೆಯ ಭಾವನೆಯನ್ನು ಅನುಭವಿಸಲು ಉತ್ಸುಕರಾಗಿರುತ್ತಾರೆ. ಆದರೆ ಜನರು ಅವರ ಉತ್ಸಾಹವನ್ನು ಪರಿಗಣಿಸದೆ ಇದ್ದಾಗ ಅಥವಾ ಅವರನ್ನು ನಿರ್ಲಕ್ಷಿಸಿದಾಗ ಮಾನಸಿಕವಾಗಿ ನೋವನ್ನು ಅನುಭವಿಸುತ್ತಾರೆ. ಜನರು ನಮ್ಮ ಮನಸ್ಸನ್ನು ಓದುವುದಿಲ್ಲ. ಜೊತೆಗೆ ನಮ್ಮ ಮನಸ್ಸಿನಲ್ಲಿರುವ ಸರಿಯಾದ ಭಾವನೆ ಏನು? ಎನ್ನುವುದು ಅವರಿಗೆ ಅರ್ಥವಾಗುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಮಾನಸಿಕವಾಗಿ ಹೆಚ್ಚು ನೆಮ್ಮದಿಯಿಂದ ಇರುತ್ತಾರೆ.

ಸಿಂಹ: ಜುಲೈ 23-ಆಗಸ್ಟ್ 23

ಸಿಂಹ: ಜುಲೈ 23-ಆಗಸ್ಟ್ 23

ಇವರಿಗೆ ಪದಗಳನ್ನು ಹೇಗೆ ಬಳಸಬೇಕು ಎನ್ನುವುದು ತಿಳಿದಿದೆ. ಆದರೆ ಇವರು ಈ ಪ್ರವೃತ್ತಿಯನ್ನು ಒಳ್ಳೆಯ ವಿಚಾರಕ್ಕಿಂತಲೂ ವಂಚನೆ ಮಾಡುವ ಸಮಯದಲ್ಲಿ ಬಳಸುತ್ತಾರೆ. ಜನರು ನಮ್ಮನ್ನು ಸುಳ್ಳು ಹಾಗೂ ವಂಚನೆಯಿಂದ ದೂರ ಇರುವಂತಹ ವ್ಯಕ್ತಿತ್ವವನ್ನು ಇಷ್ಟಪಡುತ್ತಾರೆ ಎನ್ನುವುದನ್ನು ಇವರು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಒಂದು ಪ್ರಾಣಿಯಂತೆ ಬದುಕಬೇಕಾಗುವುದು.

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟಂಬರ್ 23

ಇವರು ಸದಾ ನಕಾರಾತ್ಮಕ ಚಿಂತನೆ ಮಾಡುವುದು ಹಾಗೂ ವರ್ತನೆ ತೋರುವುದನ್ನು ನಿಲ್ಲಿಸಬೇಕು. ಇತರರನ್ನು ಕೆಳಮಟ್ಟದಲ್ಲಿ ನೋಡುವುದನ್ನು ನಿಲ್ಲಿಸಬೇಕು. ಇದು ಎಲ್ಲಾ ಸಮಯದಲ್ಲೂ ಸರಿಹೋಗುವುದಿಲ್ಲ. ಎಲ್ಲಾ ಸಮಯದಲ್ಲೂ ಕೆಟ್ಟದಾಗಿ ಯೋಚಿಸುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಜನರು ನಿಮ್ಮನ್ನು ಅರ್ಥಮಾಡಿಕೊಳ್ಳುವ ಪರಿಯೇ ಬೇರೆಯಾಗಿರುತ್ತದೆ. ಹಾಗಾಗಿ ಜೀವನದಲ್ಲಿ ಆದಷ್ಟು ಉತ್ತಮ ವಿಷಯಗಳ ಮೇಲೆ ಕೇಂದ್ರಿಕರಿಸುವುದು ಸೂಕ್ತ.

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 24-ಅಕ್ಟೋಬರ್ 23

ಎಲ್ಲರಿಗೂ ಸಿಡುಕು ಸ್ವಭಾವ ಇಷ್ಟವಾಗುವುದಿಲ್ಲ. ಇನರು ತಮ್ಮನ್ನು ಇಷ್ಟಪಡುತ್ತಾರೆಯಾದರೂ ವ್ಯಕ್ತಿತ್ವವನ್ನು ಗುರುತಿಸುವಾಗ ಬೇರೆಯ ರೀತಿಯಲ್ಲಿಯೇ ನೋಡುತ್ತಾರೆ. ಹಾಗಾಗಿ ಇವರು ತಮ್ಮ ಗೊಂದಲಮಯವಾದ ಮಾತನಾಡುವುದರ ಮೂಲಕ ಇತರರನ್ನು ನೋಯಿಸುವುದು ಮೊದಲು ನಿಲ್ಲಿಸಬೇಕು. ಸ್ಪಷ್ಟವಾದ ಸಂವಹನ ನಡೆಸುವುದು ಹೇಗೆ? ಎನ್ನುವುದನ್ನು ಇವರು ತಿಳಿದುಕೊಳ್ಳಬೇಕು.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಇವರು ಸಾಮಾಜಿಕ ವಿಚಾರಕ್ಕೆ ಎಲ್ಲವನ್ನೂ ಪರೀಕ್ಷಿಸುವುದನ್ನು ನಿಲ್ಲಿಸಬೇಕು. ಸಮಾಜದಲ್ಲಿ ಪ್ರತಿಯೊಂದು ಘಟನೆಗಳು ವೇಗವಾಗಿ ನಡೆದು ಸಾಗುತ್ತಿರುತ್ತದೆ. ನೋವು ಎನ್ನುವುದು ಎಲ್ಲರಿಗೂ ಸಹಜ ಎನ್ನುವುದನ್ನು ಇವರು ಅರ್ಥಮಾಡಿಕೊಳ್ಳಬೇಕು. ಕೆಲವೊಮ್ಮೆ ಕೆಲವು ವಿಚಾರದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯ ಇರುವುದಿಲ್ಲ. ಅದನ್ನು ಅಲ್ಲಿಯೇ ಬಿಟ್ಟುಬಿಡುವುದು ಅಥವಾ ಕ್ಷಮಿಸುವ ಪ್ರವೃತ್ತಿಯನ್ನು ತೋರಿಸಿದರೆ ಮನಸ್ಸು ಹಗುರವಾಗುವುದು ಎನ್ನುವುದನ್ನು ತಿಳಿಯಬೇಕು.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಇವರು ತಮ್ಮ ಜೀವನವನ್ನು ಮಂದಗತಿಯಲ್ಲಿ ನಡೆಸುವುದನ್ನು ಕಲಿಯಬೇಕು. ಎಲ್ಲರ ಜೀವನದಲ್ಲೂ ಏರಿಳಿತಗಳು ಸಂಭವಿಸುತ್ತದೆ. ಅದಕ್ಕೆ ಸೂಕ್ತವಾಗಿ ನಮ್ಮ ಭಾವನೆಯ ನಿಯಂತ್ರಣ ಹೊಂದಿರಬೇಕು. ಸುತ್ತಲಿನ ಜನರ ಮೆಚ್ಚುಗೆ ಪಡೆಯುವ ಪ್ರಯತ್ನ ಮತ್ತು ಮುಂದಿನ ಉತ್ತಮ ಸನ್ನಿವೇಶವನ್ನು ಪಡೆದುಕೊಳ್ಳಲು ಹಾತೊರೆಯುವುದನ್ನು ನಿಲ್ಲಿಸಬೇಕು.

ಮಕರ: ಡಿಸೆಂಬರ್ 23-ಜನವರಿ 20

ಮಕರ: ಡಿಸೆಂಬರ್ 23-ಜನವರಿ 20

ಇವರು ಒಂಟಿಯಾಗಿರಲು ಭಯಪಡುತ್ತಾರೆ. ಹಾಗಾಗಿಯೇ ಇತರರೊಂದಿಗೆ ಬೆರೆಯಲು ಹೆದರುತ್ತಾರೆ. ನಮ್ಮ ಸುತ್ತಲಿನ ಜನರೆಲ್ಲರೂ ಶತ್ರುಗಳಾಗಿರುವುದಿಲ್ಲ ಎನ್ನುವುದನ್ನು ಅರಿಯಬೇಕು. ತಮ್ಮ ಹತ್ತಿರದ ವ್ಯಕ್ತಿಗೆ ಏನಾದರೂ ಆಗಬಹುದು ಎಂದು ಹೆದರುತ್ತಿರುತ್ತಾರೆ. ಜನರನ್ನು ದೂರ ಇಡುವುದು ಅಥವಾ ಹೆಚ್ಚು ಅಂತರವನ್ನು ನಿರ್ಬಂಧಿಸಿಕೊಂಡರೆ ಒಂಟಿತನ ಎನ್ನುವುದು ಸೃಷ್ಟಿಯಾಗಿರುತ್ತದೆ ಎನ್ನುವುದನ್ನು ಅರಿಯಬೇಕು.

ಕುಂಭ: ಜನವರಿ 20-ಫೆಬ್ರವರಿ 18

ಕುಂಭ: ಜನವರಿ 20-ಫೆಬ್ರವರಿ 18

ಇವರು ಬೇಸರಕ್ಕೆ ಒಳಗಾಗುವ ಮುಂಚೆಯೇ ಸಂಬಂಧವನ್ನು ಕತ್ತರಿಸಿಕೊಳ್ಳುತ್ತಾರೆ. ಇವರು ಅನಗತ್ಯವಾಗಿ ಚಿಂತಿಸುವುದನ್ನು ಬಿಟ್ಟು ನಿರಾತಂಕವಾಗಿ ಬದುಕುವುದನ್ನು ಕಲಿಯಬೇಕು. ಎಲ್ಲರೂ ಕೆಟ್ಟ ಉದ್ದೇಶವನ್ನೇ ಹೊಂದಿರುವುದಿಲ್ಲ. ಒಳ್ಳೆಯದಕ್ಕಾಗಿ ಕೊಂಚ ಕಾಯಬೇಕು ಎನ್ನುವುದನ್ನು ಅರಿಯಬೇಕಿದೆ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ಪ್ರೀತಿ ಮತ್ತು ಸರಳವಾಗಿ ಪ್ರೇರೇಪಿಸುವುದರ ನಡುವೆ ವ್ಯತ್ಯಾಸವಿದೆ ಎನ್ನುವುದನ್ನು ಈ ವ್ಯಕ್ತಿಗಳು ತಿಳಿಯಬೇಕು. ಕೆಲವೊಂದು ವಿಚಾರದಲ್ಲಿ ಸ್ವಾರ್ಥ ಭಾವನೆ ಹೊಂದುವುದು ಸರಿ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಜೊತೆಗೆ ತಮ್ಮದೆ ಆದ ಪ್ರೀತಿಯನ್ನು ಅರಿತುಕೊಳ್ಳುವ ಅಗತ್ಯವಿದೆ.

English summary

Essential Life Tips For Each Zodiac Sign

What do you think is the best thing that you have been advised to do? Do you think the advice that you have got really works in your favour? Well, if the advice is based on what your zodiac sign is, then there are chances that it can work wonders for your betterment. Here, in this article, we have shared some of the essential life-changing tips for each individual as per his/her zodiac sign.