Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೀವು ಸಿಂಗಲ್ ಆಗಿದ್ದೀರಾ.. ಹಾಗಾದ್ರೆ ನೀವಿಲ್ಲಿ ಬರೀ 10 ರೂ.ಗೆ ಹುಡುಗಿಯನ್ನು ಬಾಡಿಗೆಗೆ ಪಡೆಯಬಹುದು..!
ನೀವು ಏಕಾಂಗಿಯಾಗಿದ್ದೀರಾ.. ನಿಮ್ಮ ಜೊತೆ ಯಾರೂ ಇಲ್ಲವಾ.. ನಿಮಗೆ ನಿಮ್ಮ ಸಮಯವನ್ನು ಉತ್ತಮ ರೀತಿಯಲ್ಲಿ ಗೆಳತಿಯೊಂದಿಗೊ ಇಲ್ಲ ಸಂಗಾತಿಯೊಂದಿಗೆ ಕಳೆಯಬೇಕು ಎಂಬ ಹಂಬಲವಾಗಿದೆಯಾ..ಆದರೆ ಸೂಕ್ಷ್ಮ ಸ್ವಭಾವದವರಾಗಿರುವವರಿಗೆ ಅವರ ಬಳಿ ಅದನ್ನು ಕೇಳಲು ಸಾಧ್ಯವಾಗದೆ ಇರಬಹುದು. ಆದರೆ ಒಂದೊಮ್ಮೆ ಆಲೋಚಿಸಿ, ಒಬ್ಬಳು ಸುಂದರ ಹುಡುಗಿಯ ಜೊತೆ ನಿಮ್ಮ ಸಮಯವನ್ನು ಕಳೆಯಲು ಅವಕಾಶ ಸಿಕ್ಕಿ , ಅವಳು ಕೇವಲ 10 ರುಪಾಯಿ ಬಾಡಿಗೆಗೆ ಸಿಕ್ಕಿದರೆ ಏನಾಗುತ್ತದೆ ಎಂಬುದನ್ನು..?
ಇದನ್ನು ಕೇಳಿದರೆ ಅಸಾಧ್ಯವಾದದ್ದು ಅಂತ ಅನ್ನಿಸುತ್ತದೆಯಲ್ಲವೆ? ಆದರೆ ಇಲ್ಲಿ ಹುಡುಗರಿಗೊಂದು ಶುಭ ಸುದ್ಧಿ ಇದೆ. ನಿಮ್ಮ ಸಾಮಾಜಿಕ ಜಾಲ ತಾಣವನ್ನು ಹುಡುಗಿಯ ಜೊತೆ ತೆಗೆಸಿಕೊಂಡ ಫೋಟೋಗಳಿಂದ ಶ್ರೀಮಂತಗೊಳಿಸಬೇಕು ಎಂದುಕೊಳ್ಳುವ ಹುಡುಗರು ಖಂಡಿತ ಈ ಅವಕಾಶವನ್ನು ಬಳಸಿಕೊಳ್ಳಬಹುದು. ನಿಮ್ಮ ಆಯ್ಕೆಯ ಸುಂದರ ಹುಡುಗಿಯನ್ನು ಅಷ್ಟೇನು ಕಷ್ಟವಿಲ್ಲದೆ ಆಯ್ದುಕೊಳ್ಳುವ ಅವಕಾಶವೊಂದು ನಿಮ್ಮ ಮುಂದಿದೆ. ಇಲ್ಲೊಂದು ಅವಕಾಶವಿದೆ, ಹುಡುಗರು ಅವರ ಆಯ್ಕೆಯ ಹುಡುಗಿಯನ್ನು ಆಯ್ದುಕೊಂಡು 20 ನಿಮಿಷಕ್ಕೆ 10 ರುಪಾಯಿಯಂತೆ ಹಣ ಪಾವತಿಸಿ, ತಮ್ಮ ಗರ್ಲ್ ಫ್ರೆಂಡ್ ಎಂಬಂತೆ ಆಕೆಯನ್ನು ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಬಹುದು. ಒಮ್ಮೆ ಊಹಿಸಿಕೊಳ್ಳಿ ಒಬ್ಬಳು ಗರ್ಲ್ ಫ್ರೆಂಡ್ ಗೆ ಒಬ್ಬ ಹುಡುಗ ಕೇವಲ 10 ರುಪಾಯಿಯನ್ನು ಪಾವತಿಸಿದರೆ ಮುಗೀತು. ತುಂಬಾ ಆಶ್ಚರ್ಯಕರವಾದ ಸುದ್ದಿ ಅಲ್ವಾ ಇದು.. ?

ಚಿನ್ನದಂತ ಅವಕಾಶದ ಬಗ್ಗೆ ಮತ್ತಷ್ಟು ಮಾಹಿತಿ.. .!
ಈ ಚಿನ್ನದಂತ ಆಫರ್ ಬಳಸಿಕೊಳ್ಳಲು ಹುಡುಗರು ಮಾಡಬೇಕಾಗಿರುವುದು ಇಷ್ಟೇ.. ತಾವು ಆಯ್ಕೆ ಮಾಡುವ ಹುಡುಗಿಯ ಫೋನ್ ನಂಬರ್ ನ QR ಕೋಡನ್ನು ಸ್ಕ್ಯಾನ್ ಮಾಡಬೇಕು ಮತ್ತು ಹಣವನ್ನು ಪಾವತಿಸಬೇಕು. ಒಮ್ಮೆ QR ಕೋಡ್ ಸ್ಕ್ಯಾನ್ ಆದ ನಂತರ ಹುಡುಗಿಯು ನಿಮಗೆ ಮಾಲ್ ಗಳಲ್ಲಿ ಕಂಪೆನಿ ನೀಡುತ್ತಾಳೆ. ಅವಳ ಜೊತೆ ಇಡೀ ಮಾಲ್ ಸುತ್ತಾಡಬಹುದು. ಅಷ್ಟೇ ಅಲ್ಲ, ನೀವು ಕೇಳಿದರೆ ಆಕೆ ನಿಮ್ಮ ಶಾಪಿಂಗ್ ಬ್ಯಾಗ್ ಗಳನ್ನು ಕೂಡ ಹಿಡಿದುಕೊಳ್ಳುತ್ತಾಳೆ. ಊಟ, ಸುತ್ತಾಟ, ಡೇಟಿಂಗೂ ಕೂಡ ಆಕೆಯನ್ನು ನೀವು ಬರಮಾಡಿಕೊಳ್ಳಬಹುದು. ಯಾರಾದರೂ 20 ನಿಮಿಷದ ನಂತರವೂ ಅದೇ ಹುಡುಗಿಯ ಜೊತೆ ಮುಂದುವರಿಯಲು ಇಚ್ಛಿಸಿದರೆ ಮತ್ತೆ ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ನೆನಪಿರಲಿ, ಆದರೆ ಇಲ್ಲೊಂದು ಷರತ್ತಿದೆ..
ಒಬ್ಬಳು ಹುಡುಗಿಯನ್ನು ನಿಮ್ಮ ಜೊತೆ ಕರೆದುಕೊಂಡು ಹೋಗುವುದು ಎಂದರೆ ಎಲ್ಲದಕ್ಕೂ ಎಂದುಕೊಳ್ಳಬೇಡಿ, ಯಾವ ಹುಡುಗ ಅಥವಾ ಪುರುಷ ಈ ಆಫರ್ ನ್ನು ಬಳಸಿಕೊಳ್ಳುತ್ತಾನೋ, ಅದು ತಾವು ಇರುವ ಶಾಪಿಂಗ್ ಕಾಂಪ್ಲೆಕ್ಸ್ ಗೆ ಮಾತ್ರ ಸೀಮಿತವಾಗಿರುತ್ತದೆ. ಇದನ್ನು ಹೊರತು ಪಡಿಸಿ, ಹೊರಗಡೆ ಸುತ್ತಾಡಬೇಕು, ಸಮಯ ಕಳೆಯಬೇಕು, ಮತ್ತು ಇನ್ನಿತರೆ ಯಾವುದೇ ಚಟುವಟಿಕೆಯಲ್ಲಿ ಆಕೆ ಜೊತೆ ತಾವಿರಬೇಕು ಅಥವಾ ನಡೆದುಕೊಳ್ಳಬೇಕು ಎಂದರೆ ಆಕೆಯ ಒಪ್ಪಿಗೆ ಇರಬೇಕು.
ಹಾಗಾದ್ರೆ ನೀವು ತಯಾರಾಗಿದ್ದೀರಾ?
ಈ ಅವಕಾಶವನ್ನು ಪಡೆಯಬೇಕು ಎಂದರೆ ನೀವು ಎಲ್ಲಿಗೆ ಹೋಗಬೇಕು ಗೊತ್ತಾ..? ಸದ್ಯ ಇಂತಹ 10 ರೂಪಾಯಿಗೆ ಹುಡುಗಿಯನ್ನು ಕೊಡುವ ಆಫರ್ ನ ವ್ಯವಸ್ಥೆ ಇರುವುದು ಚೀನಾದ ವಿಟಿಲಿಟಿ ಸಿಟಿ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ! ಇನ್ನು ತೆರಳಬೇಕು, ಬಿಡಬೇಕು ಎಂದುಕೊಳ್ಳುವುದು ನಿಮಗೆ ಬಿಟ್ಟ ವಿಚಾರ.
ಇಂತಹ ಕುತೂಹಲಕಾರಿ ಸುದ್ದಿಗಳಿಗಾಗಿ ಒನ್ ಇಂಡಿಯಾ. ಕಾಮ್ ನ ಬೋಲ್ಡ್ ಸ್ಕೈ ವಿಭಾಗವನ್ನು ಓದುವುದು ಮರೆಯಬೇಡಿ. ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.



Click it and Unblock the Notifications
