Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
“R” ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳ ಎಂಟು ಗುಣಲಕ್ಷಣಗಳು
ನಮಗೆಲ್ಲರಿಗೂ ನಮ್ಮ ಅಂತರ್ಗತ ಗುಣಗಳನ್ನು ಕಂಡುಕೊಳ್ಳುವ ಅವ್ಯಕ್ತ ಬಯಕೆ ಇದ್ದೇ ಇರುತ್ತದೆ. ನಮ್ಮ ದೈಹಿಕ ಲಕ್ಷಣಗಳಿಂದ ಹಿಡಿದು ನಮ್ಮ ಹೆಸರಿನ ಇತಿಹಾಸ ಅಥವಾ ಅರ್ಥವನ್ನು ಅರಿತುಕೊಳ್ಳುವ, ಇತರರು ತಮ್ಮ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನೂ ಅರಿತುಕೊಳ್ಳಲು ಕುತೂಹಲಿಗಳಾಗಿರುತ್ತಾರೆ. ಇಂದಿನ ಲೇಖನದಲ್ಲಿ 'ಆರ್' ಅಥವಾ (R) ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳ ಗುಣಲಕ್ಷಣಗಳನ್ನು ಅರಿತುಕೊಳ್ಳಲು ಕೆಲವು ಅಮೂಲ್ಯ ಮಾಹಿತಿಗಳನ್ನು ಒದಗಿಸಲಾಗಿದೆ. ಬನ್ನಿ, ಒಂದು ವೇಳೆ ನಿಮ್ಮ ಹೆಸರು ಈ ಅಕ್ಷರದಿಂದ ಪ್ರಾರಂಭವಾಗಿದ್ದರೆ ನಿಮ್ಮ ಬಗ್ಗೆ ನೀವು ತಿಳಿದಿರದ ಮಾಹಿತಿಗಳು ನಿಮ್ಮನ್ನು ಚಕಿತಗೊಳಿಸಬಹುದು.
ಸಾಮನ್ಯವಾಗಿ ಒಂದು ಹೆಸರು ಸ್ಥೂಲವಾಗಿ ಒಂದು ಅಂಕೆಯನ್ನು ಪ್ರತಿನಿಧಿಸುತ್ತದೆ ಹಾಗೂ ಈ ಅಂಕೆ ವ್ಯಕ್ತಿಯ ಮುಖ್ಯ ಗುಣಲಕ್ಷಣವನ್ನು ತಿಳಿಸುತ್ತದೆ ಎಂದು ನಿಮಗೆ ಗೊತ್ತಿತ್ತೇ? ಹೌದು. ಅಲ್ಲದೇ ನಮ್ಮ ಹೆಸರಿನ ಮೊದಲ ಅಕ್ಷರ ನಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತದೆ. ಬನ್ನಿ, ಆರ್ ಅಕ್ಷರಿಂದ ಪ್ರಾರಂಭವಾಗುವ ಹೆಸರಿರುವ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....

ಆರ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳು.....
ಸಂಖ್ಯಾಶಾಸ್ತ್ರದ ಪ್ರಕಾರ ಈ ವ್ಯಕ್ತಿಗಳು ಸದ್ಗುಣಶೀಲ, ಪ್ರಬಲ ಹಾಗೂ ಸುಲಭವಾಗಿ ಒಗ್ಗಿಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ಇವರು ಸುಲಭವಾಗಿ ಸ್ನೇಹಿತರನ್ನು ಸಂಪಾದಿಸುತ್ತಾರೆ. ಇವರು ಪ್ರೀತಿಯನ್ನು ಶ್ಲಾಘಿಸುವವರಾಗಿದ್ದು ಇವರನ್ನು ಈ ಗುಣಕ್ಕಾಗಿಯೇ ಇತರರು ಇಷ್ಟಪಡುತ್ತಾರೆ.

ಇವು ಹಣವನ್ನೇನೋ ಸಂಪಾದಿಸುತ್ತಾರೆ, ಆದರೆ...
ಈ ವ್ಯಕ್ತಿಗಳು ಸಾಕಷ್ಟು ಹಣವನ್ನೇನೋ ಸಂಪಾದಿಸುತ್ತಾರೆ. ಆದರೆ ಇನ್ನೊಂದು ಕಡೆಯಿಂದ ಹಣಕಾಸಿನ ನಿರ್ವಹಣೆಯಲ್ಲಿ ಇವರು ಸೋಲುವ ಕಾರಣ ಸದಾ ಹಣದ ಮುಗ್ಗಟ್ಟನ್ನು ಎದುರಿಸುತ್ತಾರೆ. ಇದೇ ಕಾರಣದಿಂದ ಈ ವ್ಯಕ್ತಿಗಳು ಕೆಲವೊಮ್ಮೆ ಥಟ್ಟನೇ ಹಣದ ನಷ್ಟವನ್ನೂ ಅನುಭವಿಸುತ್ತಾರೆ. ಹಾಗಾಗಿ ಈ ವ್ಯಕ್ತಿಗಳು ಯಾವುದೇ ಹಣಕಾಸಿನ ಹೂಡಿಕೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಇವರು ನೈಸರ್ಗಿಕ ಅಧಿಕಾರವಾಣಿ ಹೊಂದಿರುತ್ತಾರೆ
ಇವರು ನೈಸರ್ಗಿಕ ಅಧಿಕಾರಯುತ ಧ್ವನಿಯನ್ನು ಹೊಂದಿದ್ದು ತಮ್ಮ ಮಾತುಗಳಿಂದ ಇತರರನ್ನು ತಮ್ಮ ಚರ್ಚೆಯ ವಲಯದಲ್ಲಿ ಸುಲಭವಾಗಿ ಒಳಗೊಳ್ಳುವಂತೆ ಮಾಡುತ್ತಾರೆ. ಈ ಗುಣದಿಂದಾಗಿ ಇವರು ಸುಲಭವಾಗಿ ಸ್ನೇಹಿತರನ್ನು ಗಳಿಸುತ್ತಾರೆ. ಆದರೆ ಕೆಲವೊಮ್ಮೆ ಇವರನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವುದು ಇತರರಿಗೆ ಅಷ್ಟು ಸುಲಭವಾಗದ ಕಾರಣ ಗಳಿಸಿದ ನಂಬಿಕೆಯನ್ನು ಉಳಿಸಿಕೊಳ್ಳಲು ವಿಫಲರಾಗುತ್ತಾರೆ.

ಇವರು ನಿಗೂಢ ವ್ಯಕ್ತಿಗಳೂ ಆಗಿರುತ್ತಾರೆ
ಹೆಚ್ಚಿನ ಸಂದರ್ಭಗಳಲ್ಲಿ ಇವರು ನಿಗೂಢರಾಗಿ, ಇತರರ ಕುತೂಹಲಕ್ಕೆ ಕಾರಣರಾಗುತ್ತಾರೆ. ಪರಿಣಾಮವಾಗಿ ಇತರರು ಇವರ ಬಗ್ಗೆ ಇಲ್ಲದ್ದನ್ನು ಕಲ್ಪಿಸಿಕೊಂಡು ಸುಳ್ಳುಸುದ್ದಿ ಹರಡಬಹುದು. ಇನ್ನೊಂದು ಕಡೆಯಿಂದ ನೋಡಿದರೆ ಇವರು ನೇರವಾಗಿ, ಸ್ಪಷ್ಟ ಮಾತುಗಳಿಂದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವವರೂ ಆಗಿರುತ್ತಾರೆ. ಅಲ್ಲದೇ ಇವರು ಉತ್ತಮ ವಾಗ್ಮಿಗಳೂ ಆಗಿರುತ್ತಾರೆ.

ಇವರು ವಾಸ್ತವದಲ್ಲಿ ಜೀವಿಸುತ್ತರೆ
ಈ ವ್ಯಕ್ತಿಗಳು ಕಲ್ಪನೆಗಿಂತ ವಾಸ್ತವಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡುವವರಾಗಿರುತ್ತಾರೆ. ಇವರು ತಾರ್ಕಿಕವಾಗಿ ಯೋಚಿಸುವ, ಎದುರಿನವರು ಹೇಳುವುದನ್ನು ಗಮನವಿಟ್ಟು ಕೇಳುವ, ಹೆಚ್ಚಿನ ಮಾಹಿತಿಗಳನ್ನು ಹೊಂದಿರುವ, ಇತರರ ಗೌರವ ಪಡೆಯುವ, ಜವಾಬ್ದಾರಿಯುತ ಹಾಗೂ ಉತ್ತಮ ಪ್ರೇಮಿಗಳೂ ಆಗಿರುತ್ತಾರೆ.

ಇವರು ವಿಶ್ವಾಸಾರ್ಹರೂ ಆಗಿರುತ್ತಾರೆ
ಇವರು ವಿಶ್ವಾಸವನ್ನು ಉಳಿಸಿಕೊಳ್ಳುವ, ಸಹಾನುಭೂತಿಯುಳ್ಳ ಹಾಗೂ ಮಮತಾಮಯಿಗಳೂ ಆಗಿರುತ್ತಾರೆ. ಆದರೆ ಮೊದಲು ಬಂದವನಿಗೇ ಸೀರುಂಡೆ ಎಂಬ ಪರಿಸ್ಥಿತಿ ಎದುರಾದಾಗ ಅಥವಾ ಸಾಮಾಜಿಕ ವಲಯದಲ್ಲಿ ಹೆಚ್ಚಿನ ಗಮನ ಸೆಳೆಯುವ ಅವಕಾಶ ಎದುರಾದರೆ ಎಲ್ಲರನ್ನೂ ಬಿಟ್ಟು ಮೊದಲು ತಲುಪಲು ದೌಡಾಯಿಸುತ್ತಾರೆ.

ಇವರು ಹಾಸ್ಯ ಪ್ರವೃತ್ತಿಯುಳ್ಳವರೂ ಆಗಿರುತ್ತಾರೆ
ಇವರು ತಮ್ಮ ಮಾತುಗಳಲ್ಲಿ ಹಾಸ್ಯವನ್ನು ಅಲ್ಲಲ್ಲಿ ಅಳವಡಿಸಿಕೊಂಡು ಎದುರಿನವರ ಮೊಗದಲ್ಲಿ ಮುಗುಳ್ನಗೆ ಮೂಡಿಸಲು ಸಫಲರಾಗುತ್ತಾರೆ. ಈ ಮೂಲಕ ಇವರು ಯಾವುದೇ ಕಠಿಣ ಸಂದರ್ಭವನ್ನು ಸುಲಭಪದಗಳಲ್ಲಿ ಹಾಗೂ ಕ್ಷಿಪ್ರ ಸಮಯದಲ್ಲಿ ಮನವರಿಕೆ ಮಾಡಿಸಿಕೊಡುವಲ್ಲಿ ಸಫಲರಾಗುತ್ತಾರೆ. ಇವರನ್ನು ಇತರರು ಅಷ್ಟು ಸುಲಭವಾಗಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ.

ಇವರು ತಮ್ಮ ಸ್ವಭಾವವನ್ನು ಬದಲಿಸಿಕೊಳ್ಳಲು ಸಿದ್ಧರಿರುತ್ತಾರೆ
ತಮ್ಮನ್ನು ತಾವೇ ಇನ್ನಷ್ಟು ಉತ್ತಮಪಡಿಸಲು ಇವರು ತಮ್ಮ ಸ್ವಭಾವಗಳನ್ನು ಬದಲಿಸಿಕೊಳ್ಳಲು ಸದಾ ಸಿದ್ಧರಿರುತ್ತಾರೆ. ಇವರು ತಮ್ಮ ಗುಣಲಕ್ಷಣಗಳಿಗೆ ಹೊಂದುವಂತಹ ಜೀವನಸಂಗಾತಿಯನ್ನೇ ಪಡೆಯಬಯಸುತ್ತಾರೆ. ಇನ್ನೊಂದು ಮಗ್ಗುಲಲ್ಲಿ, ಇವರು ತೆರೆದ ಮನಸ್ಸಿನ ವ್ಯಕ್ತಿಗಳಾಗಿದ್ದು ಸಂಗಾತಿಯ ಮನಗೆಲ್ಲುವ ಪ್ರಣಯಿಗಳೂ ಆಗಿರುತ್ತಾರೆ.



Click it and Unblock the Notifications