Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾತ್ರಿ ಬೆಳಗಾಗುವುದರೊಳಗೆ ಮಗುವಿನ ಬಾಯಿಯಲ್ಲಿ ಮೂಡಿದ ಕೋರೆ ಹಲ್ಲು!
ರಾತ್ರಿ ಮಲಗಿರುತ್ತೀರಿ, ಬೆಳಗ್ಗೆ ಎದ್ದಾಗ ದೇಹದಲ್ಲಿ ಹೊಸ ಅಂಗಾಂಗವೊಂದು ಮೂಡಿದ್ದರೆ ಆಗ ನಿಮಗೆ ಅಚ್ಚರಿಯಾಗುವುದು ಖಚಿತ. ಅದೇ ರೀತಿ ಇಲ್ಲೊಂದು ಹನ್ನೊಂದು ತಿಂಗಳ ಮಗುವಿಗೆ ಕೋರೆ ಹಲ್ಲು ರಾತ್ರಿ ಬೆಳಗಾಗುವುದರೊಳಗಡೆ ಮೂಡಿದೆ.

ಇದನ್ನು ನೋಡಿದ ತಾಯಿ ದಿಗಿಲುಗೊಂಡಿದ್ದಾಳೆ. ತಾಯಿ ಮಾತ್ರವಲ್ಲದೆ ಇದನ್ನು ನೋಡಿದ ವೈದ್ಯರಿಗೆ ಕೂಡ ಇದೇನಪ್ಪಾ ಹೀಗೆ ಎಂದು ಮೂಗಿನ ಮೇಲೆ ಕೈಯಿಟ್ಟಿದ್ದಾರೆ. ಈ ಸುದ್ದಿ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀವು ಓದುತ್ತಾ ಸಾಗಿ...

ಐರ್ಲೆಂಡ್ ನಲ್ಲಿ ನಡೆದ ಘಟನೆ
ಐರ್ಲೆಂಡ್ ನ ಡ್ರೊಗೆಡಾದ ಸಣ್ಣ ಮಗು ಆಸ್ಕರ್ ಓಬ್ರೈರ್ನೆ. ಆತನ ತಾಯಿ ತಾರಾ ಪ್ರತಿನಿತ್ಯದಂತೆ ಮಗುವನ್ನು ಎತ್ತಿಕೊಂಡು ನೋಡುತ್ತಿರುವಾಗ ಆಕೆಗೆ ಬಾಯಿಯೊಳಗೆ ಕೋರೆ ಹಲ್ಲು ಮೂಡಿರುವುದು ಕಂಡು ಬಂದಿದೆ.

ಯಾವಾಗಲೂ ಅಳುವುದಕ್ಕಿಂತ ಹೆಚ್ಚಿಗೆ ಅಳುತ್ತಲಿದ್ದ…
ಮಗುವಿಗೆ ಆಹಾರ ನೀಡುತ್ತಿರುವ ವೇಳೆ ಆತ ಯಾವಾಗಲೂ ಅಳುವುದಕ್ಕಿಂತ ಹೆಚ್ಚಿಗೆ ಅಳುತ್ತಲಿದ್ದ. ಇದನ್ನು ನೋಡಿದ ಆಕೆ ಪರೀಕ್ಷೆ ಮಾಡಿದಾಗ ಬಾಯಿಯಲ್ಲಿ ರಾತ್ರಿಬೆಳಗಾಗುವುದರೊಳಗಡೆ ಕೋರೆ ಹಲ್ಲು ಬಂದಿರುವುದು ಕಂಡುಬಂದಿದೆ.

ಆಕೆ ವೈದ್ಯರ ಬಳಿಗೆ ಹೋದಳು
ಆಕೆ ಓಬ್ರೈರ್ನ್ ನ್ನು ಹಿಡಿದುಕೊಂಡು ವೈದ್ಯರ ಬಳಿಗೆ ತೆರಳಿದಳು. ಆದರೆ ವೈದ್ಯರಿಗೂ ಇದು ಗೊಂದಲವನ್ನು ಉಂಟು ಮಾಡಿತ್ತು ಮತ್ತು ಅವರು ಈ ಕೋರೆ ಹಲ್ಲಿನ ಬಗ್ಗೆ ಚರ್ಚಿಸುತ್ತಿದ್ದರು. ಸಣ್ಣ ಮಗುವಿಗೆ ಚಿಕಿತ್ಸೆ ನೀಡುವುದು ಹೇಗೆ ಎಂದು ಅವರಿಗೆ ಅಚ್ಚರಿಯಾಗಿತ್ತು.

ದಂತವೈದ್ಯರು ಹಲ್ಲನ್ನು ಕಿತ್ತರು
ತಾರಾ ತನ್ನ ಮಗುವನ್ನು ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋದಳು. ಅಲ್ಲಿ ಮಗುವಿನ ಹಲ್ಲನ್ನು ಕೀಳಲಾಯಿತು. ಆದರೆ ಈ ಕಾರ್ಯದ ವೇಳೆ ಏನೋ ತಪ್ಪು ನಡೆದು ಹಲ್ಲು ಮೇಲೆ ಹೋಗಿ ಮೂಗಿಗೆ ಸಿಲುಕಿತು. ಆದರೆ ಈಗ ಮಗು ಆರೋಗ್ಯವಾಗಿದೆ ಮತ್ತು ಹಲ್ಲನ್ನು ತೆಗೆಯಲಾಗಿದೆ. ಇದು ಬೆಳೆದಿರುವ ಹಲ್ಲೇ ಅಥವಾ ಬೇರೆ ಏನಾದರೂ ಆಗಿರಬಹುದೇ ಎಂಬ ಬಗ್ಗೆ ಈಗಲೂ ಗೊಂದಲವಿದೆ. ಇಂತಹ ಇನ್ನಷ್ಟು ವಿಚಿತ್ರ ಸುದ್ದಿಗಳ ಬಗ್ಗೆ ಓದಲು ಇದೇ ಸೆಕ್ಷನ್ ನಲ್ಲಿ ಹುಡುಕುತ್ತಿರಿ.



Click it and Unblock the Notifications
