Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ಆಗಸ್ಟ್ ತಿಂಗಳು ಈ 5 ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

ಶ್ರಾವಣ ಮಾಸ ಎಂದರೆ ಪವಿತ್ರವಾದ ತಿಂಗಳು. ಶಿವನಿಗೆ ಸಮರ್ಪಿತವಾದ ಈ ಮಾಸದಲ್ಲಿ ಅನೇಕ ಹಬ್ಬ-ಹರಿದಿನ ಹಾಗೂ ವ್ರತಗಳ ಆಚರಣೆ ಮಾಡಲಾಗುವುದು. ಈ ಮಾಸದಲ್ಲಿ ದೇವರ ಧ್ಯಾನ ಹಾಗೂ ವ್ರತಗಳ ಆಚರಣೆ ಮೂಲಕ ಅದೃಷ್ಟಗಳನ್ನು ಹಾಗೂ ಭವಿಷ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ಕಂಡುಕೊಳ್ಳುತ್ತಾರೆ.
ಹಿಂದೂ ಧರ್ಮದ ಪ್ರಕಾರ ಯಾರು ದೇವರಲ್ಲಿ ಭಯ-ಭಕ್ತಿಯನ್ನು ತೋರುತ್ತಾರೋ ಅಂತಹವರಿಗೆ ದೇವರ ಆಶೀರ್ವಾದ ಲಭಿಸುವುದು. ಕಷ್ಟಗಳು ಕರಗಿ ಸುಖ ದೊರೆಯುವುದು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 5 ರಾಶಿಚಕ್ರದವರಿಗೆ ಆಗಸ್ಟ್ ತಿಂಗಳು ಉತ್ತಮ ಫಲವನ್ನು ನೀಡುವುದು. ಈ ಹಿನ್ನೆಲೆಯಲ್ಲಿಯೇ ಜೀವನದ ಆನಂದವನ್ನು ಅನುಭವಿಸುವರು ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಅದೃಷ್ಟಗಳೇನು ಎನ್ನುವುವುದನ್ನು ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ....

ವೃಷಭ
ಈ ರಾಶಿಚಕ್ರದವರು ವಿತ್ತೀಯ ಪ್ರಯೋಜನವನ್ನು ಪಡೆದುಕೊಳ್ಳುವರು. ಅಲ್ಲದೆ ಅದಕ್ಕಾಗಿ ಬಹಳಷ್ಟು ಪ್ರಯತ್ನವನ್ನು ಮಾಡಬೇಕಾಗುವುದು. ಕೆಲವು ಸಂಗತಿಗಳಿಗಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುವುದು. ನಿಧಾನವಾಗಿ ಕೆಲವು ಯೋಜನೆಗಳನ್ನು ಅನುಮೋದಿಸಲಾಗುವುದು. ಸಾಮಾಜಿಕವಾಗಿ ಹೆಚ್ಚಿನ ಗೌರವವನ್ನು ಪಡೆದುಕೊಳ್ಳುವಿರಿ. ಕೆಲವು ಸೌಕರ್ಯಗಳಿಂದ ಲಾಭವನ್ನು ಅನುಭವಿಸುವಿರಿ. ಬುದ್ಧಿವಂತರಾದ ಇವರು ಎಲ್ಲಾ ಸಂದರ್ಭದಲ್ಲೂ ಶಾಂತಿಯನ್ನು ಕಾಪಾಡುತ್ತಾರೆ. ಇದು ಅವರಿಗೆ ಉತ್ತಮ ಯೋಚನೆ ಹೊಂದಲು ಮತ್ತು ಅಪೇಕ್ಷಿತ ಫಲಿತಾಂಶ ಪಡೆಯಲು ಸಹಾಯವಾಗುವುದು.

ಕರ್ಕ
ಸಂತೋಷವನ್ನು ಹೊಂದಲು ಈ ತಿಂಗಳು ಇವರಿಗೆ ಅವಕಾಶವನ್ನು ಒದಗಿಸಿಕೊಡುತ್ತದೆ. ಇವರ ಗ್ರಹಗತಿಗಳು ಪ್ರಗತಿಯತ್ತ ಅವಕಾಶಗಳನ್ನು ಸೂಚಿಸುತ್ತವೆ ಎಂದು ಹೇಳಲಾಗುವುದು. ಸಾಮಾನ್ಯವಾಗಿ ಇವರಿಗೆ ಲಾಭದ ಅವಕಾಶಗಳಿವೆ ಎಂದು ಹೇಳಲಾಗುವುದು. ಜೀವನದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳನ್ನು ತಪ್ಪಿಸಲು ಪ್ರಯತ್ನಪಡಬೇಕು. ಇಲ್ಲವಾದರೆ ಅವು ವೃತ್ತಿ ಜೀವನದ ಮೇಲೆ ಅಡ್ಡಿಯನ್ನುಂಟುಮಾಡಬಲ್ಲದು. ಉತ್ಸಾಹದಿಂದ ಕೆಲಸ ನಿರ್ವಹಿಸುವ ಮನಃಸ್ಥಿತಿಯನ್ನು ಹೊಂದಿರಿ. ನಿಮ್ಮ ಹೃದಯದ ಸ್ವಭಾವವು ಎಲ್ಲಾ ಹೃದಯಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ.

ಸಿಂಹ
ಈ ರಾಶಿಯವರು ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಹೊಂದಲು ಪ್ರತಿಯೊಂದು ಸನ್ನಿವೇಶವು ಅನುವುಮಾಡಿಕೊಡುತ್ತದೆ. ಇವರು ಈ ತಿಂಗಳಲ್ಲಿ ಯಶಸ್ಸಿನ ಅವಕಾಶಗಳನ್ನು ಪಡೆದುಕೊಳ್ಳುವರು. ಅಲ್ಲದೆ ನಿಮ್ಮ ಕೆಲವು ಯೋಜನೆಗಳು ಹಣಕಾಸಿಗೆ ಸಂಬಂಧಿಸಿದ ಪ್ರಯೋಜನಗಳನ್ನು ನೀಡುತ್ತವೆ. ಯಾವುದೇ ಹೊಸ ಯೋಜನೆಗಳಿದ್ದರೆ ಅದನ್ನು ಕಾರ್ಯಗತಗೊಳಿಸಲು ಇದು ಉತ್ತಮವಾದ ಸಮಯ. ತಿಂಗಳ ಅಂತ್ಯದ ವರೆಗೂ ಸಂದರ್ಭಗಳು ಅನುಕೂಲವನ್ನು ತಂದುಕೊಡುತ್ತವೆ. ಹಣ ಸಂಪಾದನೆಯ ವಿಚಾರದಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸೇರಿ ವ್ಯವಹಾರ ಮಾಡದಿರಿ. ಎಲ್ಲಾ ಕೆಲಸವನ್ನು ನೀವೇ ನಿರ್ವಹಿಸಲು ಪ್ರಯತ್ನಿಸಿ.

ಕನ್ಯಾ
ಈ ರಾಶಿಯವರು ವೃತ್ತಿಪರ ಪ್ರಗತಿಯನ್ನು ಕಾಣಲು ಅವಕಾಶವನ್ನು ಪಡೆದುಕೊಳ್ಳುವರು. ಅದೃಷ್ಟ ಇವರ ಕಡೆ ಇರುವುದರಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳುವರು. ಜಿತೆಗೆ ಸಾಕಷ್ಟು ಸೌಲಭ್ಯಗಳು ಲಭ್ಯವಾಗುವುದು. ಉತ್ಸವಗಳಲ್ಲಿ ಉತ್ತಮ ರೀತಿಯಾಗಿಯೇ ಪಾಲ್ಗೊಳ್ಳಲು ಹಣದ ಅನುಕೂಲ ಇರುವುದು. ಇವರು ಸಾಮಾನ್ಯವಾಗಿ ಉತ್ತಮ ಕೆಲಸಗಾರರಾಗಿರುತ್ತಾರೆ. ಹಾಗಾಗಿ ಉತ್ತಮ ಫಲಿತಾಂಶವನ್ನು ಇವರು ಎದುರು ನೋಡಬಹುದು.

ಮಕರ
ಈ ತಿಂಗಳಲ್ಲಿ ಇವರು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಒತ್ತಡವನ್ನು ಎದುರಿಸಬೇಕಾಗುವುದು. ಆದರೆ ಆರ್ಥಿಕ ಸುಧಾರಣೆಯ ಸಾಧ್ಯತೆಗಳಿವೆ. ಅಲ್ಲದೆ ಹಣದ ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು. ಒಬ್ಬ ಸಂಘಟಿತ ವ್ಯಕ್ತಿಯಿಂದ ವಿಚಾರವನ್ನು ವ್ಯವಸ್ಥಿತ ರೀತಿಯಲ್ಲಿ ಮುಂದುವರಿಸುವಿರಿ. ಈ ನಿಟ್ಟಿನಲ್ಲಿಯೇ ಇವರು ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುವರು.



Click it and Unblock the Notifications











