Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಕಿಕ್ ಏರಿಸಲು ಸ್ಯಾನಿಟರಿ ಪ್ಯಾಡ್ ಅನ್ನು ಕುದಿಸುವರು!
ಕಿಕ್(ನಶೆ) ಏರಿಸಿಕೊಳ್ಳಲು ಹೊಸ ಹೊಸ ವಿಧಾನಗಳನ್ನು ನಶೆಯ ಚಟಕ್ಕೆ ಒಳಗಾಗಿರುವ ಇಂದಿನ ಯುವಜನತೆ ಕಂಡುಕೊಳ್ಳುವರು. ನಾವು ಸಾಮಾನ್ಯವಾಗಿ ಕೆಮ್ಮಿಗೆ ಬಳಸುವ ಸಿರಫ್, ನೋವು ನಿವಾರಕಗಳು ಹೀಗೆ ಹಲವಾರು ರೀತಿಯಿಂದ ನಶೆ ಏರಿಸಿಕೊಳ್ಳುವರು. ಇಂತಹ ಸಾಲಿಗೆ ಇಂಡೋನೇಶಿಯಾದ ಯುವಜನತೆಯು ಸೇರಿದ್ದಾರೆ.

ಅಲ್ಲಿ ಈಗ ಸ್ಯಾನಿಟರಿ ಪ್ಯಾಡ್ ಗಳನ್ನು ಕುದಿಸಿ, ನಶೆ ಏರಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಇದು ತುಂಬಾ ವಿಚಿತ್ರವೆಂದು ನಮಗನಿಸಿದರೂ ವಿಶ್ವದೆಲ್ಲೆಡೆ ಇದು ಕಾಡ್ಗಿಚ್ಚಿನಂತೆ ಹಬ್ಬಿದೆ. ಸ್ಯಾನಿಟರಿ ಪ್ಯಾಡ್ ಗಳನ್ನು ಕುದಿಸುವ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ಇಂಡೋನೇಶಿಯಾದಲ್ಲಿ ಹೊಸ ಟ್ರೆಂಡ್ ಆಗಿದೆ. ಇದು ಹೇಗೆ ಎಂದು ನೀವು ತಿಳಿಯಿರಿ.

ರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ಘಟಕ ಹೇಳಿರುವಂತೆ…
ರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ಘಟಕವು ಹೇಳಿರುವಂತೆ ಇಂಡೋನೇಶಿಯಾದಲ್ಲಿ ಈ ಹೊಸ ವಿಧಾನವು ತುಂಬಾ ವೇಗವಾಗಿ ಹಬ್ಬುತ್ತಲಿದೆ. ಸ್ಯಾನಿಟರಿ ಪ್ಯಾಡ್ ಬಳಸಿಕೊಂಡು ನಶೆ ಏರಿಸಿಕೊಳ್ಳುವರು. ಸ್ಯಾನಿಟರಿ ಪ್ಯಾಡ್ ನಲ್ಲಿ ಇರುವಂತಹ ಕೆಲವೊಂದು ರಾಸಾಯನಿಕಗಳು ಹಾರುವ ಮತ್ತು ಭ್ರಮಾಲೋಕದ ಭಾವನೆಯನ್ನು ಉಂಟು ಮಾಡುವುದು.

ಹೊಸ ಹಾಗೂ ಬಳಸಿದ ಸ್ಯಾನಿಟರಿ ಪ್ಯಾಡ್‌ಗಳ ಬಳಕೆ
ಇಂಡೋನೇಶಿಯಾದ ಕೆಲವು ಮಂದಿ ಯುವಕರು ತುಂಬಾ ಅಗ್ಗವಾಗಿ ಹಾಗೂ ಕಾನೂನು ಬದ್ಧವಾಗಿ ನಶೆ ಏರಿಸಿಕೊಳ್ಳಲು ಹೊಸ ಹಾಗೂ ಬಳಸಿದ ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸಿಕೊಳ್ಳುವರು. ಕಸದ ಬುಟ್ಟಿಗಳಿಂದ ಬಳಸಿದ ಸ್ಯಾನಿಟರಿ ಪ್ಯಾಡ್ ಗಳನ್ನು ತೆಗೆದುಕೊಳ್ಳುವರು ಮತ್ತು ಇದನ್ನು ಕುದಿಯುವ ನೀರಿಗೆ ಹಾಕುವರು. ಹೊಸ ಪ್ಯಾಡ್ ಗಳನ್ನು ಕೂಡ ಹೀಗೆ ಮಾಡುವರು.

ಇದನ್ನು ತಯಾರಿಸುವುದು ಹೇಗೆ?
ಹದಿಹರೆಯದ ಯುವಕನೊಬ್ಬ ಇದನ್ನು ತಯಾರಿಸುವ ಬಗ್ಗೆ ತಿಳಿಸಿದ್ದಾನೆ. ಸ್ಯಾನಿಟರಿ ಪ್ಯಾಡ್ ನ್ನು ಮೊದಲು ವ್ರ್ಯಾಪರ್ ನಿಂದ ಹೊರಗೆ ತೆಗೆದು, ಬಳಿಕ ಇದನ್ನು ಸುಮಾರು ಒಂದು ಗಂಟೆ ಕಾಲ ಕುದಿಸಲಾಗುತ್ತದೆ. ಇದರ ಬಳಿಕ ತಣ್ಣಗಾಗಿಸಿಕೊಂಡು ಕುಡಿಯಲಾಗುತ್ತದೆ.

ಇದರ ರುಚಿ ಹೇಗಿರುವುದು?
ಈ ವಿಚಿತ್ರ ಪಾನೀಯದ ರುಚಿಯು ತುಂಬಾ ಕಹಿಯಾಗಿರುವುದು ಎಂದು ಹೇಳಿದ್ದಾರೆ. ಈ ಪಾನೀಯವನ್ನು ಅವರು ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ವೇಳೆ ಕುಡಿದು ನಶೆ ಏರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.



Click it and Unblock the Notifications
