Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ಹಣದ ಆಸೆಗೆ ತಮ್ಮ 4ರ ಹರೆಯದ ಮಗಳ ಸೆಕ್ಸ್ ವಿಡಿಯೋ ಮಾರಿದ ದಂಪತಿ!
ಮನುಷ್ಯ ಹಣಕ್ಕಾಗಿ ಎಂತಹ ನೀಚ ಕೃತ್ಯ ಮಾಡಲು ಹೇಸಲ್ಲ ಎನ್ನುವುದಕ್ಕೆ ಉಕ್ರೇನ್ ನ ಈ ದಂಪತಿಯೇ ಸಾಕ್ಷಿ. ಈ ದಂಪತಿ ತಮ್ಮ ನಾಲ್ಕರ ಹರೆಯದ ಮಗಳ ಜತೆಗೆ ಸೆಕ್ಸ್ ವೀಡಿಯೋ ಮಾಡಿಕೊಂಡು ಅದನ್ನು ಬಿಟ್ ಕಾಯಿನ್ ಗಾಗಿ ಮಾರಿದ್ದಾರೆ. ಇದು ಪ್ರತಿಯೊಬ್ಬರಿಗೂ ತುಂಬಾ ಹೇಸಿಗೆ ಮೂಡಿಸುವ ವಿಚಾರ.
ಇದರ ಬಗ್ಗೆ ಈ ಲೇಖನದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಡಲಿದ್ದೇವೆ. ವಿಶ್ವದ ವಿವಿಧ ಭಾಗಗಳಲ್ಲಿ ಇರುವಂತಹ ಜನರಿಗೆ ಇವರು ತಮ್ಮ ಮಗಳ ಸೆಕ್ಸ್ ವಿಡಿಯೋವನ್ನು ಬಿಟ್ ಕಾಯಿನ್ ಗಳಿಗಾಗಿ ಮಾರಾಟ ಮಾಡಿದ್ದಾರೆ. ಇದರ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ...

ಇವರು ಪ್ರತಿನಿತ್ಯ ಹೊಸ ವೀಡಿಯೋ ಅಪ್ ಲೋಡ್ ಮಾಡುತ್ತಲಿದ್ದರು!
ಆಸ್ಟ್ರೇಲಿಯಾದ ಕೆಲವು ಮಂದಿ ತಮಗೆ ಸಂಬಂಧಿಗಳಾಗಿರುವ ಉಕ್ರೇನ್ ನ ಈ ದಂಪತಿಯು ಪ್ರತಿನಿತ್ಯ ತಮ್ಮ ನಾಲ್ಕು ವರ್ಷದ ಮಗಳ ಜತೆಗೆ ನಡೆಸುತ್ತಿರುವ ಸೆಕ್ಸ್ ನ ವೀಡಿಯೋ ಅಪ್ ಲೋಡ್ ಮಾಡುವುದನ್ನು ನೋಡಿ ಆಘಾತ ಗೊಂಡರು. ಇದರ ಮೂಲ ಕಂಡು ಹಿಡಿಯಬೇಕೆನ್ನುವ ಕಾರಣಕ್ಕಾಗಿ ದಂಪತಿಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಇವರು ಉಕ್ರೇನ್ ನ ಸ್ನೇಹಿತರಿಗೆ ತಿಳಿಸಿದರು.

ವಿಡಿಯೋ ಶೇರ್ ಮಾಡಲು ದರ ನಿಗದಿ ಮಾಡಿದ್ದರು !
ಈ ದಂಪತಿಯು ವಿಡಿಯೋವನ್ನು ಮಾರಲು ಸುಮಾರು 70 ಡಾಲರ್ ನಿಂದ 140 ಡಾಲರ್ ನಿಗದಿ ಪಡಿಸಿತ್ತು ಎಂದು ವರದಿಗಳು ಹೇಳಿವೆ. ಆಸ್ಟ್ರೇಲಿಯಾ ಮತ್ತು ಏಶ್ಯಾದ ಗ್ರಾಹಕರಿಗೆ ಕ್ರಿಪ್ಟೊಕರೆನ್ಸಿ ಮೂಲಕ ಲಭ್ಯವಾಗುತ್ತಲಿತ್ತು.

ಬಲೆ ಬೀಸಲಾಯಿತು
ಈ ದಂಪತಿಯನ್ನು ಹುಡುಕಲು ಪೊಲೀಸರಿಗೆ ತುಂಬಾ ಕಷ್ಟ ವಾಗಿತ್ತು. ಇವರು ತಮ್ಮ ವಾಸದ ಬಗ್ಗೆ ಯಾವುದೇ ರೀತಿಯ ಮಾಹಿತಿ ಕೂಡ ನೀಡುತ್ತಿರಲಿಲ್ಲ. ವಿಡಿಯೋ ಅಪ್ ಲೋಡ್ ಮಾಡುವಾಗ ಸಿಗುತ್ತಿದ್ದ ಐಪಿ ಅಡ್ರೆಸ್ ಬಿಟ್ಟರೆ ಇವರಲ್ಲಿ ಯಾವುದೇ ರೀತಿಯ ವಾಸದ ಮಾಹಿತಿ ಇರಲಿಲ್ಲ. ಮೂರು ತಿಂಗಳಿಗೊಮ್ಮೆ ತಮ್ಮ ಮನೆ ಬದಲಾಯಿಸುತ್ತಿದ್ದ ದಂಪತಿ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಪೊಲೀಸರಿಗೂ ಇದು ಕಠಿಣವಾಗಿತ್ತು.

ದಂಪತಿ ಸೆರೆ ಹಿಡಿಯಬೇಕೆಂದು ಪೊಲೀಸರು ನಿರ್ಧರಿಸಿದ್ದರು
ಕೊನೆಗೂ ಪೊಲೀಸರಿಗೆ ಇದರಲ್ಲಿ ಯಶಸ್ಸು ಸಿಕ್ಕಿತ್ತು. ಉಕ್ರೇನ್ ನ ದ್ನಿಪ್ರೋಪೆತ್ರೋವ್ಸ್ಕ್ ಪ್ರಾಂತ್ಯದ ಕ್ರ್ಯವಯಿ ರಿಹ ನಗರದ ಪೊಲ್ಟಾವದಿಂದ ನೂರಾರು ಕಿ.ಮೀ. ದೂರದಲ್ಲಿ ಈ ದಂಪತಿಯನ್ನು ಸೆರೆ ಹಿಡಿಯಲಾಯಿತು.

ಇದು ತುಂಬಾ ಸಿನಿಮೀಯ ಶೈಲಿಯ ಬಂಧನ
ಮನೆಯಲ್ಲಿದ್ದ ಮಗಳೊಂದಿಗಿದ್ದ ದಂಪತಿ ಬಂಧಿಸಲಾಯಿತು. ನೆಲದ ಮೇಲೆ ಹಲವಾರು ರೀತಿಯ ಸೆಕ್ಸ್ ಆಟಿಕೆಗಳು ಪತ್ತೆಯಾಗಿದ್ದವು. ದಂಪತಿಯನ್ನು ಬಂಧಿಸಿ, ಮಗುವನ್ನು ಮಕ್ಕಳ ಕೇಂದ್ರಕ್ಕೆ ಕಳುಹಿಸಲಾಯಿತು.

ವೀಡಿಯೋಗಳನ್ನು ವಶಕ್ಕೆ ಪಡೆಯಲಾಯಿತು
ಮಗುವಿನ ಸುರಕ್ಷತೆ ಉದ್ದೇಶದಿಂದಾಗಿ ಎಲ್ಲಾ ವೀಡಿಯೋಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೆ ಆ ವೀಡಿಯೋಗಳು ಇಂಟರ್ನೆಟ್ ನಲ್ಲಿದ್ದರೆ ಅದರ ಪರಿಣಾಮ ಏನಾಗಬಹುದು ಎಂದು ತಿಳಿದಿದೆ.

ಮನುಷ್ಯತ್ವ ಎಲ್ಲಿದೆ?
ಇಂತಹ ಪ್ರಕರಣಗಳು ನಾವು ಎಷ್ಟು ಸುರಕ್ಷಿತರಾಗಿದ್ದೇವೆ ಎಂದು ತೋರಿಸುತ್ತದೆ. ತಮ್ಮ ಸಣ್ಣ ಮಗುವನ್ನು ರಕ್ಷಿಸಬೇಕಾಗಿದ್ದ ದಂಪತಿಯೇ ಅದನ್ನು ಲೈಂಗಿಕವಾಗಿ ಪೀಡಿಸಿದೆ. ಮನುಷ್ಯತ್ವವೆನ್ನುವುದು ಇಂಟರ್ನೆಟ್ ಯುಗದಲ್ಲಿ ಪ್ರತಿ ಕ್ಷಣವೂ ಸಾಯುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಬಾಕ್ಸ್ ನಲ್ಲಿ ಇದನ್ನು ಬರೆಯಿರಿ.



Click it and Unblock the Notifications
