Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗಲೇ ಸೆಕ್ಸ್ ನಡೆಸಿದ ಜೋಡಿ!
ಸೆಕ್ಸ್ ಎನ್ನುವುದು ಪ್ರತಿಯೊಂದು ಜೀವಿಗಳು ನಡೆಸುವ ನೈಸರ್ಗಿಕ ಕ್ರಿಯೆ. ಇದಕ್ಕೆ ಪ್ರತಿಯೊಂದು ದೇಶದಲ್ಲೂ ವಿಶೇಷ ಬಗೆಯ ಸ್ಥಾನ-ಮಾನ ನೀಡಲಾಗಿದೆ. ಅದರಲ್ಲೂ ನಮ್ಮ ಭಾರತ ದೇಶದಲ್ಲಿ ಲೈಂಗಿಕ ಕ್ರಿಯೆಗೆ ಪವಿತ್ರ ಸ್ಥಾನವನ್ನು ನೀಡಲಾಗಿದೆ. ಪ್ರಾಯಕ್ಕೆ ಬಂದ ವ್ಯಕ್ತಿ ಸಂಭೋಗ ನಡೆಸಬೇಕು ಎಂದರೆ ಅವನಿಗೆ ವಿವಾಹ ಎನ್ನುವ ಬಂಧನವನ್ನು ಹೊಂದಬೇಕು. ಕುಟುಂಬ ಎನ್ನುವ ಸಾಂಪ್ರದಾಯಿಕ ಅಡಿಪಾಯದಲ್ಲಿ ನಡೆಸಬೇಕು. ತನ್ನ ಜೀವನ ಸಂಗಾತಿಯಾಗಿ ಕೈ ಹಿಡಿದ ವ್ಯಕ್ತಿಯೊಂದಿಗೇ ಸಂಭೋಗ ನಡೆಸಬೇಕು. ಅದು ನಾಲ್ಕು ಗೋಡೆಯ ಮಧ್ಯೆ ಎನ್ನುವ ಕಟ್ಟುಪಾಡುಗಳಿವೆ.
ವ್ಯಕ್ತಿಗೆ ಮನಸ್ಸಿಗೆ ಕಂಡಂತೆ, ಇಷ್ಟವಾದ ಜಾಗದಲ್ಲಿ ಅಥವಾ ಎಲ್ಲೆಂದರಲ್ಲಿ ಸಂಭೋಗ ನಡೆಸುವುದನ್ನು ಸಾಮಾನ್ಯವಾಗಿ ಯಾರು ಒಪ್ಪುವುದಿಲ್ಲ. ಸಂಭೋಗ ಎನ್ನುವ ವಿಚಾರದ ಬಗ್ಗೆ ಮಾತನಾಡುವಾಗಲೇ ಸುತ್ತ-ಮುತ್ತ ಯಾರಿದ್ದಾರೆ? ಈ ವಿಷಯವನ್ನು ಮಾತನಾಡಲು ಇದು ಸೂಕ್ತ ಸಮಯವೇ? ಈಗ ಈ ವ್ಯಕ್ತಿ ಹತ್ತಿರ ಮಾತನಾಡಬಹುದೇ ಎನ್ನುವುದನ್ನು ಯೋಚಿಸುತ್ತಾರೆ. ಇನ್ನು ಸಂಭೋಗ ನಡೆಸುವುದು ಎಂದರೆ ಅದು ಮಾನ-ಮರ್ಯಾದೆಯ ಪ್ರಶ್ನೆಯಾಗುತ್ತದೆ.
ಎಷ್ಟೇ ಮುಂದುವರಿದ ದೇಶವಾಗಿರಲಿ ಅಥವಾ ಸಂಭೋಗ ಎನ್ನುವುದನ್ನು ನೈಸರ್ಗಿಕ ಕ್ರಿಯೆ, ಅದನ್ನು ಹೊಂದುವುದು ಅಥವಾ ಅದರ ಬಗ್ಗೆ ಸಾರ್ವಜನಿಕ ಪ್ರದೇಶದಲ್ಲಿ ಮುಕ್ತವಾಗಿ ಮಾತನಾಡಬಹುದು ಎನ್ನುವ ದೇಶದಲ್ಲೂ ಸಹ ಸಂಭೋಗವನ್ನು ನಾಲ್ಕು ಗೋಡೆಯ ಮಧ್ಯದಲ್ಲಿ ನಡೆಸುತ್ತಾರೆ. ಎಷ್ಟೇ ವ್ಯಕ್ತಿ ಸ್ವಾತಂತ್ರ್ಯ ಇದ್ದರೂ ಅದು ಕಾನೂನು ಬಾಹಿರವಾಗಿರಬಾರದು ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಂದು ಜೋಡಿ ವಿಮಾನಿನಲ್ಲಿ ಪ್ರಯಾಣಿಸುತ್ತಿರುವಾಗ, ಪ್ರಯಾಣಿಕರ ಮಧ್ಯದಲ್ಲಿಯೇ ಸಂಭೋಗ ನಡೆಸಿದ್ದಾರೆ. ಅವರಿಗೆ ಯಾವುದೇ ಭಯ-ಆತಂಕ ಉಂಟಾಗದೆ ರಾಜಾರೋಶವಾಗಿ ನಡೆಸಿದ ಕ್ರಿಯೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಲಾಗುತ್ತಿದೆ. ಈಗಾಗಲೇ ಎಲ್ಲೆಡೆ ಹರಡಿರುವ ಈ ವಿಚಾರದ ಮಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ...

ಜೋಡಿ ಮೆಕ್ಸಿಕೋಕ್ಕೆ ಪ್ರಯಾಣಿಸುತ್ತಿದ್ದರು...
ವಿಮಾನಿನಲ್ಲಿ ಸಂಭೋಗ ನಡೆಸುತ್ತಿದ್ದ ವೀಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಒಬ್ಬ ಹುಡುಗಿ ಹಾಕಿದ್ದಾಳೆ. ಅದು ಅವಳ ಅಪ್ಪ ಅಮ್ಮಾ ಮೆಕ್ಸಿಕೋಕ್ಕೆ ಪ್ರಯಾಣಿಸುತ್ತಿರುವಾಗ ತೆಗೆದಿರುವ ವೀಡಿಯೋ... ಅವರು ಪ್ರಯಾಣಿಸುತ್ತಿರುವಾಗ ಅವರ ಹಿಂಭಾಗದ ಸೀಟ್‍ನಲ್ಲಿ ಕುಳಿತ ಜೋಡಿಗಳು ಸಂಭೋಗ ಹೊಂದುತ್ತಿದ್ದರು. ಇದನ್ನು ನೋಡಿದ ತನ್ನ ತಂದೆ ತಾಯಿ ವೀಡಿಯೋ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

ತಮಾಷೆಯ ವಿಚಾರವಾಗಿತ್ತು...
ತನ್ನ ಪೋಷಕರು ಮೆಕ್ಸಿಕೊಕ್ಕೆ ಹೋಗುವಾಗ ನಮ್ಮದು ಶಾಂತವಾದ ಪ್ರಯಾಣವಾಗಿತ್ತು ಎಂದು ಈ ವೀಡಿಯೋವನ್ನು ನನ್ನೊಂದಿಗೆ ಹಂಚಿಕೊಂಡರು. ಅದು ಒಂದು ಬಗೆಯ ತಮಾಷೆಯ ಸಂಗತಿಯಾಗಿತ್ತು ಎಂದು "ಕಿಲೆ ಟುಲ್ಲಿ" ಎನ್ನುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿದ್ದಾರೆ.

ವೀಡಿಯೋ ಎಲ್ಲೆಡೆ ಹರಡಿದೆ...
ಈ ತಮಾಷೆಯಾದ ವಿಡೀಯೋವನ್ನು ಪ್ರಪಂಚದಾದ್ಯಂತ ಹಂಚಿಕೊಳ್ಳಬೇಕು ಎಂದು ಅಪ್‍ಲೋಡ್ ಮಾಡಿದ್ದೆ. ಅದು ಈಗ 5.60 ದಶಲಕ್ಷ ಜನರು ವೀಕ್ಷಿಸಿದ್ದಾರೆ. ಇದೊಂದು ದೊಡ್ಡ ಸಂಖ್ಯೆಯಲ್ಲಿ ಎಲ್ಲೆಡೆ ಹರಡಿದೆ ಎಂದಿದ್ದಾರೆ.

ಜೋಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ...
ಈ ಘಟನೆಯ ಬಗ್ಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಲ್ಲ. ಇವರ ಪ್ರೀತಿ ಕಾನೂನುಬದ್ಧವಾಗಿಲ್ಲ. ಈ ರೀತಿಯ ವರ್ತನೆ ತೋರಿದ ಜೋಡಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಜೋಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ... ವಿಮಾನಗಳಲ್ಲಿ ಹೆಚ್ಚಿನ ಇಂತಹ ವಿಲಕ್ಷಣ ಪ್ರಕರಣಗಳು ಸಂಭವಿಸುತ್ತವೆಯೆಂದು ನಿಮಗೆ ತಿಳಿದಿದೆಯೇ?
ಕಾರಾಚಿಯಿಂದ ಬ್ಯಾಂಕಾಕ್ ಹೋಗುತ್ತಿದ್ದ ವಿಮಾನವೊಂದರಲ್ಲಿ ಭಿಕ್ಷುಕನೊಬ್ಬ ಬಂದಿದ್ದ. ಅವನಿಗೆ ಪ್ರಯಾಣಿಕರು ಹಣವನ್ನು ನೀಡಿದ್ದರು. ಆ ವೀಡಿಯೋಗೆ ಕರಾಚಿ ವಾಲೆ ಎಂದು ಹೆಡ್ ಲೈನ್ ನೀಡಲಾಗಿತ್ತು ಎನ್ನಲಾಗುತ್ತಿದೆ.



Click it and Unblock the Notifications
