ಈ ವರ್ಷ 'ಮೇಷ' ರಾಶಿಯವರಿಗೆ ಕಷ್ಟಗಳು ಬರಲಿವೆ, ಆದರೆ ಪರಿಹಾರ ಕೂಡ ಇದೆ...

Posted By: Divya pandit Pandit
Subscribe to Boldsky

ಇಂದಿನ ದಿನದಲ್ಲಿ ವ್ಯಕ್ತಿಯ ಜೀವನ ನಿಂತಿರುವುದೇ ಅವರ ವೃತ್ತಿಯ ಆಧಾರದ ಮೇಲೆ ಎಂದರೆ ತಪ್ಪಾಗಲಾರದು. ವ್ಯಕ್ತಿ ಯಾವ ಉದ್ಯೋಗ ಮಾಡುತ್ತಿದ್ದಾನೆ? ಅವನಿಗೆ ಅದರಿಂದ ಎಷ್ಟು ಲಾಭವಿದೆ? ಎನ್ನುವುದರ ಆಧಾರದ ಮೇಲೆಯೇ ಬದುಕು ನಿಂತಿದೆ. ಹಾಗಾಗಿ ಬಹುತೇಕರು ತಮ್ಮ ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಹಾಗೂ ಉನ್ನತ ಸ್ಥಾನಕ್ಕೆ ಏರಲು ಹರಸಾಹಸ ಮಾಡುತ್ತಲೇ ಇರುತ್ತಾರೆ. ವ್ಯಕ್ತಿಯ ಪ್ರಯತ್ನದ ಜೊತೆಗೆ ಅವರ ರಾಶಿಚ್ರಗಳ ಪ್ರಭಾವವೂ ಪೂರಕವಾಗಿದ್ದರೆ ಮಾತ್ರ ಕನಸು ನನಸಾಗುವುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಈ ಒಂದು ಹಿನ್ನೆಲೆಯಲ್ಲಿಯೇ ಮೇಷ ರಾಶಿಯವರು 2018ರಲ್ಲಿ ಯಾವ ಬಗೆಯ ವೃತ್ತಿ ಜೀವನವನ್ನು ಅನುಭವಿಸಲಿದ್ದಾರೆ? ಎನ್ನುವುದನ್ನು ಬೋಲ್ಡ್ ಸ್ಕೈ ಇಂದು ನಿಮಗೆ ತಿಳಿಸಿಕೊಡಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಈ ವರ್ಷ ಕಾಣಲಿದ್ದಾರೆ ಎನ್ನಲಾಗುವುದು. ನೀವು ಅಥವಾ ನಿಮ್ಮವರು ಮೇಷ ರಾಶಿಯವರೇ ಆಗಿದ್ದರೆ ಈ ಮುಂದೆ ವಿವರಿಸಿರುವ ಇನ್ನಷ್ಟು ಮಾಹಿತಿಗಳನ್ನು ಪರಿಶೀಲಿಸಿ.

ನಾಯಕತ್ವ ಕೌಶಲ್ಯವನ್ನು ಪರೀಕ್ಷಿಸಲಾಗುವುದು

ನಾಯಕತ್ವ ಕೌಶಲ್ಯವನ್ನು ಪರೀಕ್ಷಿಸಲಾಗುವುದು

ಈ ವರ್ಷ ನಿಮ್ಮ ನಾಯಕತ್ವ ಕೌಶಲ್ಯವನ್ನು ಪರೀಕ್ಷೆ ಮಾಡಲಾಗುವುದು ಎನ್ನಲಾಗುತ್ತದೆ. 2018ರ ಮೊದಲ ಮೂರು ತಿಂಗಳು ಹೇಗೆ ಜವಾಬ್ದಾರಿಯಿಂದ ಇರಬೇಕು ಎನ್ನುವುದನ್ನು ನೀವು ಕಲಿಯಬೇಕು. ಜೊತೆಗೆ ಆದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುವುದು. ಈಗಾಗಲೇ ಮಾರ್ಚ್ ತಿಂಗಳಲ್ಲಿ ನೀವು ಇರುವುದರಿಂದ ಒಂದಿಷ್ಟು ಅನುಭವಗಳನ್ನು ಹೊಂದಿರುವಿರಿ. ಇದೀಗ ಮಂಗಳ ಗ್ರಹ ನಿಮ್ಮ ಪರವಾಗಿ ನಿಂತಿದೆ ಎಂದು ಹೇಳಬಹುದು. ಮಂಗಳ ಗ್ರಹವು ಧನು ರಾಶಿಗೆ ಪರಿವರ್ತನೆ ಪಡೆಯುತ್ತಿರುವುದರಿಂದ ಹೆಚ್ಚು ಅದೃಷ್ಟವನ್ನು ಹೊಂದಲಿದ್ದೀರಿ ಎಂದು ಹೇಳಲಾಗುತ್ತದೆ. ಇವೆಲ್ಲದರ ಜೊತೆಗೆ ಸುದೀರ್ಘ ಅವಧಿಯಲ್ಲಿ ವಿಶ್ರಾಂತಿ ಹೊಂದಲು ನೀವು ಮಾರ್ಗವನ್ನು ಕಂಡುಕೊಳ್ಳುವಿರಿ ಎಂದು ಹೇಳಲಾಗುತ್ತದೆ.

ಹೊಸ ಅವಕಾಶಗಳು

ಹೊಸ ಅವಕಾಶಗಳು

ಮಾನಸಿಕವಾಗಿ ಹೆಚ್ಚು ಪ್ರಯತ್ನ ಮಾಡದಿದ್ದರೂ ಯಶಸ್ಸನ್ನು ಪಡೆದುಕೊಳ್ಳಲಿದ್ದೀರಿ. ಜೊತೆಗೆ ಹೊಸ ಅವಕಾಶಗಳು ನಿಮ್ಮ ಮಾರ್ಗದಲ್ಲಿ ಬರುವುದು ಎಂದು ಜ್ಯೋತಿಷ್ಯ ತಜ್ಞರು ಬಹಿರಂಗ ಪಡಿಸುತ್ತಾರೆ. ನಿಮ್ಮ ಅತ್ಯುತ್ತಮ ಕೆಲಸಗಳಿಗೆ ಅನುಕೂಲವಾಗಲು ಕೆಲವು ಉಪಯುಕ್ತ ಸಂಪನ್ಮೂಲಗಳನ್ನು ಹೊಂದುವಿರಿ ಎಂದು ಹೇಳಲಾಗುತ್ತದೆ. ಅನುಕೂಲಕರವಾದ ಈ ಸಮಯ ನಿಮ್ಮ ವೈಕ್ತಿಕ ಬೆಳವಣಿಗೆ ಹಾಗೂ ವಿಸ್ತರಣೆಗೆ ಸಹಕರಿಸುವುದು.

ಶನಿಯ ಚಲನೆ

ಶನಿಯ ಚಲನೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 18ರ ಹೊತ್ತಿಗೆ ಶನಿಯು ಧನು ರಾಶಿಗೆ ಪುನಃ ಹಿಮ್ಮುಖವಾಗಿ ಬರುವುದು. ಇದರಿಂದಾಗಿ ಜೀವನದಲ್ಲಿ ಪರಿಣಾಮಕಾರಿ ಬದಲಾವಣೆಯು ಕಾಣಿಸಿಕೊಳ್ಳುವುದು. ಹಿಮ್ಮುಖ ಚಲನೆಯು 9ನೇ ಮನೆಯಲ್ಲಿ ನಡೆಯುವುದರಿಂದ ನಿಮ್ಮ ಅದೃಷ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುವುದು. ಇಲ್ಲಿಯವರೆಗೆ ಅನುಭವಿಸಿದ ಸಂತೋಷದ ಸಮಯವು ಹಠಾತ್ ನಿಲುಗಡೆ ಕಾಣುವುದು.

ವೃತ್ತಿಜೀವನದಲ್ಲಿ ಅಧಿಪತಿ

ವೃತ್ತಿಜೀವನದಲ್ಲಿ ಅಧಿಪತಿ

ಮಕರ ರಾಶಿಗೆ ಮಂಗಳ ಗ್ರಹವು ಪರಿವರ್ತನೆಯನ್ನು ಪಡೆದುಕೊಳ್ಳುವುದು. ಇದರ ಪರಿವರ್ತನೆಯಿಂದ ವೃತ್ತಿ ಜೀವನದಲ್ಲಿ ಬುದ್ಧಿಯನ್ನು ಉಪಯೋಗಿಸುವಿರಿ. ಜೊತೆಗೆ ನಿಷ್ಠಾವಂತರಾಗಿ ಸಾಬೀತುಪಡಿಸುವಿರಿ. ಈ ಕ್ರಮವು ಮೇ 2ರಂದು ನಡೆಯುತ್ತದೆ. ನಿಮ್ಮ 10ನೇ ಮನೆಯಲ್ಲಿ ನಡೆಯುವುದರಿಂದ ವಸಂತಕಾಲದಲ್ಲಿ ಬಹಳ ಉಲ್ಲಾಸಕರವಾದ ವೃತ್ತಿ ಜೀವನವನ್ನು ಅನುಭವಿಸುವಿರಿ. ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಅಧಿಪತಿಯಾಗಿ ಕಾಣಿಸಿಕೊಳ್ಳುವಿರಿ.

ಪ್ರಯತ್ನಗಳು ಗಮನಕ್ಕೆ ಬರುವುದು

ಪ್ರಯತ್ನಗಳು ಗಮನಕ್ಕೆ ಬರುವುದು

ನಿಮ್ಮ ಪ್ರಯತ್ನಗಳು ಯಾರ ಗಮನಕ್ಕೆ ಬಾರದೆ ಹೋಗುವುದಿಲ್ಲ. ನಿಮ್ಮ ಪ್ರಯತ್ನಕ್ಕೆ ಮನ್ನಣೆ ಅಥವಾ ಗೌರವ ದೊರೆಯುವುದು. ನೀವು ಸಹ ಗುರುತಿಸುವಿಕೆಯ ಕುರಿತು ಹೆಚ್ಚು ನಿರೀಕ್ಷೆಯನ್ನು ಪಡೆದುಕೊಳ್ಳಬಹುದು.

ನೀವು ಸಾಧಿಸಲು ಸಾಧ್ಯವಿಲ್ಲ ಎಂದು ಏನೂ ಇಲ್ಲ

ನೀವು ಸಾಧಿಸಲು ಸಾಧ್ಯವಿಲ್ಲ ಎಂದು ಏನೂ ಇಲ್ಲ

ನಿಮ್ಮದು ಮಹತ್ವಾಕಾಂಕ್ಷೆಯ ರಾಶಿಚಕ್ರ ಚಿಹ್ನೆಯಾಗಿರುವುದರಿಂದ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಪ್ರಯತ್ನ ಮಾಡಬಹುದು. ಹೊಸ ವೃತ್ತಿಜೀವನವನ್ನು ಪ್ರಾರಂಭಿಸಲು ಸೂಕ್ತ ಸಮಯವಾಗಿರುವುದರಿಂದ ನಿಮಗೆ ಪ್ರೋತ್ಸಾಹಗಳು ದೊರೆಯುವುದು. ಎಂತಹ ಹೂಡಿಕೆಗೂ ಸಹ ನೀವು ಮುಂದಾಗಬಹುದು. ನಿಮ್ಮ ಪರವಾಗಿ ಮಂಗಳಗ್ರಹ ಇದೆ ಎನ್ನುವುದನ್ನು ನೆನಪಿಡಬೇಕು. ನೀವು ಸಾಧಿಸಲು ಸಾಧ್ಯವಿಲ್ಲ ಎನ್ನುವುದು ಯಾವುದೂ ಇಲ್ಲ ಎಂದು ಅರಿಯಿರಿ.

ಮಂಗಳ ಗ್ರಹದ ಪರಿವರ್ತನೆ

ಮಂಗಳ ಗ್ರಹದ ಪರಿವರ್ತನೆ

ಜೂನ್ 27 ಮಂಗಳ ಗ್ರಹವು ಪುನರಾವರ್ತನೆಯ ಚಲನೆಯನ್ನು ಹೊಂದುತ್ತದೆ. ಈ ಸಮಯದಲ್ಲಿ ಕೆಲವು ಒತ್ತಡಕ್ಕೆ ನೀವು ಒಳಗಾಗಬಹುದು. ಇದರರ್ಥ ಹೊಸ ಮಟ್ಟದ ಒತ್ತಡವನ್ನು ನೀವು ನಿರ್ವಹಿಸಬೇಕಾಗುವುದು. ನೀವು ಹೇಗೆ ಮೀಸಲಿಟ್ಟಿದ್ದೀರಿ ಮತ್ತು ಬದ್ಧರಾಗಿದ್ದೀರಿ ಎಂಬುದರ ಬಗ್ಗೆ ಸಾಭೀತಾಗುವುದು. ಶಾಂತಿಯನ್ನು ಕಾಪಾಡಿಕೊಳ್ಳುವುದಕ್ಕಿಂತ ಹೆಚ್ಚು ಯಾವುದೂ ಪ್ರಮುಖವಾಗಿರುವುದಿಲ್ಲ.

ಕೊನೆಯ ತ್ರೈಮಾಸಿಕ

ಕೊನೆಯ ತ್ರೈಮಾಸಿಕ

ವರ್ಷದ ಕೊನೆಯ ತ್ರೈಮಾಸಿಕದಲ್ಲಿ ನಿಮ್ಮ ಯೋಜನೆಯು ಅಪೂರ್ಣವಾಗಿಯೇ ಇರುವುದನ್ನು ಕಾಣುವಿರಿ. ಶನಿಯು ನಿಮ್ಮರಾಶಿಗೆ ಮರಳಿ ಬರುವುದರಿಂದ ಅತ್ಯುತ್ತಮ ರೀತಿಯಲ್ಲಿ ನಿಮ್ಮ ಯೋಜನೆಯನ್ನು ಪೂರ್ಣಗೊಳಿಸಲು ಸಹಾಯವಾಗುವುದು. ವರ್ಷಾಂತ್ಯದಲ್ಲಿ ನೀವು ಸಕಾರಾತ್ಮಕ ಬದಲಾವಣೆಯನ್ನು ಅನುಭವಿಸುವಿರಿ. ಹೊಸದಾಗಿ ಪಡೆದ ಸಂಪತ್ತನ್ನು ನೀವು ಹೇಗೆ ವಿಭಜಿಸುತ್ತೀರಿ? ಅದನ್ನು ಹಾಳುಮಾಡಬಾರದು ಎನ್ನುವುದರ ಬಗ್ಗೆ ಎಚ್ಚರವಾಗಿರಿ.

ಒಟ್ಟಾರೆ ವೃತ್ತಿಜೀವನ

ಒಟ್ಟಾರೆ ವೃತ್ತಿಜೀವನ

ನೀವು ಒಳ್ಳೆಯ ಮತ್ತು ಕೆಟ್ಟ ವಿಷಯಗಳನ್ನು ಅನುಭವಿಸಬಹುದು. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಏಕೈಕ ವಿಷಯವೆಂದರೆ ಉತ್ಪಾದಕ ಮತ್ತು ಕಾರ್ಯನಿರತವಾಗಿರುವುದರ ನಡುವೆ ವ್ಯತ್ಯಾಸವಿದೆ. ಆದ್ದರಿಂದ ಬುದ್ಧಿವಂತ ನಿರ್ಧಾರ ಕೈಗೊಳ್ಳುವುದನ್ನು ಮರೆಯದಿರಿ.

English summary

All About Aries Career Growth For 2018

In this article today, we bring in the details of what are the things that you need to know for the Aries zodiac sign, in terms of their career graph. Check out on the things that you need to know about this sign. Also, if your zodiac sign is Aries, what are you waiting for? Read on to know more about your career graph.