For Quick Alerts
ALLOW NOTIFICATIONS  
For Daily Alerts

ಮಹಿಳೆಯ ರಾಶಿಚಕ್ರ ಗೊತ್ತಿದ್ದರೆ ಸಾಕು, ಆಕೆಯ ರಹಸ್ಯ ಗುಣಗಳನ್ನು ಅರಿಯಬಹುದು

|

ತಾಯಿಯಾಗಿ, ಸಹೋದರಿಯಾಗಿ, ಅಜ್ಜಿಯಾಗಿ, ಪತ್ನಿಯಾಗಿ, ಸ್ನೇಹಿತೆಯಾಗಿ, ಮಗಳಾಗಿ ತನ್ನ ಸ್ಥಾನಕ್ಕೆ ಸರಿಯಾಗಿ ಪ್ರೀತಿ ವಾತ್ಸಲ್ಯ ನೀಡುತ್ತಾ ಬಾಳುವವಳು ಮಹಿಳೆ. ಪ್ರತಿಯೊಬ್ಬ ಪುರುಷನ ಜೀವನ ಬೆಳಗುವವಳು ಮಹಿಳೆ. ಹಾಗಾಗಿ ಹಿಂದೂ ಧರ್ಮದಲ್ಲಿ ಮಹಿಳೆಗೆ ವಿಶೇಷವಾದ ಪವಿತ್ರ ಸ್ಥಾನವನ್ನು ನೀಡಲಾಗಿದೆ. ತನ್ನ ಜೀವನದ ಒಂದೊಂದು ಹಂತದಲ್ಲಿಯೂ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಒಂದು ಕುಟುಂಬವನ್ನು ಬೆಳಗುವ ಶಕ್ತಿ ಅವಳು ಎನ್ನಬಹುದು. ಸೇವಕಿಯಾಗಿ, ಶಿಕ್ಷಕಿಯಾಗಿ, ಗುರುವಾಗಿ ಪ್ರೀತಿ ವಾತ್ಸಲ್ಯವನ್ನು ನೀಡುವ ಜೀವ ಅವಳು.

ಪ್ರತಿಯೊಬ್ಬ ಮಹಿಳೆಯಲ್ಲೂ ಮಾನಸಿಕವಾಗಿ ಕೆಲವು ರಹಸ್ಯ ಗುಣಗಳು ಅಥವಾ ವಿಲಕ್ಷಣ ಗುಣಗಳು ಇರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇವರ ಮಾನಸಿಕ ಸ್ಥಿತಿಯಲ್ಲಿರುವ ಕೆಲವು ಗುಣಗಳು ಅವರ ರಾಶಿಚಕ್ರಕ್ಕೆ ಅನುಗುಣವಾಗಿ ಇರುತ್ತದೆ ಎಂದು ಹೇಳಲಾಗುವುದು. ನೀವು ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದರೆ ನೀವು ನಿಮ್ಮ ಭಾವನೆಗಳಿಗೆ ಅನುಗುಣವಾಗಿ ಮಹಿಳೆಯನ್ನು ಆಯ್ಕೆಮಾಡಿಕೊಳ್ಳಬಹುದು. ಯಾರಲ್ಲಿ ಯಾವ ಬಗೆಯ ಮಾನಸಿಕ ಸ್ಥಿತಿ ಇರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಅರಿಯಿರಿ....

ಮೇಷ

ಮೇಷ

ಮೇಷ ರಾಶಿಯ ಮಹಿಳೆಯರು ಶಕ್ತಿಯುತರು ಹಾಗೂ ಭಾವೋದ್ರಿಕ್ತ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ಸಂತೋಷವಾಗಿರಬೇಕೆಂದರೆ ಸ್ವಾತಂತ್ರ್ಯ ಇರಬೇಕು ಎಂದು ಬಯಸುತ್ತಾಳೆ. ಮೇಷ ರಾಶಿಯ ಮಹಿಳೆಯರು ತಮ್ಮ ಸುತ್ತಲಿರುವ ಎಲ್ಲಾ ವಿಚಾರದಲ್ಲೂ ನಿಯಂತ್ರಣ ಹೊಂದಲು ಬಯಸುವರು. ಸ್ನೇಹಿತರು ಮತ್ತು ಕುಟುಂಬದ ವಿಚಾರಕ್ಕೆ ಬಂದಾಗ ಅವರು ತುಂಬಾ ನಿಷ್ಠಾವಂತರಾಗಿರುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಅವರು ವಿವಾಹವಾಗಲು ಸಿದ್ಧರಾಗಿರುವುದಿಲ್ಲ ಎಂದು ಹೇಳಬಹುದು.

ವೃಷಭ

ವೃಷಭ

ಈ ರಾಶಿಯ ಮಹಿಳೆಯರು ಭಾವನಾತ್ಮಕವಾಗಿ ಪ್ರಬಲವಾಗಿ ಹಾಗೂ ಸ್ವತಂತ್ರರಾಗಿರುತ್ತಾರೆ. ಇವರು ತಮ್ಮ ಜೀವನವನ್ನು ತಮ್ಮದೇ ಆದ ರೀತಿಯಲ್ಲಿ ನಡೆಸಲು ಬಯಸುತ್ತಾರೆ. ಈ ರಾಶಿಯ ಮಹಿಳೆಯ ವ್ಯಕ್ತಿತ್ವ ಹಾಗೂ ಮಾನಸಿಕ ಗುಣಗಳನ್ನು ಪರಿಶೀಲಿಸಿದಾಗ ಅತ್ಯುತ್ತಮ ಸ್ವಭಾವದವರು ಎಂದು ತೋರುತ್ತದೆ. ಇವರು ಸೃಜನಾತ್ಮಕ ಮತ್ತು ಕಲಾತ್ಮಕವಾಗಿ ಇರುತ್ತಾರೆ ಎಂದು ಹೇಳಲಾಗುವುದು.

ಮಿಥುನ

ಮಿಥುನ

ಈ ರಾಶಿಯ ಮಹಿಳೆಯರು ಅತ್ಯಂತ ಬುದ್ಧಿವಂತರು ಮತ್ತು ಓದಲು ಬಹಳ ಇಷ್ಟಪಡುವವರು ಎಂದು ಹೇಳಲಾಗುತ್ತದೆ. ಇತರ ರಾಶಿಚಕ್ರದವರಿಗೆ ಹೋಲಿಸಿದರೆ ಇವರು ಬಹು ಬೇಗ ಭಾವನಾತ್ಮಕವಾಗಿ ಬದಲಾವಣೆಗೆ ಒಳಗಾಗುತ್ತಾರೆ. ಹೊಸ ಭಾಷೆ ಅಥವಾ ಹೊಸ ಕೌಶಲ್ಯಗಳನ್ನು ಕಲಿಯಲು ಸದಾ ಸಿದ್ಧರಾಗಿರುತ್ತಾರೆ.

ಕರ್ಕ

ಕರ್ಕ

ಈ ರಾಶಿಯ ಮಹಿಳೆಯರು ಪ್ರೀತಿಯಿಂದ ಹಾಗೂ ಸ್ನೇಹಿತರಾಗಿಯೂ ಬಹಳ ಕಾಳಜಿಯನ್ನು ತೋರುತ್ತಾರೆ. ಇವರು ತಾವು ಮಾಡುವ ಕೆಲಸದಲ್ಲಿ ಪೋಷಣೆಯನ್ನು ತೋರುವರು. ಸಾಮಾನ್ಯವಾಗಿ ಶಾಂತವಾದ ಗುಣವನ್ನು ಹೊಂದಿರುತ್ತಾರೆ. ಜನರೊಂದಿಗೆ ಬೆರೆಯುವ ವಿಚಾರಕ್ಕೆ ಬಂದಾಗ ಸೂಕ್ಷ್ಮ ಮತ್ತು ಬಹಳ ಮುಜುಗರಕ್ಕೆ ಒಳಗಾಗುತ್ತಾರೆ ಎನ್ನಲಾಗುವುದು.

ಸಿಂಹ

ಸಿಂಹ

ಸೂರ್ಯನ ಚಿಹ್ನೆಯನ್ನು ಹೊಂದಿರುವ ಈ ರಾಶಿಚಕ್ರದ ಮಹಿಳೆಯರು ಪ್ರಶಂಸನೀಯ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಸ್ವತಂತ್ರರಾಗಿ ಇರಲು ಬಯಸುವ ಇವರು ಹೆಚ್ಚು ಆಕರ್ಷಣೀಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸಾರ್ವಜನಿಕ ವಲಯದಲ್ಲೂ ಹೆಚು ವಿಶ್ವಾಸವನ್ನು ಹೊಂದಿರುತ್ತಾರೆ. ಇರು ಸದಾ ತಾವೇ ಮುಖ್ಯ ವ್ಯಕ್ತಿಯಾಗಿರಬೇಕೆಂದು ಬಯಸುವರು.

ಕನ್ಯಾ

ಕನ್ಯಾ

ಈ ರಾಶಿಯ ಮಹಿಳೆಯರು ಅತ್ಯಂತ ಪ್ರಾಮಾಣಿಕ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ಸಮಾಜಕ್ಕೆ ಅಥವಾ ಜಗತ್ತಿಗೆ ಏನಾದರೂ ಒಳ್ಳೆಯದನ್ನು ಮಾಡಲು ಬಯಸುವರು. ಇವರು ಏನೇ ಮಾಡಿದರೂ ಬಹಳ ಸೂಕ್ಷ್ಮ ಮತ್ತು ಕ್ರಮಬ್ಧವಾಗಿರುತ್ತಾರೆ. ಅಲ್ಲದೆ ಅತ್ಯಂತ ಸಂಘಟಿತ ವ್ಯಕ್ತಿ ಗಳಾಗಿರುತ್ತಾರೆ.

ತುಲಾ

ತುಲಾ

ಇವರು ಸಮತೋಲಿತ ಮತ್ತು ಶಾಂತಿಯುತ ಜೀವನವನ್ನು ನಡೆಸಲು ಬಯಸುತ್ತಾರೆ. ಇವರಿಗೆ ಯಾರೂ ತಪ್ಪು ಮಾಡುವದು ಹಾಗೂ ಕಷ್ಟದಲ್ಲಿ ಇರುವುದನ್ನು ಬಯಸುವುದಿಲ್ಲ. ಎಲ್ಲರೂ ಸದಾ ಸಂತೋಷದಲ್ಲಿ ಇರಬೇಕು ಎಂದು ಬಯಸುತ್ತಾರೆ. ಕೆಲವು ಸಂದರ್ಭದಲ್ಲಿ ಇವರು ಒಂಟಿಯಾಗಿ ಅಥವಾ ಪ್ರತ್ಯೇಕವಾಗಿರಲು ಬಯಸುವರು. ಸರಿಯಾದ ಕೆಲಸ ಮಾಡುವಾಗ ತಾವು ಸುರಕ್ಷಿತವಾಗಿದ್ದೇವೆ ಎನ್ನುವ ಭಾವವನ್ನು ಹೊಂದಿರುತ್ತಾರೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಯ ಮಹಿಳೆಯರು ಸಾಮಾನ್ಯವಾಗಿ ಸ್ವತಂತ್ರರು ಹಾಗೂ ನಿರ್ಧಾರಿತ ವ್ಯಕ್ತಿಗಳು ಎಂದು ಹೇಳಲಾಗುವುದು. ಇವರು ಸಮತೋಲಿತ ಜೀವನವನ್ನು ನಡೆಸುತ್ತಾರೆ. ತಮ್ಮ ಜೀವನದ ಪ್ರತಿಯೊಂದು ಅಂಶವು ತೀವ್ರವಾದ ಬದಲಾವಣೆಯಲ್ಲಿ ಇರಬೇಕೆಂದು ಬಯಸುತ್ತಾರೆ. ಅತ್ಯುತ್ತಮ ಸಂವಹನಕಾರರಾದ ಇವರು ಒಳ್ಳೆಯ ನಾಯಕತ್ವ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು.

ಧನು

ಧನು

ಇವರು ಅತ್ಯಂತ ಕುತೂಹಲಕಾರಿ ಮಹಿಳೆಯಾಗಿರುತ್ತಾಳೆ. ಇವರು ತಮ್ಮ ಜೀವನದಲ್ಲಿ ತತ್ವ ಚಿಂತನೆಯ ದೃಷ್ಟಿಕೋನವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಸಾಧ್ಯವಾದಷ್ಟು ಮಟ್ಟಿಗೆ ತನ್ನ ಜೀವನದ ತರ್ಕವನ್ನು ಅನ್ವಯಿಸುತ್ತಿರುತ್ತಾರೆ. ಹೊಸದನ್ನು ಕಲಿಯುವ ಉತ್ಸಾಹದಲ್ಲಿರುತ್ತಾರೆ. ಜೊತೆಗೆ ತಾವು ಏನಾದರೂ ಮಾತನಾಡುವಾಗ ಯಾವುದೇ ಅಂಜಿಕೆಗೆ ಒಳಗಾಗುವುದಿಲ್ಲ ಎಂದು ಹೇಳಬಹುದು.

ಮಕರ

ಮಕರ

ಈ ರಾಶಿಯ ಮಹಿಳೆಯರು ಸದಾ ತಮ್ಮ ಗುರಿ ಸಾಧನೆಯ ಚಿಂತನೆಯನ್ನು ನಡೆಸುತ್ತಿರುತ್ತಾರೆ. ಅತ್ಯುತ್ತಮ ವಿಶ್ವಾಸ ಮಟ್ಟದಿಂದ ಶ್ರಮಪಟ್ಟು ದುಡಿಯುತ್ತಾರೆ. ಸಂಗಾತಿಯಾಗಿ ಅಥವಾ ಸ್ನೇಹಿತೆಯಾಗಿ ಪಾತ್ರ ನಿರ್ವಹಿಸುವಾಗ ಅತ್ಯಂತ ನಿಷ್ಠಾವಂತರು ಹಾಗೂ ಕಾಳಜಿಯನ್ನು ವಹಿಸುವರು ಎಂದು ಹೇಳಲಾಗುವುದು.

ಕುಂಭ

ಕುಂಭ

ಈ ಮಹಿಳೆಯರು ಸಾಕಷ್ಟು ಕಾಲ್ಪನಿಕ ಕನಸನ್ನು ಕಾಣುತ್ತಾರೆ. ಇವರು ಸಾಕಷ್ಟು ಸ್ವಾತಂತ್ರ್ಯವನ್ನು ಹೊಂದಿದ್ದಾಗ ಮಾತ್ರ ಹೆಚ್ಚು ಸಂತೋಷವಾಗಿ ಇರುತ್ತಾರೆ. ಇವರು ಅತ್ಯಂತ ಬುದ್ಧಿವಂತರು ಮತ್ತು ಸೃಜನಾತ್ಮಕ ಗುಣವನ್ನು ಹೊಂದಿದವರು ಎಂದು ಹೇಳಬಹುದು. ಹಣಕಾಸಿನ ಸ್ಥಿರತೆಗಾಗಿ ಹೆಚ್ಚು ಕಾಳಜಿಯನ್ನು ಹೊಂದದವರು ಎಂದು ಹೇಳಬಹುದು.

ಮೀನ

ಮೀನ

ಈ ರಾಶಿಯ ಮಹಿಳೆಯರು ಅತ್ಯಂತ ಪ್ರಬುದ್ಧರು ಹಾಗೂ ಅತ್ಯಾಧುನಿಕತೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಈ ರಾಶಿಯ ಮಹಿಳೆಯರಿಗೆ ಪ್ರಸ್ತುತ ಸ್ಥಿತಿಯಲ್ಲಿ ಹೇಗಿರಬೇಕು ಮತ್ತು ಮುಂದಿನ ಸಮಯದಲ್ಲಿ ಹೇಗಿರಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಅಗತ್ಯ ಇರುವ ವ್ಯಕ್ತಿಗಳಿಗೆ ಅತ್ಯುತ್ತಮ ಸಹಕಾರ ಹಾಗೂ ರಕ್ಷಣೆಯನ್ನು ನೀಡಬಲ್ಲವರಾಗಿರುತ್ತಾರೆ.

English summary

Common Traits of women Based On Zodiac sign

How well do you know the zodiac personality traits of women belonging to the 12 star signs? As each individual is blessed with a unique temperament, their sun sign too plays an important role in their overall development. Will the Aries woman make a good lover? Or is the Cancer female prone to mood swings? Let us find out how astrology interprets the zodiac traits of women from the 12 sun signs.
X
Desktop Bottom Promotion