Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ಚಿತ್ರದಲ್ಲಿರುವ ಚಂದ್ರನ ಆಯ್ಕೆ ಮಾಡಿ, ವ್ಯಕ್ತಿತ್ವ ತಿಳಿಯಿರಿ!
ವ್ಯಕ್ತಿತ್ವ ಪರೀಕ್ಷೆ ಮಾಡಲು ಹಲವಾರು ರೀತಿಯ ಪರೀಕ್ಷೆಗಳು ಇವೆ. ಇದರಲ್ಲಿ ಕೆಲವೊಂದು ನಮಗೆ ಅರ್ಥವಾಗದೆ ಇರಬಹುದು. ಇನ್ನು ಕೆಲವು ವ್ಯಕ್ತಿತ್ವನ್ನು ನಿಖರವಾಗಿ ಹೇಳಬಲ್ಲದು. ಈ ಲೇಖನದಲ್ಲಿ ನಿಮಗೆ ತುಂಬಾ ಕ್ರಿಯಾತ್ಮಕವಾಗಿರುವ ಪರೀಕ್ಷೆಯ ಮೂಲಕ ನೀವು ನಿರೀಕ್ಷಿಸದೆ ಇರುವ ವ್ಯಕ್ತಿತ್ವವನ್ನು ಹೇಳಿಕೊಡಲಿದ್ದೇವೆ.
ಒಂದು ಚಂದ್ರನನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಿಮ್ಮ ವ್ಯಕ್ತಿತ್ವದ ರಹಸ್ಯ ತಿಳಿಯಿರಿ. ಚಂದ್ರನ ಆಯ್ಕೆಯು ನಿಮ್ಮ ವ್ಯಕ್ತಿತ್ವದ ವಿವರಣೆ ಹೇಳಲಿದೆ ಮತ್ತು ಜೀವನದ ಬಗ್ಗೆ ನಿಮಗೆ ಕೆಲವು ಸಂದೇಶಗಳನ್ನು ನೀಡಲಿದೆ. ಯಾವುದೇ ಚಂದ್ರನನ್ನು ಆಯ್ಕೆ ಮಾಡಿ ಮತ್ತು ನಿಮ್ಮ ವ್ಯಕ್ತಿತ್ವ ತಿಳಿಯಲು ತಯಾರಾಗಿರಿ....

1.ನಿಮ್ಮ ಆಯ್ಕೆಯಾಗಿದ್ದರೆ…
ಒಂದು ನಿಮ್ಮ ಆಯ್ಕೆಯಾಗಿದ್ದರೆ ಆಗ ನೀವು ಗುರಿ ಸಾಧಿಸುವ ಸಾಮರ್ಥ್ಯ ಮತ್ತು ಯಶಸ್ಸನ್ನು ಪಡೆಯುವ ವ್ಯಕ್ತಿತ್ವ ಉಳ್ಳವರು ಎಂದು ಹೇಳಬಹುದು. ನೀವು ತುಂಬಾ ಚುರುಕು ಹಾಗೂ ಆಶಾವಾದಿ. ಇನ್ನೊಂದು ಬದಿಯಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಉತ್ತಮವಾಗಿರುವುದನ್ನು ನೀಡುವಿರಿ. ಯಾವುದೇ ಒತ್ತಡ ಪರಿಸ್ಥಿತಿಯಿಂದ ಹೊರಬರಲು ಆತ್ಮವಿಶ್ವಾಸವು ನಿಮಗೆ ನೆರವಾಗಲಿದೆ. ನೀವು ನಿಧಾನವಾಗಿ ಯಶಸ್ಸನ್ನು ಪಡೆಯಲು ತುಂಬಾ ಪರಿಶ್ರಮ ಪಡುವಿರಿ. ನಿಮ್ಮ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು ಮತ್ತು ಸರಿಯಾದ ರೀತಿ ಎಲ್ಲವೂ ಹೇಗೆ ಸಾಗಬಹುದು ಎಂದು ನೋಡಬೇಕು.

2 ನಿಮ್ಮ ಆಯ್ಕೆಯಾಗಿದ್ದರೆ…
ಎರಡು ನಿಮ್ಮ ಆಯ್ಕೆಯಾಗಿದ್ದರೆ ಆಗ ನೀವು ತುಂಬಾ ಕ್ರಿಯಾತ್ಮಕ ಹಾಗೂ ಗ್ರಾಹ್ಯ ಸ್ವಭಾವದ ವ್ಯಕ್ತಿಯಾಗಿರುವಿರಿ. ನಿಮ್ಮ ಸುತ್ತಲಿನ ಜನರು ನಿಮ್ಮ ತುಂಬಾ ಪ್ರಾಯೋಗಿಕವಾಗಿ ಪರಿಗಣಿಸಬಹುದು ಮತ್ತು ನಿಮ್ಮೊಂದಿಗೆ ಹೊಂದಿಕೊಂಡು ಹೋಗಬಹುದು. ಇನ್ನೊಂದು ಬದಿಯಲ್ಲಿ ನಿಮ್ಮ ಸ್ವಭಾವವು ತುಂಬಾ ಭಾವನಾತ್ಮಕವಾಗಿರುವುದು ಮತ್ತು ನಿಮ್ಮೊಂದಿಗೆ ಇರುವವರಿಗೆ ಯಾವಾಗಲೂ ನೆರವಾಗುವಿರಿ. ನೀವು ಸ್ವಲ್ಪ ಸಮಯ ವಿರಾಮ ಪಡೆಯಬೇಕು ಮತ್ತು ಅತಿಯಾದ ಭಾವನೆಗಳು ನಿಮ್ಮ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು. ಭಾವನೆಗಳು ಅತಿಯಾದರೆ ಆಗ ಅದು ನಿಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಬಹುದು.

3. ನಿಮ್ಮ ಆಯ್ಕೆ ಮೂರು ಆಗಿದ್ದರೆ…
ಇದು ನಿಮ್ಮ ಆಯ್ಕೆಯಾಗಿದ್ದರೆ ಆಗ ನೀವು ತುಂಬಾ ಶಕ್ತಿ ಹೊಂದಿರುವ ವ್ಯಕ್ತಿಯಾಗಿರುವಿರಿ ಮತ್ತು ಕೆಲವೊಂದು ಸಲ ಸಹನೆ ಕಳೆದುಕೊಳ್ಳುವಿರಿ. ವ್ಯಕ್ತಿಯಾಗಿ ನೀವು ಬಲವಾಗಿರುವಿರಿ. ಇನ್ನೊಂದು ಕಡೆಯಲ್ಲಿ ನೀವು ಜೀವನದಲ್ಲಿ ಮೋಸಕ್ಕೆ ಒಳಗಾಗುವ ಭೀತಿಯಲ್ಲಿರುವಿರಿ. ಇದರಿಂದಾಗಿ ನೀವು ಯಾವಾಗಲೂ ನಿಮ್ಮ ಪ್ರೀತಿಪಾತ್ರರ ಒಳ್ಳೆಯದನ್ನು ಬಯಸುವಿರಿ. ಇದನ್ನು ಹೊರತುಪಡಿಸಿ ನೀವು ಸ್ನೇಹಿತರ ಆಯ್ಕೆಯಲ್ಲಿ ತುಂಬಾ ಜಿಪುಣತನ ಮಾಡುವಿರಿ. ಇತರರಿಗೆ ಮಾಡಿರುವ ಒಳ್ಳೆಯ ಕೆಲಸಗಳನ್ನು ನೀವು ನೆನಪಿಸಿಕೊಳ್ಳುವಿರಿ ಮತ್ತು ಇದು ನಿಮಗೆ ಒಳ್ಳೆಯದು ಮಾಡಲಿದೆ ಎಂದು ನಿರೀಕ್ಷಿಸುವಿರಿ.

4. ನಿಮ್ಮ ಆಯ್ಕೆಯಾಗಿದ್ದರೆ…
ನಾಲ್ಕು ನಿಮ್ಮ ಆಯ್ಕೆಯಾಗಿದ್ದರೆ ಆಗ ನೀವು ತುಂಬಾ ಸೂಕ್ಷ್ಮ ಹಾಗೂ ಸಹಾನುಭೂತಿ ಹೊಂದಿರುವ ವ್ಯಕ್ತಿಯಾಗಿರುವಿರಿ. ವೈಯಕ್ತಿಕವಾಗಿ ನೀವು ಪ್ರೀತಿಪಾತ್ರರ ಬೇಡಿಕೆಗಳನ್ನು ಈಡೇರಿಸುವ ಆಕಾಂಕ್ಷೆ ಹೊಂದಿರುವಿರಿ ಮತ್ತು ಇದೇ ವೇಳೆ ಅವರ ಅನುಮತಿಗಾಗಿ ಕಾಯುವಿರಿ. ನಿಮ್ಮ ಬಗ್ಗೆ ಯೋಚಿಸುವ ಬದಲು ಇತರರ ಬಗ್ಗೆ ಹೆಚ್ಚಾಗಿ ಯೋಚಿಸುತ್ತೀರಿ. ನೀವು ನಿಮ್ಮನ್ನು ಸುಧಾರಿಸಲು ಕೆಲಸ ಮಾಡಬೇಕು ಮತ್ತು ಪರಿಪೂರ್ಣ ವ್ಯಕ್ತಿಯಾಗಲು ನೀವು ಪ್ರಯತ್ನಿಸಬೇಕು.

5. ನಿಮ್ಮ ಆಯ್ಕೆಯು 5 ಆಗಿದ್ದರೆ….
ಐದು ನಿಮ್ಮ ಆಯ್ಕೆಯಾಗಿದ್ದರೆ ಆಗ ನೀವು ವಿಶ್ರಾಂತಿಯಿಲ್ಲದೆ ಇರುವ ವ್ಯಕ್ತಿಯಾಗಿರುವಿರಿ ಮತ್ತು ಪ್ರತಿಯೊಂದು ವಿಚಾರವನ್ನು ಹುಡುಕಲು ಪ್ರಯತ್ನಿಸುವಿರಿ. ಇದು ನಿಮ್ಮ ನೈಜ ರೂಪವನ್ನು ಹೇಳುತ್ತದೆ. ವೈಯಕ್ತಿಕವಾಗಿ ನೀವು ಸಜ್ಜನ ಹಾಗೂ ಕುತೂಹಲಿ. ಇನ್ನೊಂದು ಬದಿಯಲ್ಲಿ ನೀವು ಪ್ರೀತಿಪಾತ್ರರಿಗಾಗಿ ಏನು ಬೇಕಾದರೂ ಮಾಡಬಲ್ಲಿರಿ. ನೀವು ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಒಳ್ಳೆಯ ಸಂವಹನ ನಡೆಸಲಿದ್ದೀರಿ. ಇದನ್ನು ಹೊರತುಪಡಿಸಿ, ನಿಮ್ಮ ತಲೆಯಲ್ಲಿ ಯಾವಾಗಲೂ ಆಲೋಚನೆಗಳು ಓಡುತ್ತಲಿರುವುದು ಮತ್ತು ಇದರಿಂದಾಗಿ ನೀವು ಬೇರೆಯವರಿಗಿಂತ ಭಿನ್ನವಾಗಿರುವಿರಿ.

6. ನಿಮ್ಮ ಆಯ್ಕೆಯಾಗಿದ್ದಲ್ಲಿ...
ನಿಮ್ಮ ಆಯ್ಕೆಯು ಆರು ಆಗಿದ್ದರೆ ನೀವು ಶಾಂತಿ ಬಯಸುವ ವ್ಯಕ್ತಿ. ಇದರಿಂದಾಗಿ ನೀವು ತುಂಬಾ ವಿಶಿಷ್ಠವಾಗಿರುವಿರಿ. ನೀವು ತುಂಬಾ ತಾಳ್ಮೆಯ ವ್ಯಕ್ತಿಯಾಗಿರುವಿರಿ. ಏನೇ ತಪ್ಪಾದರೂ ನೀವು ಶಾಂತಿಗೆ ಹೆಚ್ಚಿನ ಮೌಲ್ಯ ನೀಡುವ ಸ್ವಭಾವದವರು. ಬೇರೆಯವರು ಪ್ರಸಕ್ತ ಜೀವನದಲ್ಲಿನ ಸಂತೋಷವನ್ನು ಆನಂದಿಸುತ್ತಿದ್ದರೆ, ನೀವು ಮಾತ್ರ ಭವಿಷ್ಯದ ಬಗ್ಗೆ ಆಲೋಚನೆಯಲ್ಲಿರುವಿರಿ.



Click it and Unblock the Notifications
