Latest Updates
-
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್! -
ಸಂಬಂಧಿಕರ ಮಾತುಗಳನ್ನು ನಿರ್ಲಕ್ಷಿಸಬೇಡಿ! ಸ್ನೇಹಿತರಿಂದ ಪೂರ್ಣ ಸಹಕಾರ
ಆರು ವರ್ಷಗಳ ಕಾಲ ಸೆಕ್ಸ್ ನಡೆಸದೇ ವನವಾಸ ಅನುಭವಿಸಿದ ಜೋಡಿ!!
ಮದುವೆಯಾದ ಯುವ ಜೋಡಿ ಸೆಕ್ಸ್ ನಲ್ಲಿ ತೊಡಗಿಕೊಳ್ಳುವುದು ಸಹಜ. ವಿವಾಹದ ಕೆಲವೊಂದು ಸಂಪ್ರದಾಯಗಳನ್ನು ಪೂರೈಸಿದ ಬಳಿಕ ಎಲ್ಲಾ ದೇಶ, ಧರ್ಮದಲ್ಲೂ ಇದು ನಡೆಯುವುದು. ಇದರ ಮೂಲ ಉದ್ದೇಶವೇ ಸಂತಾನೋತ್ಪತ್ತಿ. ಆದರೆ ಟೆಕ್ಸಾಸ್ ನ ಜೋಡಿಯೊಂದು ಮದುವೆಯಾದ ಆರು ವರ್ಷಗಳ ತನಕ ಸೆಕ್ಸ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಎಮಿಲಿ ಎನ್ನುವ ಮಹಿಳೆಯ ಆರೋಗ್ಯ ಸ್ಥಿತಿಯು ಸರಿಯಾಗಿಲ್ಲದೆ ಇದ್ದ ಕಾರಣದಿಂದಾಗಿ ದಂಪತಿಗೆ ಸೆಕ್ಸ್ ನಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿಲ್ಲ. ಮಹಿಳೆಗೆ ಇದ್ದ ವಜಿನಿಮಿಸಸ್(ಯೀನಿ ಸಂಕೋಚನ) ಎನ್ನುವ ಪರಿಸ್ಥಿತಿಯಿಂದಾಗಿ ಸೆಕ್ಸ್ ನಡೆಸಲು ಸಾಧ್ಯವಾಗಿರಲಿಲ್ಲ. ಅವರು ಇದನ್ನು ಯಾವ ರೀತಿಯಲ್ಲಿ ನಿಭಾಯಿಸಿಕೊಂಡು ಹೋದರು ಎನ್ನುವ ಬಗ್ಗೆ ಈ ಲೇಖನದಲ್ಲಿ ನೀವು ತಿಳಿಯಿರಿ.

ಮದುವೆಯ ಮೊದಲ ರಾತ್ರಿ ಪ್ರೀತಿಯಲು ತೊಡಲು ಬಯಸಿದರು
31ರ ಹರೆಯದ ಬೆನ್ ಕೌಸೆನ್ಸ್ ಮತ್ತು 28ರ ಹರೆಯದ ಎಮಿಲಿ ಎರಡು ವರ್ಷಗಳ ಕಾಲ ಪ್ರೀತಿಸಿದ ಬಳಿಕ ಮದುವೆಯಾಗಲು ನಿರ್ಧರಿಸಿದರು. ಮೊದಲ ರಾತ್ರಿಯಂದು ಎಲ್ಲಾ ಜೋಡಿಯಂತೆ ಇವರು ಕೂಡ ಸೆಕ್ಸ್ ನಡೆಸಲು ಬಯಸಿದ್ದರು. ಆದರೆ ಅದು ಸುಲಭವಲ್ಲವೆಂದು ಅವರಿಗೆ ತಿಳಿಯಿತು.

ಆಕೆಗೆ ದೇಹದೊಳಗೆ ಚೂರಿ ನುಗ್ಗಿಸಿದಂತೆ ಆಗುತ್ತಲಿತ್ತು!
ಸೆಕ್ಸ್ ನಲ್ಲಿ ತೊಡಗಲು ಬಯಸಿದಾಗ ಇದು ತುಂಬಾ ವೇದನಮಯವಾಗಿತ್ತು. ಎಮಿಲಿಗೆ ದೇಹದೊಳಗೆ ಚೂರಿ ನುಗ್ಗಿಸಿದಂತೆ ಆಗುತ್ತಲಿತ್ತು. ಹನಿಮೂನ್ ವೇಳೆ ಮತ್ತೊಮ್ಮೆ ಪ್ರಯತ್ನಿಸಲು ನಿರ್ಧರಿಸಿದರು. ಆದರೆ ನೋವು ಮಾತ್ರ ಅದೇ ರೀತಿಯಲ್ಲಿತ್ತು. ಇದರ ಬಳಿಕ ವೈದ್ಯರ ಸಲಹೆ ಪಡೆಯಲು ನಿರ್ಧರಿಸಿದರು.

ವೈದ್ಯರು ಸಿಲಿಕಾನ್ ಮತ್ತು ಡಿಲಟರ್ಸ್ ನೀಡಿದರು
ವೈದ್ಯರು ಆಕೆಯನ್ನು ಪರೀಕ್ಷಿಸಿದ ಬಳಿಕ ಒಳಗಿನ ಪರೀಕ್ಷೆ ಮಾಡಲು ಅವರು ಮುಂದಾಗಲಿಲ್ಲ. ಯಾಕೆಂದರೆ ಆಕೆಯ ಯೋನಿಯು ಬಿಗಿಹಿಡಿದಿತ್ತು. ಇದು ಗಾತ್ರದ ಸಮಸ್ಯೆಯೆಂದು ಭಾವಿಸಿದ ವೈದ್ಯರು ಇದನ್ನು ಅಗಲಗೊಳಿಸಲು ಕೆಲವು ಡಿಲಟರ್ಸ್ ಗಳನ್ನು ನೀಡಿದರು. ಕೆಲವು ಸಿಲಿಕಾನ್ ಟ್ಯೂಬ್ ಗಳನ್ನು ಕೂಡ ಆಕೆಗೆ ನೀಡಿದರು. ಇದು ಟೆಪಾನ್ಸ್ ನಂತೆ ಇತ್ತು. ಇದರಿಂದ ಯೋನಿ ಅಗಲವಾಗಿಸಬಹುದು. ಆದರೆ ಆಕೆಯ ಯೋನಿಯೊಳಗೆ ಏನೂ ಹೋಗಲು ಸಾಧ್ಯವಿರಲಿಲ್ಲ.

ಆಕೆಗೆ ಯೋನಿ ಸಂಕೋಚನವಿತ್ತು
ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಆಕೆಗೆ ಯೋನಿ ಸಂಕೋಚನ ಪರಿಸ್ಥಿತಿ ಇರುವುದಾಗಿ ದೃಢಪಡಿಸಿದರು. ಇದರಲ್ಲಿ ನುಸುಳಿದಾಗ ಯೋನಿ ಸ್ನಾಯುಗಳು ಉದ್ದೇಶರಹಿತವಾಗಿ ಬಿಗಿಗೊಳ್ಳುವುದು.

ಅವರು ಪ್ರತಿಯೊಂದು ವಿಧದಿಂದ ಸೆಕ್ಸ್ ನಡೆಸಲು ಪ್ರಯತ್ನಿಸಿದರು
ವೈಯಬ್ರೇಟರ್ ನಿಂದ ಹಿಡಿದು ಸ್ಟ್ರೆಚಿಂಗ್ ವ್ಯಾಯಾಮದ ತನಕ ಪ್ರತಿಯೊಂದನ್ನು ಪ್ರಯತ್ನಿಸಿರುವುದಾಗಿ ದಂಪತಿಯು ಹೇಳಿತ್ತು. ಆದರೆ ದುರಾದೃಷ್ಟದಿಂದಾಗಿ ಇದು ಯಾವುದೂ ಕೆಲಸ ಮಾಡಲಿಲ್ಲ. ಎಮಿಲಿಗೆ ತನ್ನ ಪರಿಸ್ಥಿತಿಯಿಂದಾಗಿ ತುಂಬಾ ಬೇಸರವಾಗಿತ್ತು.

ಸೆಕ್ಸ್ ಜೀವನದ ಬಗ್ಗೆ ಸುಳ್ಳು ಹೇಳಿದರು
ಸೆಕ್ಸ್ ಜೀವನದ ಬಗ್ಗೆ ದಂಪತಿಯಲ್ಲಿ ಸ್ನೇಹಿತರು ಕೇಳಿದಾಗ ಅವರು ಸುಳ್ಳು ಹೇಳಿದರು ಮತ್ತು ಮಾತನ್ನು ಬದಲಾಯಿಸುತ್ತಿದ್ದರು. ಬೇರೆ ಮಹಿಳೆಯರು ಕೂಡ ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿರಬಹುದು ಎಂದು ಎಮಿಲಿ ಅರ್ಥ ಮಾಡಿಕೊಂಡರು.

ಆಕೆಗೆ ಹೈಮೆಕ್ಟಮಿ ಕೂಡ ಇತ್ತು
ಎಮಿಲಿಗೆ ಹೈಮೆಕ್ಟಮಿ ಎನ್ನುವ ಪರಿಸ್ಥಿತಿಯಿತ್ತು. ತೊಂದರೆ ನಿವಾರಿಸಲು ಆಕೆ ಹೈಮನ್ ತೆಗೆಯಬೇಕಾಗಿತ್ತು. ಆದರೆ ಇದರಿಂದಲೂ ಆಕೆಯ ಲೈಂಗಿಕ ಜೀವನ ಮಾತ್ರ ಹಾಗೆ ಉಳಿಯಿತು.

ನ್ಯೂಯಾರ್ಕ್ ನ ಮಹಿಳಾ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದರು
ಎಮಿಲಿಯಂತಹ ಪರಿಸ್ಥಿತಿಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಸಂದರ್ಶನವನ್ನು ಈ ದಂಪತಿಯು ಪತ್ರಿಕೆಯಲ್ಲಿ ಓದಿದರು. ಇದರಿಂದ ಅವರು ತಮಗೆ ಪರಿಹಾರ ಸಿಕ್ಕಿತು ಎಂದು ಕಂಡುಕೊಂಡು ನೇರವಾಗಿ ಚಿಕಿತ್ಸಾ ಕೇಂದ್ರಕ್ಕೆ ತೆರಳಿದರು. ಎರಡು ವಾರಗಳ ಚಿಕಿತ್ಸೆಗೆ ಅವರಿಗೆ ಸುಮಾರು 11 ಸಾವಿರ ಡಾಲರ್ ವೆಚ್ಚವಾಯಿತು.

ಚಿಕಿತ್ಸೆಗಾಗಿ 1500 ಮೈಲಿ ದೂರ ಪ್ರಯಾಣಿಸಿದರು
ವಾರದಲ್ಲಿ ಎರಡು ಸಲ ಚಿಕಿತ್ಸೆಗಾಗಿ ಎಮಿಲಿ ಸುಮಾರು 1500 ಮೈಲಿ ದೂರ ಹೋಗಿ ಬರಬೇಕಾಗಿತ್ತು. ಆಕೆಗೆ ಬಳಿಕ `ಹ್ಯಾಂಡ್ ಆನ್'ನುಗ್ಗುವಿಕೆಯ ವಿಧಾನವನ್ನು ಕಲಿಸಿಕೊಡಲಾಯಿತು. ಈ ವೇಳೆ ಆಕೆ ಡಿಲಟರ್ಸ್ ನ್ನು ಒಳಗೆ ಹಾಕಿ ತನ್ನನ್ನು ಸ್ಪರ್ಶಿಸಬೇಕಿತ್ತು. ಇದರಿಂದಾಗಿ ಆಕೆಯು ತನ್ನ ಶ್ರೋಣಿಯ ಭಾಗದಲ್ಲಿ ಸ್ಪರ್ಶಿಸುವುದು ಸಾಮಾನ್ಯ ಭಾವನೆ ಮೂಡಿತು.

ದಂಪತಿಗೆ ಈಗ ಒಂದು ಮಗುವಿದೆ
2 ವಾರಗಳ ಕಾಲ ಚಿಕಿತ್ಸೆಯಲ್ಲಿ ಒಳಗೊಂಡ ಬಳಿಕ ಎಮಿಲಿಗೆ ಸೆಕ್ಸ್ ಜೀವನದಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ಇದರಿಂದ ಆರು ವರ್ಷಗಳ ಸೆಕ್ಸ್ ಜೀವನದ ವನವಾಸವು ಕೊನೆಗೊಂಡಿತು. ಸೆಕ್ಸ್ ಜೀವನ ಆರಂಭಿಸಿದ ಐದು ತಿಂಗಳಲ್ಲೇ ಎಮಿಲಿ ಗರ್ಭಿಣಿಯಾದಳು. ಈಗ ದಂಪತಿಗೆ ಒಂದು ಮಗುವಿದೆ.



Click it and Unblock the Notifications











