Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಡಜನ್ ಗಟ್ಟಲೆ ಪ್ರವಾಸಿಗರನ್ನು ಆಕರ್ಷಿಸಿರುವ ಥಾಯ್ಲೆಂಡ್ ನ ಗವಿಮಾನವ’!
ಕೆಲವರು ಜೀವನದಲ್ಲಿ ಸಂಗಾತಿಗಳೇ ಇಲ್ಲದೆ ಸಂಕಷ್ಟಪಡುತ್ತಿರುವರು. ಇನ್ನು ಕೆಲವರು ಹಲವಾರು ಮಂದಿಯನ್ನು ತುಂಬಾ ಸುಲಭವಾಗಿ ತಮ್ಮೊಂದಿಗೆ ಸುತ್ತಾಡಿಸಿಕೊಂಡು ಹೋಗುವರು. ಇದನ್ನು ನೋಡಿ ಬೇರೆಯವರು ನೊಂದುಕೊಳ್ಳುವುದು ಇದೆ. ಆದರೆ ಥಾಯ್ಲೆಂಡ್ ನ ಗವಿ ಮಾನವನೊಬ್ಬ ತಾನು ಹಲವಾರು ಮಂದಿ ಮಹಿಳೆಯರನ್ನು ಆಕರ್ಷಿಸಿದ್ದೇನೆ ಎಂದು ಹೇಳಿದ್ದಾನೆ. ಇದರಿಂದ ಈಗ ಪುರುಷರು ತುಂಬಾ ಅಸೂಯೆ ಪಟ್ಟುಕೊಳ್ಳುವಂತೆ ಆಗಿದೆ.

ಚಾಟೂಪ್ ಲಾಸಿರಿ ಎಂಬಾತನ ಕಥೆಯಿದು. ಆತನನ್ನು ಗವಿ ಮಾನವ' ನೆಂದು ಕರೆಯಲಾಗುತ್ತದೆ. ಆತನ ಜೀವನಶೈಲಿ ಬಗ್ಗೆ ನೀವು ತಿಳಿಯುತ್ತಾ ಹೋಗಿ.

ಚಾಟೂಪ್ ಲಾಸಿರಿ
ಚಾಟೂಪ್ ಲಾಸಿರಿ ಸ್ಥಳೀಯವಾಗಿ ಗವಿಮಾನವನೆಂದೇ ಪ್ರಸಿದ್ಧ. ಈತ ತನ್ನ ಜೀವನದ ಬಗ್ಗೆ ಕೆಲವು ಸಮಗ್ರ ಮತ್ತು ಚೌಕಟ್ಟು ಮೀರಿದ ದಾಖಲೆಯನ್ನು ನೀಡಲು ಆರಂಭಿಸಿದಾಗ ಮತ್ತಷ್ಟು ಜನಪ್ರಿಯನಾದ. ಕೊಹ ಫಂಗನ್ ಎನ್ನುವ ದ್ವೀಪದಲ್ಲಿ ಈತ ವಾಸಿಸುತ್ತಿದ್ದು, ಇಲ್ಲಿ ಹುಣ್ಣೆಮೆಯಂದು ಪಾರ್ಟಿಗಳು ನಡೆಯುತ್ತದೆ.

ಫೇಸ್ ಬುಕ್ ನಲ್ಲಿ ತನ್ನ ಫೋಟೊ ಹಂಚಿಕೊಂಡ
ರಷ್ಯಾದ ಮಹಿಳೆಯ ಜತೆಗೆ ಇರುವಂತಹ ತನ್ನ ಫೋಟೊವನ್ನು ಆತ ಫೇಸ್ ಬುಕ್ ನಲ್ಲಿ ಹಾಕಿದ. ಆಕೆಯನ್ನು ಆತ ಕಿರಾಣಿ ಅಂಗಡಿಯೊಂದರಲ್ಲಿ ಭೇಟಿಯಾಗಿದ್ದ. ನಗ್ನ ಮಹಿಳೆಯೊಬ್ಬಳ ಫೋಟವೊಂದನ್ನು ಆತ ಹಾಕಿದ್ದ. ಇದು ಆಕೆಯೇ ಆಗಿರಬೇಕೆಂದು ಜನರು ಭಾವಿಸಿದ್ದರು. ಬಳಿಕ ಆತ ತನ್ನ ಪ್ರೀತಿಯ ಬಗ್ಗೆ ವಿವರ ಹೊರಹಾಕಿದ ಮತ್ತು ಇದು ರಷ್ಯಾದ ಮಹಿಳೆಯಾಗಿರಲಿಲ್ಲ.

ಆತನಿಗೆ ಸಭ್ಯತೆಯಿಲ್ಲವೆಂದು ಸ್ಥಳೀಯರ ದೂರು
ಚಾಟೂಪ್ ಲಾಸಿರಿಗೆ ಸಭ್ಯತೆಯಿಲ್ಲವೆಂದು ಥಾಯ್ಲೆಂಡ್ ನ ಅಧಿಕಾರಿಗಳಿಗೆ ಸ್ಥಳೀಯರು ದೂರು ಸಲ್ಲಿಸಿದ ಬಳಿಕ ಆತನ ಮೇಲೆ ನಿಗಾ ಇರಿಸಲಾಗಿದೆ.

ಆತ ಯಾವುದೇ ಮಹಿಳೆಗೂ ಒತ್ತಾಯಿಸಿಲ್ಲ
ಚಾಟೂಪ್ ಲಾಸಿರಿ ಹೇಳುವ ಪ್ರಕಾರ ತನ್ನ ಗುಹೆಗೆ ಬರಬೇಕೆಂದು ತಾನು ಯಾವ ಮಹಿಳೆಗೂ ಒತ್ತಾಯಿಸಿಲ್ಲ. ಇಲ್ಲಿ ಮಹಿಳೆಯರು ಮಲಗಬೇಕೆಂದು ಕಡ್ಡಾಯವೇನಿಲ್ಲ. ಮಹಿಳೆಯರು ಹೀಗೆ ಮಾಡಬೇಕೆಂದು ಒತ್ತಾಯ ಮಾಡಿಲ್ಲ ಮತ್ತು ಕೆಲವೊಂದು ಸಲ ಸೆಕ್ಸ್ ಕೂಡ ನಡೆಸಿಲ್ಲ. ಕೆಲವೊಂದು ಸಲ ಬೆಳಗ್ಗಿನ ತನಕ ಅಪ್ಪಿಕೊಂಡು ಇರುತ್ತೇವೆ. ಅವರು ಸಂತೋಷವಾಗಿರುವರು ಮತ್ತು ನಾನು ಕೂಡ...

ಆತ ಯಾವುದೇ ಕಾನೂನು ಮುರಿದಿಲ್ಲ
ಪೊಲೀಸರ ಪ್ರಕಾರ ಚಾಟೂಪ್ ಲಾಸಿರಿ ಯಾವುದೇ ರೀತಿಯ ಕಾನೂನು ಮುರಿದಿಲ್ಲ. ಇದು ಮಹಿಳೆಯರಿಗೆ ತುಂಬಾ ಅನಿಶ್ಚಿತ ಹಾಗೂ ಅಪಾಯಕಾರಿಯಾಗಿರುವ ಕಾರಣ ನಾವು ನಿಗಾ ಇಡುತ್ತೇವೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.ಇದರ ಬಗ್ಗೆ ನಿಮ್ಮ ಅನಿಸಿಕೆಯೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications
