Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
30 ಸೆಕೆಂಡುಗಳಲ್ಲಿ ನಟಭಯಂಕರನಾದ ಮಗು!
ಮಕ್ಕಳನ್ನು ಅವರಲ್ಲಿರುವ ಮುಗ್ಧತೆಯಿಂದ ದೇವರಿಗೆ ಹೋಲಿಸಲಾಗಿದೆ. ಅದರಲ್ಲೂ ಸಣ್ಣ ಮಕ್ಕಳಲ್ಲಿರುವಂತಹ ನಿಷ್ಕಲ್ಮಷವಾದ ಮನಸ್ಸು ಬೇರೆ ಯಾರಲ್ಲೂ ಸಿಗದು. ಮುಗ್ದ ಮನಸ್ಸಿನ ಸಣ್ಣ ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಕಠಿಣ. ಇದು ತಾಯಿಯಾದವಳಿಗೆ ಮಾತ್ರ ಸಾಧ್ಯವೆನ್ನಬಹುದು. ಸಣ್ಣ ಮಕ್ಕಳು ನಿದ್ರೆಗೆ, ಹಸಿವು ಮತ್ತು ಬೇಜಾರಾದಾಗ ಅಳುತ್ತವೆ.
ಸಾಮಾನ್ಯವಾಗಿ ಮಕ್ಕಳು ತಮ್ಮ ಮುಖಭಾವ ಮತ್ತು ದೇಹಭಾಷೆ ಮೂಲಕ ಎಲ್ಲವನ್ನು ತಿಳಿಸಿಬಿಡುತ್ತವೆ. ಇದರ ಮೂಲಕ ಮಕ್ಕಳು ತಮ್ಮ ಇಷ್ಟ, ಬೇಸರ ಮತ್ತು ಸಂತೋಷ ವ್ಯಕ್ತಪಡಿಸುವವು. ತಮ್ಮ ಪೋಷಕರು ಮಾತನಾಡುವ ಭಾಷೆ ಮಾತನಾಡುವ ತನಕ ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಮುಖ ಹಾಗೂ ದೇಹ ಭಾಷೆ ಮೂಲಕ.

ಈ ವಿಡಿಯೋದಲ್ಲಿ ಮಗು ತುಂಬಾ ಭಿನ್ನವಾಗಿ ಅಳುತ್ತದೆ. ಇದು ತುಂಬಾ ಅಸಿಡಿಟಿ ಅಳು...ವಿಡಿಯೋ ವೀಕ್ಷಿಸಿ.
ಈ ವಿಡಿಯೋದಲ್ಲಿರುವ ಮಗು ಅಲೆಕ್ಸಾಂಡರ್ ಖಂಡಿತವಾಗಿಯೂ ನಿಮ್ಮನ್ನು ಮೂಖವಿಸ್ಮಿತಗೊಳಿಸಬಹುದು. ಈ ಸಣ್ಣ ಮಗು ಅಲೆಕ್ಸಾಂಡರ್ ಗೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡಿದೆ. ಆದರೆ ಆತನ ಭಾವನೆಗಳನ್ನು ನೋಡಿದಾಗ ಆಕಾಶವೇ ಕಳಚಿ ಬಿದ್ದಂತೆ ಕಾಣುತ್ತದೆ.
ಈ ಮಗು ಕೇವಲ 30 ಸೆಕೆಂಡುಗಳಲ್ಲಿ ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾನೆ! ಆತ ಅತ್ತಿದ್ದಾನೆ, ಸ್ವಲ್ಪ ನಕ್ಕಿದ್ದಾನೆ, ಗೊಂದಲಕ್ಕೀಡಾಗಿದ್ದಾನೆ ಮತ್ತು ಮತ್ತೆ ಅಳಲು ಆರಂಭಿಸಿದ್ದಾನೆ. ಎಷ್ಟು ಮುಗ್ದ ಸುಂದರ ಭಾವನೆಗಳು....!
ಇದು ನಿಮಗೆ ಹೇಗನಿಸಿದೆ? ಮಗುವಿನ ಭಾವನೆಗಳು ಮತ್ತು ನಿಮಗೆ ಇಂತಹ ಅನುಭವವಾಗಿದ್ದರೆ ಅದನ್ನು ಶೇರ್ ಮಾಡಿಕೊಳ್ಳಿ.



Click it and Unblock the Notifications
