Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇದರಲ್ಲಿರುವ ಯಾವುದಾದರೂ ಒಂದು ಆಕೃತಿ ಆಯ್ಕೆ ಮಾಡಿ, ನಿಮ್ಮ ವ್ಯಕ್ತಿತ್ವ ಹೇಳುವೆವು!
ಭೂಮಿ ಮೇಲಿರುವಂತಹ ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆಗಿರುವ ಇಷ್ಟಗಳಿರುವುದು. ಕೆಲವರಿಗೆ ಒಂದೊಂದು ರೀತಿಯ ಬಣ್ಣ, ಇನ್ನು ಕೆಲವರಿಗೆ ಆಹಾರ, ಫ್ಯಾಷನ್ ಇತ್ಯಾದಿಗಳು ಅವರವರ ಇಚ್ಛೆಗೆ ಅನುಸಾರವಾಗಿ ಆಯ್ಕೆ ಮಾಡಿಕೊಳ್ಳುವರು. ನಿಮ್ಮ ಪ್ರೀತಿಯ ಆಹಾರ ಮತ್ತು ಬಣ್ಣವು ವ್ಯಕ್ತಿತ್ವವನ್ನು ತಿಳಿಸುತ್ತದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಸಂಯೋಜಿತ ಹಾಗೂ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತಹವರು ತಿಳಿ ಬಣ್ಣ ಇಷ್ಟಪಡುವರು.
ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಯಲು ಇಲ್ಲಿ ಕೊಟ್ಟಿರುವ ಕೆಲವೊಂದು ಚಿತ್ರಗಳನ್ನು ನೀವು ಪ್ರಾಮಾಣಿಕವಾಗಿ ಆಯ್ಕೆ ಮಾಡಬೇಕು. ಅದರಿಂದ ನಿಮ್ಮ ವ್ಯಕ್ತಿತ್ವ ತಿಳಿಯಬಹುದು. ಚಿತ್ರದ ಬಣ್ಣ, ಅದರ ಗಾತ್ರ ಮತ್ತು ಆಕಾರವನ್ನು ಇಟ್ಟುಕೊಂಡು ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಬಹುದು...

ಉದಾರ ಹಾಗೂ ಪ್ರಾಮಾಣಿಕ
ಈ ಚಿತ್ರದ ಆಯ್ಕೆ ಮಾಡಿಕೊಂಡಿದ್ದರೆ ನೀವು ಜೀವನದಲ್ಲಿ ಪ್ರತಿಯೊಂದು ಅತ್ಯುತ್ತಮವಾಗಿರಬೇಕೆಂದು ಬಯಸುವಿರಿ ಮತ್ತು ನೀವು ಮಾಡುವ ಪ್ರತಿಯೊಂದು ಕೆಲಸಗಳಲ್ಲೂ ಅತ್ಯುತ್ತಮವಾಗಿರುದನ್ನೇ ಬಯಸುವಿರಿ. ನೀವು ಮಹಾತ್ವಾಕಾಂಕ್ಷೆ ಈಡೇರಿಸಿದರೂ ನಿಯಮಗಳಿಗೆ ಬದ್ಧರಾಗಿರುವಿರಿ. ನೀವು ತುಂಬಾ ಕಠಿಣ ಪರಿಶ್ರಮಿ, ಮಾತ್ರವಲ್ಲದೆ, ಬೇರೆಯವರಿಗೂ ಒಳ್ಳೆಯದನ್ನು ಮಾಡುವಿರಿ. ಕೆಲವೊಂದು ಸಲ ಜನರು ನಿಮ್ಮೊಂದಿಗೆ ಮಾತುಕತೆ ನಡೆಸಲು ಹೆದರುವರು. ಆದರೆ ಇದು ಮಾತ್ರ ನಿಮ್ಮ ವ್ಯಕ್ತಿತ್ವದ ದೊಡ್ಡ ಹಿನ್ನಡೆ. ನೀವು ತುಂಬು ಹೃದಯದಿಂದ ಪ್ರೀತಿಸುವಿರಿ, ಹೃದಯ ಮುರಿದರೂ ಇದನ್ನು ಮುಂದುವರಿಸುವಿರಿ. ನಿಮ್ಮಲ್ಲಿರುವ ಯಶಸ್ಸಿಗಾಗಿ ನೀವು ತುಂಬಾ ಕಠಿಣವಾಗಿ ಕೆಲಸ ಮಾಡಿದ್ದೀರಿ ಎಂದು ಒಪ್ಪಿಕೊಳ್ಳಲು ಬೇರೆಯವರಿಗೆ ತುಂಬಾ ಕಷ್ಟವಾಗುವುದು.

ಸಮ್ಮೋಹನಗೊಳಿಸುವ ಹಾಗೂ ನಿಷ್ಠ
ಜವಾಬ್ದಾರಿಗಳು ನಿಮಗೆ ಸ್ವಾಭಾವಿಕವಾಗಿ ಬಂದಿರುತ್ತದೆ. ನೀವು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಲ್ಲಿ ನಂಬಿಕೆಯನ್ನಿಟ್ಟವರು. ನೀವು ಕಟ್ಟು ಪಾಡುಗಳಲ್ಲಿ ಕೆಲವೊಂದು ಸಲ ಸಿಲುಕಿಹಾಕಿಕೊಳ್ಳುವಿರಿ. ಜನರು ನಿಮ್ಮ ಒಳ್ಳೆಯ ನಡವಳಿಕೆ ನೋಡಿಕೊಂಡು ಸಂಪೂರ್ಣವಾಗಿ ನಂಬುವರು. ಕಠಿಣ ಪರಿಶ್ರಮ ಪಡುವಂತಹ ಜವಾಬ್ದಾರಿಗಳನ್ನು ನೀವು ಹೆಚ್ಚಾಗಿ ಸ್ವೀಕರಿಸುವಿರಿ. ನೀವು ತುಂಬಾ ವೇಗವಾಗಿ ಚಿಂತಿಸಿ, ಅದರಂತೆ ನಿರ್ಧಾರ ತೆಗೆದುಕೊಳ್ಳುವಿರಿ. ನೀವೊಬ್ಬ ಒಳ್ಳೆಯ ವ್ಯಕ್ತಿ.

ಜಾಣ ಹಾಗೂ ವಿವೇಚನೆಯುಳ್ಳ
ನಿಮ್ಮ ತಲೆಯಲ್ಲಿರುವ ಕೆಲವೊಂದು ಆಲೋಚನೆಗಳು ನಿಮಗೆ ತುಂಬಾ ಹತ್ತಿರವಾಗಿರುವುದು. ನೀವು ಏಕಾಂಗಿಯಾಗಿ ಕುಳಿತುಕೊಂಡು ಹೊಸ ವಿಚಾರಗಳು ಹಾಗೂ ಸಿದ್ಧಾಂತಗಳ ಬಗ್ಗೆ ಯೋಚನೆ ಮಾಡುವಿರಿ. ನೀವು ತುಂಬಾ ಅಂತಮುರ್ಖಿಯಾಗಿರುವ ಕಾರಣದಿಂದಾಗಿ ನಿಮ್ಮಂತೆ ಇರುವ ವ್ಯಕ್ತಿಗಳೊಂದಿಗೆ ಹೆಚ್ಚಾಗಿ ಬೆರೆಯುವಿರಿ. ನೀವು ಯಾವತ್ತು ಸುಳ್ಳು ಹೇಳಲ್ಲ, ನೈತಿಕತೆ ಕಾಪಾಡಿಕೊಳ್ಳುವಿರಿ. ನಿಮಗೆ ಸರಿಯೆಂದು ಕಂಡು ಬಂದರೆ ಆಗ ಅದರ ವಿರುದ್ಧ ಎಷ್ಟೇ ಜನ ಇದ್ದರೂ ನೀವು ಅದನ್ನು ಬೆಂಬಲಿಸುವಿರಿ.

ಒಳನೋಟವುಳ್ಳ ಹಾಗೂ ಚಿಂತನಶೀಲ
ನಿಮ್ಮದು ತುಂಬಾ ವಿಭಿನ್ನ ವ್ಯಕ್ತಿತ್ವವಾಗಿರುವುದು. ಇದು ಅಂತಃಪ್ರಜ್ಞೆ ಹಾಗೂ ಅವಸರದ ಮಿಶ್ರಣ. ಇದರಿಂದಾಗಿ ಜನರಿಗೆ ನಿಮ್ಮನ್ನು ತಿಳಿದುಕೊಳ್ಳಲು ತುಂಬಾ ಕಷ್ಟವಾಗುವುದು. ಇಂತಹ ತಪ್ಪು ತಿಳುವಳಿಕೆಯಿಂದ ನಿಮಗೆ ತುಂಬಾ ನೋವಾಗುವುದು. ನಿಮ್ಮ ಕ್ರಿಯಾತ್ಮಕತೆ ಅಭಿವೃದ್ಧಿ ಪಡಿಸಲು ನಿಮಗೆ ವೈಯಕ್ತಿಕ ಸಮಯ ಬೇಕಾಗುವುದು. ಬೇರೆಯವರ ಜೀವನದ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳನ್ನು ನೀವು ಬೇಗನೆ ತಿಳಿದುಕೊಳ್ಳಲು ಶಕ್ತರು. ಇತರರಿಂದ ನೀವು ಗೌರವ ಬಯಸುವಿರಿ ಮತ್ತು ತುಂಬಾ ಭಾವನಾತ್ಮಕವಾಗಿರುವಿರಿ.

ಸ್ವಭರವಸೆ ಹಾಗೂ ಪ್ರಾಬಲ್ಯ
ಸ್ವತಂತ್ರ ಮನೋಭಾವ ಹೊಂದಿರುವಂತಹ ನೀವು ಜೀವನದಲ್ಲಿ ನಿಮ್ಮದೇ ಆಗಿರುವ ನಿಯಮಗಳು ಹಾಗೂ ನಿಮ್ಮೊಳಗಿನ ಮಾತನ್ನೇ ಕೇಳುವಿರಿ. ನಿಮ್ಮ ಕುಟುಂಬ ಹಾಗೂ ಇತರ ಪ್ರೀತಿಪಾತ್ರರರಿಗೆ ನೆರವು ನೀಡುವಲ್ಲಿ ನೀವು ಆಧಾರಸ್ಥಂಭವಾಗಿರುವಿರಿ. ಏನೇ ಆದರೂ ನಿಮ್ಮ ಕನಸುಗಳನ್ನು ಬೆನ್ನಟ್ಟುವಿರಿ. ನಿಮ್ಮ ಗುರಿ ಅಥವಾ ಕನಸನ್ನು ಮುಟ್ಟಲು ನೀವು ತುಂಬಾ ಆತ್ಮವಿಶ್ವಾಸದಿಂ ಇರುವಿರಿ. ಯಾಕೆಂದರೆ ಗುರಿಮುಟ್ಟುವ ಮಾರ್ಗ ನಿಮಗೆ ತಿಳಿದಿರುವುದು. ನೀವು ಬೇರೆಯವರಿಂದ ಕೂಡ ಪ್ರಾಮಾಣಿಕತೆ ನಿರೀಕ್ಷಿಸುವಿರಿ. ಸತ್ಯವನ್ನು ಎದುರಿಸುವ ಧೈರ್ಯ ನಿಮ್ಮಲ್ಲಿರುವುದು.

ವಿನಯಶೀಲ ಹಾಗೂ ಗ್ರಾಹ್ಯ
ನಿಮ್ಮ ಸುತ್ತಲಿನ ಜನರೊಂದಿಗೆ ಒಳ್ಳೆಯ ಸಂಬಂಧ ಬೆಳೆಸುವಲ್ಲಿ ನೀವು ತುಂಬಾ ನಿಪುಣರು. ನಿಮ್ಮ ಸುತ್ತಲು ಯಾವಾಗಲೂ ಸ್ನೇಹಿತರು ಸುತ್ತವರಿದಿರುವರು ಮತ್ತು ಅವರೇ ನಿಮ್ಮ ಜೀವನದ ಸಂತೋಷವಾಗಿರುವರು. ನೀವು ಯಾವಾಗಲೂ ಜನರಿಗೆ ನೆರವು ನೀಡಲು ಮುಂದೆ ಬರುವಿರಿ. ಇದರಿಂದ ಜನರು ನಿಮ್ಮನ್ನು ಸುತ್ತುವರಿದಿರುವರು. ನೀವು ಜೀವನದ ಪ್ರತಿಯೊಂದು ಮೂಲೆಯಿಂದಲೂ ಪ್ರೀತಿ ಬಯಸುವಿರಿ ಮತ್ತು ಬೇರೆಯವರು ನಿಮ್ಮಿಂದ ಪ್ರೀತಿ ಬಯಸಿದರೆ ಅದನ್ನು ನೀವು ನೀಡುವಿರಿ. ನೀವು ತುಂಬಾ ಅನನ್ಯ, ಅಂತರ್ದೃಷ್ಟಿಯುಳ್ಳ ಮತ್ತು ಆಸಕ್ತಿದಾಯಕ ವ್ಯಕ್ತಿ.

ವರ್ಚಸ್ವಿ ಹಾಗೂ ಸ್ವಯಂಪ್ರೇರಿತ
ನೀವು ಜೀವನದಲ್ಲಿ ತುಂಬಾ ಆನಂದ ಪಡೆಯುವಂತಹ ಅದೃಷ್ಟವಂತ ವ್ಯಕ್ತಿ. ನಿಮ್ಮಲ್ಲಿ ಜನರನ್ನು ನಗಿಸುವಂತಹ ಉಡುಗೊರೆಯಿದೆ. ನಿಮ್ಮ ಅತ್ಯುತ್ಸಾಹ ಹಾಗೂ ಸ್ವಯಂಪ್ರೇರಿತ ಗುಣ ನಿಮ್ಮನ್ನು ಇತರ ವ್ಯಕ್ತಿಗಳಿಗಿಂತ ಭಿನ್ನವಾಗಿಡುವುದು. ನೀವು ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸಿಕೊಂಡು ಹೋಗುವಿರಿ. ನಿಮ್ಮ ವ್ಯಕ್ತಿತ್ವವು ಬೇರೆಯವರ ಮೇಲೆ ಕೂಡ ಪರಿಣಾಮ ಬೀರುವುದು. ನಿಮ್ಮಲ್ಲಿ ಹೆಚ್ಚಿನ ಕುತೂಹಲ ಹಾಗೂ ಅಚ್ಚರಿಗಳಿರುವ ಕಾರಣದಿಂದಾಗಿ ನಿಮ್ಮೊಂದಿಗೆ ಜನರು ಇರುವರು. ನಿಮ್ಮ ಆಸಕ್ತಿದಾಯಕ ವಿಚಾರಗಳ ಬಗ್ಗೆ ಜ್ಞಾನ ಸಂಪಾದಿಸಲು ನೀವು ತುಂಬಾ ಇಷ್ಟಪಡುವಿರಿ.

ತೇಲುವ ಹಾಗೂ ಧನಾತ್ಮಕ
ಜೀವನ ಎನ್ನುವುದು ಒಂದು ಉಡುಗೊರೆ ಮತ್ತು ಅದನ್ನು ಆದಷ್ಟು ಬಳಸಿಕೊಳ್ಳಬೇಕೆಂದು ನೀವು ಇಚ್ಛಿಸುವಿರಿ. ನಿಮ್ಮ ಜೀವನವನ್ನು ಯಾವುದಾದರೂ ಸತ್ಕಾರ್ಯಕ್ಕೆ ಬಳಸಿಕೊಂಡು ಅದಕ್ಕೊಂದು ಅರ್ಥ ನೀಡುವಿರಿ. ನಿಮ್ಮ ಜೀವನ ಹಾಗೂ ಸಾಧನೆಗಳಿಂದ ನಿಮಗೆ ತುಂಬಾ ಹೆಮ್ಮೆಯೆನಿಸುವುದು. ಪ್ರೀತಿಪಾತ್ರರ ಎದುರು ನಿಮ್ಮ ಸಂತೋಷ ಹಾಗೂ ನೋವನ್ನು ತೋಡಿಕೊಳ್ಳಲು ಹಿಂಜರಿಯುವುದಿಲ್ಲ. ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಮುಂದೆ ದುಃಖ ಹಾಗೂ ಸಂತೋಷ ಹೇಳಿಕೊಳ್ಳುವಿರಿ. ಜೀವನದ ಬಗ್ಗೆ ನಿಮ್ಮ ನಡೆಯು ತುಂಬಾ ಆರೋಗ್ಯಕರವಾಗಿರುವುದು. ನಿಮ್ಮದು ಕ್ಷಮಿಸಿಬಿಡುವಂತಹ ಗುಣ ಹಾಗೂ ದ್ವೇಷ ಇಟ್ಟುಕೊಳ್ಳುವುದಿಲ್ಲ. ನಾಲ್ಕೇ ನಾಲ್ಕು ದಿನದ ಜೀವನ ಎಂದು ತಿಳಿದಿರುವ ನೀವು ಅದನ್ನು ಸಂಪೂರ್ಣವಾಗಿ ಬಳಸಿ, ವ್ಯಕ್ತಿಯಾಗಿ ಬೆಳೆಯಲು ಇಚ್ಛಿಸುವಿರಿ.



Click it and Unblock the Notifications











