Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಶಿಚಕ್ರಕ್ಕೆ ತಕ್ಕಂತೆ ಕೆಲಸ ಮಾಡಿದ್ರೆ, ಕೈ ತುಂಬಾ ಹಣ ಗ್ಯಾರಂಟಿ...
ಜ್ಯೋತಿಷ್ಯ ಶಾಸ್ತ್ರವನ್ನು ಬಳಸಿಕೊಂಡು ಭವಿಷ್ಯವನ್ನು ಕೇಳಬಹುದು? ಮುಂದಾಗುವ ಆಗು ಹೋಗುಗಳನ್ನು ತಿಳಿದುಕೊಳ್ಳಬಹುದು ಎಂಬುದು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ವಿಚಾರ. ಅದೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿರ್ದಿಷ್ಟ ರಾಶಿಚಕ್ರದವರಿಗೆ ಯಾವೆಲ್ಲಾ ಕೆಲಸಗಳು ಕೈಹಿಡಿಯುತ್ತದೆ, ಎಂಬುದನ್ನು ತಿಳಿಸುತ್ತದೆ ಇದು ನಿಮಗೆ ಒಮ್ಮೆ ಆಶ್ಚರ್ಯ ಎನಿಸಬಹುದು. ಆದರೆ ಇದು ಸತ್ಯ.
ಹೌದು, ನಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಲವೊಮ್ಮೆ ದೊಡ್ಡ ಡಿಗ್ರಿ ಸಂಪಾದನೆ ಮಾಡಿದವರೂ ಕೆಲಸ ಸಿಗದೆ ತಮ್ಮದೇ ಆದ ಸಣ್ಣ ವಹಿವಾಟು ಮಾಡಿಕೊಂಡಿರುತ್ತಾರೆ. ಇಂತಹ ಸಣ್ಣಪುಟ್ಟ ಕೆಲಸಗಳು ನಿಮ್ಮ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಯಾಕೆಂದರೆ ಓದಿರುವ ವಿದ್ಯೆ ಒಂದು, ಮಾಡುತ್ತಿರುವ ಕೆಲಸ ಇನ್ನೊಂದು. ಇದು ನಿಮ್ಮಲ್ಲಿ ಯಾವಾಗಲೂ ಚಿಂತೆ ಉಂಟು ಮಾಡುತ್ತಿರಬಹುದು.
ಆದರೆ ಇದು ನಿಮ್ಮ ತಪ್ಪಲ್ಲ. ಇದೆಲ್ಲವೂ ಆಗುತ್ತಲಿರುವುದು ನಿಮ್ಮ ರಾಶಿಯಿಂದಾಗಿ. ಯಾಕೆಂದರೆ ನಿಮ್ಮ ರಾಶಿಗೆ ಅನುಗುಣವಾಗಿ ಕೆಲಸ ಮಾಡುತ್ತಲಿದ್ದರೆ ನೀವು ವೃತ್ತಿಯಲ್ಲಿಯು ಉನ್ನತ ಸ್ಥಾನ ಪಡೆಯಬಹುದು, ಹೆಸರು ಗಳಿಸಬಹುದು ಮತ್ತು ಸಂತೋಷವಾಗಿರಬಹುದು. ಯಾವ ರಾಶಿಯವರು ಯಾವ್ಯಾವ ಕೆಲಸ ಮಾಡಿದರೆ ಜೀವನದಲ್ಲಿ ಸುಖ ಹಾಗೂ ಸಮೃದ್ಧಿ ಪಡೆಯಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ.....
ಯಾವ ರಾಶಿಯವರಿಗೆ ಯಾವ್ಯಾವ ಕೆಲಸ ಕೈ ಹಿಡಿಯುತ್ತೆ?

ಮೇಷ (Mar 29 - Apr 19)
ಇವರ ಬುದ್ಧಿ ಬಲಿಷ್ಠವಾಗಿರುವುದು. ಬೇರೆಯವರ ಸಲಹೆ ಅಥವಾ ಆದೇಶ ಪಾಲಿಸುವುದಿಲ್ಲ. ಇವರು ಯಾವಾಗಲೂ ನಾಯಕ ಅಥವಾ ಕಂಪನಿಯ ಮಾಲಕರಾಗುವರು. ಇವರಿಗೆ ಕೈಕೆಳಗೆ ಕೆಲಸ ಮಾಡಲು ಆಗುವುದಿಲ್ಲ. ಇವರಿಗೆ ತುಂಬಾ ಸ್ಪರ್ಧೆಯಿರುವ ಕೆಲಸ ಬೇಕಾಗಿದೆ. ಮೇಷ ರಾಶಿಯವರು ಉತ್ಸಾಹಿಗಳು ಮತ್ತು ಸ್ಪರ್ಧಾತ್ಮಕ ನಾಯಕರು ಎಂದು ಹೇಳಲಾಗುವುದು. ಇವರಿಗೆ ಮಿಲಿಟರಿ, ಸರ್ಕಾರಿ ಉದ್ಯೋಗ, ಅಥ್ಲೆಟಿಕ್ಸ್, ಮ್ಯಾನೇಜ್ ಮೆಂಟ್ ಮತ್ತು ಜಾಹೀರಾತುಗಳಲ್ಲಿ ಉದ್ಯೋಗಗಳನ್ನು ಶ್ರಮಶೀಲರಾಗಿ ಮಾಡಬಹುದು. ಈ ಉದ್ಯೋಗಗಳು ಉತ್ತಮ ಲಾಭ ಹಾಗೂ ಗೌರವ ತಂದುಕೊಡುವುದು. ಇವರ ಬುದ್ಧಿ ಬಲಿಷ್ಠವಾಗಿರುವುದು. ಬೇರೆಯವರ ಸಲಹೆ ಅಥವಾ ಆದೇಶ ಪಾಲಿಸುವುದಿಲ್ಲ. ಇವರು ಯಾವಾಗಲೂ ನಾಯಕ ಅಥವಾ ಕಂಪನಿಯ ಮಾಲಕರಾಗುವರು. ಇವರಿಗೆ ಕೈಕೆಳಗೆ ಕೆಲಸ ಮಾಡಲು ಆಗುವುದಿಲ್ಲ. ಇವರಿಗೆ ತುಂಬಾ ಸ್ಪರ್ಧೆಯಿರುವ ಕೆಲಸ ಬೇಕಾಗಿದೆ.

ವೃಷಭ 21 ಏಪ್ರಿಲ್ -21 ಮೇ
ಈ ರಾಶಿಯವರಿಗೆ ಅಸುರಕ್ಷತೆ, ಹಠಾತ್ ಬದಲಾವಣೆ ಅಥವಾ ಅಚ್ಚರಿ, ತಕ್ಷಣ ನಿರೋದ್ಯೋಗಿಯಾಗುವುದನ್ನು ಸಂಭಾಲಿಸಲು ಆಗಲ್ಲ. ಇವರು ಹಣದ ರಿಸ್ಕ್ ತೆಗೆದುಕೊಳ್ಳುವರು. ಆದರೆ ಬೇರೆಯವರ ಹಣ ಮಾತ್ರ!.ಯಾವುದೇ ಸ್ಥಿರ ಕೆಲಸ ಅಥವಾ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವಾಗ ಇವರು ತುಂಬಾ ಸಂತೋಷವಾಗಿರುವರು. ಇವರು ಕೆಲವು ವಿಷಯಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಳ್ಳಬಲ್ಲರು. ಮಸಾಜ್ ಥೆರಪಿಸ್ಟ್, ಬಾಣಸಿಗ, ಹೂಗಾರ ಅಥವಾ ಕಲಾತ್ಮಕವಾಗಿ ಆಸಕ್ತಿ ತೋರಿದರೆ ಚಿತ್ರಕಲೆ, ಶಿಲ್ಪ ಕಲಾಕೃತಿ, ಸ್ಟಾಕ್ ಬ್ರೋಕರ್, ಆಭರಣ ವ್ಯಾಪಾರ, ವ್ಯವಹಾರ ಕಾರ್ಯನಿರ್ವಾಹಕ ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ನಿರ್ವಹಿಸಬಹುದು. ಇವರು ಈ ಕೆಲಸವನ್ನು ಹೆಚ್ಚು ಆನಂದಿಸಿಕೊಂಡು ಕೆಲಸ ಮಾಡುವರು. ಈ ರಾಶಿಯವರಿಗೆ ಅಸುರಕ್ಷತೆ, ಹಠಾತ್ ಬದಲಾವಣೆ ಅಥವಾ ಅಚ್ಚರಿ, ತಕ್ಷಣ ನಿರೋದ್ಯೋಗಿ ಯಾಗುವುದನ್ನು ಸಂಭಾಲಿಸಲು ಆಗಲ್ಲ. ಇವರು ಹಣದ ರಿಸ್ಕ್ ತೆಗೆದುಕೊಳ್ಳುವರು. ಆದರೆ ಬೇರೆಯವರ ಹಣ ಮಾತ್ರ!. ಯಾವುದೇ ಸ್ಥಿರ ಕೆಲಸ ಅಥವಾ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವಾಗ ಇವರು ತುಂಬಾ ಸಂತೋಷವಾಗಿರುವರು.

ಮಿಥುನ 22 ಮೇ -21 ಜೂನ್
ಮಾನಸಿಕ ಉತ್ತೇಜನ ಸಂತೋಷವಾಗಿಡಲು ಈ ರಾಶಿಯವರಿಗೆ ಕೆಲಸ ಬೇಕು. ಇವರು ತಮ್ಮ ಸಂವಹನ ಸಾಮರ್ಥ್ಯದಿಂದಲೇ ಕೆಲಸ ಮಾಡಿಕೊಳ್ಳುತ್ತಾರೆ. ಇವರಿಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ಏಕತಾನತೆಯ ಕೆಲಸ ಇವರಿಗೆ ಇಷ್ಟವಿಲ್ಲ. ಇವರು ಸಾಮಾಜಿಕ ಕೆಲಸ ಕಾರ್ಯ ಅಥವಾ ಯಾವುದಾದರೂ ಹವ್ಯಾಸದಲ್ಲಿ ತೊಡಗಿಕೊಂಡು ತಮ್ಮ ವೃತ್ತಿಯ ಬೇಸರ ಕಡಿಮೆ ಮಾಡಿಕೊಳ್ಳುವರು. ಇವರು ಇಬ್ಬರು ಸೇರಿ ಮಾಡುವ ಕೆಲಸದಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಇವರು ಬೇಸರದಿಂದ ಇರಲು ಇಷ್ಟಪಡುವುದಿಲ್ಲ. ಇವರಿಗೆ ಆಸಕ್ತಿದಾಯಕ ಮತ್ತು ಅತ್ಯಾಕರ್ಷಕ ಕೆಲಸ, ಸಹ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ.ಇವರು ಸ್ಟಾಕ್ ಬ್ರೋಕರ್, ಜಾಹೀರಾತು, ಮನರಂಜನೆ, ರೇಡಿಯೋ, ಮಾರ್ಕೆಟಿಂಗ್, ಟೆಕ್ ಸಪೋರ್ಟ್, ಶಿಕ್ಷಕ ವೃತ್ತಿ, ವಾಸ್ತು ಶಿಲ್ಪಗಳಲ್ಲಿ ಹೆಚ್ಚು ಹಣವನ್ನು ಗಳಿಸಬಹುದು. ಅಲ್ಲದೆ ಮಾನಸಿಕ ಉತ್ತೇಜನ ಸಂತೋಷವಾಗಿಡಲು ಈ ರಾಶಿಯವರಿಗೆ ಕೆಲಸ ಬೇಕು. ಇವರು ತಮ್ಮ ಸಂವಹನ ಸಾಮರ್ಥ್ಯದಿಂದಲೇ ಕೆಲಸ ಮಾಡಿಕೊಳ್ಳುತ್ತಾರೆ.ಇವರಿಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ಏಕತಾನತೆಯ ಕೆಲಸ ಇವರಿಗೆ ಇಷ್ಟವಿಲ್ಲ.ಇವರು ಸಾಮಾಜಿಕ ಕೆಲಸ ಕಾರ್ಯ ಅಥವಾ ಯಾವುದಾದರೂ ಹವ್ಯಾಸದಲ್ಲಿ ತೊಡಗಿಕೊಂಡು ತಮ್ಮ ವೃತ್ತಿಯ ಬೇಸರ ಕಡಿಮೆ ಮಾಡಿಕೊಳ್ಳುವರು.

ಕರ್ಕಾಟಕ ರಾಶಿ: (21 ಜೂನ್ - 22 ಜುಲೈ)
ಇವರಿಗೆ ಕೆಲಸದಲ್ಲಿ ಸುರಕ್ಷತೆಯಿರುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದಾಗಿ ಒಳ್ಳೆಯ ಸಂಬಳ ಸಿಗುವ ಕೆಲಸ ಇವರು ಆಯ್ಕೆ ಮಾಡಿಕೊಳ್ಳುವರು. ಇವರು ಕೆಲವೊಮ್ಮೆ ತುಂಬಾ ಭಾವನಾತ್ಮಕವಾಗಿ ವರ್ತಿಸುವ ಕಾರಣದಿಂದ ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಇಲ್ಲವಾದರೆ ಕೆಲಸದಿಂದ ಹೊರದಬ್ಬಲ್ಪಡುವರು. ಇತರರನ್ನು ಪಾಲನೆ ಮಾಡುವ ಉದ್ಯೋಗ ಇವರಿಗೆ ಒಳ್ಳೆಯದು. ಇವರು ಶಿಕ್ಷಕರಾಗಿ, ವೈದ್ಯರಾಗಿ, ತೋಟಗಾರಿಕೆ, ಭೂದೃಶ್ಯ, ಸಾಮಾಜಿಕ ಕಾರ್ಯಕರ್ತ ಅಥವಾ ದಾದಿಯ ವೃತ್ತಿಯನ್ನು ಪರಿಪೂರ್ಣವಾಗಿ ನಿರ್ವಹಿಸುತ್ತಾರೆ. ಇವರಿಗೆ ಕೆಲಸದಲ್ಲಿ ಸುರಕ್ಷತೆಯಿರುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದಾಗಿ ಒಳ್ಳೆಯ ಸಂಬಳ ಸಿಗುವ ಕೆಲಸ ಇವರು ಆಯ್ಕೆ ಮಾಡಿಕೊಳ್ಳುವರು. ಇವರು ಕೆಲವೊಮ್ಮೆ ತುಂಬಾ ಭಾವನಾತ್ಮಕವಾಗಿ ವರ್ತಿಸುವ ಕಾರಣದಿಂದ ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಇಲ್ಲವಾದರೆ ಕೆಲಸವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುವರು. ಇತರರನ್ನು ಪಾಲನೆ ಮಾಡುವ ಉದ್ಯೋಗ ಇವರಿಗೆ ಒಳ್ಳೆಯದು.

ಸಿಂಹ: ಜುಲೈ 23-ಆಗಸ್ಟ್ 23
ಈ ರಾಶಿಯವರ ಕಠಿಣ ಪರಿಶ್ರಮದಿಂದಲೇ ಇವರ ಕೆಲಸವು ಗುರುತಿಸಲ್ಪಡುವುದು. ಇವರು ಪ್ರಾಜೆಕ್ಟ್ ಗಳನ್ನು ಆಯೋಜಿಸುವ ಸಾಮರ್ಥ್ಯ ಹೊಂದಿರುವರು. ಏಕಾಂಗಿಯಾಗಿ ಅಥವಾ ತಂಡವಾಗಿ ಅವರು ತಮ್ಮ ಕೆಲಸ ಮಾಡಬಲ್ಲರು. ಅವರು ಕೆಲಸದಲ್ಲಿ ತುಂಬಾ ಭಾವನಾತ್ಮಕವಾಗಿ ತೊಡಗಿಕೊಳ್ಳುವರು. ಇವರು ಸ್ವತಂತ್ರವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಕೇಂದ್ರಬಿಂದುವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಇವರಿಗೆ ಸೂಕ್ತವಾಗುವ ಉದ್ಯೋಗ ಸಿಇಓ, ಪ್ರವಾಸ ಮಾರ್ಗದರ್ಶಿ, ನಿರ್ವಾಹಕ ಕಾರ್ಯಕ್ರಮ ಯೋಜಕ, ಉದ್ಯಮಿ, ರಿಯಲ್ ಎಸ್ಟೇಟ್, ಕಲಾವಿದ/ಮನರಂಜನೆ ಮತ್ತು ಮಾರಾಟಗಾರನಾಗಿ ಕೆಲಸ ನಿರ್ವಹಿಸಬಲ್ಲರು. ಇವು ಉತ್ತಮ ಲಾಭ ತಂದುಕೊಡುತ್ತವೆ. ಈ ರಾಶಿಯವರ ಕಠಿಣ ಪರಿಶ್ರಮದಿಂದಲೇ ಇವರ ಕೆಲಸವು ಗುರುತಿಸಲ್ಪಡುವುದು. ಇವರು ಪ್ರಾಜೆಕ್ಟ್ ಗಳನ್ನು ಆಯೋಜಿಸುವ ಸಾಮರ್ಥ್ಯ ಹೊಂದಿರುವರು. ಏಕಾಂಗಿಯಾಗಿ ಅಥವಾ ತಂಡವಾಗಿ ಅವರು ತಮ್ಮ ಕೆಲಸ ಮಾಡಬಲ್ಲರು. ಅವರು ಕೆಲಸದಲ್ಲಿ ತುಂಬಾ ಭಾವನಾತ್ಮಕವಾಗಿ ತೊಡಗಿಕೊಳ್ಳುವರು.

ಕನ್ಯಾ (23 ಆಗಸ್ಟ್–22 ಸೆಪ್ಟೆಂಬರ್)
ತಮ್ಮ ಬುದ್ಧಿಯು ಕೆಲಸ ಮಾಡುತ್ತಾ ಇರಬೇಕೆಂದರೆ ಇವರಿಗೆ ಪ್ರತೀ ದಿನವು ಸಾವಿರಾರು ಮಾಹಿತಿಗಳು ಬೇಕೇಬೇಕು. ಸಣ್ಣ ವಿಚಾರಗಳನ್ನು ಸಂಭಾಲಿಸುವಲ್ಲಿ ಇವರು ಒಳ್ಳೆಯ ರೀತಿ ಕೆಲಸ ಮಾಡುವರು. ಬೇರೆಯವರು ಪಾಲಿಸಬೇಕಾದ ವೇಳಾಪಟ್ಟಿ ತಯಾರಿಸಲು ಇವರಿಗೆ ಯಾವುದೇ ಸಮಸ್ಯೆಯಿಲ್ಲ. ಇತರರನ್ನು ಟೀಕಿಸುವಂತಹ ತಮ್ಮ ನಡವಳಿಕೆ ಬಗ್ಗೆ ಗಮನವಿಡಬೇಕು. ಈ ರಾಶಿಯಲ್ಲಿ ಜನಿಸಿದವರು ಸಂಘಟಿತ ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸುತ್ತಾರೆ. ಇವರು ಮಾಡುವ ಕೆಲಸದಲ್ಲಿ ಅಚ್ಚುಕಟ್ಟನ್ನು ಪರಿಗಣಿಸುತ್ತಾರೆ. ಇವರಿಗೆ ಗ್ರಂಥಾಲಯಗಳು, ಹಸ್ತಾಲಂಕಾರಿಗಳು, ಯಂತ್ರಶಾಸ್ತ್ರಜ್ಞರು, ವಾಸ್ತುಶಿಲ್ಪಿಗಳು, ಸಂಪಾದಕರು, ಬರಹಗಾರರು, ವೈದ್ಯರು, ವಿಜ್ಞಾನಿಗಳು, ಸಂಶೋಧಕರು ಅಥವಾ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ತಮ್ಮ ಬುದ್ಧಿಯು ಕೆಲಸ ಮಾಡುತ್ತಾ ಇರಬೇಕೆಂದರೆ ಇವರಿಗೆ ಪ್ರತೀ ದಿನವು ಸಾವಿರಾರು ಮಾಹಿತಿಗಳು ಬೇಕೇಬೇಕು. ಸಣ್ಣ ವಿಚಾರಗಳನ್ನು ಸಂಭಾಲಿಸುವಲ್ಲಿ ಇವರು ಒಳ್ಳೆಯ ರೀತಿ ಕೆಲಸ ಮಾಡುವರು. ಬೇರೆಯವರು ಪಾಲಿಸಬೇಕಾದ ವೇಳಾಪಟ್ಟಿ ತಯಾರಿಸಲು ಇವರಿಗೆ ಯಾವುದೇ ಸಮಸ್ಯೆಯಿಲ್ಲ. ಇತರರನ್ನು ಟೀಕಿಸುವಂತಹ ತಮ್ಮ ನಡವಳಿಕೆ ಬಗ್ಗೆ ಗಮನವಿಡಬೇಕು.

ತುಲಾ
ಇವರು ಕೆಲಸ ಮಾಡುವಾಗ ಬೇರೆಯವರು ತಮ್ಮ ಸುತ್ತಲು ಇರಬೇಕೆಂದು ಬಯಸುವರು. ಗ್ರಾಹಕರು, ಸಹೋದ್ಯೋಗಿಗಳು ಅಥವಾ ತಮ್ಮ ಸಿಬ್ಬಂದಿ ಯಾರೇ ಆದರೂ ತಮ್ಮ ಜತೆಗಿರಬೇಕೆಂದು ಬಯಸುವರು. ಅವರಿಗೆ ನಿರ್ಧಾರ ತೆಗೆದುಕೊಳ್ಳುವಾಗ ತಪ್ಪಾಗುವ ಭೀತಿಯಿರುತ್ತದೆ. ಇದರಿಂದ ತುಂಬಾ ದೀರ್ಘ ಸಮಯ ಇದನ್ನು ಮುಂದೂಡುವರು. ಇತರರು ತೆಗೆದುಕೊಳ್ಳುವ ಕಠಿಣ ನಿರ್ಧಾರದಂತಹ ಕೆಲಸಗಳಲ್ಲಿ ತುಲಾ ರಾಶಿಯವರು ಸಂತೋಷವಾಗಿರುವರು. ಇಂತಹ ಕೆಲಸಗಳು ಇವರಿಗೆ ಹೊಂದಿಕೊಳ್ಳುವುದು. ಈ ರಾಶಿಯವರು ಹುಟ್ಟಿನಿಂದಲೇ ಉತ್ತಮ ಮಾತುಗಾರಿಕೆಯುಳ್ಳ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ವಕೀಲ ವೃತ್ತಿ, ಪ್ರಾಧ್ಯಾಪಕ, ಬರಹ, ಪತ್ರಿಕೋದ್ಯಮ, ಮಾರುಕಟ್ಟೆ, ಜಾಹೀರಾತು, ಮಾರಾಟ ಮತ್ತು ಪ್ರಯಾಣ ಏಜೆಂಟ್ ಕೆಲಸವು ಹೆಚ್ಚು ಆದಾಯವನ್ನು ತಂದುಕೊಡುತ್ತದೆ. ಇವರು ಕೆಲಸ ಮಾಡುವಾಗ ಬೇರೆಯವರು ತಮ್ಮ ಸುತ್ತಲು ಇರಬೇಕೆಂದು ಬಯಸುವರು. ಗ್ರಾಹಕರು, ಸಹೋದ್ಯೋಗಿಗಳು ಅಥವಾ ತಮ್ಮ ಸಿಬ್ಬಂದಿ ಯಾರೇ ಆದರೂ ತಮ್ಮ ಜತೆಗಿರಬೇಕೆಂದು ಬಯಸುವರು. ಅವರಿಗೆ ನಿರ್ಧಾರ ತೆಗೆದುಕೊಳ್ಳುವಾಗ ತಪ್ಪಾಗುವ ಭೀತಿಯಿರುತ್ತದೆ. ಇದರಿಂದ ತುಂಬಾ ದೀರ್ಘ ಸಮಯ ಇದನ್ನು ಮುಂದೂಡುವರು. ಇತರರು ತೆಗೆದುಕೊಳ್ಳುವ ಕಠಿಣ ನಿರ್ಧಾರದಂತಹ ಕೆಲಸಗಳಲ್ಲಿ ತುಲಾ ರಾಶಿಯವರು ಸಂತೋಷವಾಗಿರುವರು. ಇಂತಹ ಕೆಲಸಗಳು ಇವರಿಗೆ ಹೊಂದಿಕೊಳ್ಳುವುದು.

ವೃಶ್ಚಿಕ (ಅಕ್ಟೋಬರ್ 23-ನವೆಂಬರ್ 21)
ಜ್ಞಾನವು ಶಕ್ತಿಯೆಂದು ಈ ರಾಶಿಯವರು ತಿಳಿದುಕೊಂಡಿರುವರು. ಇವರು ಯಾವುದೇ ರಾಜಕೀಯ, ಆರ್ಥಿಕ ಅಥವಾ ಅಂಗಡಿ ನಡೆಸುವುದಿದ್ದರೂ ಇದು ನಿಜವಾಗಿರುವುದು. ಇವರಿಗೆ ರಹಸ್ಯವೆಂದರೆ ತುಂಬಾ ಇಷ್ಟ. ಕಳೆಕೊಂಡಿರುವುದನ್ನು ಹುಡುಕುವುದು, ಯಾವುದೇ ರಹಸ್ಯ ಮಾಹಿತಿ ಸಂಗ್ರಹ ಅಥವಾ ಇತರರ ಪ್ರೇರಣೆಯನ್ನು ಹೊರತೆಗೆಯುವುದು ಇವರಿಗೆ ಇಷ್ಟವಾದ ಕೆಲಸಗಳು. ಜೀವನದುದ್ದಕ್ಕೂ ತಮ್ಮ ಆಸಕ್ತಿಗಳನ್ನು ಈಡೇರಿಸುವ ಕೆಲಸ ಇವರಿಗೆ ಒಳ್ಳೆಯದು. ಈ ರಾಶಿಯಲ್ಲಿ ಜನಿಸಿದವರು ಅಂತರ್ಬೋಧೆಯಿಂದ ಯೋಚಿಸುವ ಅತ್ಯಂತ ತೀವ್ರವಾದ ವ್ಯಕ್ತಿಗಳಾಗಿರುತ್ತಾರೆ. ಇವರು ವೈದ್ಯರು, ವಕೀಲರು, ಸಮಾಲೋಚಕರು, ಪತ್ತೆದಾರರು, ವಿಜ್ಞಾನಿಗಳು, ಭೌತವಿಜ್ಞಾನಿಗಳು ಅಥವಾ ಕಾನೂನು ಅಧಿಕಾರಿಗಳಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇವರು ಸಾಕಷ್ಟು ಏಕಾಗ್ರತೆಯಲ್ಲಿ ಉದ್ಯೋಗ ಮಾಡುವ ವ್ಯಕ್ತಿಗಳಾಗಿರುತ್ತಾರೆ. ಅಲ್ಲದೆ ಇವರು ಕೆಲಸ ಮಾಡುವಾಗ ಬೇರೆಯವರು ತಮ್ಮ ಸುತ್ತಲು ಇರಬೇಕೆಂದು ಬಯಸುವರು. ಗ್ರಾಹಕರು, ಸಹೋದ್ಯೋಗಿಗಳು ಅಥವಾ ತಮ್ಮ ಸಿಬ್ಬಂದಿ ಯಾರೇ ಆದರೂ ತಮ್ಮ ಜತೆಗಿರಬೇಕೆಂದು ಬಯಸುವರು.

ಧನು (23 ನವೆಂಬರ್–21 ಡಿಸೆಂಬರ್)
ಶಿಸ್ತಿನ ದೈನಂದಿನ ಚಟುವಟಿಕೆಯು ಈ ರಾಶಿಯವರಿಗೆ ಇಷ್ಟವಾಗುವುದಿಲ್ಲ. ಇವರು ಸ್ವಾತಂತ್ರ್ಯವಾಗಿ ಅಂದರೆ ಯಾವುದೇ ಕಟ್ಟುಪಾಡು ಇಲ್ಲದೆ ಕೆಲಸ ಮಾಡಿದರೆ ತಮ್ಮ ಶ್ರೇಷ್ಠ ಶ್ರಮ ವಹಿಸುವರು. ಪ್ರಯಾಣ ಇರುವಂತಹ ವೃತ್ತಿಯಲ್ಲಿ ಇವರು ಉತ್ತಮವಾಗಿರುವರು. ಯಾವುದೇ ಬದಲಾವಣೆಗೆ ಇವರು ಹೊಂದಿಕೊಳ್ಳುವರು. ಇವರು ತಮ್ಮ ಕೆಲಸದ ಬಗ್ಗೆ ಸಂತೋಷವಾಗಿರುವರು. ಆದರೆ ಬೇರೆ ಯಾರಾದರೂ ಯೋಜನೆಗಳ ವರದಿ ಓದಲಿ ಎಂದು ಬಯಸುವರು. ಈ ರಾಶಿಯವರು ಹೆಚ್ಚು ಶಕ್ತಿಯುಳ್ಳವರು. ಹೊರಾಂಗಣವನ್ನು ಇಷ್ಟಪಡುವ ವ್ಯಕ್ತಿಗಳು. ಪ್ರಯಾಣ ಮಾಡಲು ಇಷ್ಟಪಡುವ ಆಧ್ಯಾತ್ಮಿಕ ಜನರು. ಇವರು ಪ್ರಾಣಿ ಮತ್ತು ಜನರನ್ನು ಹೆಚ್ಚು ಇಷ್ಟಪಡುವರು. ಶಿಕ್ಷಕರ, ಟ್ರಾವೆಲ್ ಏಜೆಂಟ್, ಬರಹಗಾರ/ಸಂಪಾದಕ, ನಟ, ಆಧ್ಯಾತ್ಮಿಕ ನಾಯಕ, ತರಬೇತುದಾರ, ಪ್ರಾಣಿ ತರಬೇತುದಾರ ಕೆಲಸವು ಹೆಚ್ಚು ಆಸಕ್ತಿ ಹಾಗೂ ಲಾಭವನ್ನು ತರುವಂತಹ ಕೆಲಸವಾಗಿದೆ.

ಮಕರ (ಡಿಸೆಂಬರ್ 22-ಜನವರಿ 19)
ಆರ್ಥಿಕ ಹಾಗೂ ಸ್ಥಾನಮಾನವನ್ನು ಬಯಸುವಂತಹ ರಾಶಿಯವರು ಇವರಾಗಿರುವರು. ಇವರು ತುಂಬಾ ಮುಂದಾಲೋಚನೆ ಮಾಡುವವರು. ಪ್ರಾಯೋಗಿಕವಾಗಿ ಏನು ಸರಿಯಾಗಿದೆಯೋ ಅದನ್ನೇ ಇವರು ನೆಚ್ಚಿಕೊಳ್ಳುವರು. ಇವರಿಗೆ ದೈನಂದಿನ ಚಟುವಟಿಕೆ ಬಗ್ಗೆ ಸಮಸ್ಯೆಯಿಲ್ಲ. ಆದರೆ ಎಲ್ಲವೂ ಮೊದಲೇ ತಿಳಿಯಬೇಕೆಂದು ಬಯಸುವರು. ತಮ್ಮ ಅಧಿಕಾರದಲ್ಲಿ ಯಾರಿಗೂ ಪಾಲು ಕೊಡಲ್ಲ.

ಕುಂಭ (ಜನವರಿ 20-ಫೆಬ್ರವರಿ 18)
ಇವರು ತಮ್ಮ ಕೆಲಸದಲ್ಲಿ ಸಂತೋಷವಾಗಿರುವರು. ಇವರು ಎರಡು ರೀತಿಯ ಗೊಂದಲದಲ್ಲಿ ಸಿಲುಕಿಕೊಂಡಿರುವಂತೆ ಇರುವರು. ಒಂದು ಕಡೆ ಇವರು ಏಕಾಂಗಿಯಾಗಿರುವಾಗ ಜನರೊಂದಿಗೆ ಸಂಪರ್ಕ ಸಾಧಿಸಲು ಬಯಸುವರು. ಇನ್ನೊಂದೆಡೆಯಲ್ಲಿ ಇವರು ತಮ್ಮ ಕೆಲಸದಲ್ಲಿ ಶಾಂತಿ ಬಯಸುವರು ಮತ್ತು ಯಾರು ಕೂಡ ತಮ್ಮ ಕೆಲಸದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಬಯಸುವರು.

ಮೀನ (19 ಫೆಬ್ರವರಿ–20 ಮಾರ್ಚ್)
ಈ ರಾಶಿಯವರು ಗುಪ್ತ ಶಕ್ತಿಯ ಪ್ರವೀಣರು ಎಂದು ನಂಬಲಾಗಿದೆ. ನಿಷ್ಕ್ರೀಯ ನಿರೋಧಕತೆ ಬಳಸಿಕೊಳ್ಳುವಲ್ಲಿ ಇವರು ಉತ್ತಮವರು. ಇತರರನ್ನು ತುಂಬಾ ಕುಶಲತೆಯಿಂದ ಭಾವನಾತ್ಮಕವಾಗಿ ಮೋಹಗೊಳಿಸುವರು. ಇವರು ರಹಸ್ಯ ತಿಳಿದುಕೊಳ್ಳುವರು. ಕೆಲಸದಿಂದ ಸಂತೋಷವಾಗಿದ್ದರೂ ಇವರು ಉನ್ನತ ಉದ್ದೇಶದಿಂದ ವೃತ್ತಿಯಲ್ಲಿರಲು ಬಯಸುವರು. ಈ ರಾಶಿಯಲ್ಲಿ ಜನಿಸಿದವರು ಸೃಜಾನಾತ್ಮಕ, ಭಾವೋದ್ರಿಕ್ತ ಮತ್ತು ಸಹಾನೂಭೂತಿಯುಳ್ಳ ಜನರಾಗಿದ್ದಾರೆ. ಇವರು ಆರೋಗ್ಯ, ಕಲೆ, ನರ್ಸ್, ವೈದ್ಯರು, ಭೌತಿಕ ಚಿಕಿತ್ಸಕ, ಪಶುವೈದ್ಯ, ಜ್ಯೋತಿಷ್ಯ, ಬರಹಗಾರ, ಗ್ರಾಫಿಕ್ ಕಲೆ, ಚಲನಚಿತ್ರ, ಕೇಶ ವಿನ್ಯಾಸಕಾರರಾಗಿ ಕೆಲಸ ನಿರ್ವಹಿಸಬಹುದು. ಇವು ಉತ್ತಮ ಹೆಸರು ಮತ್ತು ಲಾಭವನ್ನು ತಂದುಕೊಡುತ್ತವೆ. ಈ ರಾಶಿಯವರು ಗುಪ್ತ ಶಕ್ತಿಯ ಪ್ರವೀಣರು ಎಂದು ನಂಬಲಾಗಿದೆ.



Click it and Unblock the Notifications











