2018: ಈ ವರ್ಷದ ಮಕರ ರಾಶಿಯವರ ರಾಶಿ ಫಲ...

Posted By: hemanth
Subscribe to Boldsky

ಭೂಮಿ ಮೇಲಿರುವ ಪ್ರತಿಯೊಬ್ಬನಿಗೂ ತನ್ನ ಭವಿಷ್ಯ ಏನಾಗುತ್ತದೆ ಎಂದು ತಿಳಿಯುವ ಕಾತರ, ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ಹೊಸ ವರ್ಷ ಬಂದಾಗ ತನಗೆ ಈ ವರ್ಷ ಹೇಗಿರುತ್ತದೆ ಎನ್ನುವ ತವಕ ಪ್ರತಿಯೊಬ್ಬರಲ್ಲೂ ಎದ್ದು ಕಾಣುವುದು. ಭವಿಷ್ಯ ಹೇಗಿದೆ ಎಂದು ತಿಳಿದುಕೊಂಡರೆ ಅದರಿಂದ ಮುಂದೆ ಆಗಬಹುದಾದ ಕೆಲವೊಂದು ಘಟನೆಗಳನ್ನು ನಿಯಂತ್ರಿಸಬಹುದು ಅಥವಾ ತಡೆಯಬಹುದು. ಕೆಲವೊಂದು ಗ್ರಹಗತಿಗಳನ್ನು ಅಧ್ಯಯನ ಮಾಡಿಕೊಂಡು ಜೋತಿಷ್ಯ ಶಾಸ್ತ್ರ ಹೇಳಲಾಗುತ್ತದೆ.

ನೀವು ಹುಟ್ಟಿದ ರಾಶಿಗೆ ಅನುಗುಣವಾಗಿ ಭವಿಷ್ಯವನ್ನು ನುಡಿಯಲಾಗುವುದು. ಮಕರ ರಾಶಿಯವರಿಗೆ ಈ ವರ್ಷ ಯಾವ ರೀತಿ ಇರಲಿದೆ ಎನ್ನುವ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಮಕರ ರಾಶಿಯಲ್ಲಿನ ಗ್ರಹಗಳ ಸ್ಥಾನಮಾನ ಮತ್ತು ಚಂದ್ರನ ಚಲನೆಯನ್ನು ಆಧರಿಸಿಕೊಂಡು ಈ ಜೋತಿಷ್ಯಶಾಸ್ತ್ರ ಹೇಳಲಾಗಿದೆ. ಭೋ, ಜಾ, ಜಿ, ಜು, ಕಿ, ಖೋ, ಖೆ, ಗ, ಗಿ ಮುಂತಾದ ಹೆಸರಗಳನ್ನು ಒಳಗೊಂಡಿರುವವರು ಈ ರಾಶಿಯವರು. ಇದನ್ನು ತಿಳಿಯಲು ಮುಂದಕ್ಕೆ ಓದಿ.... 

ಕೌಟುಂಬಿಕ ಜೀವ

ಕೌಟುಂಬಿಕ ಜೀವ

ಶನಿ ದೇವರು ನಿಮ್ಮ ರಾಶಿಯಲ್ಲಿ ತೀರ್ಪನ್ನು ನೀಡುವ ಗ್ರಹದೊಂದಿಗೆ ರಾಶಿಯನ್ನು ಕೊಲ್ಲುವವರು. ನಿಮ್ಮ ರಾಶಿಯಲ್ಲಿ ಕುಳಿತುಕೊಂಡಿರುವ ಕಾರಣದಿಂದಾಗಿ ನೀವು ತುಂಬಾ ಎಚ್ಚರಿಕೆ ವಹಿಸಬೇಕು. ಶನಿ ದೇವರು 12ನೇ ಮನೆ(ನಷ್ಟದ ಮನೆ)ಗೆ ಪ್ರವೇಶಿಸಲಿರುವರು. ಇದರಿಂದಾಗಿ ನಿಮಗೆ ಆರೋಗ್ಯ ಹಾಗೂ ಸಂಪತ್ತಿನಲ್ಲಿ ನಷ್ಟವಾಗುವುದು. ಅನಗತ್ಯ ಖರ್ಚಿನಿಂದ ಆದಷ್ಟು ದೂರವಿರಬೇಕು. ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಿ. ವೈವಾಹಿಕ ಸಂಬಂಧವು ಸಂಕಷ್ಟಕ್ಕೆ ಸಿಲುಕುವುದು. ಪತ್ನಿಯ ಜತೆಗೆ ಜಗಳವಾಗುವ ಸಂಭವವಿದೆ. ನಿಮ್ಮ ಘನತೆ ಮತ್ತು ಕೋಪದಿಂದ ಹೀಗೆ ಆಗುವುದು. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ನಿಮ್ಮ ಕಿರಿಯ ಸೋದರನೊಂದಿಗೆ ವಾಗ್ವಾದ ಉಂಟಾಗಬಹುದು. ನಿಮ್ಮ ಕೋಪದ ಮೇಲೆ ಹಿಡಿತ ಸಾಧಿಸಿ ಮತ್ತು ಚರ್ಚೆಯಿಂದ ದೂರವಿರಿ. ನಿಮ್ಮ ಕಟುಮಾತುಗಳು ಕೆಲವೊಮ್ಮೆ ವಾಗ್ವಾದಕ್ಕೆ ಕಾರಣವಾಗಬಹುದು. ಪೋಷಕರ ಆರೋಗ್ಯವು ಸರಾಸರಿಯಾಗಿರಲಿದೆ. ಜಮೀನಿನಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ಆದರೆ ಅಕ್ಟೋಬರ್ ಬಳಿಕ ಮಾತ್ರ. ದುರಾದೃಷ್ಟ ನಿಮ್ಮ ಕಡೆಗೆ ಇರುವ ಕಾರಣ ಹೆಚ್ಚಿನ ಜಾಗೃತೆ ವಹಿಸಿಕೊಳ್ಳಿ.

ಆರೋಗ್ಯ

ಆರೋಗ್ಯ

ಆಡಳಿತ ಗ್ರಹ ಶನಿಯು ಆರೋಗ್ಯದ ಮೊದಲ ಮನೆಯಲ್ಲಿ ವಿರುದ್ಧ ಗತಿಯಲ್ಲಿರುವ ಕಾರಣದಿಂದಾಗಿ ಈ ವರ್ಷ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ನೀವು ಈ ವರ್ಷ ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ. ಈ ಸಮಯದಲ್ಲಿ ನೀವು ಮಾನಸಿಕ ಹಾಗೂ ದೈಹಿಕವಾಗಿ ತುಂಬಾ ಬಲಿಷ್ಠರಾಗಬೇಕು. ಉತ್ತಮ ಆರೋಗ್ಯಕ್ಕಾಗಿ ಪ್ರತಿನಿತ್ಯ ಯೋಗ ಮಾಡಿ. ನಿಮಗೆ ಬಾಯಿ ಅಥವಾ ಹಲ್ಲಿನ ರೋಗ ಕಾಣಿಸಿಕೊಳ್ಳಬಹುದು. ನಿಮಗೆ ದೃಷ್ಟಿ ದೋಷವು ಕಾಡಬಹುದು. ಇದನ್ನು ನೀವು ಕಡೆಗಣಿಸಬೇಡಿ. ಯಾಕೆಂದರೆ ಇದರಿಂದ ನೀವು ಕಣ್ಣು ಕಳೆದುಕೊಳ್ಳಬಹುದು. ಆದಷ್ಟು ವಿಶ್ರಾಂತಿ ಪಡೆಯಿರಿ ಮತ್ತು ಆರೋಗ್ಯಕರ ಆಹಾರ ಕ್ರಮ ಪಾಲಿಸಿ.

ಸಂಪತ್ತು

ಸಂಪತ್ತು

ಹಣದ ವಿಚಾರಕ್ಕೆ ಸಂಬಂಧಿಸಿದಂತೆ ನೀವು ತುಂಬಾ ಎಚ್ಚರಿಕೆ ವಹಿಸಬೇಕು. ಆಡಳಿತ ಮಾಡುವಂತಹ ಶನಿಯು 12ನೇ ಸ್ಥಾನದಲ್ಲಿ ನೆಲೆಯಾಗಿದ್ದಾನೆ ಮತ್ತು ಸಂಪತ್ತಿನ 2ನೇ ಮನೆಯಲ್ಲಿ ಹಿಮ್ಮುಖವಾಗಿದ್ದಾನೆ. ಇದರಿಂದ ನಿಮಗೆ ನಷ್ಟ ಸಂಭವಿಸಲಿದೆ. 7 ಮತ್ತು 1ನೇ ಮನೆಯಲ್ಲಿ ಕ್ರಮವಾಗಿ ರಾಹು ಮತ್ತು ಕೇತು ನೆಲೆಸಿರುವ ಕಾರಣದಿಂದ ನಿಮ್ಮ ಆರ್ಥಿಕ ಸ್ಥಿತಿಯು ತುಂಬಾ ಕೆಟ್ಟದಾಗಿರಲಿದೆ. ನೀವು ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

ವೃತ್ತಿ/ಉದ್ಯೋಗ

ವೃತ್ತಿ/ಉದ್ಯೋಗ

ನಿಮ್ಮ ವೃತ್ತಿ ಹಾಗೂ ಉದ್ಯೋಗದಲ್ಲಿ ಭಾರೀ ಏರಿಳಿತ ಕಂಡುಬರಲಿದೆ. ನಿಮಗೆ ವರ್ಗಾವಣೆಯಾಗುವ ಸಾಧ್ಯತೆಯು ಇದೆ. ನೀವು ಹೊಸ ಕೆಲಸ ಹುಡುಕುತ್ತಾ ಇದ್ದರೆ ಇದು ವಿಳಂಬವಾಗಬಹುದು. ವರ್ಷದ ಕೊನೆಯ ಭಾಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಈ ಸಮಯದಲ್ಲಿ ನಿಮಗೆ ಭಡ್ತಿಯಾಗಲಿದೆ. ಗ್ರಹದೋಷಗಳನ್ನು ಪರಿಹರಿಸುವ ಮೂಲಕ ನೀವು ಈ ವರ್ಷ ಸ್ವಲ್ಪ ಮಟ್ಟಿನ ಲಾಭ ಪಡೆಯಬಹುದು.

ವ್ಯಾಪಾರ

ವ್ಯಾಪಾರ

ಶನಿ ದೇವರು 12ನೇ ಸ್ಥಾನದಲ್ಲಿದ್ದಾರೆ. ಇದರಿಂದ ನಿಮ್ಮ ವ್ಯಾಪಾರದಲ್ಲಿ ಖಂಡಿತವಾಗಿಯೂ ನಷ್ಟವಾಗಲಿದೆ. ಜತೆಗಾರಿಕೆಯ ವ್ಯಾಪಾರದಲ್ಲಿ ನಿಮ್ಮ ಜತೆಗಾರನು ನಿಮಗಿಂದ ಅದೃಷ್ಟವಂತನಾಗುವನು ಮತ್ತು ಹೆಚ್ಚು ಲಾಭ ಪಡೆಯುವನು.

ಪ್ರೀತಿಯ ಜೀವನ

ಪ್ರೀತಿಯ ಜೀವನ

ನಿಮ್ಮ ಪ್ರೀತಿಯ ಜೀವನವು ಈ ವರ್ಷ ತುಂಬಾ ಚೆನ್ನಾಗಿರಲಿದೆ. ನಿಮ್ಮ ಹಿಂದಿನ ಪ್ರೀತಿ ಅಥವಾ ಗೆಳೆಯ ನಿಮ್ಮಿಂದ ದೂರವಾಗುವನು.

ಜ್ಯೋತಿಷಿಗಳ ಸಲಹೆ

ಜ್ಯೋತಿಷಿಗಳ ಸಲಹೆ

ನಿಮ್ಮ ಗ್ರಹದ ಅಧಿಪತಿ ಶನಿ ದೇವರನ್ನು ನೀವು ಆದಷ್ಟು ಪೂಜಿಸಬೇಕು. `ದಶ್ರತ್ ಸಕ್ರೆ ದಶರಾನಿ ಸೋತ್ರಂ' ಪಠಿಸಿದರೆ ನಿಮಗೆ ತುಂಬಾ ಪರಿಣಾಮಕಾರಿ. ಹಾಲಿನಿಂದ ಮಾಡುವಂತಹ ಹವನದ ವೇಳೆ ದುರ್ಗಾ-ಸರಸ್ವತಿ ಪಾಠವನ್ನು ಪಠಿಸಬೇಕು. ಕಪ್ಪು ಕುದುರೆಯ ಕೂದಲಿನಿಂದ ಮಾಡಿದ ಉಂಗುರ ಧರಿಸಿದರೆ ನಿಮಗೆ ಅದೃಷ್ಟ. ನಿಮ್ಮ ದೇಹದಲ್ಲಿ ಅನಾರೋಗ್ಯ ಉಂಟುಮಾಡುವ ಆಹಾರದಿಂದ ದೂರವಿರಿ. ಪ್ರಾಮಾಣಿಕತೆಯಿಂದ ಮಾಡುವಂತಹ ಯಾವುದೇ ಕೆಲಸವು ನಿಮಗೆ ಹಲವಾರು ಲಾಭ ಉಂಟು ಮಾಡುವುದು.

ಜೋತಿಷ್ಯ ಸಲಹೆ

ಜೋತಿಷ್ಯ ಸಲಹೆ

ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ ನೀವು ಭವಿಷ್ಯದಲ್ಲಿ ಬದಲಾವಣೆ ಕಾಣಬಹುದು. ನೀವು ಹೆಚ್ಚೆಚ್ಚು ಒಳ್ಳೆಯ ಕೆಲಸ ಮಾಡಿದಂತೆ ನಿಮಗೆ ಅದರಿಂದ ಲಾಭವಾಗುವುದು ಮತ್ತು ಎಲ್ಲವೂ ನಿಮ್ಮ ಪರವಾಗಿ ಕೆಲಸ ಮಾಡಲಿದೆ. ಲಾಭ ಪಡೆದುಕೊಳ್ಳಲು ನೀವು ಆದಷ್ಟು ಒಳ್ಳೆಯ ಕೆಲಸ ಮಾಡಿ.

English summary

Capricorn Horoscope 2018

It's the advent of the New Year and you must be bombarded with the yearly horoscopes on every reading material you put your hands on. That's because all of us would like to know what the New Year brings for us. Humans are ever curious to know about the future. We have an innate need to know the things that will happen in our lives and also have the desire to have control over them.