For Quick Alerts
ALLOW NOTIFICATIONS  
For Daily Alerts

ಜನ್ಮ ದಿನಾಂಕದ ರಹಸ್ಯ: ಸಂಖ್ಯೆ ಹೇಳಿ, ಭವಿಷ್ಯ ಕೇಳಿ!

|

ಜನ್ಮ ಎನ್ನುವುದು ವ್ಯಕ್ತಿಗೆ ಸಿಕ್ಕ ಒಂದು ಅದೃಷ್ಟ. ಆ ಅದೃಷ್ಟವನ್ನು ನಾವು ಯಾವ ಸಮಯದಲ್ಲಿ ಹಾಗೂ ದಿನಾಂಕದಲ್ಲಿ ಪಡೆದು ಕೊಂಡಿದ್ದೇವೆ ಎನ್ನುವುದು ಬಹಳ ಮುಖ್ಯ. ನಾವು ಹುಟ್ಟಿದ ಸಮಯ ಹಾಗೂ ದಿನಾಂಕವು ಉತ್ತಮವಾಗಿತ್ತು ಎಂದರೆ ಜೀವನದಲ್ಲಿ ನಾವು ಅಂದು ಕೊಂಡಿದ್ದನ್ನು ಬಹಳ ಸುಲಭವಾಗಿ ಪಡೆದು ಕೊಳ್ಳಬಹುದು. ಕೆಲವೊಮ್ಮೆ ನಾವು ಬಯಸದಿದ್ದರೂ ಅದೃಷ್ಟವು ನಮ್ಮನ್ನು ಉತ್ತುಂಗದ ಸ್ಥಾನಕ್ಕೆ ಕರೆದೊಯ್ಯುವುದು.

2018ರಲ್ಲಿ ಗ್ರಹಗತಿಗಳ ಸಂಚಾರ ಹಾಗೂ ಮನೆಗಳ ಬದಲಾವಣೆಯು ನಿಯಮಿತವಾಗಿ ಬದಲಾವಣೆ ಕಾಣುವುದು. ಇದು ಬಹುತೇಕ ಉತ್ತಮ ಫಲಿತಾಂಶವನ್ನು ನೀಡುತ್ತವೆ. ಆದರೆ ಅದು ಹುಟ್ಟಿದ ತಾರೀಖಿನ ಮೇಲೆ ಕೆಲವು ಬದಲಾವಣೆಗಳನ್ನು ಕಾಣಬೇಕಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 1ನೇ ತಾರೀಖಿನಿಂದ 31ರ ತಾರೀಖಿನಲ್ಲಿ ಹುಟ್ಟಿದವರಿಗೆ ಈ ವರ್ಷ ಬೇರೆ ಬೇರೆ ಅದೃಷ್ಟ ಹಾಗೂ ಜ್ಯೋತಿಷ್ಯ ಫಲವನ್ನು ಅನುಭವಿಸಲಿದ್ದಾರೆ ಎಂದು ಹೇಳಲಾಗುವುದು. ನಿಮಗೂ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕು. ಈ ವರ್ಷ ನಿಮ್ಮ ಹುಟ್ಟಿದ ದಿನಾಂಕದಲ್ಲಿ ಯಾವೆಲ್ಲಾ ಬದಲಾವಣೆಯನ್ನು ಕಾಣಲಿದ್ದೀರಿ ಎನ್ನುವುದನ್ನು ತಿಳಿಯಲು ಈ ಮುಂದೆ ವಿವರಿಸಲಾದ ವಿವರಣೆಯನ್ನು ಅರಿಯಿರಿ....

ನೀವು ಹುಟ್ಟಿದ ದಿನಾಂಕ 1, 10, 19, 28 ಆಗಿದ್ದರೆ

ನೀವು ಹುಟ್ಟಿದ ದಿನಾಂಕ 1, 10, 19, 28 ಆಗಿದ್ದರೆ

ನಿಮಗೆ ಹೊಸ ಉಪಕ್ರಮ ಹಾಗೂ ಆರಂಭವನ್ನು ಕಾಣಲಿದ್ದೀರಿ. ಆರ್ಥಿಕ ವಿಚಾರದಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಯನ್ನು ಅನುಭವಿಸಲಿದ್ದೀರಿ. 2018ರ ವರ್ಷವು ನಿಮಗೆ ಪ್ರಬಲವಾದ ಯಶಸ್ಸು ತಂದುಕೊಡುವುದು. ನಿಮ್ಮ ಆದಾಯದಲ್ಲಿ ಸ್ಥಿರವಾದ ಸುಧಾರಣೆ ಉಂಟಾಗ ಬಹುದು. ಅಂತೆಯೇ ಖರ್ಚು ಸಹ ದ್ವಿಗುಣವಾಗುವುದು. ಹಣದ ಲಾಭ ಪಡೆದುಕೊಳ್ಳಲು ಅಷ್ಟಾಗಿ ಅನುಕೂಲ ಆಗದು. ನಿಮ್ಮ ಶತ್ರುಗಳಿಂದ ನೀವು ದೂರ ಉಳಿಯುವಿರಿ.

ನೀವು ಹುಟ್ಟಿದ ದಿನಾಂಕ 2, 11, 20 ಮತ್ತು 29 ಆಗಿದ್ದರೆ

ನೀವು ಹುಟ್ಟಿದ ದಿನಾಂಕ 2, 11, 20 ಮತ್ತು 29 ಆಗಿದ್ದರೆ

ಈ ವರ್ಷ ನೀವು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುವುದು. ನಿಮ್ಮ ವೈಯಕ್ತಿಕ ಜೀವನದಲ್ಲಿ ಹಾಗೂ ವೃತ್ತಿ ಕ್ಷೇತ್ರದಲ್ಲಿ ಕುಟುಂಬದವರು ಹಾಗೂ ಸ್ನೇಹಿತರಿಂದ ಸಾಕಷ್ಟು ಸಹಾಯ ಉಂಟಾಗುವುದು. ನೀವು ಯಶಸ್ಸನ್ನು ಪಡೆಯಲು ಪ್ರಯತ್ನಗಳನ್ನು ಹೆಚ್ಚಿಸಬೇಕು. ಭೂಮಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳುವಿರಿ. ಅಂತೆಯೇ ಖರ್ಚುಗಳು ಸಹ ಹೆಚ್ಚಾಗಿರುತ್ತವೆ. ಸೂಕ್ತ ಆಹಾರವನ್ನು ಸೇವಿಸುವುದರ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಲಾಗುವುದು. ಇವರಿಗೆ ಶನಿವಾರ ಮತ್ತು ಭಾನುವಾರ ಹೆಚ್ಚಿನ ಅದೃಷ್ಟ ತಂದುಕೊಡುವುದು. 3, 17 ಮತ್ತು 21 ಅದೃಷ್ಟದ ಸಂಖ್ಯೆಯಾಗಲಿವೆ.

ನೀವು ಹುಟ್ಟಿದ ದಿನಾಂಕ 3, 12, 21 ಮತ್ತು 30 ಆಗಿದ್ದರೆ

ನೀವು ಹುಟ್ಟಿದ ದಿನಾಂಕ 3, 12, 21 ಮತ್ತು 30 ಆಗಿದ್ದರೆ

3ನೇ ಸಂಖ್ಯೆಯು ಗುರು ಗ್ರಹದಿಂದ ಆಳಲ್ಪಡುವ ಸಂಖ್ಯೆಯಾಗಿರುತ್ತದೆ. ಗುರುವು ನಾಯಕತ್ವ ಹಾಗೂ ಜ್ಞಾನದ ಗ್ರಹವಾಗಿರುತ್ತದೆ ಎನ್ನಲಾಗುವುದು. ಈ ವರ್ಷವು ನಿಮಗೆ ಅಸಾಧಾರಣ ಬೆಳವಣಿಗೆಯನ್ನು ತಂದುಕೊಡುವುದು. ಬಾಕಿ ಉಳಿದಿರುವ ಕೆಲಸಗಳೆಲ್ಲವೂ ಪೂರ್ಣಗೊಳ್ಳುವುದು. ಹೊಸ ವಾಹನಗಳ ಖರೀದಿ ಮಾಡುವ ಸಾಧ್ಯತೆಗಳಿವೆ. ಹಳದಿ ಮತ್ತು ಕಿತ್ತಳೆ ಬಣ್ಣವು ಇವರಿಗೆ ಶುಭಕರವಾದದ್ದು. ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ ಹೆಚ್ಚಿನ ಅದೃಷ್ಟವನ್ನು ತಂದುಕೊಡುತ್ತದೆ. 3, 9, 17 ಮತ್ತು 21 ಅದೃಷ್ಟದ ಸಂಖ್ಯೆಯಾಗಿರುತ್ತದೆ.

ನೀವು ಹುಟ್ಟಿದ ದಿನಾಂಕ 4, 13, 22, 31 ಆಗಿದ್ದರೆ

ನೀವು ಹುಟ್ಟಿದ ದಿನಾಂಕ 4, 13, 22, 31 ಆಗಿದ್ದರೆ

ಈ ಸಂಖ್ಯೆಗಳು ಯುರೇನಸ್ ಗ್ರಹದಿಂದ ಆಳಲ್ಪಡುತ್ತವೆ. ಈ ಗ್ರಹವು ಸೂರ್ಯನೊಂದಿಗೆ ಪರೋಕ್ಷವಾದ ಸಂಪರ್ಕವನ್ನು ಪಡೆದುಕೊಂಡಿರುತ್ತದೆ. ವರ್ಷದ ಆರಂಭದಲ್ಲಿ ಯಶಸ್ಸಿನ ಮಟ್ಟವು ಹೆಚ್ಚಾಗಿರುತ್ತದೆ. ವ್ಯಾಪಾರದಲ್ಲಿ ಇರುವವರಿಗೆ ಅಧಿಕ ಲಾಭ ಉಂಟಾಗುವುದು. ವರ್ಷದ ಮಧ್ಯದ ಅವಧಿಯಲ್ಲೂ ಲಾಭದಾಯಕವಾದ ಸ್ಥಿತಿಯನ್ನು ಅನುಭವಿಸುವರು. ಕಲಾವಿದರಿಗೆ ಅತ್ಯುತ್ತಮ ಸಂಪರ್ಕಗಳು ಉಂಟಾಗಬಹುದು. ಹಣ ಮಾಡಲು ಈ ವರ್ಷ ಹೆಚ್ಚಿನ ಅವಕಾಶ ಹಾಗೂ ಆದ್ಯತೆಯನ್ನು ಒದಗಿಸಿಕೊಡುತ್ತದೆ. ಇವರಿಗೆ ಬೆಳ್ಳಿಯ ಬಣ್ಣ ಮತ್ತು ಹಳದಿ ಬಣ್ಣ ಶುಭಕರವಾದದ್ದು. ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಅದೃಷ್ಟದ ವಾರಗಳು. 4, 5, 8 ಮತ್ತು 10ರ ಸಂಖ್ಯೆ ಶುಭ ಸಂಖ್ಯೆಯಾಗುವುದು.

ನೀವು ಹುಟ್ಟಿದ ದಿನಾಂಕ 5, 14 ಮತ್ತು 23 ಆಗಿದ್ದರೆ

ನೀವು ಹುಟ್ಟಿದ ದಿನಾಂಕ 5, 14 ಮತ್ತು 23 ಆಗಿದ್ದರೆ

5ರ ಸಂಖ್ಯೆಯು ಬುಧ ಗ್ರಹದಿಂದ ಆಳಲ್ಪಡುತ್ತದೆ. ಇವರಿಗೆ 2018ರ ವರ್ಷ ಉತ್ತಮ ವರ್ಷವಾಗಲಿದೆ. ಸೂರ್ಯನ ಚಿಹ್ನೆಯನ್ನು ಹೊಂದಿರುವ ರಾಶಿಚಕ್ರದವರಿಗೂ ಇದು ಉತ್ತಮ ವರ್ಷವಾಗಲಿದೆ. ಹೊಸ ಸಾಧನೆಗಳಿಗೆ ಅವಕಕಾಶವನ್ನು ಪಡೆದುಕೊಳ್ಳುವಿರಿ. ಜೊತೆಗೆ ವಿದೇಶ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿರುತ್ತವೆ. ವೈಯಕ್ತಿಕ ಬೆಳವಣಿಗೆಗೂ ಈ ವರ್ಷ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಸವಾಲಿನ ಕೆಲಸವನ್ನು ನೀವು ನಿಯೋಜಿಸುವಿರಿ. ತಿಳಿ ನೀಲಿ ಬಣ್ಣವು ಶುಭಕರವಾದದ್ದು. 1, 3, 5, 10, 30 ಮತ್ತು 31ನೇ ಸಂಖ್ಯೆಯು ಅದೃಷ್ಟದ ಸಂಖ್ಯೆಯಾಗುವುದು. ಭಾನುವಾರ ಮತ್ತು ಶುಕ್ರವಾರ ಅದೃಷ್ಟದ ದಿನವಾಗುವುದು.

ನೀವು ಹುಟ್ಟಿದ ದಿನಾಂಕ 6, 15, 24 ಆಗಿದ್ದರೆ

ನೀವು ಹುಟ್ಟಿದ ದಿನಾಂಕ 6, 15, 24 ಆಗಿದ್ದರೆ

ಈ ಸಂಖ್ಯೆಯು ಶುಕ್ರನಿಂದ ನಿಯಂತ್ರಿಸಲ್ಪಡುತ್ತದೆ. ಸಂಖ್ಯೆ 6ರಲ್ಲಿ ಜನಿಸಿದ ವೃಷಭ ಮತ್ತು ತುಲಾ ರಾಶಿಯವರಿಗೆ ಪ್ರಮುಖ ಪರಿಣಾಮಗಳನ್ನು ಅನುಭವಿಸುವರು. ಇವರು ಹೊಸ ವಾಹನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಸರ್ಕಾರಿ ಉದ್ಯೋಗದಲ್ಲಿ ಇರುವವರು ಉತ್ತಮ ಪ್ರಚಾರವನ್ನು ಪಡೆದುಕೊಳ್ಳುವರು. ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಕೆಲವು ಸವಾಲುಗಳು ಎದುರಾಗಬಹುದು. ಕೆಲಸ ನಿಮಿತ್ತ ಸಾಕಷ್ಟು ಹಣವನ್ನು ವ್ಯಯ ಮಾಡುವ ಸಾಧ್ಯತೆಗಳಿವೆ. ಇವರಿಗೆ ಗುಲಾಬಿ ಬಣ್ಣವು ಶುಭಕರವಾದದ್ದು. 14,17 ಮತ್ತು18 ಶುಭ ಸಂಖ್ಯೆಗಳು. ಮಂಗಳ ಮತ್ತು ಶುಕ್ರವಾರ ಹೆಚ್ಚಿನ ಅದೃಷ್ಟವನ್ನು ತಂದುಕೊಡುವುದು.

ನೀವು ಹುಟ್ಟಿದ ದಿನಾಂಕ 7, 16 ಮತ್ತು 25 ಆಗಿದ್ದರೆ

ನೀವು ಹುಟ್ಟಿದ ದಿನಾಂಕ 7, 16 ಮತ್ತು 25 ಆಗಿದ್ದರೆ

7ರ ಸಂಖ್ಯೆಯನ್ನು ನೆಪ್ಚೂನ್ ಆಳ್ವಿಕೆಗೆ ಒಳಗಾಗುತ್ತದೆ. ಇವರಿಗೆ ಈ ವರ್ಷವು ಸ್ವಯಂ ತಿಳಿವಳಿಕೆಯ ಒಂದು ವರ್ಷವನ್ನು ಊಹಿಸುತ್ತದೆ. ಉದ್ಯಮಿಗಳಿಗೆ ಲಾಭವನ್ನು ತಂದುಕೊಡುವುದು. ಕೋರ್ಟ್ ಪ್ರಕರಣಗಳು ಅಥವಾ ದಾವೆಗಳು ಇದ್ದರೆ ಅವು ಯಶಸ್ವಿಯಾಗುತ್ತವೆ. ವಿಜ್ಞಾನ ಕ್ಷೇತ್ರದಲ್ಲಿ ಇರುವವರು ಬೆಳವಣಿಗೆಯನ್ನು ಕಾಣುತ್ತಾರೆ ಎಂದು ಹೇಳಲಾಗುವುದು. ಕಂದು ಬಣ್ಣ ಹಾಗೂ ಕಂದು ಕೆಂಪು ಬಣ್ಣವು ಶುಭಕರವಾದದ್ದು. 13, 12 ಮತ್ತು 19 ಅದೃಷ್ಟದ ಸಂಖ್ಯೆಗಳು. ಮಂಗಳವಾರ ಮತ್ತು ಗುರುವಾರ ಇವರಿಗೆ ಉತ್ತಮವಾದ ವಾರಗಳು.

ನೀವು ಹುಟ್ಟಿದ ದಿನಾಂಕ 8, 17 ಮತ್ತು 26 ಆಗಿದ್ದರೆ

ನೀವು ಹುಟ್ಟಿದ ದಿನಾಂಕ 8, 17 ಮತ್ತು 26 ಆಗಿದ್ದರೆ

8ರ ಸಂಖ್ಯೆಯನ್ನು ಶನಿಯು ಆಳುತ್ತದೆ. ಇವರಿಗೆ ಸಾಮಾಜಿಕ ಮತ್ತು ರಾಜಕೀಯವಾಗಿ ರೂಪಾಂತರವಾದ ವರ್ಷವಾಗಿರುತ್ತದೆ. ಕುಂಭ ಮತ್ತು ಮಕರ ರಾಶಿಯವರಿಗೂ ಈ ವರ್ಷ ಅದೃಷ್ಟದ ವರ್ಷವಾಗಲಿದೆ. ಭೂಮಿಗೆ ಸಂಬಂಧಿಸಿದ ವ್ಯವಹಾರ ಮಾಡುವವರಿಗೆ ಹಾಗೂ ರಾಸಾಯನಿಕ ಉದ್ಯೋಗದಲ್ಲಿ ಇರುವವರಿಗೆ ಉತ್ತಮ ವರ್ಷವಾಗಲಿದೆ. ಉದ್ಯಮಿಗಳು ಈ ವರ್ಷ ಹೆಚ್ಚಿನ ಲಾಭ ಪಡೆದುಕೊಳ್ಳರು. ಸಹೋದ್ಯೋಗಿಗಳೊಂದಿಗೆ ಸಭ್ಯರಾಗಿರಬೇಕು. ಹಸಿರು ಮತ್ತು ಹಳದಿ ಬಣ್ಣವು ಇವರಿಗೆ ಲಾಭವನ್ನು ತಂದುಕೊಡುತ್ತವೆ. 3, 5, 13, 14, 18, 23 ಮತ್ತು 29 ಅದೃಷ್ಟ ಸಂಖ್ಯೆಯಾಗಲಿವೆ. ಬುಧ ಮತ್ತು ಗುರುವಾರ ಅದೃಷ್ಟದ ವಾರವಾಗಲಿವೆ.

ನೀವು ಹುಟ್ಟಿದ ದಿನಾಂಕ 9, 18 ಮತ್ತು 27ಆಗಿದ್ದರೆ

ನೀವು ಹುಟ್ಟಿದ ದಿನಾಂಕ 9, 18 ಮತ್ತು 27ಆಗಿದ್ದರೆ

9ರ ಸಂಖ್ಯೆಯನ್ನು ಮಂಗಳ ಗ್ರಹವು ಆಳ್ವಿಕೆ ಮಾಡುತ್ತದೆ. ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ಅದೃಷ್ಟದ ವರ್ಷವಾಗಲಿದೆ. ಇದು ನಿಮ್ಮ ಜೀವನದಲ್ಲಿ ಒಂದು ಹೊಸ ತಿರುವನ್ನು ತರುವ ವರ್ಷವಾಗಬಹುದು. ನಿಮ್ಮ ಪ್ರಯತ್ನಗಳಿಗೆ ಪುರಸ್ಕಾರ ದೊರೆಯುವುದು. ನಿಮ್ಮ ಗುರಿ ಮತ್ತು ಆಸೆಗಳನ್ನು ಪೂರೈಸಿಕೊಳ್ಳಲು ಅತ್ಯುತ್ತಮವಾದ ವರ್ಷವಾಗಲಿದೆ. ವೆಚ್ಚಗಳನ್ನು ನಿಯಂತ್ರಣದಲ್ಲಿಡುವಿರಿ. ಬಿಳಿ, ಕೆಂಪು ಮತ್ತು ಹಳದಿ ಬಣ್ಣವು ನಿಮಗೆ ಸಮಾಜದಲ್ಲಿ ಗೌರವವನ್ನು ತಂದುಕೊಡುತ್ತವೆ. 2, 6, 15, 19 21 ಮತ್ತು 30 ನಿಮಗೆ ಅದೃಷ್ಟದ ಸಂಖ್ಯೆಯಾಗಿರುತ್ತವೆ. ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ ಅದೃಷ್ಟದ ವಾರಗಳಾಗಿರುತ್ತವೆ.

English summary

Astrology 2018 based on Date of birth

Astrology 2018 based on Date of birth (1st to 31st) - Number 1 denotes new initiatives and beginning. You might undergo major changes in money matters and political fields. Strong Aspects
X
Desktop Bottom Promotion