Just In
Don't Miss
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Movies
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಸಲ್ಮಾನ್ ಖಾನ್!
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ವಿಕಿಪೀಡಿಯದಲ್ಲಿರುವ ಕೆಲವು ವಿಚಿತ್ರ ಪುಟಗಳು
ಏನಾದರೂ ಮಾಹಿತಿ ಬೇಕಾಗಿದ್ದರೆ ಆಗ ತಕ್ಷಣ ನಾವು ಹೋಗಿ ಹುಡುಕುವುದು ಇಂಟರ್ನೆಟ್ ನಲ್ಲಿ. ಇದರಲ್ಲಿ ನಮಗೆ ಬೇಕಾಗಿರುವಂತಹ ಹೆಚ್ಚಿನ ಮಾಹಿತಿಗಳು ಸಿಗುವುದು. ಆದರೆ ಇಲ್ಲಿ ಕೂಡ ಎಲ್ಲಾ ಮಾಹಿತಿಗಳು ಸರಿಯಾಗಿ ಇದೆ ಎಂದು ಹೇಳಲು ಬರುವುದಿಲ್ಲ. ಆದರೆ ಹೆಚ್ಚಿನವರು ನೆಚ್ಚಿಕೊಂಡಿರುವುದು. ವಿಕಿಪೀಡಿಯಾವನ್ನು. ಇದು ನಿಖರ ಹಾಗೂ ನಂಬಲಾರ್ಹ ಮಾಹಿತಿ ನೀಡುತ್ತದೆ ಎಂದು ನಂಬಲಾಗಿದೆ. ಆದರೆ ವಿಕಿಪೀಡಿಯಾವು ಕೆಲವೊಂದು ವಿಚಿತ್ರ ಮಾಹಿತಿಗಳನ್ನು ನೀಡುತ್ತಿದೆ ಎಂದರೆ ನೀವು ನಂಬಲೇಬೇಕು. ಯಾಕೆಂದರೆ ವಿಕಿಪೀಡಿಯಾದ ಕೆಲವೊಂದು ಪುಟಗಳು ತುಂಬಾ ವಿಚಿತ್ರವಾಗಿದೆ. ಇದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ಖಂಡಿತವಾಗಿಯೂ ನಿಮ್ಮ ನಿದ್ದೆ ಗೆಡಿಸುವುದರಲ್ಲಿ ಸಂಶಯವೇ ಇಲ್ಲ. ಈ ವಿಕಿಪೀಡಿಯಾದ ಪುಟಗಳು ಯಾವುದು ಎಂದು ನೀವು ಮುಂದೆ ಓದುತ್ತಾ ತಿಳಿಯಿರಿ.

ಮೋಸದ ಡಿಪ್ಲೊಮಾ ಹೊಂದಿರುವ ಪ್ರಾಣಿಗಳ ಪಟ್ಟಿಗಳು
ಇದನ್ನು ಓದಿಯೇ ನಿಮಗೆ ಆಘಾತವಾಗಿರಬಹುದು. ಇದು ವಿಕಿಪೀಡಿಯಾದ ತುಂಬಾ ವಿಚಿತ್ರ ಪುಟಗಳಲ್ಲಿ ಒಂದಾಗಿದೆ. ಮೋಸದ ಡಿಪ್ಲೊಮಾ ಹೊಂದಿರುವ ಪ್ರಾಣಿಗಳ ಪಟ್ಟಿ ಎನ್ನುವ ಹೆಸರಿನಲ್ಲಿ ಈ ಪುಟವಿದೆ. ಇದರಲ್ಲಿ ಮೋಸದಿಂದ ಡಿಪ್ಲೊಮಾ ಹೊಂದಿರುವಂತಹ ಕೆಲವೊಂದು ಪ್ರಾಣಿಗಳ ಪಟ್ಟಿಯನ್ನು ಇದರಲ್ಲಿ ನೀಡಲಾಗಿದೆ. ಇದರಲ್ಲಿ ಬೆಕ್ಕು ಹಾಗೂ ನಾಯಿಯು ಸೇರಿಕೊಂಡಿದೆ. ಇವುಗಳು ವ್ಯವಸ್ಥೆಗೆ ಮೋಸ ಮಾಡಿ ಹೇಗೆ ಡಿಪ್ಲೊಮಾ ಪಡೆದುಕೊಂಡಿವೆ ಎಂದು ಹೇಳಲಾಗಿದೆ. ನಿಮಗೆ ನಂಬಿಕೆ ಬರದೇ ಇದ್ದರೆ ಈ ಲಿಂಕ್ ಕ್ಲಿಕ್ ಮಾಡಿ.

ಕಪ್ಪು ಕಣ್ಣಿನ ಮಕ್ಕಳು
1950ರಿಂದಲೂ ಕಪ್ಪು ಕಣ್ಣಿನ ಮಕ್ಕಳ ಬಗ್ಗೆ ಕಥೆಯು ಅಸ್ತಿತ್ವದಲ್ಲಿದೆ. ಸುಮಾರು 6ರಿಂದ 16ನೇ ವಯಸ್ಸಿನ ಮಕ್ಕಳನ್ನು ಹೋಲುವಂತಹ ಕಪ್ಪು ಕಣ್ಣಿನ ಜೀವಿಗಳು ಎಂದು ನಂಬಲಾಗಿದೆ. ಇವರನ್ನು ಹೆಚ್ಚಾಗಿ ಮನೆಯ ಬಾಗಿಲುಗಳಲ್ಲಿ ತೋರಿಸಲಾಗುತ್ತದೆ. ಇದು ಕಲ್ಪನೆಯಾಗಿದ್ದರೂ ಇದರ ಬಗ್ಗೆ ವಿಕಿಪೀಡಿಯಾದಲ್ಲಿ ಜನರು ಪುಟವೊಂದನ್ನು ನಿರ್ಮಿಸಿದ್ದಾರೆ. ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿ.

ಹೆಸರಿಸದ ಆತ್ಮಹತ್ಯೆ
ಈ ಪುಟವನ್ನು ಅಧಿಕೃತವಾಗಿ ಲೈಲ್ ಸ್ಟೆವಿಕ್ ಎಂದು ಹೆಸರಿಡಲಾಗಿದೆ. ಇದು 2001ರಲ್ಲಿ ನಡೆದ ಹೆಸರಿಡದ ಆತ್ಮಹತ್ಯೆಯ ಕಥೆಯಾಗಿದೆ. ಹೋಟೆಲ್ ಒಂದರಲ್ಲಿ ಅಪರಿಚಿತ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಮತ್ತು ತನ್ನ ಗುರುತನ್ನು ಮರೆಮಾಚಲು ಆತ ಬೇರೆ ಹೆಸರನ್ನು ನೀಡುತ್ತಾನೆ. ಹೋಟೆಲ್ ನಲ್ಲಿ ರೂಮ್ ಮಾಡಿಕೊಂಡಿದ್ದ ವ್ಯಕ್ತಿಯ ಶವವು ಎರಡು ದಿನಗಳ ಬಳಿಕ ಪತ್ತೆಯಾಗುತ್ತದೆ. ಆತನ ಬಗ್ಗೆ ಯಾವುದೆ ಮಾಹಿತಿ ಇಲ್ಲದೆ ಇರುವ ಕಾರಣದಿಂದ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಆದರೆ ಆತನ ಡಿಎನ್ ಎಯನ್ನು ತೆಗೆದಿಡಲಾಗುತ್ತದೆ. 17 ವರ್ಷಗಳ ಬಳಿಕ ಆತನ ಡಿಎನ್ ಎ ಯು ಕುಟುಂಬವೊಂದಕ್ಕೆ ಸರಿಹೊಂದುತ್ತದೆ. ಕುಟುಂಬದವರು ಮಾತ್ರ ಆತ ಜೀವಂತವಾಗಿದ್ದನೆಂದು ನಂಬಿದ್ದರು. ಆತನ ಬಗ್ಗೆ ತಿಳಿಯಲು ಲಿಂಕ್ ಕ್ಲಿಕ್ ಮಾಡಿ...

ಪ್ರಾಣಿಗಳಲ್ಲೂ ವೇಶ್ಯಾವಾಟಿಕೆ
ಇದು ಪುಟಗಳು ಇದೆ ಎಂದು ತಿಳಿದರೆ ಆಗ ನಿಮಗೆ ಆಘಾತವಾಗಬಹುದು. ಪ್ರಾಣಿಗಳ ನಡುವಿನ ವೇಶ್ಯಾವಾಟಿಕೆಯನ್ನು ವ್ಯವಹಾರಿಕ ಸೆಕ್ಸ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಪೆಂಗ್ವಿನ್ ಗಳು ಕಲ್ಲಿಗಾಗಿ ಸೆಕ್ಸ್ ನ್ನು ಹಂಚಿಕೊಳ್ಳುತ್ತವೆ ಮತ್ತು ಚಿಂಪಾಜಿಗಳು ಆಹಾರಕ್ಕಾಗಿ ಸೆಕ್ಸ್ ಹಂಚಿಕೊಳ್ಳುತ್ತವೆ. ಪ್ರಾಣಿಗಳಲ್ಲಿ ನಡೆಯುವಂತಹ ವಿಚಿತ್ರ ಸೆಕ್ಸ್ ಗಾಗಿ ನೀವು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿಕೊಳ್ಳಿ.

ಜಿಪಿಎಸ್ ನಿಂದ ಸಾವು
ಈ ಪುಟವು ಜಿಪಿಎಸ್ ಅನ್ನು ಅನುಸರಿಸಿಕೊಂಡು ಹೋಗಿ, ಸಾವಿನ ಬಲೆಯಲ್ಲಿ ಸಿಲುಕಿದವರ ಬಗ್ಗೆ ಇದೆ. ಕೆಲವೊಂದು ವಿಚಿತ್ರ ಸಂದರ್ಭಗಳಲ್ಲಿ ಚಾಲಕನು ಬಂಡೆಗಳ ಮೇಲೆ ಕಾರು ಚಲಾಯಿಸುವಂತೆ ಮತ್ತು ಹೊಳೆಗೆ ಕಾರು ಚಲಾಯಿಸುವಂತೆ ಸೂಚಿಸಲಾಗುತ್ತಿತ್ತು. ಈ ವಿಚಿತ್ರ ಪುಟದ ಬಗ್ಗೆ ನೀವು ಲಿಂಕ್ ಕ್ಲಿಕ್ ಮಾಡಿ.