ಇವು ವಿಶ್ವದ ನೆಲದಾಳದಲ್ಲಿರುವ ಹತ್ತು ಅದ್ಭುತ ನಗರಗಳು

Posted By: Arshad
Subscribe to Boldsky

ಐತಿಹಾಸಿಕ ಮಹತ್ವವಿರುವ ಸ್ಥಳಗಳು ಇತಿಹಾಸದ ಕೈಗನ್ನಡಿಗಳಾಗಿವೆ. ಇವು ಈ ವಿಶ್ವದ ವಿಸ್ಮಯಗಳನ್ನು ತಮ್ಮ ಇರುವಿಕೆಯ ಮೂಲಕ ಪ್ರಕಟಿಸುತ್ತಾ ನೋಡುವವರನ್ನು ಅಚ್ಚರಿಯ ಕೂಪದಲ್ಲಿ ಮುಳುಗಿಸುತ್ತವೆ. ಇಂತಹ ಒಂದು ಅಚ್ಚರಿಯ ವಿದ್ಯಮಾನವೆಂದರೆ ನೆಲದಾಳದ ನಗರಗಳು. ಕೆಲವು ಹಲವಾರು ಶತಮಾನಗಳ ಹಿಂದೆಯೇ ನಿರ್ಮಿಸಲಾಗಿದ್ದು ಇವು ಸಹಾ ಅಂದಿನ ದಿನಗಳ ಅಗತ್ಯತೆ ಹಾಗೂ ತಂತ್ರಜ್ಞಾನದ ಬಗ್ಗೆ ಕುತೂಹಲ ಮೂಡಿಸುತ್ತವೆ.

ಕೆಲವು ನಗರಗಳು ಅಂದಿನ ದಿನ ಬೀಸುತ್ತಿದ್ದ ಕುಳಿರ್ಗಾಳಿ, ಸುಂಟರಗಾಳಿ ಮೊದಲಾದ ಪ್ರಕೃತಿ ಪ್ರಕೋಪಗಳಿಂದ ಬದುಕುಳಿಯಲು ನಿರ್ಮಿಸಲಾಗಿದ್ದರೆ ಕೆಲವು ವೈರಿಗಳ ಧಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಿರ್ಮಿಸಲ್ಪಟ್ಟಿವೆ. ಇನ್ನೂ ಕೆಲವು ಶೀತಲ ಸಮರದ ಸಮಯದಲ್ಲಿ ತಲೆಮರೆಸಿಕೊಳ್ಳಲು ನಿರ್ಮಿಸಲಾಗಿವೆ.

ಕಾರಣವೇನೇ ಇದ್ದರೂ ಇವೆಲ್ಲವೂ ಒಂದು ಐತಿಹಾಸಿಕ ಮಹತ್ವನ್ನು ಪಡೆದಿವೆ. ಒಂದು ವೇಳೆ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಮಹತ್ವದ ಬಗ್ಗೆ ಅರಿಯಲು ಇಚ್ಚಿಸುವ ಬಯಕೆಯಿದ್ದರೆ ಯಾವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ನಿಮಗೆ ಕೆಳಗೆ ವಿವರಿಸಿರುವ ಐತಿಹಾಸಿಕ ನಗರಗಳ ಬಗೆಗಿನ ವಿವರಗಳು ನಿಮ್ಮ ನೆರವಿಗೆ ಬರಬಹುದು.

ದೇವತೆಗಳ ನಗರ, ಗೀಜಾ ಪ್ರಸ್ಥಭೂಮಿ

ದೇವತೆಗಳ ನಗರ, ಗೀಜಾ ಪ್ರಸ್ಥಭೂಮಿ

ಇತಿಹಾಸದ ಒಂದು ಅದ್ಬುತಗಳಲ್ಲಿ ಒಂದಾಗಿರುವ ಈ ನಗರ ಒಂದು ಆದರ್ಶಪ್ರಾಯವಾದ ವಾಸ್ತುಶಿಲ್ಪದ ಸಾಕಾರವಾಗಿದೆ. ಗೀಜಾ ಪ್ರಸ್ಥಭೂಮಿಯಾದ್ಯಂತ ಹಲವಾರು ನೆಲದಾಳದ ಗುಹೆಗಳಿವೆ ಎಂದು ನಂಬಲಾಗಿದೆ. ಹಾಗೂ ಈ ಗುಹೆಗಳ ತುದಿಗಳಲ್ಲಿ ಅಲ್ಲಲ್ಲಿ ನೆಲದಾಳದ ಕೋಣೆಗಳನ್ನು ನಿರ್ಮಿಸಲಾಗಿತ್ತು. ಯಾವ ಅಗತ್ಯಕ್ಕಾಗಿ ಈ ಗುಹೆಗಳನ್ನು ನಿರ್ಮಿಸಲಾಗಿತ್ತು ಎಂಬ ಬಗ್ಗೆ ಇಂದಿಗೂ ಯಾವುದೇ ಮಾಹಿತಿ ಇಲ್ಲದಿರುವುದು ಇತಿಹಾಸಕಾರರಿಗೆ ಒಂದು ಸವಾಲಾಗಿದೆ. ಇವುಗಳಲ್ಲಿ ಕೆಲವು ಮಾತ್ರವೇ ಪ್ರವಾಸಿಗರಿಗೆ ನೋಡಲು ಲಭ್ಯವಿದ್ದು ಇವುಗಳು ಕುತೂಹಲವನ್ನು ಹೆಚ್ಚಿಸುತ್ತಲೇ ಹೋಗುತ್ತವೆ.

ಪೋಲ್ಯಾಂಡ್‌ನ ವೀಲಿಕ್ಜ್ಕಾ ಉಪ್ಪಿನ ಗಣಿ

ಪೋಲ್ಯಾಂಡ್‌ನ ವೀಲಿಕ್ಜ್ಕಾ ಉಪ್ಪಿನ ಗಣಿ

ಈ ಗಣಿ ಪೋಲ್ಯಾಂಡ್ ದೇಶದ ದಕ್ಷಿಣ ಭಾಗದಲ್ಲಿದೆ. ಇದನ್ನು ಹದಿಮೂರನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಅಂದು ಈ ಗಣಿಯನ್ನು ಬಳಿಕ ಎರಡನೇ ಮಹಾಯುದ್ದದ ಸಮಯದಲ್ಲಿ ಜರ್ಮನ್ ಯೋಧರು ಆಯುಧಗಳನ್ನು ನಿರ್ಮಿಸಲು ಉಪಯೋಗಿಸುತ್ತದ್ದರು. ಈ ನಗರದಲ್ಲಿ ಒಂದು ನೆಲದಾಳದ ಕೊಳವೂ ಇದ್ದು ವರ್ಷಕ್ಕೆ ಹತ್ತು ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಆಸ್ಟ್ರೇಲಿಯಾದ ಕೂಬರ್ ಪೆಡಿ

ಆಸ್ಟ್ರೇಲಿಯಾದ ಕೂಬರ್ ಪೆಡಿ

ಒಂದು ಕಾಲದಲ್ಲಿ ಸುಮಾರು 1600ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಿದ ಈ ನಗರ ಅಂದು ಓಪಲ್ ಕ್ಯಾಪಿಟಲ್ ಎಂದೂ ಕರೆಯಲಾಗುತ್ತಿತ್ತು. ಅಂದು ಓಪಲ್ ಅಥವಾ ಕ್ಷೀರಸ್ಪಟಿಕವನ್ನು ವಿಶ್ವದಲ್ಲಿಯೇ ಅತಿ ಹೆಚ್ಚಾಗಿ ಈ ನಗರದಲ್ಲಿ ಉತ್ಪಾದಿಸಲಾಗುತ್ತಿತ್ತು. ಇದರ ಮನೆಗಳನ್ನು ‘dugouts' ಅಥವಾ ನೆಲಮಾಳಿಗೆ ಎಂದೂ ಕರೆಯಲಾಗುತ್ತದೆ. ಅಂದಿನ ಸಮಯದಲ್ಲಿ ತಡೆಯಲಾರದ ಸೆಖೆಯಿಂದ ರಕ್ಷಣೆ ಪಡೆಯಲು ಈ ನೆಲಮಾಳಿಗೆಗಳನ್ನು ಉಪಯೋಗಿಸಲಾಗುತ್ತಿತ್ತು.

ಬೀಜಿಂಗ್ ನೆಲದಾಳದ ನಗರ

ಬೀಜಿಂಗ್ ನೆಲದಾಳದ ನಗರ

ಇದು ಇಂದಿಗೂ ಅತಿ ಹೆಚ್ಚು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಅಣುಬಾಂಬ್ ಧಾಳಿಯಿಂದ ರಕ್ಷಿಸಿಕೊಳ್ಳಲು ಈ ನಗರವನ್ನು ಕಟ್ಟಲಾಗಿತ್ತು. ಈ ನಗರದಲ್ಲಿ ಭೂಗತ ಸುರಂಗಗಳ ವಿಶಾಲ ಜಾಲವೇ ಇದೆ. ಸುಮಾರು ಮೂವತ್ತು ಕಿ.ಮೀ ತ್ರಿಜ್ಯದ ವಿಸ್ತಾರದಲ್ಲಿ ಈ ಸುರಂಗಗಳು ಭಿನ್ನ ದಿಕ್ಕುಗಳಲ್ಲಿ ಸಾಗಿವೆ. ಸುಮಾರು 2000ನೇ ಇಸವಿಯವರೆಗೂ ಇದನ್ನು ಸರ್ಕಾರ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿತ್ತು. ಈಗ ಪ್ರವಾಸಿಗರಿಗೆ ಕೆಲವು ಭಾಗಗಳನ್ನು ವೀಕ್ಷಣೆಗೆ ತೆರೆದಿದೆ.

ಸೆಟೆನಿಲ್ ಡೆ ಲಾಸ್ ಬೋಡೆಗಾಸ್, ಸ್ಪೇನ್

ಸೆಟೆನಿಲ್ ಡೆ ಲಾಸ್ ಬೋಡೆಗಾಸ್, ಸ್ಪೇನ್

ಒಂದು ಕಾಲದಲ್ಲಿ ಸುಮಾರು ಮೂರು ಸಾವಿರ ಜನರಿಗೆ ಆಶ್ರಯ ನೀಡಿದ್ದ ಈ ನಗರದ ಮನೆಗಳನ್ನು ಬೆಟ್ಟದ ಅಂಚಿನಲಲ್ಲಿರುವ ಕಲ್ಲುಬಂಡೆಗಳನ್ನು ಕೆತ್ತಿಯೇ ನಿರ್ಮಿಸಲಾಗಿದೆ. ಒಂದು ಬೆಟ್ಟವನ್ನೇ ಬಗೆದು ನಿರ್ಮಿಸಲಾಗಿರುವ ಈ ನಗರವನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಮೂಸ್ ಜಾ, ಸಾಸ್ಕಾಟ್ಚೆವಾನ್

ಮೂಸ್ ಜಾ, ಸಾಸ್ಕಾಟ್ಚೆವಾನ್

ಕೆನಡಾದಲ್ಲಿರುವ ಸಾಸ್ಕಾಟ್ಚೆವಾನ್ ಎಂಬ ಪಟ್ಟಣಕ್ಕೆ ವರ್ಷವಿಡೀ ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಈ ಪಟ್ಟಣದ ನೆಲದಾಳದಲ್ಲಿ ಅಂದು ಚೀನೀ ಕಾರ್ಮಿಕರು ನಿರ್ಮಿಸಿದ್ದರು. ಈ ಪ್ರದೇಶದಲ್ಲಿ ಅತಿ ಹೆಚ್ಚೇ ಶೀತಮಾರುತ ಬೀಸುತ್ತಿದ್ದುದರಿಂದ ಇಲ್ಲಿದ್ದ ಉಗಿಯಂತ್ರಗಳ ದುರಸ್ತಿಗೆ ಆಗಮಿಸುವ ಅಭಿಯಂತರರಿಗೆ ಚಳಿಯಾಗದಿರಲಿ ಎಂಬ ಉದ್ದೇಶದಿಂದ ಈ ಗುಹೆಗಳನ್ನು ನಿರ್ಮಿಸಲಾಗಿತ್ತು. ಇಂದು ಈ ಗುಹೆಗಳ ಗೋಡೆಗಳಲ್ಲಿ ಹಲವಾರು ಕಲಾಕೃತಿಗಳನ್ನು ಬಿಡಿಸಲಾಗಿದ್ದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ಪೋರ್ಟ್ ಲ್ಯಾಂಡ್, ಒರೆಗಾನ್

ಪೋರ್ಟ್ ಲ್ಯಾಂಡ್, ಒರೆಗಾನ್

ಅಮೇರಿಕಾ ಸಂಯುಕ್ತ ಸಂಸ್ಥಾನದ ಒರೆಗಾನ್ ರಾಜ್ಯದಲ್ಲಿರುವ ಈ ನಗರದ ದಕ್ಷಿಣಭಾಗದ ಹಳೆಯ ಅಥವಾ ಚೈನಾಟೌನ್ ಎಂಬ ಪ್ರದೇಶದ ನೆಲದಡಿಯಲ್ಲಿರುವ ಸುರಂಗಗಳಿಗೆ ಶಾಂಘಾಯ್ ಸುರಂಗಗಳು ಎಂದೂ ಕರೆಯುತ್ತಾರೆ. ಈ ಸುರಂಗಗಳಿಗೆ ಪ್ರವೇಶನಿಷಿದ್ದ ನಗರ ಎಂಬ ಅನ್ವರ್ಥನಾಮವೂ ಇದೆ. ಈ ಗುಹೆಗಳಲ್ಲಿ ವೇಶ್ಯಾವಾಟಿಕೆ ಮೊದಲಾದ ಅನೈತಿಕ ವ್ಯವಹಾರಗಳನ್ನು ಅಂದು ನಡೆಸಲಾಗುತ್ತಿತ್ತು ಎಂದು ನಂಬಲಾಗಿದೆ.

ಕಿಶ್, ಇರಾನ್

ಕಿಶ್, ಇರಾನ್

ಇರಾನ್ ದೇಶದ ಕಿಶ್ ಒಂದು ದ್ವೀಪವಾಗಿದ್ದು ಇದರ ನೆಲದಡಿಯಲ್ಲಿರುವ ನಗರಕ್ಕೆ ಯಾವುದೇ ಹೆಸರಿಲ್ಲ. ಸ್ಥಳೀಯರು ಇದನ್ನು ಕಾರಿಜ್ ಎಂಬ ಹೆಸರಿನ ನಿಗೂಢ ನಗರವಿರಬಹುದು ಎಂದು ಅನುಮಾನಿಸುತ್ತಾರೆ. ಆದರೆ ಕಿಶ್ ನಗರದ ಅಡಿಯಲ್ಲಿರುವ ಕಾರಣದಿಂದ ಪ್ರವಾಸಿಗರ ಮಟ್ಟಿಗೆ ಇದು ಕಿಶ್ ನೆಲದಾಳದ ನಗರವೇ ಆಗಿದೆ. ಸುಮಾರು 2500 ವರ್ಷಗಳ ಇತಿಹಾಸವಿರುವ ಈ ನೆಲದಾಳದ ನಗರ ವಾಸ್ತವವಾಗಿ ನೀರು ಹಾಯಿಸಲೆಂದು ನಿರ್ಮಿಸಿದ ಕಾಲುವೆಗಳಾಗಿದ್ದವು. ಇದನ್ನು ಬಳಿಕ ನವೀಕರಿಸಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವನ್ನಾಗಿಸಲಾಗಿದೆ.

ಕಾಪ್ಪಡೋಕಿಯಾ, ಟರ್ಕಿ

ಕಾಪ್ಪಡೋಕಿಯಾ, ಟರ್ಕಿ

ಈ ನೆಲದಾಳದಲ್ಲಿ ಕೆಳಮುಖವಾಗಿ ಹೋದಂತೆಲ್ಲಾ ನಗರ ಒಂದಲ್ಲ, ಸುಮಾರು ಏಳು ಅಂತಸ್ತುಗಳನ್ನು ಹೊಂದಿದೆ ಹಾಗೂ ಸುಮಾರು ಇಪ್ಪತ್ತು ಸಾವಿರ ಜನರಿಗೆ ಒಂದು ಕಾಲದಲ್ಲಿ ಆಶ್ರಯ ನೀಡಿತ್ತು. ಟರ್ಕಿಯಾದ್ಯಂತ ಇಂತಹ ಹಲವಾರು ನೆಲದಾಳದ ನಗರಗಳಿವೆ ಎಂದು ನಂಬಲಾಗಿದ್ದು ಇದುವರೆಗೆ ಹುಡುಕಿರುವ ನಗರಗಳಲ್ಲಿ ಕಾಪ್ಪಾಡೋಕಿಯಾ ಅತಿ ದೊಡ್ಡದಾಗಿದೆ.

ಬರ್ಲಿಂಗ್ಟನ್-ರಹಸ್ಯಾತ್ಮಕ ಬ್ರಿಟಿಷ್ ನಗರ

ಬರ್ಲಿಂಗ್ಟನ್-ರಹಸ್ಯಾತ್ಮಕ ಬ್ರಿಟಿಷ್ ನಗರ

ಸುಮಾರು 1950ರ ಆಸುಪಾಸಿಸಲ್ಲಿ ಪುಟ್ಟ ಕಲ್ಲುಗಣಿಯೊಂದರಲ್ಲಿ ಈ ನಗರವನ್ನು ನಿರ್ಮಿಸಲಾಗಿತ್ತು. ಆ ಸಮಯದಲ್ಲಿ ಅಣುಬಾಂಬ್ ಬೀಳುವ ಭೀತಿಯಿದ್ದ ಕಾರಣ ಇದರ ಧಾಳಿಯಿಂದ ಸರ್ಕಾರಿ ಅಧಿಕಾರಿಗಳನ್ನು ರಕ್ಷಿಸಿಕೊಳ್ಳಲು ಈ ನೆಲದಾಳದ ನಗರವನ್ನು ನಿರ್ಮಿಸಲಾಗಿತ್ತು. ಈ ನಗರದಲ್ಲಿ ಸುಮಾರು ನಾಲ್ಕು ಸಾವಿರ ಜನರು ವಾಸವಾಗಿರ ಬಹುದು. ಈ ರಹಸ್ಯಾತ್ಮಕ ನಗರವನ್ನು 1991ರವರೆಗೂ, ಅಂದರೆ ಶೀತಲ ಸಮಯ ಮುಗಿಯುವವರೆಗೂ ಬಳಸಲಾಗುತಿತ್ತು.

English summary

Amazing Underground Cities In The World

There are many underground cities across the globe which are not only known for their special infrastructure but also for their historical significance. Some of them were made to combat tough weather while some to survive nuclear attacks during the cold war. All of them are historically significant.