Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುಡುಗಿಯರು ಕನ್ಯತ್ವ ಕಳೆದುಕೊಳ್ಳುವ ಸರಾಸರಿ ವಯಸ್ಸು!
ಹುಡುಗಿಯರಲ್ಲಿ ಕನ್ಯತ್ವದ ಬಗ್ಗೆ ಹೆಚ್ಚಿನ ಮಹತ್ವವಿದೆ. ಕೆಲವೊಂದು ಸಾಂಪ್ರದಾಯಬದ್ಧವಾಗಿರುವಂತಹ ದೇಶಗಳಲ್ಲಿ ಕನ್ಯತ್ವ ಕಳೆದುಕೊಳ್ಳುವುದು ದೊಡ್ಡ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಮದುವೆಗೆ ಮೊದಲು ಕನ್ಯತ್ವ ಕಳೆದುಕೊಳ್ಳಬಾರದು ಎನ್ನುವ ನಿಯಮವು ಇಂತಹ ದೇಶಗಳಲ್ಲಿ ಇರುವುದು. ಆದರೆ ಯಾವ ವಯಸ್ಸಿನಲ್ಲಿ ಸಾಮಾನ್ಯವಾಗಿ ಹುಡುಗಿಯರು ಕನ್ಯತ್ವ ಕಳೆದುಕೊಳ್ಳಬಹುದು ಎಂದು ನಿಮಗೇನಾದರು ಕಲ್ಪನೆಯಿದೆಯಾ? ಆದರೆ ಅಧ್ಯಯನಗಳ ಪ್ರಕಾರ ಸಾಮಾನ್ಯವಾಗಿ ಹುಡುಗಿಯರು ಕನ್ಯತ್ವ ಕಳೆದುಕೊಳ್ಳುವ ವಯಸ್ಸು ದೇಶದಿಂದ ದೇಶಕ್ಕೆ ಭಿನ್ನವಾಗಿರುವುದು.

ಅಂಕಿಅಂಶಗಳ ಪ್ರಕಾರ ಹುಡುಗಿಯರು ಸರಾಸರಿಯಾಗಿ 17.4 ವರ್ಷದಲ್ಲಿ ತಮ್ಮ ಕನ್ಯತ್ವ ಕಳೆದುಕೊಳ್ಳುವರು ಎಂದು ಹೇಳಿದೆ. ಹುಡುಗಿಯರಿಗೆ 15 ವರ್ಷ ಮತ್ತು ಎರಡು ತಿಂಗಳು ಸೆಕ್ಸ್ ಬಗ್ಗೆ ತಿಳುವಳಿಕೆ ಬರುವ ಸಾಮಾನ್ಯ ವಯಸ್ಸಾಗಿದೆ. ಹದಿಹರೆಯದವರಲ್ಲಿ ಸೆಕ್ಸ್ ಭಾವನೆ ಬಗ್ಗೆ ಹಠಾತ್ ಅರಿವು ಮತ್ತು ಬಯಕೆ ಎನ್ನುವ ಆಧಾರದ ಮೇಲೆ ಈ ಅಂಕಿಅಂಶವನ್ನು ತಯಾರಿಸಲಾಗಿದೆ. ಹುಡುಗಿಯು ಕನ್ಯತ್ವ ಕಳೆದುಕೊಳ್ಳುವ ಸರಾಸರಿ ವಯಸ್ಸು ರಾಷ್ಟ್ರದಿಂದ ರಾಷ್ಟ್ರಕ್ಕೆ ಭಿನ್ನವಾಗಿರುವುದು.

ಹುಡುಗಿ ಕನ್ಯತ್ವ ಕಳೆದುಕೊಳ್ಳುವ ಸರಾಸರಿ ವಯಸ್ಸು
ಐಸ್ ಲ್ಯಾಂಡ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ಹುಡುಗಿಯರು ಕನ್ಯತ್ವ ಕಳೆದುಕೊಳ್ಳುವ ಸರಾಸರಿ ವಯಸ್ಸು 17.4 ಆಗಿದೆ. ಅದೇ ಮಲೇಶಿಯಾದ ಹುಡುಗಿಯರು ಹೆಚ್ಚು ತಾಳ್ಮೆ ಇರುವವರು. ಇಲ್ಲಿ ಹುಡುಗಿಯರು ಕನ್ಯತ್ವ ಕಳೆದುಕೊಳ್ಳುವ ಸರಾಸರಿ ವಯಸ್ಸು 23 ಮತ್ತು ಭಾರತದಲ್ಲಿ ಇದು 22.9 ವರ್ಷ ಆಗಿದೆ.

ಹಿಂದಿನ ಅಧ್ಯಯನವು ತುಂಬಾ ಭಿನ್ನ ಅಂಕಿಅಂಶವನ್ನು ನೀಡಿತ್ತು
ಆದರೆ 2007ರಲ್ಲಿ ನಡೆಸಿರುವ ಅಧ್ಯಯನವು ತುಂಬಾ ಭಿನ್ನವಾಗಿರುವಂತಹ ಅಂಕಿಅಂಶವನ್ನು ನೀಡಿತ್ತು. ಆ ವರದಿಯಲ್ಲಿ ಹುಡುಗಿಯು ಕನ್ಯತ್ವ ಕಳೆದುಕೊಳ್ಳುವ ವಯಸ್ಸು ಸರಾಸರಿಯಾಗಿ 15.2 ಆಗಿತ್ತು.

ಸಿಡಿಸಿಯ 2017ರ ನ್ಯಾಶನಲ್ ಯೂತ್ ರಿಸ್ಕ್ ಬಿಹೇವಿಯರ್ ಸಮೀಕ್ಷೆ ಹೇಳುವಂತೆ....
ಸಿಡಿಸಿಯ 2017ರ ನ್ಯಾಶನಲ್ ಯೂತ್ ರಿಸ್ಕ್ ಬಿಹೇವಿಯರ್ ಸಮೀಕ್ಷೆ ಇದನ್ನು ವೈಆರ್ ಬಿಎಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಶೇ.40ರಷ್ಟು ಅಮೆರಿಕಾದ ಹೈಸ್ಕೂಲ್ ನ ವಿದ್ಯಾರ್ಥಿಗಳು ಸೆಕ್ಸ್ ನಡೆಸುವರು. ಆದರೆ 2007ರಲ್ಲಿ ನಡೆಸಿರುವ ಸಮೀಕ್ಷೆ ವೇಳೆ ಇದು ಶೇ.48ರಷ್ಟಿತ್ತು. ಆದರೆ ಈಗ ಇದು ಕುಸಿದಿದೆ. ಇದರ ಹೊರತಾಗಿ ಶೇ.10ರಷ್ಟು ವಿದ್ಯಾರ್ಥಿಗಳು ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಲೈಂಗಿಕ ಜತೆಗಾರರನ್ನು ಹೊಂದಿರುವುದಾಗಿ 2017ರಲ್ಲಿ ಹೇಳಿದ್ದಾರೆ. 2007ರಲ್ಲಿ ಇದು ಶೇ. 15ರಷ್ಟಿತ್ತು. ಸಿಡಿಸಿಯು 1991ರಲ್ಲಿ ಸಮೀಕ್ಷೆ ನಡೆಸಲು ಆರಂಭಿಸಿದ ಬಳಿಕ ಇದು ತುಂಬಾ ಕಡಿಮೆಯಾಗಿದೆ.

ಕುಸಿತಕ್ಕೆ ಕಾರಣವೇನು?
ಹೆಚ್ಚಿನ ಹುಡುಗಿಯರು ಸೆಕ್ಸ್ ಚಟುವಟಿಕೆಗಿಂತ ಹೆಚ್ಚಾಗಿ ಈಗ ಡೇಟಿಂಗ್ ಮತ್ತು ಹ್ಯಾಂಗ್ ಔಟ್ ನಲ್ಲಿ ವ್ಯಸ್ತರಾಗಿರುವರು. ಇದರಿಂದಾಗಿ ಹುಡುಗಿಯರು ಕನ್ಯತ್ವ ಕಳೆದುಕೊಳ್ಳುವ ಸರಾಸರಿ ವಯಸ್ಸಿನಲ್ಲಿ ಕುಸಿತವಾಗಿದೆ.

ಸಲಿಂಗಿಗಳು ಬೇರೆಯವರಿಗಿಂತ ವೇಗವಾಗಿರುವರು
ಅಧ್ಯಯನದ ಪ್ರಕಾರ ಸಲಿಂಗಿಗಳನ್ನು ಕೂಡ ಸಮೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಬೇರೆ ಗುಂಪಿನ ಹದಿಹರೆಯದವರಗಿಂತ ಬೇಗನೆ ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವರು ಎಂದು ಅಧ್ಯಯನ ಹೇಳಿದೆ. ಸರಾಸರಿ 14ರ ಹರೆಯದಲ್ಲಿ ಇವರಿಗೆ ಲೈಂಗಿಕತೆ ಬಗ್ಗೆ ತಿಳಿಯುವುದು.

ಕನ್ಯತ್ವ ಕಳೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶ
ಯಾವ ವಯಸ್ಸಿನಲ್ಲಿ ಕನ್ಯತ್ವ ಕಳೆದುಕೊಳ್ಳುತ್ತೀರಿ ಎನ್ನುವ ಬಗ್ಗೆ ನೀವು ಹೆಚ್ಚು ಗಮನಕೊಡಬಾರದು. ಇದಕ್ಕೆ ಬದಲಿಗೆ ನೀವು ಸರಿಯಾದ ಸುರಕ್ಷಿತ ಕ್ರಮ ಅಳವಡಿಸಿಕೊಳ್ಳಿ. ಲೈಂಗಿಕ ಚಟುವಟಿಕೆ ತುಂಬಾ ಸುರಕ್ಷಿತವಾಗಿ ಹೇಗೆ ಮಾಡುವುದು ಎನ್ನುವುದರ ಬಗ್ಗೆ ತಿಳುವಳಿಕೆ ಪಡೆದುಕೊಳ್ಳಬೇಕು. ಇದರ ಬಗ್ಗೆ ನಿಮ್ಮ ಅನಿಸಿಕೆಯೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications
