Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಭಾರೀ ಬೆಲೆ ಬಾಳುವ ವಜ್ರದ ಉಂಗುರ ನುಂಗಿದ ಟರ್ಕಿಯ ವ್ಯಕ್ತಿ!
ಕಾನೂನು ಬಾಹಿರವಾಗಿ ಕೆಲಸ ಮಾಡುವಂತಹ ಜನರು ಮಾದಕವಸ್ತು, ಚಿನ್ನ ಹೀಗೆ ಬೇರೆ ಬೇರೆ ವಸ್ತುಗಳನ್ನು ವಿವಿಧ ರೀತಿಯ ಮಾರ್ಗಗಳಿಂದ ಸಾಗಾಟ ಮಾಡುವರು. ಅದರಲ್ಲೂ ಕೆಲವು ಜನರು ವಿದೇಶಗಳಿಂದ ಬರುವಾಗ ಬಂಗಾರ ಕಳ್ಳಸಾಗಾಣೆ ಮಾಡಲು ಬೇರೆ ಬೇರೆ ರೀತಿಯ ವಿಧಾನಗಳನ್ನು ಅನುಸರಿಸುವರು.ಚಿನ್ನವ್ನು ನುಂಗಿ, ಅದನ್ನು ದೇಹದ ಯಾವುದಾದರೂ ಭಾಗದಲ್ಲಿ ಇಟ್ಟುಕೊಂಡು, ಶೂ ಅಡಿಯಲ್ಲಿ, ಬ್ಯಾಗ್ ನಲ್ಲಿ ಇತ್ಯಾದಿಯಾಗಿ ಕಳ್ಳಸಾಗಾಣೆ ಮಾಡಲು ಪ್ರಯತ್ನಿಸುವರು. ಆದರೆ ಸಿಕ್ಕಿಬೀಳುವುದು ಖಚಿತ ಎಂದು ಇವರಿಗೆ ತಿಳಿದಿರುವುದಿಲ್ಲ. ಇಲ್ಲೊಬ್ಬ ವ್ಯಕ್ತಿಯು ವಜ್ರದ ಉಂಗುರವನ್ನು ನುಂಗಿ ಅದನ್ನು ಕದಿಯಲು ಪ್ರಯತ್ನಿಸಿದ್ದಾನೆ. ಇದು ಹೇಗೆ ಎಂದು ನೀವೇ ಓದುತ್ತಾ ಸಾಗಿ.....

ಟರ್ಕಿಯಲ್ಲಿ ಘಟನೆ ನಡೆದಿರುವುದು
ಇಯನ್ ಕ್ಯಾಂಪೆಲ್ ಎನ್ನುವ ವ್ಯಕ್ತಿಯು ಸುಮಾರು 30,000 ಪೌಂಡ್ ಬೆಲೆ ಬಾಳುವಂತಹ ವಜ್ರದ ಉಂಗುರವನ್ನು ಮುಗ್ಲ ಪ್ರಾಂತ್ಯದ ಮರ್ಮರಿಸ್ ಜಿಲ್ಲೆಯಲ್ಲಿ ಜ್ಯುವೆಲ್ಲರಿ ಅಂಗಡಿಯೊಂದರಿಂದ ಕದಿಯಲು ಪ್ರಯತ್ನಿಸಿದ್ದಾನೆ.

ಆತ ಉಂಗುರು ಕಿತ್ತುಕೊಂಡ
ಆ ವ್ಯಕ್ತಿಯು ಮೊದಲು ಉಂಗುರವನ್ನು ಕಿತ್ತುಕೊಂಡ ಬಳಿಕ ತನ್ನ ಕೈಯಲ್ಲಿ ಬಿಗಿಯಾಗಿ ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾನೆ.

ಆತ ನುಂಗಿದ
ಇಯನ್ ನ ವರ್ತನೆಯಿಂದ ಜ್ಯುವೆಲ್ಲರಿಯಲ್ಲಿನ ಸಿಬ್ಬಂದಿಗೆ ಸಂಶಯ ಬಂದಿದೆ. ಅವರು ಮೊದಲು ಅಂಗಡಿಯ ಬಾಗಿಲು ಮುಚ್ಚಿ, ಆತ ಹೊರಗೆ ಹೋಗದಂತೆ ತಡೆದರು. ಈ ವೇಳೆ ಆತ ಉಂಗುರ ನುಂಗಿದ.

ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು
ಇಯನ್ ಉಂಗುರು ನುಂಗಿರುವುದನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾನೆ. ಆದರೆ ಎಕ್ಸ್ ರೇ ವರದಿಯ ಪ್ರಕಾರ ಆತನ ಹೊಟ್ಟೆಯಲ್ಲಿ ಉಂಗುರ ಪತ್ತೆಯಾಗಿದೆ ಮತ್ತು ಇದರ ಬಳಿಕ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು. ನೈಸರ್ಗಿಕ ಕ್ರಿಯೆಯ ಮೂಲಕ ಉಂಗುರ ಮರಳಿ ಪಡೆಯಲು 24 ಗಂಟೆಗಳ ಕಾಲ ಕಾಯಬೇಕಾಯಿತು. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆಯೇನು? ಇಂತಹ ವಿಚಿತ್ರ ಸುದ್ದಿಗಳನ್ನು ಓದುತ್ತಲಿರಲು ನೀವು ಇದೇ ವಿಭಾಗದಲ್ಲು ಹುಡುಕಾಡುತ್ತಲಿರಿ.



Click it and Unblock the Notifications
