Latest Updates
-
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್
ನಾವು ಜೀವನದಲ್ಲಿ ಭೇಟಿಯಾಗುವುದು ಕಾಸ್ಮಿಕ್ ಸಂಪರ್ಕದ ಪ್ರಭಾವ
ಬಾಲ್ಯದಿಂದ ಹಿಡಿದು ವೃದ್ಧಾಪ್ಯದ ತನಕ ನಾವು ಎಷ್ಟೋ ಜನರನ್ನು ಭೇಟಿಯಾಗುತ್ತೇವೆ. ಜೀವನದ ಪಯಣವೆಂಬ ರೈಲಿನಲ್ಲಿ ನಾವು ಎಷ್ಟೋ ಸಹಪ್ರಯಾಣಿಕರನ್ನು ಕಾಣುತ್ತೇವೆ. ಕೆಲವರು ಇದರಲ್ಲಿ ಯಾವುದೇ ಕಾರಣಕ್ಕಾಗಿ, ಇನ್ನು ಕೆಲವರು ಒಂದು ಋತುವಿಗೆ ಅಥವಾ ಜೀವಮಾನಕ್ಕೆ ನಿಮ್ಮೊಂದಿಗೆ ಇರಬಹುದು. ಪ್ರತನಿತ್ಯದ ಜೀವನದಲ್ಲಿ ನಾವು ಹಲವಾರು ವಿಧದ ಜನರನ್ನು ಭೇಟಿಯಾಗುತ್ತೇವೆ. ಇದರಲ್ಲಿ ಕೆಲವು ಮಂದಿ ನಮಗೆ ನೆನಪಿನಲ್ಲಿ ಉಳಿಯುವರು.
ಇನ್ನು ಕೆಲವರು ಹಾಗೆ ಸ್ಮೃತಿ ಪಟಲದಿಂದ ಮಾಯವಾಗುವರು. ನಮ್ಮ ಜೀವನದ ಮೇಲೆ ಯಾವುದೇ ಪ್ರಭಾವ ಬೀರಿದ ವ್ಯಕ್ತಿಗಳ ಹೊರತಾಗಿ ಬೇರೆ ಯಾರು ಕೂಡ ನಮ್ಮ ನೆನಪಿನಲ್ಲಿ ಉಳಿಯಲಾರರು. ಆದರೆ ನೀವು ಭೇಟಿಯಾಗುವಂತಹ ಜನರೆಲ್ಲರೂ ನಿಮಗೆ ಸಿಗುವುದು ಕಾಸ್ಮಿಕ್ ಸಂಪರ್ಕ (ಭೂಮಿಯ ವಿಶಿಷ್ಟತೆ) ದಿಂದಾಗಿ.
ಹೌದು, ತಜ್ಞರ ಪ್ರಕಾರ ನಮ್ಮ ಜೀವನದಲ್ಲಿ ಕಾಸ್ಮಿಕ್ ಸಂಪರ್ಕವು ತುಂಬಾ ಪ್ರಾಮುಖ್ಯತೆ ವಹಿಸುತ್ತದೆ. ಇದನ್ನು ನಾವು ನಮ್ಮ ಜೀವನ ಮತ್ತು ಇತರರ ಜೀವನದಲ್ಲಿ ಕಡೆಗಣಿಸುತ್ತೇವೆ. ಆದರೆ ಈ ಲೇಖನದಲ್ಲಿ ವಿವಿಧ ರೀತಿಯ ಕಾಸ್ಮಿಕ್ ಸಂಪರ್ಕದಿಂದ ಆಗುವ ನಮ್ಮ ಭೇಟಿ ಮತ್ತು ಜೀವನದ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳ ಬಗ್ಗೆ ಹೇಳಲಿದ್ದೇವೆ. ಕಾಸ್ಮಿಕ್ ಸಂಪರ್ಕದ ಬಗ್ಗೆ ಮತ್ತಷ್ಟು ತಿಳಿಯಲು ಮುಂದೆ ಓದಿ....

ಜೀವನದ ಹಾದಿ ಬಗ್ಗೆ ನಮಗೆ ನೆನೆಪಿಸುವುದು
ದೈನಂದಿನ ಜೀವನದ ಜಂಜಾಟದಲ್ಲಿ ನಾವು ದಿಕ್ಕು ತೋಚದಂತೆ ಆಗುತ್ತೇವೆ. ಮನಸ್ಸಿನಲ್ಲಿ ಹಲವಾರು ವಿಚಾರಗಳು ತುಂಬಿರುವ ಕಾರಣದಿಂದಾಗಿ ನಾವು ಸೋಲುಂಡಂತೆ ಆಗುವುದು. ನಮ್ಮ ಕನಸುಗಳು ಮತ್ತು ಆಕಾಂಕ್ಷೆಗಳು ನಮ್ಮಿಂದ ದೂರವಿರುವಂತೆ ಹಾಗೂ ಅದು ನಿಜವಾಗದಂತೆ ಭಾಸವಾಗುವುದು. ಎಲ್ಲದರಲ್ಲೂ ನಾನು ಸೋತೆ ಮತ್ತು ಇನ್ನು ನನ್ನಿಂದ ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮಲ್ಲಿ ನಂಬಿಕೆ ಮೂಡಿಸುವಂತಹ ವ್ಯಕ್ತಿಯೊಬ್ಬರನ್ನು ಹುಡುಕಬೇಕು. ಈ ವ್ಯಕ್ತಿಗಳು ನಮಗೆ ಜೀವನದ ಹಾದಿ ಬಗ್ಗೆ ಮತ್ತು ಗುರಿಮುಟ್ಟುವ ಬಗ್ಗೆ ಮಾರ್ಗದರ್ಶನ ನೀಡಲಿರುವರು. ಯಾವುದೇ ಪರಿಸ್ಥಿತಿಯಲ್ಲೂ ನಿಮ್ಮ ಕನಸುಗಳನ್ನು ಬಿಡಬೇಡಿ ಮತ್ತು ಇದನ್ನು ನನಸಾಗಿಸಿ ಎನ್ನುವರು.
ನಿಮಗೆ ಬೆಳೆಯಲು ನೆರವಾಗುವವರು
ನಾವು ಜೀವನದಲ್ಲಿ ಭೇಟಿಯಾಗುವ ಕೆಲವೊಂದು ಜನರು ನಮ್ಮ ಬೆಳವಣಿಗೆಗೆ ನೆರವಾಗುವರು. ನಮ್ಮ ಯೋಗ್ಯತೆ ಬಗ್ಗೆ ಹೇಳಿ ಜೀವನದ ನಿಜವಾದ ಸಾಮರ್ಥ್ಯದೆಡೆಗೆ ನಮ್ಮನ್ನು ಸಾಗಿಸುವರು. ಇವರು ನಮ್ಮ ಜೀವನದಲ್ಲಿ ಧನಾತ್ಮಕವಾದ ಶಕ್ತಿ ತುಂಬುವರು. ನಮ್ಮ ಮೇಲೆ ನಮಗೆ ನಂಬಿಕೆ ಇಲ್ಲದೇ ಇರುವಂತಹ ಸಮಯದಲ್ಲಿ ಈ ವ್ಯಕ್ತಿಗಳು ನಮ್ಮ ಮೇಲೆ ನಂಬಿಕೆಯನ್ನಿಡುವುದು ಇವರ ಪ್ರಮುಖ ಗುಣ. ಮುಂದಿನ ಸಲ ಇಂತಹವರನ್ನು ಭೇಟಿಯಾದರೆ ಅವರ ಸಲಹೆ ಪಡೆಯಿರಿ. ಇವರನ್ನು ಲಘುವಾಗಿ ಪರಿಗಣಿಸುವುದನ್ನು ನಿಲ್ಲಿಸಬೇಕು. ಈ ವ್ಯಕ್ತಿಗಳು ನಿಮಗೆ ಪ್ರೇರಣೆ ನೀಡುವರು ಮತ್ತು ಸಮಯಕ್ಕೆ ಅನುಗುಣವಾಗಿ ಗುರಿ ಮುಟ್ಟಲು ನೆರವಾಗುವರು.
ಅಲ್ಪ ಸಮಯಕ್ಕೆ ನಿಮ್ಮೊಂದಿಗೆ ಇರುವವರು
ಜೀವನದಲ್ಲಿ ಕೆಲವರು ತುಂಬಾ ಅಲ್ಪ ಸಮಯಕ್ಕೆ ನಮ್ಮನ್ನು ಭೇಟಿಯಾಗುವರು. ಅವರ ಕಡಿಮೆ ಅವಧಿಯ ಜೀವನದಿಂದಾಗಿ ಅವರು ಜೀವನಪೂರ್ತಿ ನಮ್ಮೊಂದಿಗೆ ಇರುವುದಿಲ್ಲ. ಈ ವ್ಯಕ್ತಿಗಳು ತುಂಬಾ ಅಲ್ಪಾವಧಿಗೆ ನಮ್ಮೊಂದಿಗೆ ಇದ್ದರೂ ಸಹಿತ ತುಂಬಾ ಗಾಢವಾದ ಪರಿಣಾಮ ನಮ್ಮ ಮೇಲೆ ಬೀರುವರು. ನಮ್ಮ ಜೀವನದಲ್ಲಿ ಅವರು ಮುಖ್ಯವಲ್ಲವೆಂದು ನಾವು ಭಾವಿಸುತ್ತೇವೆ. ಆದರೂ ಅವರು ಆಳವಾಗಿ ನಮ್ಮ ಜೀವನದಲ್ಲಿ ಬೇರೂರಿರುವರು. ಯಾವುದೋ ಕಾರಣಕ್ಕಾಗಿ ಅವರು ನಮ್ಮ ಜೀವನದಲ್ಲಿ ಬಂದು ಹೋಗಿರುವರು.
ನಮ್ಮ ಜೀವನದಲ್ಲಿ ನಿಲ್ಲುವವರು
ನಮ್ಮ ಜೀವನದಲ್ಲಿ ನಿಲ್ಲುವವರು ತುಂಬಾ ಪ್ರಮುಖವಾಗಿರುವವರು. ಕೆಲವು ಜನರು ನಮ್ಮ ಜೀವನದಲ್ಲಿ ಬಂದು ದೀರ್ಘಕಾಲ ಉಳಿಯುವರು. ಇವರು ನಿಮ್ಮ ಸುಖದುಃಖಗಳೆರಡರಲ್ಲೂ ಭಾಗಿಯಾಗುವರು ಮತ್ತು ನಿಮ್ಮನ್ನು ಯಾವತ್ತೂ ಬಿಟ್ಟುಕೊಡಲಾರರು. ಇನ್ನೊಂದು ಬದಿಯಲ್ಲಿ ಇವರು ನಿಮ್ಮ ಜೀವನದ ನಂಬಿಕಸ್ಥ ಸಂಗಾತಿಯಾಗುವರು. ಬೇರೆಯವರಿಗಿಂತ ಹೆಚ್ಚಾಗಿ ಇವರು ನಿಮ್ಮನ್ನು ಅರ್ಥ ಮಾಡಿಕೊಳ್ಳುವರು. ಇವರನ್ನು ಹುಡುಕುವುದು ತುಂಬಾ ಕಠಿಣವಾದರೂ ಅಸಾಧ್ಯವೇನಲ್ಲ. ಕಾಸ್ಮಿಕ್ ಸಂಪರ್ಕವು ನಾವು ಅವರನ್ನು ಭೇಟಿಯಾಗುವಂತೆ ಮಾಡಿ ಜೀವನಪೂರ್ತಿ ಅವರೊಂದಿಗೆ ಇರುವಂತೆ ಮಾಡುವುದು.
ನಿಮಗೆ ನೋವುಂಟು ಮಾಡುವವರು
ನೋವುಂಟು ಮಾಡುವಂತಹ ವ್ಯಕ್ತಿಗಳು ಪ್ರತಿಯೊಬ್ಬರ ಜೀವನದಲ್ಲೂ ಸಿಗುವರು. ಕೆಲವರು ಸ್ವಲ್ಪ ನೋವುಂಟು ಮಾಡಿದರೆ, ಇನ್ನು ಕೆಲವರು ಕೊಟ್ಟಿರುವ ನೋವು ಮರೆಯಲು ಸಾಧ್ಯವಿಲ್ಲದ್ದು. ಇವರು ನಿಮ್ಮ ಜೀವನದಲ್ಲಿ ಇರುವುದನ್ನು ನೀವು ಇಷ್ಟಪಡಲ್ಲ ಮತ್ತು ಅವರು ಬೇಗನೆ ತೊಲಗಲಿ ಎಂದು ಬಯಸುವಿರಿ. ಇಂತಹ ವ್ಯಕ್ತಿಗಳನ್ನು ಜೀವನದಲ್ಲಿ ನೀವು ಮತ್ತೆ ಭೇಟಿಯಾಗಲು ಬಯಸಲ್ಲ. ಈ ವ್ಯಕ್ತಿಗಳು ದೀರ್ಘವಾಗಿ ನಮ್ಮ ಜೀವನದಲ್ಲಿ ಇರುವರು ಮತ್ತು ಕೆಲವೊಂದು ಧನಾತ್ಮಕವಾದ ಪರಿಣಾಮ ಕೂಡ ಬೀರುವರು. ಯಾಕೆಂದರೆ ಕೆಲವೊಂದು ಕೆಟ್ಟ ವ್ಯಕ್ತಿಗಳಿಂದಲೂ ಪಾಠ ಕಲಿಯಬಹುದಾಗಿದೆ. ಅವರು ನಿಮ್ಮನ್ನು ಮುಂದೆ ಸಾಗಲು ಬಿಡದೇ ಇದ್ದರೆ ಆಗ ಅವರು ಮುಂದೆ ಹೋಗಿ ನಿಮ್ಮನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ ಎಂದು ಹೇಳಬಹುದು. ನಿಮಗೂ ಇಂತಹ ವ್ಯಕ್ತಿಗಳು ಜೀವನದಲ್ಲಿ ಸಿಕ್ಕಿದ್ದಾರೆಯಾ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಲು ಮರೆಯಬೇಡಿ.



Click it and Unblock the Notifications











