Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಅಂಗೈಯಲ್ಲಿ 'V' ಗುರುತಿನ ಚಿಹ್ನೆ ಇದೆಯೇ? ಏನಿದರ ಅರ್ಥ ಗೊತ್ತೇ?
ನಮ್ಮ ಭವಿಷ್ಯ ನಮ್ಮ ಕೈಲಿದೆ ಎನ್ನುವ ಮಾತು ಎಷ್ಟು ನಿಜವೇ ಅಥವಾ ಸುಳ್ಳೇ, ಅದು ತರ್ಕಕ್ಕೆ ನಿಲುಕದ್ದು! ಆದರೆ ಕುಂಡಲಿಯಲ್ಲಿ ಹೇಗೆ ಗ್ರಹಗತಿಗಳ ಸಂಚಾರ ಇರುತ್ತದೆಯೋ ಹಾಗೆಯೇ ನಮ್ಮ ಅಂಗೈಯಲ್ಲಿ ಗ್ರಹಗಳ ಪರ್ವತ ಇರುತ್ತದೆ. ಅದರ ಮೇಲಿರುವ ಚಿಹ್ನೆಗಳು ವಿಭಿನ್ನವಾಗಿರುತ್ತವೆ. ಅವು ನಮ್ಮ ಭವಿಷ್ಯ ಹಾಗೂ ಅದೃಷ್ಟವನ್ನು ನಿರ್ಧರಿಸುತ್ತವೆ.
ಅದರಲ್ಲೂ ಹಸ್ತದಲ್ಲಿರುವ ಅಥವಾ ಅಂಗೈಯಲ್ಲಿರುವ ಕೆಲವೊಂದು ರೇಖೆಗಳು ನಿಮ್ಮ ಜೀವನದ ಸುಖ, ದುಃಖ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಹಸ್ತದಲ್ಲಿರುವಂತಹ ಪ್ರತಿಯೊಂದು ರೇಖೆಗಳು ಕೂಡ ನಿಮ್ಮ ಭವಿಷ್ಯ ಹೇಳುವುದು. ಅಂಗೈಯಲ್ಲಿ ವಿ ಅಕ್ಷರವಿದ್ದರೆ ಆಗ ನಿಮ್ಮ ಭವಿಷ್ಯವು ಹೇಗಿರುತ್ತದೆ ಎಂದು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದೆ. ಇದು ಹೃದಯಭಾಗದ ಗೆರೆಯಾಗಿದ್ದು, ಇದರ ಪ್ರಾಮುಖ್ಯತೆ ಏನು ಎಂದು ತಿಳಿಯಿರಿ....

ಹೃದಯ ಗೆರೆ ಬಗ್ಗೆ ಮೊದಲು ತಿಳಿಯಿರಿ....
ಹೃದಯ ಗೆರೆಯ ಅಂಗೈಯಲ್ಲಿರುವ ಪ್ರಮುಖ ನಾಲ್ಕು ಗೆರೆಗಳಲ್ಲಿ ಒಂದಾಗಿರುವಂತದ್ದಾಗಿದೆ. ಇದು ವ್ಯಕ್ತಿಯ ಬಗ್ಗೆ ತುಂಬಾ ವಿಚಾರ ಹೇಳುವುದು. ಹೃದಯ ಗೆರೆಯು ನಿಮ್ಮ ಸಂಬಂಧ ಮತ್ತು ಭಾವನೆಯ ಬಗ್ಗೆ ಹೇಳುವುದು. ನಿಮ್ಮ ಹೃದಯ ಗೆರೆಯನ್ನು ನೋಡಿಕೊಂಡು ತುಂಬಾ ಹೇಳಬಹುದಾಗಿದೆ. ಅಷ್ಟೇ ಅಲ್ಲದೆ ಹೃದಯ ರೇಖೆಯ ಬಳಿ ತ್ರಿಶೂಳದ ಚಿಹ್ನೆಯಿದ್ದರೆ ಬಹಳ ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಚಿತ್ರದಲ್ಲಿ ತೋರಿಸಿರುವಂತೆ ಗುರುವಿನ ಪರ್ವತದ ಕೆಳಗೆ ಕೊನೆಗೊಂಡಿದ್ದರೆ ವ್ಯಕ್ತಿಯು ಭಾವನಾತ್ಮಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಸ್ಥಿರತೆಯನ್ನು ಹೊಂದಿರುತ್ತಾರೆ. ಅತ್ಯಂತ ಶ್ರೀಮಂತರ ಕೈಯಲ್ಲಿ ಈ ಚಿಹ್ನೆ ಇರುತ್ತದೆ ಎಂದು ಹೇಳಲಾಗುತ್ತದೆ.

ಹೃದಯಗೆರೆಯು ಇಲ್ಲದೆ ಇರುವಂತಹವರು....
ಅಂಗೈಯಲ್ಲಿ ಹೃದಯಗೆರೆ ಇಲ್ಲದೆ ಇರುವಂತಹ ಜನರನ್ನು ಹೃದಯಹೀನರೆಂದು ಕರೆಯಲಾಗುತ್ತದೆ. ಇಂತಹವರು ಯಾವುದೇ ರೀತಿಯ ಬೇಸರ, ಪ್ರೀತಿ ವ್ಯಕ್ತಪಡಿಸಲ್ಲ ಅಥವಾ ಪ್ರಶಂಸೆ ಮಾಡುವುದಿಲ್ಲ. ಹೃದಯ ಗೆರೆಯು ಹಿಂದಿನ ಸಂಬಂಧದ ಬಗ್ಗೆ ಸಾಕಷ್ಟು ಹೇಳುತ್ತದೆ. ಸಾಮಾನ್ಯವಾಗಿ ಈ ರೇಖೆ ಹೃದಯ ಅಥವಾ ಆತ್ಮೀಯ ಸಂಗತಿಗಳನ್ನು ಪ್ರತಿನಿಧಿಸುತ್ತದೆ. ಈ ರೇಖೆ ಆಳವಾಗಿದ್ದಷ್ಟೂ ಹೃದಯದಿಂದ ಯೋಚಿಸುವ ಗುಣ ನಿಮ್ಮಲ್ಲಿ ಹೆಚ್ಚಾಗಿದ್ದು ನೀವು ಆತ್ಮೀಯತೆಗೆ ಹೆಚ್ಚಿನ ಮಹತ್ವ ನೀಡುವ ವ್ಯಕ್ತಿ ಎಂದು ಸೂಚಿಸುತ್ತದೆ. ಒಂದು ವೇಳೆ ಈ ರೇಖೆ ತುದಿಯಲ್ಲಿ ಕವಲೊಡೆದಿದ್ದರೆ ಈ ವ್ಯಕ್ತಿ ಒಂದೇ ನಿಟ್ಟಿನಲ್ಲಿ ಯೋಚಿಸದೇ ಎರಡು ಬಗೆಯಲ್ಲಿ ಯೋಚಿಸುತ್ತಿದ್ದಾರೆಂದು ಅರ್ಥ.

ಹೃದಯಗೆರೆಯಲ್ಲಿ `ವಿ' ಗುರುತು ಇರುವಂತಹವರು....
ಹೃದಯ ಗೆರೆಯಲ್ಲಿ `ವಿ' ಗುರುತು ಇರುಂತಹ ಜನರು ಜೀವನದಲ್ಲಿ ಈ ಪ್ರಮುಖ ವಿಚಾರಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯ.

`ವಿ' ಅಕ್ಷರ ಏನು ಹೇಳುವುದು...
ಹೃದಯ ಗೆರೆಯಲ್ಲಿ ಇರುವಂತಹ `ವಿ' ಗುರುತು ಪೂರ್ತಿಯಾಗದೆ ಇರುವ ವ್ಯಾಪಾರ ಅಥವಾ ವೈಯಕ್ತಿಕ ಅಭಿವೃದ್ಧಿ ಬಗ್ಗೆ ಹೇಳುವುದು. ಇಂತಹ ಜನರು ತುಂಬಾ ಅದೃಷ್ಟವಂತರು, ಯಶಸ್ಸು ಪಡೆಯುವವರು ಮತ್ತು ಇವರು ತಮ್ಮ ಜೀವನದಲ್ಲಿ ಹೆಚ್ಚಿನ ಸಂಪತ್ತು ಪಡೆಯಲಿರುವರು.

ಈ ವ್ಯಕ್ತಿಗಳಿಗೆ ದೇವರ ಕೃಪೆಯಿದೆ...
ಇಂತಹ ಜನರಿಗೆ ಒಳ್ಳೆಯ ಅದೃಷ್ಟದ ಕೃಪೆಯಿದೆ ಮತ್ತು ಇವರು ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿಗಳಾಗಿರುವರು. ಇವರು ತಮ್ಮ ಜೀವನದ ಸುಖದುಃಖದಲ್ಲಿ ಸಮಾನವಾಗಿ ಭಾಗಿಯಾಗುವಂತಹ ಜನರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವರು.

ಆಶೀರ್ವಾದದೊಂದಿಗೆ ಇವರಿಗೆ ಇನ್ನೂ....
ಇವರು ದೇವರ ಕೃಪೆಯೊಂದಿಗೆ ಜೀವನದಲ್ಲಿ ತುಂಬಾ ಹೆಸರು ಗಳಿಸುವರು. ಅದೃಷ್ಟವು ಯಾವಾಗಲೂ ಇವರ ಪರಿವಾಗಿಯೇ ಇರುವುದು. ಇನ್ನೊಂದು ಬದಿಯಲ್ಲಿ ಇವರ ಆರಂಭಿಕ ಜೀವನವು ತುಂಬಾ ಸಂಕಷ್ಟದಿಂದ ಕೂಡಿರುವುದು. 35ರ ಹರೆಯದ ಬಳಿಕ ಇವರ ಜೀವನವು ಪ್ರಮುಖ ತಿರುವು ಪಡೆದುಕೊಳ್ಳುವುದು.

ಮದುವೆ ರೇಖೆ
ಹಸ್ತಸಾಮುದ್ರಿಕಾದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿರುವ ರೇಖೆ ಎಂದರೆ ಇದೇ. ನಿಮ್ಮ ಜೀವನದಲ್ಲಿನ ಪ್ರಸಕ್ತ ಪ್ರೇಮದ ಸ್ಥಿತಿ ಗತಿಯ ಕುರಿತು ಇದು ತಿಳಿಸಿಕೊಡುತ್ತದೆ. ಈ ಭಾಗದಲ್ಲಿ ಹಲವಾರು ಸಣ್ಣ ಸಣ್ಣ ರೇಖೆಗಳು ಇದ್ದಲ್ಲಿ, ಅದು ನೀವು ಏಕಮುಖ ಪ್ರೇಮಿ ಎಂದು ತಿಳಿಸಿಕೊಡುತ್ತದೆ. ಒಡೆದ ತುದಿಯಿರುವ ರೇಖೆಗಳು ನಿಮ್ಮ ಮದುವೆಯು ವಿಚ್ಛೇಧನದಲ್ಲಿ ಅಂತ್ಯವಾಗುತ್ತದೆ ಎಂದು ತಿಳಿಸುತ್ತದೆ. ಪರಸ್ಪರ ಒಂದರ ಮೇಲೆ ಒಂದು ಹೋಗುವಂತಹ ರೇಖೆಗಳು ನೀವು ಒಬ್ಬ ಸರಿಯಾದ ಸಂಗಾತಿಗಾಗಿ ಹುಡುಕುತ್ತಿದ್ದೀರಿ ಎಂದು ತಿಳಿಸುತ್ತಿದೆ. ಒಂದು ವೇಳೆ ನಿಮಗೆ ಮದುವೆ ರೇಖೆಯು ಇಲ್ಲದಿದ್ದಲ್ಲಿ ಗಾಬರಿಯಾಗಬೇಡಿ. ಅದು ನಿಮಗೆ ಮದುವೆಯಾಗುವ ಆಲೋಚನೆ ಸದ್ಯಕ್ಕೆ ಇಲ್ಲ ಎಂದು ತಿಳಿಸುತ್ತದೆ.

ವಿಧಿ ರೇಖೆ
ಈ ವಿಧಿ ರೇಖೆಯು ನಿಮ್ಮ ಪ್ರಸ್ತುತ ವಿಧಿಯ ಕುರಿತಾಗಿ ತಿಳಿಸುತ್ತದೆ. ದಪ್ಪಗಿರುವ ರೇಖೆಯು ನಿಮ್ಮ ಜೀವನದಲ್ಲಿ ಉಂಟಾಗುತ್ತಿರುವ ನಾಟಕೀಯ ಬದಲಾವಣೆಗಳನ್ನು ಸೂಚಿಸುತ್ತದೆ. ತೆಳುವಾದ ರೇಖೆಯು ನಿಮ್ಮ ಜೀವನವನ್ನು ಇತರರು ನಿಯಂತ್ರಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಎರಡು ಅಥವಾ ಹೆಚ್ಚಿನ ರೇಖೆಗಳು ನಿಮ್ಮ ಜೀವನದಲ್ಲಿ ನೀವು ಬುದ್ಧಿವಂತರು ಮತ್ತು ಜನಪ್ರಿಯರು ಸಹ ಆಗಿದ್ದೀರಿ ಎಂದು ತಿಳಿಸುತ್ತದೆ.

ಹಣದ ರೇಖೆ
ನಿಮ್ಮ ಉಂಗುರದ ಬೆರಳಿನಿಂದ ಕೆಳಗೆ ಸಾಗುವ ಈ ರೇಖೆಯು ಹಣದ ರೇಖೆಯೆಂದು ಗುರುತಿಸಲ್ಪಟ್ಟಿದೆ. ಸಣ್ಣ ರೇಖೆಗಳು ನೀವು ಹಣದ ಜೊತೆಗೆ ಆಳವಾದ ಸಂಬಂಧವನ್ನು ಹೊಂದಿದ್ದೀರಿ ಎಂದು ತೋರಿಸುತ್ತದೆ. ಉದ್ದವಾದ ರೇಖೆಗಳು ನಿಮಗೆ ಹಣ ಮುಖ್ಯ ಮತ್ತು ನೀವು ಸಮಯವನ್ನು ಸಹ ಉಳಿಸುತ್ತೀರಿ ಎಂದು ಸೂಚಿಸುತ್ತದೆ. ಹಣದ ರೇಖೆಗಳು ಹೆಚ್ಚಾಗಿದ್ದಲ್ಲಿ ನೀವು ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತೀರಿ ಎಂದು ತಿಳಿಸುತ್ತದೆ.

ಕಂಕಣ ರೇಖೆಗಳು
ನಿಮ್ಮ ಕೈ ಮಣಿಕಟ್ಟಿನ ಬಳಿ ಕಂಕಣದಂತೆ ಕಾಣುವ ರೇಖೆಗಳು, ನೀವು ಹೊಂದಿರುವ ಹಣದ ಪ್ರಮಾಣವನ್ನು ಸೂಚಿಸುತ್ತವೆ. ಜೊತೆಗೆ ನೀವು ಎಷ್ಟು ಪ್ರಮಾಣದ ಹಣವನ್ನು ಪಡೆಯುವಿರಿ ಎಂದು ಸಹ ಇದರಿಂದ ತಿಳಿಯಬಹುದು. ಹೆಚ್ಚಿನ ರೇಖೆಗಳು ಹೆಚ್ಚಿನ ಹಣವನ್ನು ತಿಳಿಸುತ್ತವೆ.

ಜೀವನ ರೇಖೆ
ಈ ರೇಖೆಯು ಒಬ್ಬ ವ್ಯಕ್ತಿಯ ದೈಹಿಕ ಸಾಮರ್ಥ ಮತ್ತು ಹುರುಪಿನ ಕುರಿತಾಗಿ ತಿಳಿಸುತ್ತದೆ. ಈ ರೇಖೆಯು ನಿಮ್ಮ ಆರೋಗ್ಯದ ಸ್ಥಿತಿಯನ್ನು ಕುರಿತು ತಿಳಿಸುತ್ತದೆ. ಜೊತೆಗೆ ನೀವು ವಾಸಿಸುವ ಪರಿಸರದ ಬದಲಾವಣೆಯನ್ನು ಸಹ ನಾವು ಈ ರೇಖೆಯಿಂದ ಗುರುತಿಸಬಹುದು. ದಪ್ಪಗಿರುವ ರೇಖೆಯು ಉತ್ತಮ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ, ಅರ್ಧಂಬರ್ಧ ಇರುವ ರೇಖೆಯು ನೀವು ಒತ್ತಡದಲ್ಲಿದ್ದೀರಿ,ಗಾಯಗೊಂಡಿದ್ದೀರಿ ಅಥವಾ ರೋಗರುಜಿನಗಳಿಗೆ ತುತ್ತಾಗಿದ್ದೀರಿ ಎಂದು ತಿಳಿಸುತ್ತದೆ.



Click it and Unblock the Notifications











