Latest Updates
-
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ
ಆಗಸ್ಟ್ 11ರ ಸೂರ್ಯ ಗ್ರಹಣ: ಯಾವ್ಯಾವ ರಾಶಿಯವರಿಗೆ ಹೆಚ್ಚು ಪ್ರಭಾವ ಬೀರಲಿದೆ?
ಸೃಷ್ಟಿಯ ಸಮತೋಲನವನ್ನು ಕಾಪಾಡುವವನು ಸೂರ್ಯ ದೇವ. ಸೂರ್ಯನ ಪ್ರಭಾವ ಉತ್ತಮವಾಗಿದ್ದಾಗ ಸೃಷ್ಟಿಯು ಸುರಕ್ಷಿತವಾಗಿರುತ್ತದೆ. ನಮ್ಮ ಸುತ್ತಲಿನ ಪರಿಸರದಲ್ಲಿ ಸೂರ್ಯನ ಪ್ರಭಾವ ಹೇಗೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆಯೋ ಹಾಗೆಯೇ ನಮ್ಮ ಕುಂಡಲಿ ಹಾಗೂ ರಾಶಿಚಕ್ರಗಳ ಮೇಲೆಯೂ ಗಂಭೀರವಾದ ಪ್ರಭಾವ ಬೀರುವುದು. ಹಾಗಾಗಿ ಸೂರ್ಯ ಮತ್ತು ಚಂದ್ರರಿಗೆ ಗ್ರಹಣ ಉಂಟಾದರೆ ಅದನ್ನು ಸೂತಕ ಹಾಗೂ ದುಃಖದ ಸಂಗತಿ ಎಂದು ಪರಿಗಣಿಸಲಾಗುವದು.
ಆಗಸ್ಟ್ 11ರಂದು ನಡೆಯಲಿರುವ ಸೂರ್ಯ ಗ್ರಹಣವು ಈ ವರ್ಷದ ಮೂರನೇ ಗ್ರಹಣ. ಈ ಬಾರಿಯ ಸೂರ್ಯಗ್ರಹಣವು ಸೂರ್ಯನಿಗೆ 18 ಡಿಗ್ರಿಯಷ್ಟು ಹಿಡಿಯಲಿದೆ. ಅದು 41 ನಿಮಿಷಗಳ ಕಾಲ ಇರುವುದು ಎಂದು ಹೇಳಲಾಗುವುದು. ಪ್ರಭಾವ ಶಾಲಿಯಾದ ಈ ಗ್ರಹಣವು ಪ್ರಕೃತಿಯಲ್ಲಿ ಬದಲಾವಣೆಯ ಜೊತೆಗೆ ವ್ಯಕ್ತಿಯ ಜೀವನದಲ್ಲೂ ಕೆಲವು ಬದಲಾವಣೆಯನ್ನು ತರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಸೂರ್ಯ ಗ್ರಹಣದಿಂದ ಪ್ರತಿ ರಾಶಿಚ್ರದ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಅದರಿಂದ ಉಂಟಾಗುವ ಬದಲಾವಣೆಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳುವ ಕುತೂಹಲದಲ್ಲಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.....

ಮೇಷ
ಈ ಗ್ರಹಣದ ಪ್ರಭಾವದಿಂದ ಈ ರಾಶಿಚಕ್ರದವರು ತಮ್ಮ ಸುತ್ತಲಿನಲ್ಲಿ ಅನೇಕ ಬದಲಾವಣೆಯನ್ನು ಕಂಡುಕೊಳ್ಳುವರು. ಇವರು ತಮ್ಮ ವೃತ್ತಿ ಜೀವನದಲ್ಲಿ ಆದಷ್ಟು ಎಚ್ಚರವಾಗಿರುವುದು ಒಳ್ಳೆಯದು. ಸೂರ್ಯ ಗ್ರಹಣವು ಈ ಮನೆಯ ಮೇಲೆ ಹೆಚ್ಚಿನ ಪ್ರಭಾವ ಬೀರುವುದರಿಂದ ಕೆಲವು ಬಿಕ್ಕಟ್ಟುಗಳು ನಿರ್ಮಾಣವಾಗ ಬಹುದು. ಸಂಬಂಧದಲ್ಲಿ ಸಾಮರಸ್ಯವನ್ನು ತರಲು ಸೂರ್ಯನು ಸಹಾಯ ಮಾಡುವನು. ಹಣ ಮತ್ತು ವ್ಯವಹಾರದ ವಿಚಾರದಲ್ಲಿ ಸಾಕಷ್ಟು ನಿಮ್ಮ ಪರವಾದ ಫಲಿತಾಂಶವನ್ನು ಪಡೆದುಕೊಳ್ಳುವಿರಿ.

ವೃಷಭ
ಇವರ ಮಾರ್ಗದರ್ಶಕ ಗ್ರಹವಾದ ಶುಕ್ರನು ಆನಂದದ ಸಮಯವನ್ನು ತಂದುಕೊಡುವನು. ಸೃಜನಾತ್ಮಕ ಮತ್ತು ಪ್ರಣಯವನ್ನು ಅನುಭವಿಸಲು ಇದು ಉತ್ತಮವಾದ ಸಮಯವಾಗಿದೆ. ನಿಮ್ಮ ಸಂವಹನ ಕ್ಷೇತ್ರದಲ್ಲಿ ಸೂರ್ಯ ಪ್ರಭಾವದಿಂದ ಕೆಲವು ಅಹಿತಕರವಾದ ಅನುಭವವನ್ನು ಅನುಭವಿಸುವಿರಿ. ನಿಮ್ಮ ಸುತ್ತಲಿನ ಪರಿಸರ ಹಾಗೂ ಸ್ಥಿತಿಗಳು ಉತ್ತಮವಾಗಿರುವುದು ಎಂದು ಗುರು ಗ್ರಹವು ಖಚಿತಪಡಿಸುವುದು.

ಮಿಥುನ
ಸೂರ್ಯ ಗ್ರಹಣ ಹಾಗೂ ಪ್ಲುಟೋ ಗ್ರಹದ ಪ್ರಭಾವ ಗಂಭೀರವಾಗಿ ಬೀರುವುದರಿಂದ ಹಣಕಾಸಿಗೆ ಸಂಬಂಧಿಸಿದಂತೆ ಯಾವುದೇ ದೊಡ್ಡ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಸ್ವಲ್ಪ ಸಮಯ ಕಾಯುವುದು ಒಳ್ಳೆಯದು. ಶುಕ್ರನು ನಿಮ್ಮ ಮನೆಗೆ ಹೋಗುವ ಸಂದರ್ಭದಲ್ಲಿ ನೀವು ಮನೆಯನ್ನು ಅಲಂಕರಿಸುವುದರ ಮೂಲಕ ಸಂತೋಷವನ್ನು ಪಡೆದುಕೊಳ್ಳುವಿರಿ. ಇಂತಹ ಕೆಲಸದಲ್ಲಿ ನೀವು ಸಂಪೂರ್ಣವಾಗಿ ತೊಡಗಿಕೊಳ್ಳುವುದು ಉತ್ತಮ.

ಕರ್ಕ
ಮುಂಬರುವ ದಿನಗಳಲ್ಲಿ ನೀವು ಎದುರಿಸುತ್ತಿರುವ ತೊಂದರೆಗಳನ್ನು ಬಗೆಹರಿಸಲು ಸಾಧ್ಯವಾಗುವುದು. ಈ ರಾಶಿಚಕ್ರದ ಮೇಲೆ ಸೂರ್ಯ ಗ್ರಹಣದ ಪ್ರಭಾವ ಗಾಢವಾಗಿ ಇರುವುದರಿಂದ ದೊಡ್ಡ ಬದಲಾವಣೆಯನ್ನು ಕಂಡುಕೊಳ್ಳುವರು. ಹೊಸ ಉದ್ಯೋಗ ಅಥವಾ ಉದ್ಯಮದಲ್ಲಿ ತೊಡಗಿಕೊಳ್ಳಲು ಇದು ಉತ್ತಮವಾದ ಸಮಯವಾಗುವುದು.

ಸಿಂಹ
ಆರ್ಥಿಕ ವಿಚಾರದಲ್ಲಿ ಶುಕ್ರನು ಹಣ ವ್ಯಯ ಮಾಡಲು ಒಲವು ತೋರುವಂತೆ ಮಾಡುವನು. ಆರೋಗ್ಯಕರವಾದ ಖರೀದಿಯಲ್ಲಿದ್ದರೆ ಆರ್ಥಿಕ ಸ್ಥಿತಿಯು ಸುಗಮವಾಗಿರುವುದು. ಸೂರ್ಯ ಗ್ರಹಣದ ಪ್ರಭಾವದಿಂದ ಆಧ್ಯಾತ್ಮಿಕ ಮತ್ತು ಮಾನಸಿಕ ವಲಯದ ಮೇಲೆ ಹೊಸ ಆರಂಭವನ್ನು ಕಂಡುಕೊಳ್ಳುವರು. ಹಿಂದಿನ ಕೆಲವು ವಿಚಾರದಲ್ಲಿ ಸಂಪೂರ್ಣವಾಗಿ ವಿರಾಮವನ್ನು ಅನುಭವಿಸುವಿರಿ.

ಕನ್ಯಾ
ಶುಕ್ರನ ಪ್ರಭಾವದಿಂದ ನೀವು ಈ ವರೆಗೆ ನೋಡದೆ ಇರುವ ವ್ಯಕ್ತಿಗಳೊಂದಿಗೆ ಸಂಪರ್ಕ ಕಲ್ಪಿಸಲು ಬಯಸುವಿರಿ. ನಿಮ್ಮ ನೈಜತೆಯನ್ನು ಗುರುತಿಸಿಕೊಳ್ಳುವಿರಿ. ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಉತ್ತಮ ಸಮಯ. ಕಳೆದ ತಿಂಗಳು ನೀವು ಮಾಡಿದ ಕೆಲಸಕ್ಕೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವಿರಿ. ಕೆಲಸದ ಬದ್ಧತೆಗಳ ನಡುವೆ ಸಮತೋಲನವನ್ನು ಕಂಡುಕೊಳ್ಳಿ.

ತುಲಾ
ಈ ರಾಶಿಯ ಆಳ್ವಿಕೆಯ ಗ್ರಹ ಶುಕ್ರ. ಇದು ಇವರ ಆಧ್ಯಾತ್ಮಿಕ ವಲಯದ ಮೇಲೆ ಚಲಿಸುತ್ತದೆ. ಸ್ನೇಹಿತರಿಗೆ ಸಹಾಯ ಮಾಡಲು ಇದು ಉತ್ತಮ ಸಮಯ ಎಂದು ಹೇಳಲಾಗುವುದು. ಗುರು ಗ್ರಹದ ಪ್ರಭಾವದಿಂದ ಹಣದ ಹರಿವನ್ನು ಅನುಭವಿಸುವಿರಿ. ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಅನುಭವಿಸಬಹುದು. ಸೂರ್ಯ ಗ್ರಹಣದಿಂದ ವೃತ್ತಿ ಜೀವನದಲ್ಲಿ ಬದಲಾವಣೆ ಉಂಟಾಗುವುದು.

ವೃಶ್ಚಿಕ
ಬುಧ ಗ್ರಹವು ಇವರ ವೃತ್ತಿ ಜೀವನದಲ್ಲಿ ಹೆಚ್ಚಿನ ಸಾಮಥ್ರ್ಯವನ್ನು ತೋರಿಸಲು ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಶುಕ್ರನು ನಿಮ್ಮ ಸಾಮಾಜಿಕ ವಲಯದ ಮೇಲೆ ಪ್ರಭಾವ ಬೀರುವನು. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಅವಕಕಾಶಗಳನ್ನು ಪಡೆದುಕೊಳ್ಳುವಿರಿ. ಪ್ರಣಯದ ಜೀವನದಲ್ಲಿ ಹೊಸ ಬದಲಾವಣೆಯನ್ನು ಕಂಡುಕೊಳ್ಳುವಿರಿ. ಸೂರ್ಯ ಗ್ರಹಣದ ಪ್ರಭಾವದಿಂದ ಹೊಸ ಕೆಲಸಗಳ ಅನ್ವೇಷಣೆಗೆ ಪ್ರೇರಣೆ ದೊರೆಯುವುದು.

ಧನು
ಇದೀಗ ನೀವು ನಿಮ್ಮ ಗುರಿ ಹಾಗೂ ವೃತ್ತಿಯ ಬಗ್ಗೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವ ಸಮಯ ಎನ್ನಬಹುದು. ನಿಮ್ಮ ಯೋಜನೆಯನ್ನು ಮುಂದುವರಿಸಿ, ವ್ಯವಹಾರವನ್ನು ಕೈಗೊಳ್ಳಲು ಉತ್ತಮ ಸಮಯ ಎನ್ನಬಹುದು. ಸೂರ್ಯ ಗ್ರಹಣದ ಪ್ರಭಾವ ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ನೀಡುವಂತೆ ಪ್ರೋತ್ಸಾಹಿಸುವುದು. ಅನೇಕ ಬದಲಾವಣೆಗಳು ನಿಮ್ಮ ಪರವಾಗಿ ನಿಲ್ಲುವುದು.

ಮಕರ
ಕೆಲವು ವಿಚಾರದಲ್ಲಿ ನೀವು ನಿಖರವಾದ ಲೆಕ್ಕಾಚಾರ ಮಾಡಲು ಪರಿಪೂರ್ಣವಾದ ಸಮಯ. ಶುಕ್ರನು ನಿಮ್ಮ ಪ್ರಣಯ ಜೀವನದಲ್ಲಿ ಉಲ್ಲಾಸವನ್ನು ನೀಡುವುದು. ಸೂರ್ಯಗ್ರಹಣದಿಂದ ಸಂಬಂಧಗಳಲ್ಲಿ ಬದಲಾವಣೆಯನ್ನು ಕಂಡುಕೊಳ್ಳುವಿರಿ. ಜೀವನದ ಅನೇಕ ವಿಚಾರಗಳು ಧನಾತ್ಮ ಮಾರ್ಗದಲ್ಲಿ ಚಲಿಸುವುದು.

ಕುಂಭ
ಶುಕ್ರನು ನಿಮ್ಮ ವ್ಯಾಪಾರ ಕ್ಷೇತ್ರದ ಮೇಲೆ ಉತ್ತಮ ಪರಿಣಾಮವನ್ನು ನೀಡುವನು. ಅಲ್ಲದೆ ಸಂಬಂಧ ಹಾಗೂ ಸಂಗಾತಿಗಳ ನಡುವೆ ಅನ್ಯೋನ್ಯತೆಯನ್ನು ಕಾಣುವಿರಿ. ವ್ಯವಹಾರದ ಮಾತುಕತೆಯಲ್ಲಿ ದಾರಿ ತಪ್ಪುವ ಸಾಧ್ಯತೆಗಳಿರುತ್ತವೆ. ಆದರೆ ಒಂದಿಷ್ಟು ಲಾಭವನ್ನು ಗಳಿಸುವಿರಿ. ವೃತ್ತಿ ಜೀವನದಲ್ಲಿ ಗುರಿಯನ್ನು ತಲುಪಲು ವೇಗವಾಗಿ ಚಲಿಸುವಿರಿ.

ಮೀನ
ಸೂರ್ಯ ಗ್ರಹಣದ ಪ್ರಭಾವದಿಂದ ನಿಮ್ಮ ಪ್ರೀತಿಯ ಜೀವನವು ಬೆಳಗುವುದು. ಗುರು ಗ್ರಹವು ನಿಮ್ಮ ಪ್ರಯಾಣ ಮತ್ತು ಪರಿಶೋಧನಾ ವಲಯದಲ್ಲಿ ನೇರವಾಗಿ ತಿರುಗುವುದು. ಅಲ್ಲದೆ ಕೆಲವು ವಿಚಾರದಲ್ಲಿ ಹೊಸ ಆರಂಭವನ್ನು ಕಾಣುವಿರಿ. ಅನುಚಿತ ಸ್ನೇಹಿತರಿಂದ ದೂರ ಇರಲು ಅವಕಾಶ ನೀಡುವುದು. ಕೆಲವು ವ್ಯಕ್ತಿಗಳಿಂದ ದೂರ ಸರಿಯುವುದರ ಮೂಲಕ ನಿಮ್ಮ ಸೃಜನಶೀಲತೆ ಮತ್ತು ಪ್ರಣಯದ ಅವಕಾಶಗಳು ಹೆಚ್ಚುವುದು.



Click it and Unblock the Notifications











