For Quick Alerts
ALLOW NOTIFICATIONS  
For Daily Alerts

  ಮಾನವ ಕಳ್ಳ ಸಾಗಣೆಗೆ ಕುಖ್ಯಾತಿಗಳಿಸಿರುವ ರಾಷ್ಟ್ರಗಳು

  By Deepu
  |

  ಮಾನವ ಕಳ್ಳ ಸಾಗಣೆಯ ವಿರುದ್ಧ ವಿಶ್ವದಾದ್ಯಂತ ಎಲ್ಲಾ ದೇಶಗಳಲ್ಲಿ ಬಿಗಿಯಾದ ಕಾನೂನೇನೋ ಇದೆ. ಆದರೆ ಇಂದಿಗೂ ಈ ಕೃತ್ಯ ನಿಗೂಢವಾಗಿ ನಡೆಯುತ್ತಲೇ ಬಂದಿದೆ. ಕೆಲವು ದೇಶಗಳು ಇದಕ್ಕೆ ಕುಖ್ಯಾತಿ ಗಳಿಸಿವೆ. ಮಾನವ ಕಳ್ಳ ಸಾಗಣೆ ಎಂದರೆ ಮಾನವರನ್ನೇ ಅವರ ಇಚ್ಛೆಗೆ ವಿರುದ್ಧವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಿ ಇವರಿಂದ ಅತಿ ಅಗ್ಗವಾಗಿ ಕೆಲಸ ಮಾಡಿಸಿಕೊಳ್ಳುವುದು.

  ಅಂಗಾಂಗ ಮಾರಾಟ, ದೇಹ ಮಾರಾಟ, ಬ್ಲಡ್ ಫಾರಂ (ಅಥವಾ ಮನುಷ್ಯರನ್ನು ಬಂಧನದಲ್ಲಿರಿಸಿ ಅವರಿಂದ ರಕ್ತವನ್ನು ನಿಯಮಿತವಾಗಿ ತೆಗೆದು ಮಾರಾಟ ಮಾಡುವುದು) ಮೊದಲಾದವುಗಳಲ್ಲಿ ಬಲವಂತವಾಗಿ ಒಳಗೊಳ್ಳುವಂತೆ ಮಾಡುವುದು ಎಲ್ಲವೂ ಸೇರಿವೆ. ಮಾನವತೆಯೇ ತಲೆ ತಗ್ಗಿಸುವ ಈ ಕೃತ್ಯ ಕೆಲವು ದೇಶಗಳಲ್ಲಿ ಇಂದಿಗೂ ಎಗ್ಗಿಲ್ಲದೇ ನಡೆಯುತ್ತಿದೆ. ಬನ್ನಿ, ಈ ಬಗ್ಗೆ ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ ಅಚ್ಚರಿಯ ಮತ್ತು ಆಘಾತಕಾರಿ ಮಾಹಿತಿಯನ್ನು ನೋಡೋಣ....

  ಚೀನಾ

  ಚೀನಾ

  ಚೀನಾ ಸಹಾ ಭಾರತದಂತೆಯೇ ಅಭಿವೃದ್ಧಿಶೀಲ ರಾಷ್ಟವಾಗಿದ್ದು ಇಲ್ಲಿಂದ ಮಾನವ ಕಳ್ಳ ಸಾಗಣೆ ಪ್ರಾರಂಭವಾಗುವುದು ಮಾತ್ರವಲ್ಲ, ಕೆಲವು ಮಾನವ ಕಳ್ಳ ಸಾಗಣೆಗಳೂ ಚೀನಾದತ್ತ ಸಾಗುತ್ತವೆ. ಚೀನಾದಲ್ಲಿ ಇಂದಿಗೂ ಎಷ್ಟೋ ನಗರಗಳು ಅಭಿವೃದ್ದಿ ಪಥದಲ್ಲಿ ಹಿಂದುಳಿದಿವೆ. ಕಳ್ಳಸಾಗಣೆದಾರರಿಗೆ ಈ ನಗರಗಳು ಅಥವಾ ಮಹಾನಗರಗಳ ಕತ್ತಲ ಗಲ್ಲಿಗಳಲ್ಲಿ ಈ ಕೃತ್ಯ ನಡೆಯುತ್ತಾ ಬಂದಿದೆ. ಈ ಕೃತ್ಯವನ್ನು ಮಟ್ಟ ಹಾಕಲು ಚೀನಾ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

  ಉಗಾಂಡ

  ಉಗಾಂಡ

  ಈ ದೇಶದಲ್ಲಿ ಜೀವನವೇ ದುರ್ಭರವಾಗಿದ್ದು ಕಾನೂನನ್ನು ಚಿಂದಿ ಉಡಾಯಿಸಲಾಗುತ್ತದೆ. ನಾಗರಿಕರು ಇಲ್ಲಿ ನಿತ್ಯವೂ ಹಿಂಸೆಯನ್ನು ಎದುರಿಸುತ್ತಾರೆ. ಯುವ ಜನತೆ ಕಡ್ಡಾಯವಾಗಿ ಸೇನೆಯನ್ನು ಸೇರಲೇಬೇಕಾಗುತ್ತದೆ. ಎಲ್ಲಾ ವಯಸ್ಸಿನ ಮಕ್ಕಳು ಕಡ್ಡಾಯವಾಗಿ ಕಾವಲು ಕಾಯಬೇಕಾಗುತ್ತದೆ. ಇವರಿಗೆ ಸ್ಲೇಟು ಬಳಪದ ಬದಲು ಬಂದೂಕುಗಳ ಬಳಕೆಯನ್ನು ಕಲಿಸಲಾಗುತ್ತದೆ. ಕೆಲವು ಮಕ್ಕಳಿಗೆ ನೀಡುವ ಬಂದೂಕುಗಳು ಅವರ ತೂಕಕ್ಕಿಂತಲೂ ಹೆಚ್ಚು ಭಾರವಾಗಿರುತ್ತವೆ.

  ಘಾನಾ

  ಘಾನಾ

  ಇತ್ತೀಚಿನ ಬಹಳಷ್ಟು ಮಾನವ ಕಳ್ಳಸಾಗಣೆಯನ್ನು ಈ ದೇಶದಿಂದ ಹಾಗೂ ಈ ದೇಶಕ್ಕೆ ಸಾಗಿಸಿರುವುದು ಪತ್ತೆಯಾಗಿದೆ. ಇಲ್ಲಿನ ಚಿನ್ನದ ಗಣಿಗಳಲ್ಲಿ ಮಕ್ಕಳನ್ನು ಬಲವಂತವಾಗಿ ಕಾರ್ಮಿಕರಾಗಿ ಕೆಲಸ ಮಾಡಿಸಲಾಗುತ್ತದೆ ಹಾಗೂ ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಇತರರನ್ನು ಬಲವಂತವಾಗಿ ಭಿಕ್ಷೆ, ಮೀನುಗಾರಿಕೆ ಹಾಗೂ ಇತರ ಕೆಲಸಗಳಲ್ಲಿ ತೊಡಗಿಸಲಾಗುತ್ತದೆ.

  ಭಾರತ

  ಭಾರತ

  ಭಾರತದ ಕಾನೂನಿನಲ್ಲಿ ಮಾನವ ಕಳ್ಳ ಸಾಗಣೆಯನ್ನು ಅಕ್ರಮವೆಂದು ಸಾರಲಾಗಿದೆ. ಆದರೆ ಜನರೇ ಈ ಕಾನೂನಿಗೆ ಹೆಚ್ಚಿನ ಮನ್ನಣೆ ನೀಡುತ್ತಿಲ್ಲ. ಬಲವಂತವಾಗಿ ಕೆಲಸ ಮಾಡಿಸುವುದು, ವೇಶ್ಯಾವಾಟಿಕೆ, ಅಂಗಾಂಗ ಕಳ್ಳಸಾಗಣೆ ಮೊದಲಾದವು ಇಲ್ಲಿ ಸಾಮಾನ್ಯವಾಗಿವೆ. ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಮಕ್ಕಳನ್ನು ಬಲವಂತವಾಗಿ ಕಳ್ಳಸಾಗಣೆ ಮಾಡಲಾಗುತ್ತದೆ.

  ಪಾಕಿಸ್ತಾನ

  ಪಾಕಿಸ್ತಾನ

  ಈ ದೇಶದಿಂದಲೂ ಮಾನವ ಕಳ್ಳಸಾಗಣೆ ನಡೆಯುತ್ತದೆ ಹಾಗೂ ಈ ದೇಶಕ್ಕೆ ಹೊರಗಿನಿಂದಲೂ ಆಗಮಿಸುತ್ತಾರೆ. ಈ ದೇಶದಾದ್ಯಂತ ಒಂದು ಕೆಲಸಕ್ಕೆ ನಿಗದಿಪಡಿಸುವ ಕಾರ್ಮಿಕರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ದೇಶದ ನೂರಾರು ಕಾರ್ಖಾನೆಗಳಲ್ಲಿಯೂ, ಮನೆಗೆಲಸದಲ್ಲಿಯೂ ಅಲ್ಪವೇತನದಲ್ಲಿ ಇವರು ದುಡಿಯುತ್ತಾರೆ.

  ನೇಪಾಳ

  ನೇಪಾಳ

  ಈ ದೇಶದಿಂದ ಮಹಿಳೆಯರನ್ನು ಕದ್ದು ಬಲವಂತವಾಗಿ ಭಾರತಕ್ಕೆ ಸಾಗಿಸಲಾಗುತ್ತದೆ. ವರದಿಗಳ ಪ್ರಕಾರ ಪ್ರತಿವರ್ಷ ನೇಪಾಳದಿಂದ ಭಾರತಕ್ಕೆ ಸುಮಾರು ಐದು ಸಾವಿರದಿಂದ ಹತ್ತು ಸಾವಿರ ಮಹಿಳೆಯರು ಮತ್ತು ಹುಡುಗಿಯರನ್ನು ಕದ್ದು ಕಳ್ಳ ಸಾಗಣೆ ಮಾಡಲಾಗುತ್ತದೆ.

  ಶ್ರೀಲಂಕಾ

  ಶ್ರೀಲಂಕಾ

  ಈ ದೇಶದಿಂದ ವಿಶೇಷವಾಗಿ ಮಕ್ಕಳನ್ನು ಕದ್ದು ವಿಶ್ವದ ಹಲವೆಡೆ ಸಾಗಿಸಲಾಗುತ್ತದೆ. ಇವರನ್ನು ಹೆಚ್ಚಾಗಿ ಮಿಲಿಟರಿ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಅಂತೆಯೇ ಶ್ರೀಲಂಕಾದ ಮಹಿಳೆಯರನ್ನೂ ಬಲವಂತವಾಗಿ ಕದ್ದೊಯ್ದು ವಿಶ್ವದ ಹಲವೆಡೆ ವೇಶ್ಯಾವಾಟಿಕೆಗಳಲ್ಲಿ ದುಡಿಸಿಕೊಳ್ಳಲಾಗುತ್ತದೆ.

  English summary

  Countries That Are Famous For Human Trafficking

  Though there are strict rules to stop human trafficking, there are countries that are still famous for human trafficking. Human trafficking is the trade of humans, where people are taken to different countries and are made to do mere labour jobs in which they are paid in peanuts. Though it is a disgrace to the existing society, the practice of human trafficking still exists to the present day. We at Boldsky bring to you the list of countries that are famous for human trafficking. Check these out...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more