Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ರಾಶಿಗಳಿಗೆ ಅನುಗುಣವಾಗಿ ಡೇಟಿಂಗ್‌ನ ಗುಣಲಕ್ಷಣಗಳು
ಪ್ರೀತಿ ಪ್ರೇಮದ ವಿಚಾರದಲ್ಲಿ ಪ್ರತಿಯೊಬ್ಬರಿಗೂ ತನ್ನದೇ ಆಗಿರುವಂತಹ ಗುಣಲಕ್ಷಣಗಳಿರುತ್ತದೆ. ಕೆಲವರು ತಮ್ಮ ಪ್ರೀತಿ ತೋರಿಸಿಕೊಟ್ಟರೆ, ಇನ್ನು ಕೆಲವರು ಆ ಪ್ರೀತಿಯನ್ನು ವ್ಯಕ್ತಪಡಿಸದೆ ಮನಸ್ಸಿನಲ್ಲೇ ಉಳಿಸಿಕೊಂಡಿರುವರು. ಇಂತಹ ಗುಣಲಕ್ಷಣಗಳು ಬರುವುದು ನಿಮಗೆ ರಾಶಿಚಕ್ರದಿಂದಾಗಿ. ಈ ಗುಣಲಕ್ಷಣಗಳನ್ನು ತಿಳಿದುಕೊಂಡರೆ ಮುಂದೆ ನೀವು ಡೇಟಿಂಗ್ ಮಾಡುವಾಗ ಅದ್ಭುತವಾಗಿರಬಹುದು. ಇಂತಹ ಗುಣಲಕ್ಷಣಗಳು ಯಾವುದು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳಿ...

ಮೇಷ: ಮಾರ್ಚ್ 21-ಎಪ್ರಿಲ್ 19
ಈ ರಾಶಿಯವರು ತುಂಬಾ ಧೈರ್ಯಶಾಲಿಗಳು ಹಾಗೂ ಸಾಹಸಿಗರು ಆಗಿರುವರು. ಇವರು ತಮ್ಮ ಆರಾಮ ವಲಯದಿಂದ ಹೊರಹೋಗಲು ಹಿಂಜರಿಯಲ್ಲ. ಅದೇ ರೀತಿ ನೀವು ನಿಮಗೆ ತದ್ವಿರುದ್ಧವಾಗಿರುವ ವ್ಯಕ್ತಿಗಳ ಜತೆಗೆ ಡೇಟಿಂಗ್ ಗೆ ಹೋಗಲು ಹಿಂಜರಿಯಲ್ಲ. ಹೊಸ ಸಂಬಂಧದಲ್ಲಿ ಅನುಭವ ಪಡೆಯುವುದು ನಿಮ್ಮನ್ನು ಡೇಟಿಂಗ್ ಗೆ ದೂಡುವುದು.

ವೃಷಭ: ಎಪ್ರಿಲ್ 20- ಮೇ 20
ವೈಯಕ್ತಿಕವಾಗಿ ನೀವು ತುಂಬಾ ಆತ್ಮವಿಶ್ವಾಸಿ ಹಾಗೂ ಆಶಾವಾದಿಯಾಗಿರುವಿರಿ. ನಿಮ್ಮಲ್ಲಿರುವ ಧನಾತ್ಮಕತೆಯು ನೀವು ಡೇಟಿಂಗ್ ಮಾಡುವಂತಹ ವ್ಯಕ್ತಿಗೂ ತಗುಲಿ ಸಂಬಂಧಕ್ಕೆ ಹೊಸ ಸ್ಪರ್ಶ ನೀಡುವುದು. ನೀವು ಇದಕ್ಕೆ ಹೆಚ್ಚು ಕೆಲಸ ಮಾಡಬೇಕಾಗಿಲ್ಲ ಮತ್ತು ನೀವು ನಿಮ್ಮೊಳಗಿನ ವಿಷಯಗಳ ಬಗ್ಗೆ ಗಮನಹರಿಸಿಕೊಳ್ಳಿ.

ಮಿಥುನ: ಮೇ21- ಜೂನ್ 20
ಮೇಷ ರಾಶಿಯಂತೆ ಹೊಸ ಹೊಸ ಅನುಭವ ಪಡೆಯಲು ನೀವು ಇಷ್ಟಪಡುತ್ತೀರಿ. ನಿಮ್ಮ ದೊಡ್ಡ ಲಕ್ಷಣವೆಂದರೆ ನೀವು ಯಾವುದೇ ರೀತಿಯ ಕಠಿಣ ಪರಿಸ್ಥಿತಿಗೆ ಹೊಂದಿಕೊಳ್ಳಬಲ್ಲಿರಿ. ಇದನ್ನು ಹೊರತುಪಡಿಸಿ ನೀವು ಯಾವುದೇ ಹೊಸ ಅನುಭವ ಪಡೆಯಲು ಹಿಂಜರಿಯಲ್ಲಿ. ಇದರಿಂದ ನೀವು ಡೇಟಿಂಗ್ ಮಾಡುತ್ತೀರಿ.

ಕರ್ಕಾಟಕ: ಜೂನ್ 21- ಜುಲೈ 22
ನಿಮ್ಮ ವೈಯಕ್ತಿಕ ಪ್ರತಿಷ್ಠೆಯ ತೋರಿಸಿಕೊಳ್ಳಲು ಹೆಚ್ಚು ಕಠಿಣ ಕೆಲಸ ಮಾಡಬೇಕಿಲ್ಲ. ಇದು ನಿಮ್ಮ ದೊಡ್ಡ ಶಕ್ತಿಯಲ್ಲಿ ಒಂದಾಗಿದೆ. ನೀವು ಸ್ವಯಂ ಪ್ರಚಾರದಲ್ಲಿ ನಿಸ್ಸೀಮರು. ನಿಮ್ಮ ಮೋಡಿ ಮತ್ತು ಸಾಮೀಪ್ಯವಾಗುವ ರೀತಿಯಿಂದ ಜನರನ್ನು ಸೆಳೆಯಲು ಪ್ರಯತ್ನಿಸುತ್ತೀರಿ.

ಸಿಂಹ: ಜುಲೈ 23- ಆಗಸ್ಟ್ 23
ವೈಯಕ್ತಿಕವಾಗಿ ನೀವು ಡೇಟಿಂಗ್ ವೇಳೆ ನಿಮ್ಮತನದಿಂದ ವರ್ತಿಸಲು ಪ್ರಯತ್ನಿಸುತ್ತೀರಿ. ಇದಕ್ಕೆ ನೀವು ಕ್ಷಮೆ ಕೇಳುವುದಿಲ್ಲ ಮತ್ತು ಇದು ನಿಮ್ಮ ದೊಡ್ಡ ಆಸ್ತಿಯಾಗಿದೆ. ನಿಮ್ಮ ನಿಜವಾದ ರೂಪ ಮರೆ ಮಾಚುತ್ತಿಲ್ಲವೆಂದು ಜನರಿಗೂ ತಿಳಿದಿದೆ. ನಿಮ್ಮ ನಿಜವಾದ ಬಣ್ಣವೇನೆಂದು ತಿಳಿಯಲು ಅವರು ಬಯಸುವಾಗ ನಿಮ್ಮ ಡೇಟಿಂಗ್ ನಿಗದಿಯಾಗುವುದು. ನಿಮ್ಮಲ್ಲಿ ನೀವು ನೈಜವಾಗಿರಬೇಕು.

ಕನ್ಯಾ: ಆಗಸ್ಟ್ 24-ಸಪ್ಟೆಂಬರ್ 23
ನೀವು ಯಾವಾಗಲೂ ನಿರ್ದಯಿಯಾಗಿರುವಿರಿ ಮತ್ತು ಇದನ್ನು ಜನರು ಪ್ರಶಂಸಿಸಲ್ಲ. ನಿಮಗೆ ಸರಿಯಾಗಿಲ್ಲವೆಂದು ಅನಿಸಿದ ಸಂಬಂಧದಲ್ಲಿ ನೀವು ಯಾವತ್ತೂ ಸಮಯ ವ್ಯರ್ಥ ಮಾಡಿಕೊಳ್ಳಲು ಬಯಸಲ್ಲ. ಸಂಬಂಧವು ಸರಿಯಾಗಿಲ್ಲವೆಂದು ನಿಮಗೆ ಅನಿಸಿದಾಗ ನೀವು ಅದರಿಂದ ಹೊರಬರಲು ಹಿಂಜರಿಯಲ್ಲ.

ತುಲಾ: ಸ.24-ಅಕ್ಟೋಬರ್ 23
ಈ ರಾಶಿಯವರಿಗೆ ವೈಯಕ್ತಿಕವಾಗಿ ಅನುಗ್ರಹ, ಸೊಬಗು ಹಾಗೂ ಸಮತೋಲನದಿಂದ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿದಿದೆ. ಇದನ್ನು ಹೊರತುಪಡಿಸಿ ನಿಮ್ಮ ನಡತೆಯು ಯಾವಾಗಲೂ ಉತ್ತಮವಾಗಿರುವುದು. ನಿಮ್ಮ ಒಳ್ಳೆಯ ಗುಣನಡತೆಯಿಂದಾಗಿ ನಿಮ್ಮ ಸುತ್ತಲಿನ ಜನರು ನಿಮ್ಮೊಂದಿಗೆ ಇರಲು ತುಂಬಾ ಸುರಕ್ಷಿತ ಹಾಗೂ ಆರಾಮದಾಯಕ ಭಾವನೆ ಪಡೆಯುವರು. ಇತರರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ತಿಳಿದಿರುವ ಕಾರಣ ಇದು ಡೇಟಿಂಗ್ ವೇಳೆ ಉತ್ತಮ ಭಾವನೆ ಮೂಡಿಸುವುದು.

ವೃಶ್ಚಿಕ:ಅ.20-ನ.22
ನಿಮ್ಮ ಪೃವತ್ತಿಗಳನ್ನು ಡೇಟಿಂಗ್ ವೇಳೆ ನೀವು ಕೇಳುತ್ತೀರಿ. ನೀವು ಎಷ್ಟು ಅರ್ಥಗರ್ಭಿತವಾಗಿರುವ ವ್ಯಕ್ತಿಯೆಂದರೆ ಪ್ರತಿಯೊಂದರ ಬಗ್ಗೆಯೂ ಅತಿಯಾಗಿ ಯೋಚಿಸಲ್ಲ. ಇದೇ ವೇಳೆ ನೀವು ಅಜಾಗರೂಕ ವ್ಯಕ್ತಿಯೂ ಇಲ್ಲ. ನೀವು ತುಂಬಾ ಲೆಕ್ಕಾಚಾರ ಮತ್ತು ಕ್ರಮಬದ್ಧ ಮನೋಭಾವ ಹೊಂದಿರುವವರು.

ಧನು: ನ.3-ಡಿ.22
ಧನು ರಾಶಿಯವರು ವೈಯಕ್ತಿಕವಾಗಿ ತುಂಬಾ ಉಲ್ಲಾಸದಿಂದ ಇರವವರು. ಇದನ್ನು ಹೊರತುಪಡಿಸಿ ನಿಮ್ಮಲ್ಲಿರುವಂತಹ ಹಾಸ್ಯ ಪ್ರವೃತ್ತಿಗೆ ಹೊಂದಿಕೊಳ್ಳಬಹುದು. ನೀವು ಬೇರೆ ಬೇರೆ ವ್ಯಕ್ತಿತ್ವ ಹೊಂದಿರುವವರ ಜತೆಗೆ ಕೂಡ ತುಂಬಾ ಹಾಸ್ಯಾಸ್ಪದವಾಗಿ ಇರಬಲ್ಲಿರಿ. ವ್ಯಕ್ತಿಯಾಗಿ ನೀವು ತುಂಬಾ ಧನಾತ್ಮಕವಾಗಿರುವಿರಿ ಮತ್ತು ನೀವು ಪ್ರತಿಯೊಂದು ಸಂದರ್ಭವನ್ನು ತುಂಬಾ ಹಗುರವಾಗಿಯೇ ಇರುವಂತೆ ಮಾಡುತ್ತೀರಿ.

ಮಕರ: ಡಿ.23-ಜ20
ಡೇಟಿಂಗ್ ಮಾಡುವಾಗ ನಿಮ್ಮ ಗಡಿಯ ಬಗ್ಗೆ ತುಂಬಾ ಸ್ಪಷ್ಟವಾಗಿರುವಿರಿ ಮತ್ತು ಇದು ಒಳ್ಳೆಯ ವಿಚಾರ. ಕೆಲವರಿಗೆ ಇದು ಅತಿಯೆಂದು ಅನಿಸಿದರೂ ಇದರಿಂದ ನಿಮ್ಮ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಿಮ್ಮ ಗಡಿ ಎಲ್ಲಿದೆ ಎನ್ನುವುದು ಸರಿಯಾಗಿ ತಿಳಿದುಕೊಂಡಿರುತ್ತೀರಿ. ಇದರಿಂದ ಜನರು ನಿಮ್ಮನ್ನು ಶ್ಲಾಘಿಸುವರು.

ಕುಂಭ: ಜ.21-ಫೆ.18
ನೀವು ಡೇಟಿಂಗ್ ನಂತಹ ಆಟವಾಡಲು ತುಂಬಾ ದ್ವೇಷಿಸುತ್ತೀರಿ. ನಿಮಗೆ ಆಸಕ್ತಿಯಿಲ್ಲವೆನ್ನುವುದನ್ನು ಉದ್ದೇಶಪೂರ್ವಕವಾಗಿ ಹೇಳುವುದಿಲ್ಲ. ಆದರೆ ನೀವು ಉದ್ದೇಶಪೂರ್ವಕವಾಗಿಯೇ ಒಂದು ರೀತಿಯ ಭಾವನಾತ್ಮಕ ಅಂತರ ಕಾಯ್ದುಕೊಳ್ಳಲು ಬಯಸುವಿರಿ. ಸುಳ್ಳಿನ ಗೋಡೆ ಕಟ್ಟಿಕೊಳ್ಳುವುದಿಲ್ಲ. ಇದು ತುಂಬಾ ಮಹತ್ವದ್ದಾಗಿರುತ್ತದೆ. ಯಾಕೆಂದರೆ ನೀವು ಸಂಬಂಧದಲ್ಲಿ ಕಠಿಣವಾಗಿ ಪ್ರವೇಶಿಸಲು ಬಯಸಲ್ಲ. ನಿಮ್ಮಂತೆ ವರ್ತಿಸಿ ಮತ್ತು ಜನರು ಪ್ರಾಮಾಣಿಕವಾಗಿ ಇದಕ್ಕೆ ಪ್ರತಿಕ್ರಿಯಿಸುವರು.

ಮೀನ:ಫೆ.19-ಮಾ.20
ಈ ಕ್ಷಣ ಹೇಗಿದೆಯೋ ಹಾಗೆ ಬದುಕುವಂತಹ ವ್ಯಕ್ತಿ ನೀವಾಗಿರುವಿರಿ. ನೀವು ಹಗಲುಗನಸು ಕಾಣುವವರು ಎನ್ನುವ ಮಾತಿದೆ. ಆದರೆ ಒಬ್ಬರೊಂದಿಗೆ ಡೇಟಿಂಗ್ ಮಾಡುವಾಗ ನೀವು ಇದೆಲ್ಲವನ್ನೂ ಬಿಟ್ಟುಬಿಡುವಿರಿ. ನೀವು ಈ ಕ್ಷಣದಲ್ಲಿ ಹೆಚ್ಚು ಸಮಯ ನೀಡಲು ಬಯಸುವಿರಿ. ಇದರ ಹೊರತಾಗಿ ನೀವು ತುಂಬಾ ಕೇಳುಗರು ಮತ್ತು ಇತರರನ್ನು ವೀಕ್ಷಿಸುವವರು. ಸಂಗಾತಿಯು ನಿಜವಾಗಿಯೂ ಇದನ್ನು ಬಯಸುವ ಕಾರಣದಿಂದ ಇದು ತುಂಬಾ ಆರಾಮದಾಯಕ ಸಂಬಂಧ ನಿರ್ಮಿಸುವುದು.



Click it and Unblock the Notifications