Latest Updates
-
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ!
2019ರಲ್ಲಿ ಎಲ್ಲಾ 12 ರಾಶಿ ಚಕ್ರಗಳ ಮದುವೆ ಭವಿಷ್ಯವು ಹೇಗಿರಲಿದೆ?
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುವ ಮಾತಿದೆ. ಮದುವೆ ಎನ್ನುವುದು ಎರಡು ಹೃದಯಗಳ ಮಿಲನ. ಮದುವೆ ಅಪರಿಚಿತರಿಬ್ಬರನ್ನು ಜತೆಯಾಗಿಸುವುದು. ಬಾಳದೋಣಿಯಲ್ಲಿ ಇಬ್ಬರು ಜತೆಯಾಗಿ ಪ್ರಯಾಣಿಸುವುದೇ ಮದುವೆ. ಹಿಂದೆ ಹಿರಿಯರು ನಿಶ್ಚಯಿಸಿ ಮದುವೆಗಳು ನಡೆಯುತ್ತಿದ್ದವು. ಆದರೆ ಆಧುನಿಕ ಯುಗದಲ್ಲಿ ಪುರುಷ ಹಾಗೂ ಮಹಿಳೆ ಸಮಾನ ಎನ್ನುವ ಕಾರಣದಿಂದಾಗಿ ಮದುವೆಗಳು ಕೂಡ ಅವರ ಇಷ್ಟದಂತೆ ನಡೆಯುತ್ತಲಿದೆ. ತಮ್ಮ ಜೀವನ ಸಂಗಾತಿಯನ್ನು ಅವರವರೇ ಆಯ್ಕೆ ಮಾಡಿಕೊಳ್ಳುವರು.

ಹಿಂದೆ ಹಿರಿಯರು ಮದುವೆ ನಿಶ್ಚಯ ಮಾಡುವ ವೇಳೆ ಜನ್ಮ ಕುಂಡಲಿ ಹೊಂದಾಣಿಕೆಯಾದರೆ ಮಾತ್ರ ಮದುವೆ ಮಾಡುತ್ತಲಿದ್ದರು. ಆದರೆ ಇಂದು ಅದೆಲ್ಲವೂ ನಗಣ್ಯವಾಗಿದೆ. ಅವಿವಾಹಿತರು ಹೆಚ್ಚಾಗಿ ತಮ್ಮ ಮದುವೆ ಯಾವಾಗ ಆಗುವುದೋ ಎನ್ನುವ ಚಿಂತೆಯಲ್ಲಿ ಇರುವರು ಮತ್ತು ಇದಕ್ಕೆ ಸಮಯ ಕೂಡಿ ಬಂದಿದೆಯಾ ಎಂದು ತಿಳಿಯುವರು. ತಮಗೆ ಸರಿಯಾದ ಜೀವನ ಸಂಗಾತಿ ಯಾವಾಗ ಸಿಗಬಹುದು ಎನ್ನುವ ನಿರೀಕ್ಷೆಯು ಅವರಲ್ಲಿ ಇರುವುದು. ಹೆಚ್ಚಾಗಿ ಅವಿವಾಹಿತರು ತಮ್ಮ ಮದುವೆ ಬಗ್ಗೆ ಯಾವುದೇ ನಿರ್ಧಾರ ಮಾಡುವ ಮೊದಲು ರಾಶಿಚಕ್ರಗಳನ್ನು ನೋಡುವರು. ರಾಶಿಚಕ್ರದ ಅನುಸಾರವಾಗಿ ಮದುವೆ ಭಾಗ್ಯ ಇದೆಯಾ? ಇಲ್ಲವಾ? ಎಂದು ತಿಳಿದು ಮುಂದುವರಿಯುವರು. ಈ ಲೇಖನದಲ್ಲಿ 2019ರಲ್ಲಿ ಯಾವ ರಾಶಿಯವರಿಗೆ ಮದುವೆ ಭಾಗ್ಯವು ಇದೆ ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಿಕೊಂಡು ಹೋಗಿ...

ಮೇಷ ರಾಶಿಯರಿಗೆ 2019ರಲ್ಲಿ ಮದುವೆಯ ಭವಿಷ್ಯ
ಅವಿವಾಹಿತರಾಗಿರುವಂತಹ ಮೇಷ ರಾಶಿಯವರು ತಮಗೆ ಹೊಂದಾಣಿಕೆಯಾಗುವಂತಹ ಸಂಗಾತಿ ಜತೆಗೆ ಜೂನ್ ಅಥವಾ ಜುಲೈ ತಿಂಗಳಲ್ಲಿ ಮದುವೆಗೆ ಒಂದು ದಿನ ನಿಗದಿ ಮಾಡಬಹುದು. ಯಾಕೆಂದರೆ ಈ ಸಮಯವು ಅವರಿಗೆ ತುಂಬಾ ಶುಭವಾಗಿರುವುದು. ಈಗಾಗಲೇ ಮದುವೆ ಆಗಿರುವವರು ತುಂಬಾ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕು. ಯಾಕೆಂದರೆ ಮಾರ್ಚ್ ಮತ್ತು ಜೂನ್ ತಿಂಗಳು ಇವರಿಗೆ ತುಂಬಾ ಬೆಂಬಲವಾಗಿ ಕಾಣುತ್ತಿಲ್ಲ. ಅದಾಗ್ಯೂ, ಇವರು ತಮ್ಮ ಸಂಗಾತಿ ಜತೆಗೆ ಒಳ್ಳೆಯ ಬಾಂಧವ್ಯ ಬೆಳೆಸಲು ಪ್ರಯತ್ನಿಸಬಹುದು. ಯಾಕೆಂದರೆ ಇದು ಅವರಿಗೆ ಸರಿಯಾದ ಸಮಯದಲ್ಲಿ ನೆರವಿಗೆ ಬರಲಿದೆ.

ವೃಷಭ ರಾಶಿಯವರಿಗೆ 2019ರಲ್ಲಿ ಮದುವೆ ಭವಿಷ್ಯ
ಮದುವೆಯಾಗಲು ಬಯಸುವಂತಹ ವೃಷಭ ರಾಶಿಯವರಿಗೆ ಜನವರಿ ಮತ್ತು ಮಾರ್ಚ್ ತಿಂಗಳು ತುಂಬಾ ಒಳ್ಳೆಯದು ಆಗಿರುವುದು. ನಿಮಗೆ ಒಳ್ಳೆಯ ಸಂಗಾತಿಯು ಸಿಗದೆ ಇದ್ದರೆ ಈ ಸಮಯದಲ್ಲಿ ನಿಮಗೆ ಒಳ್ಳೆಯ ಸುದ್ದಿಯು ಬರುವುದು. ಪ್ರೀತಿ, ಪ್ರೇಮದಲ್ಲಿ ಇರುವವರು ಈ ಸಂಬಂಧವನ್ನು ಮುಂದುವರಿಸಿಕೊಂಡು ಹೋಗಲು ನಿರ್ಧಾರ ಮಾಡಬಹುದು. ಈ ವರ್ಷದ ಅಂತ್ಯದಲ್ಲಿ ಇವರಿಗೆ ತುಂಬಾ ಒಳ್ಳೆಯ ಸುದ್ದಿಯು ಬರಲಿರುವುದು.

ಮಿಥುನ ರಾಶಿಯವರಿಗೆ 2019ರಲ್ಲಿ ಮದುವೆ ಭವಿಷ್ಯ
ಈಗಾಗಲೇ ಪ್ರೇಮಿಸುತ್ತಾ ಇರುವವರು ತಮ್ಮ ಮದುವೆ ಬಗ್ಗೆ ಚಿಂತೆ ಮಾಡುತ್ತಲಿದ್ದರೆ ಆಗ ಇವರು ಫೆಬ್ರವರಿ ಕೊನೆಯ ವಾರದಿಂದ ಎಪ್ರಿಲ್ ಮೂರನೇ ವಾರದ ಮಧ್ಯೆ ಮದುವೆ ದಿನಾಂಕ ನಿಗದಿ ಮಾಡಬಹುದು. ನಿಮಗೆ ಸಂಗಾತಿ ಹುಡುಕಲು ತುಂಬಾ ಕಷ್ಟವಾಗುತ್ತಲಿದ್ದರೆ ಆಗ ಈ ಸಮಯದಲ್ಲಿ ಆ ಸಮ್ಯೆಯು ನಿವಾರಣೆ ಆಗುವುದು. ವರ್ಷದ ಅಂತ್ಯದಲ್ಲಿ ಧನಾತ್ಮಕ ಆಗಿರುವುದು ನಡೆಯಲಿದೆ ಮತ್ತು ಇದು ನಿಮ್ಮ ಪ್ರೀತಿಯ ಜೀವನದ ಮೇಲೆ ಪರಿಣಾಮ ಬೀರುವುದು.

ಕರ್ಕಾಟಕ ರಾಶಿಯವರಿಗೆ 2019ರಲ್ಲಿ ಮದುವೆ ಭವಿಷ್ಯ
ಮುಂಬರುವ ವರ್ಷವು ನಿಮ್ಮ ವೈವಾಹಿಕ ಜೀವನಕ್ಕೆ ತುಂಬಾ ಒಳ್ಳೆಯ ಸಮಯ ಆಗಿರಲಿದೆ. ನೀವು ಪರಸ್ಪರದ ಬೇಡಿಕೆಗಳನ್ನು ಈಡೇರಿಸಿಕೊಂಡು ಜತೆಯಾಗಿ ಸಮಯ ಕಳೆಯಲು ಹೆಚ್ಚಿನ ಮಹತ್ವ ನೀಡಬೇಕು ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಸಂಗಾತಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಮತ್ತು ಅವರ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ, ಪರಸ್ಪರ ಮತ್ತಷ್ಟು ಹತ್ತಿರವಾಗಲು ನೀವು ಪ್ರಯತ್ನಿಸಬೇಕು. ವೈವಾಹಿಕ ಜೀವನದಲ್ಲಿ ಸ್ವಲ್ಪ ಏರಿಳಿತಗಳು ಬರಬಹುದು. ಆದರೆ ಇದರಿಂದ ನಿಮ್ಮ ಬಾಂಧವ್ಯವು ಮತ್ತಷ್ಟು ಗಟ್ಟಿಯಾಗಲಿದೆ. ಹೀಗಾಗಿ ಚಿಂತೆ ಮಾಡಬೇಡಿ.

ಸಿಂಹ ರಾಶಿಯವರಿಗೆ 2019ರಲ್ಲಿ ಮದುವೆ ಭವಿಷ್ಯ
ಜನವರಿ ಮತ್ತು ಎಪ್ರಿಲ್ ಎರಡನೇ ವಾರದ ನಡುವಿನ ಸಮಯವು ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವವರಿಗೆ ತುಂಬಾ ಆನಂದದಾಯಕ ಆಗಿರಲಿದೆ. ವೈವಾಹಿಕ ಜೀವನದ ಆರಂಭಿಕ ಸಮಯವು ನಿಮ್ಮ ಸಂಗಾತಿಯನ್ನು ತಿಳಿಯಲು ಮತ್ತು ಹೊಂದಾಣಿಕೆ ಮಾಡಿಕೊಳ್ಳಲು ನಿಮಗೆ ನೆರವಾಗಲಿದೆ. ಇದರಿಂದ ನೀವಿಬ್ಬರು ಮತ್ತಷ್ಟು ಹತ್ತಿರವಾಗಲಿದ್ದೀರಿ. ಈ ಸಮಯದಲ್ಲಿ ನೀವು ಸಂಗಾತಿ ಜತೆಗೆ ಯಾವುದೇ ವಾಗ್ವಾದ ಮಾಡಲು ಹೋಗಬೇಡಿ. ಇದರಿಂದ ನಿಮ್ಮ ಭವಿಷ್ಯಕ್ಕೆ ಮಾರಕ ಆಗಬಹುದು.

ಕನ್ಯಾ ರಾಶಿಯವರಿಗೆ 2019ರ ಮದುವೆ ಭವಿಷ್ಯ
ಮದುವೆ ಆಗಲು ಬಯಸುತ್ತಾ ಇರುವಂತಹ ಅವಿವಾಹಿತರು ಮಾರ್ಚ್ ತನಕ ತಮ್ಮ ಯೋಜನೆಯನ್ನು ಮುಂದೂಡುವುದು ಒಲಿತು. ಮಾರ್ಚ್ ಮೂರನೇ ವಾರದ ಬಳಿಕ ನೀವು ಮದುವೆ ಪ್ರಯತ್ನ ಮಾಡಬಹುದು. ನೀವು ಈಗಾಗಲೇ ಸಂಬಂಧದಲ್ಲಿ ಇದ್ದರೆ ಆಗ ನೀವು ಸಂಗಾತಿ ಜತೆಗೆ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಯಾಕೆಂದರೆ ಅವರು ತಮ್ಮನ್ನು ಕಡೆಗಣಿಸಲ್ಪಟ್ಟಿದೆ ಎಂದು ಭಾವಿಸಿರುವರು. ಅವರನ್ನು ರಾತ್ರಿ ಊಟಕ್ಕೆ ಕರೆದುಕೊಂಡು ಹೋಗಿ ಮತ್ತು ನಿಮ್ಮ ಭವಿಷ್ಯದ ಬಗ್ಗೆ ಮಾತನಾಡಿ. ಯಾಕೆಂದರೆ ಯಾವುದೇ ಸಂಬಂಧದಲ್ಲಿಯೂ ಸಂವಹನ ಅತೀ ಮುಖ್ಯವಾಗಿರುವುದು.

ತುಲಾ ರಾಶಿಯವರಿಗೆ 2019ರಲ್ಲಿ ಮದುವೆ ಭವಿಷ್ಯ
ಮಾರ್ಚ್ ಮತ್ತು ಜೂನ್ ತಿಂಗಳಲ್ಲಿ ನಿಮಗೆ ಮದುವೆ ವಿಚಾರಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯು ಬರಲಿದೆ. ನಿಮಗೆ ಸರಿಯಾದ ಸಂಗಾತಿಯು ಸಿಕ್ಕಿದ ಬಳಿಕ ಜೀವನವನ್ನು ಅವರೊಂದಿಗೆ ಜತೆಯಾಗಿ ಕಳೆಯುವ ನಿರ್ಧಾರ ಮಾಡುವಿರಿ. ನೀವು ನಿರ್ಧಾರ ಮಾಡಿದರೆ ಈ ಸಮಯವು ನಿಮಗೆ ಹಾಗೂ ಸಂಗಾತಿ ತುಂಬಾ ಲಾಭಕಾರಿ ಆಗಿರಲಿದೆ. ನೀವು ಈಗಾಗಲೇ ಮದುವೆಯಾಗಿದ್ದರೆ ಆಗ ನೀವು ಉದ್ಯೋಗದಿಂದ ಸಮಯ ಪಡೆದು ಒಂದು ಪ್ರವಾಸಕ್ಕೆ ಹೋಗಿ ಬರುವುದು ತುಂಬಾ ಒಳ್ಳೆಯದು.

ವೃಶ್ಚಿಕ ರಾಶಿಯವರಿಗೆ 2019ರಲ್ಲಿ ಮದುವೆ ಭವಿಷ್ಯ
ಅವಿವಾಹಿತ ವೃಶ್ಚಿಕ ರಾಶಿಯವರು ಭವಿಷ್ಯದ ಬಗ್ಗೆ ಆಲೋಚನೆ ಮಾಡುವರು. ಆದರೆ ಇದನ್ನು ಅವರು ನಿಲ್ಲಿಸಬೇಕು. ನಿಮಗೆ ಏನು ಮತ್ತು ನೀವು ಎಲ್ಲಿದ್ದೀರಿ ಎನ್ನುವ ಬಗ್ಗೆ ಚಿಂತಿಸಿ ಮತ್ತು ಇದರ ಬಳಿಕ ನೀವು ಮದುವೆ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳಿ. ನೀವು ಸಂಬಂಧದಲ್ಲಿ ಇದ್ದರೆ ಮತ್ತು ಸಂಗಾತಿಯನ್ನು ಮದುವೆಯಾಗಲು ಸರಿಯಾದ ಸಮಯಕ್ಕಾಗಿ ಎದುರು ನೋಡುತ್ತಲಿದ್ದರೆ ಆಗ ನೀವು ಜನವರಿ ಮತ್ತು ಆಗಸ್ಟ್ ತಿಂಗಳಲ್ಲಿ ಮದುವೆ ದಿನಾಂಕ ಆಯ್ಕೆ ಮಾಡಿಕೊಳ್ಳಬಹುದು. ಈ ಎರಡು ತಿಂಗಳುಗಳು ನಿಮಗೆ ತುಂಬಾ ಶುಭವಾಗಿರುವುದು.

2019ರಲ್ಲಿ ಧನು ರಾಶಿಯವರಿಗೆ ಮದುವೆ ಭವಿಷ್ಯ
ಈಗಾಗಲೇ ಮದುವೆ ಬಂಧನದಲ್ಲಿ ಸಿಲುಕಿರುವವರು ಕೆಲವು ಕಾರಣಗಳಿಂದಾಗಿ ತಮ್ಮ ಸಂಗಾತಿಯಿಂದ ದೂರವಾಗುತ್ತಿರುವ ಭಾವನೆ ಹೊಂದಬಹುದು. ಆದರೆ ನೀವು ಸಂಗಾತಿ ಜತೆಗೆ ಕುಳಿತುಕೊಂಡು ನಿಮ್ಮ ಭಾವನೆಗಳ ಬಗ್ಗೆ ಮಾತನಾಡಿದರೆ ಆಗ ಚಿಂತೆ ಮಾಡುವ ಯಾವುದೇ ವಿಚಾರವಿಲ್ಲ. ಸಂಬಂಧವು ಚೆನ್ನಾಗಿರಬೇಕೆಂದು ನೀವು ಮನವರಿಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ನೀವಿಬ್ಬರು ಭಾಗಿಯಾಗಬೇಕು ಮತ್ತು ಸಂವಹನವು ಸರಿಯಾಗಿರಬೇಕು. ಮದುವೆಯಾಗಲು ಬಯಸುವಂತಹವರಿಗೆ ಫೆಬ್ರವರಿ ಮತ್ತು ಜೂನ್ ತಿಂಗಳ ನಡುವೆ ಒಳ್ಳೆಯ ಸುದ್ದಿಯು ಬರುವಂತಹ ಸಾಧ್ಯತೆಗಳು ಇವೆ.

ಮಕರ ರಾಶಿಯವರಿಗೆ 2019ರಲ್ಲಿ ಮದುವೆ ಭವಿಷ್ಯ
ನೀವು ಸಂಗಾತಿಯೊಂದಿಗೆ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತಾ ಇರುವಿರಿ. ಆದರೆ ಇದು ಅದಕ್ಕೆ ಸರಿಯಾದ ಸಮಯವಾಗಿಲ್ಲ. ಈ ವರ್ಷವು ನಿಮಗೆ ಒಳ್ಳೆಯದು ಆಗಿರಲಿದೆ ಮತ್ತು ಯಾವಾಗ ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಲು ಇದು ಸರಿಯಾದ ಸಮಯವಾಗಿರುವುದು. ನೀವು ಸೂಕ್ತ ಸಂಗಾತಿಯ ಹುಡುಕಾಟದಲ್ಲಿದ್ದರೆ ಆಗ ನಿಮಗೆ ಈ ವರ್ಷದ ಜೂನ್ ಅಥವಾ ಅಗಸ್ಟ್ ಎರಡನೇ ವಾರದಲ್ಲಿ ಶುಭ ಸುದ್ದಿ ಬರಲಿದೆ.

ಕುಂಭ ರಾಶಿಯವರಿಗೆ 2019ರ ಮದುವೆ ಭವಿಷ್ಯ
ಅವಿವಾಹಿತರಿಗೆ ಈ ವರ್ಷವು ತುಂಬಾ ಒಳ್ಳೆಯದಾಗಿರಲಿದೆ ಮತ್ತು ವೈವಾಹಿಕ ಜೀವನಕ್ಕೆ ಕಾಲಿಡಲು ಬಯಸುವವರಿಗೆ ಇದರಲ್ಲಿ ಧುಮುಕಲು ನೀವು ತಯಾರಾಗಿರಬೇಕು. ಈಗಾಗಲೇ ಸಂಬಂಧದಲ್ಲಿ ಇರುವವರಿಗೆ ಕೆಲವು ಕಠಿಣ ಪರಿಸ್ಥಿತಿಯು ಎದುರಾಗಲಿದೆ. ಅದೇ ರೀತಿಯಾಗಿ ನಿರಾಶೆ ಹಾಗೂ ಹತಾಶೆಯು ನಿಮಗೆ ಎದುರಾಗುವುದು. ನೀವು ನಕಾರಾತ್ಮಕವಾದ ಭಾವನೆಗಳನ್ನು ಹಾಗೆ ಇಟ್ಟುಕೊಳ್ಳಬೇಡಿ. ಇದರ ಬದಲಿಗೆ ಜೀವನದಲ್ಲಿ ಬರುವಂತಹ ಕೆಲವೊಂದು ಸಮಸ್ಯೆಗಳಿಂದ ಪಾಠ ಕಲಿಯಿರಿ.

2019 ಮೀನ ರಾಶಿಯವರ ಮದುವೆ ಭವಿಷ್ಯ ಏನು ಹೇಳುವುದು?
ರಾಶಿ ಚಕ್ರದಲ್ಲಿ ಕೊನೆಯ ರಾಶಿ ಆಗಿರುವ ಮೀನ ರಾಶಿಯವರಿಗೆ 2019ನೇ ವರ್ಷವು ತುಂಬಾ ಲಾಭಕಾರಿ ಆಗಿರಲಿದೆ. ಆದರೆ ಇದು ಈಗಾಗಲೇ ಮದುವೆ ಆಗಿರುವವರಿಗೆ. ಸಂಗಾತಿ ಜತೆಗಿನ ಅನುಭವದ ಸಮಯವನ್ನು ನೀವು ಹೆಚ್ಚು ಆನಂದಿಸಬಹುದು. ನೀವು ಸೂಕ್ತ ಸಂಗಾತಿಯ ಹುಡುಕಾಟದಲ್ಲಿ ಇದ್ದರೆ ಆಗ ನಿಮಗೆ ಮಾರ್ಚ್ ಮತ್ತು ಜೂನ್ ನಡುವಿನ ಸಮಯವು ತುಂಬಾ ಅದೃಷ್ಟ ತರಲಿದೆ. ಹೊಸ ವರ್ಷದಲ್ಲಿ ನಿಮ್ಮ ಬಾಳಿನಲ್ಲಿ ಹೊಸ ವ್ಯಕ್ತಿಯ ಪ್ರವೇಶವಾಗಬಹುದು. ಕಾದು ನೋಡಿ.



Click it and Unblock the Notifications











