Latest Updates
-
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ
2018ರಲ್ಲಿ ಈ ಮೂರು ರಾಶಿ ಚಕ್ರದವರಿಗೆ ಜೀವನದಲ್ಲಿ ಕಷ್ಟ ಬರಬಹುದು...
ಗ್ರಹಗತಿಗಳ ಸಂಚಾರ ಕೆಲವು ರಾಶಿಯವರಿಗೆ ಉತ್ತಮ ಫಲವನ್ನು ನೀಡಿದರೆ ಕೆಲವು ರಾಶಿಯವರಿಗೆ ಕೆಟ್ಟ ಪರಿಣಾಮ ಅಥವಾ ಮಧ್ಯಮ ಲಾಭವನ್ನು ತಂದುಕೊಡುತ್ತದೆ. ಹಾಗಾಗಿ ಗ್ರಹಗತಿಗಳ ಸಂಚಾರಕ್ಕೆ ಅನುಗುಣವಾಗಿ ನಾವು ಸಹ ಸೂಕ್ತ ರೀತಿಯಲ್ಲಿ ಪರಿಹಾರೋಪಾಯ ಅಥವಾ ಎಚ್ಚರಿಕೆಯಲ್ಲಿ ಇರಬೇಕಾಗುವುದು. ಈಗಾಗಲೇ 2018ರ ವರ್ಷ ಪ್ರಾರಂಭವಾಗಿ ಕೆಲವು ದಿನಗಳನ್ನು ಕಳೆದಿದ್ದೇವೆ. ಕೆಲವರು ಉತ್ತಮ ಫಲವನ್ನು ಪಡೆದಿರಬಹುದು. ಕೆಲವರು ಯಾವುದೇ ಬದಲಾವಣೆಯನ್ನು ಕಾಣದಿರಬಹುದು. ಇನ್ನೂ ಕೆಲವರಿಗೆ ಅದೇ ಕಷ್ಟ ನೋವುಗಳು ಮುಂದುವರಿದಿರಬಹುದು.
ಅದ್ಯಾವ ಬಗೆಯ ಪರಿಣಾಮವನ್ನು ಅನುಭವಿಸುತ್ತಿದ್ದರೂ ಅದು ನಮ್ಮ ಕಲ್ಪನೆಗೆ ಮೀರಿದ ಶಕ್ತಿ ಅಥವಾ ಗ್ರಹಗತಿಗಳ ಪ್ರಭಾವ ಎಂದು ಭಾವಿಸಬೇಕು. 2018ರಲ್ಲಿ ಕೆಲವು ರಾಶಿ ಚಕ್ರದವರು ಅಷ್ಟಾಗಿ ಶುಭ ಫಲವನ್ನು ಅನುಭವಿಸುವುದಿಲ್ಲ. ಅವರಿಗೆ ಕೆಲವು ನೋವುಗಳು, ವಿಫಲತೆ, ಬೇಸರ ಹಾಗೂ ನಷ್ಟಗಳು ಹೆಚ್ಚು ಸಮಸ್ಯೆಯಾಗಿ ಕಾಡುವುದು ಎಂದು ಹೇಳಲಾಗುತ್ತದೆ. ಹಾಗಾಗದರೆ ಆರಾಶಿಗಳು ಯಾವವು? ಆ ರಾಶಿಯವರು ನೀವಾ? ಎನ್ನುವ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕಾತುರದಲ್ಲಿದ್ದರೆ ಈ ಮುಂದಿರುವ ಸೂಕ್ತ ವಿವರಣೆಯನ್ನು ಪರಿಶೀಲಿಸಿ...

ಮಿಥುನ
ಶನಿಗ್ರಹವು ಮಕರ ರಾಶಿಗೆ ಸ್ಥಳಾಂತರಿಸುವ ಕಾರಣದಿಂದ ಈ ವರ್ಷವು ನಿಮಗೆ ಕಠಿಣವಾದ ವರ್ಷ ಆಗುವುದು. ನಿಮ್ಮ ಎಂಟನೇ ಮನೆಯ ಹಣ, ಸಂಭೋಗ, ಸಾವು, ಸಾಲಗಳು ಮತ್ತು ಅನ್ಯೋನ್ಯತೆಗೆ ಸಂಬಂಧಿಸಿದಂತೆ ನೋವು ಅಥವಾ ಬೇಸರವನ್ನು ಅನುಭವಿಸಬೇಕಾಗುವುದು. ಜನರಿಂದ ಹೇಗೆ ದೂರವಾಗುತ್ತೀರಿ ಅಥವಾ ಮಂದಿಯೊಂದಿಗೆ ಹೇಗೆ ಬೆರೆಯಬೇಕು ಎನ್ನುವುದರ ಬಗ್ಗೆ ನೀವೇ ತಿಳಿದುಕೊಳ್ಳುವಿರಿ. ಎಂಟನೆಯ ಮನೆ ವಿಷಯಗಳು ವಿನೋದವನ್ನು ನೀಡುವುದಿಲ್ಲ. ಬದಲಿಗೆ ಆಳವಾದ ಭೀತಿ ಮತ್ತು ನೋವನ್ನು ನೀಡುತ್ತದೆ.

ಮಿಥುನ
ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ನಿಮಗೆ ಇತರರೊಂದಿಗೆ ವ್ಯವಹರಿಸಲು ಕಷ್ಟವಾಗುವುದು. ಸಮಸ್ಯೆಗಳು ಎದುರಾದಾಗ ಅದನ್ನು ಎದುರಿಸುವ ಪರಿಯು ನಿಮಗೆ ತಿಳಿದಿರಬಹುದು. ಆದರೂ ಒಮ್ಮೆ ಭಯಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಸಂಬಂಧಗಳ ವಿಚಾರದಲ್ಲಿ ಹೇಳುವುದಾದರೆ ನೀವು ನಿಮ್ಮ ಹಂತದವರನ್ನು ಬಿಟ್ಟು ಕೈಗೆಟುಕದ ಸ್ಥಿತಿಯಲ್ಲಿರುವವರನ್ನು ಇಷ್ಟಪಡುವಿರಿ. ಅವರು ಸಿಗದಿದ್ದಾಗ ನೋವುಂಟಾಗುವುದು. ಕೆಲವು ಆರೋಗ್ಯ ಸಮಸ್ಯೆಯೂ ಈ ವರ್ಷ ನಿಮ್ಮನ್ನು ಕಾಡುವ ಸಾಧ್ಯತೆಗಳಿವೆ. ಆದಷ್ಟು ನಿಮ್ಮಿಂದ ಉಂಟಾಗುವ ತಪ್ಪುಗಳನ್ನು ತಡೆಯಿರಿ. ಧಾನ್ಯ ಹಾಗೂ ಇನ್ನಿತರ ಉತ್ತಮ ಹವ್ಯಾಸಗಳಿಂದ ಮಾನಸಿಕವಾಗಿ ನೆಮ್ಮದಿಯನ್ನು ಗಳಿಸಬಹುದು.

ಕರ್ಕ
ಶನಿಯು ಈ ವರ್ಷ ನಿಮ್ಮ 7ನೇ ಮನೆಯಲ್ಲಿ ಸಂಚರಿಸುತ್ತಾನೆ. ಈ ಪರಿಣಾಮದಿಂದ ನೀವು ಎಷ್ಟು ಬದ್ಧತೆಯನ್ನು ಪಡೆದುಕೊಳ್ಳುವಿರಿ ಎನ್ನುವ ಪರೀಕ್ಷೆಗೆ ಒಳಗಾಗುತ್ತೀರಿ. ನಿಮ್ಮ ಸ್ವಂತ ಯೋಗಕ್ಷೇಮಕ್ಕೆ ಇತರರ ಮೇಲೆ ಅವಲಂಭಿತರಾಗುವ ಸಾಧ್ಯತೆಗಳಿವೆ. ಆದಷ್ಟು ನಿಮ್ಮ ವಿವೇಕಯುತವಾದ ವರ್ತನೆಯನ್ನು ತೋರುವುದು ಸೂಕ್ತ. ಕೆಲವು ಕೆಟ್ಟ ಆಲೋಚನೆಗಳು ನಿಮ್ಮ ದಾರಿಯನ್ನು ತಪ್ಪಿಸಬಹುದು. ಅದರ ಬಗ್ಗೆ ನೀವು ಸೂಕ್ತರೀತಿಯಲ್ಲಿ ತಿಳಿದುಕೊಳ್ಳಬೇಕು.

ಕರ್ಕ
ಬೇರೆಯವರು ಎಷ್ಟೇ ನೋವಿನಲ್ಲಿದ್ದರೂ ನೀವು ಎಲ್ಲರೂ ಒಮ್ಮೆ ನೋವಿನ ಭಾವನೆಗೆ ಒಳಗಾಗುತ್ತಾರೆ ಎನ್ನುವ ಭಾವನೆಯನ್ನು ತಳೆದಿರುತ್ತೀರಿ. ಬೇರೆಯವರು ಹೇಗಿದ್ದಾರೆ ಎನ್ನುವುದರ ಬಗ್ಗೆ ನೀವು ಚಿಂತಿಸದಿರಿ. ನಿಮ್ಮಿಂದ ಬೇರೆಯವರಿಗೆ ಎಷ್ಟು ಸಗಹಾಯವಾಗುವುದು? ನಿಮ್ಮ ಸ್ಥಿತಿಯೇನು? ನಿಮ್ಮ ಪರಿಸ್ಥಿತಿಗೆ ನೀವು ಹೇಗಿರಬೇಕು ಎನ್ನುವುದನ್ನು ಮೊದಲು ಅರಿತಿರಬೇಕು. ನೀವು ನಿಮ್ಮನ್ನು ಪ್ರೀತಿಸುವುದು ಹಾಗೂ ಇತರರೊಂದಿಗೆ ಬೆರೆಯುವ ಗುಣವನ್ನು ಕಲಿಯಬೇಕಿದೆ. ಆಗಲೇ ನಿಮ್ಮ ದುಃಖ ಸ್ವಲ್ಪ ಹಗುರವಾಗಲು ಸಾಧ್ಯ.

ಧನು
ಈ ರಾಶಿಯವರು ಸಾಮಾನ್ಯವಾಗಿ ಅದೃಷ್ಟವನ್ನು ಹೊಂದಿರುತ್ತಾರೆ. ಇವರು ಗುರುವಿನ ಆಳ್ವಿಕೆಯಲ್ಲಿರುವುದರಿಂದ ಉತ್ತಮ ಫಲಗಳನ್ನು ಅನುಭವಿಸುತ್ತೀರಿ. ಈ ವರ್ಷ ಶನಿಯು ಮಕರ ರಾಶಿಯಲ್ಲಿ ಸಂಚಾರ ಬೆಳೆಸಿರುವುದರಿಂದ ನಿಮ್ಮ ಮೇಲೆ ಕೆಲವು ಕಷ್ಟದ ಪರಿಣಾಮ ಬೀರುವ ಸಾಧ್ಯತೆಗಳಿವೆ. ನೀವು ಇತರರನ್ನು ದ್ವೇಷಿಸುವ ಗೋಜಿಗೆ ಹೋಗುವಂತಹ ಪರಿಸ್ಥಿತಿ ಎದುರಾಗಬಹುದು. ಆದರೆ ಅದನ್ನು ತಡೆದು ಹೇಗೆ ನಿಭಾಯಿಸಬೇಕು ಎನ್ನುವುದನ್ನು ತಿಳಿಯಬೇಕು.

ಧನು
ನೀವು ಸಂಪಾದಿಸಿದ ಹಣವನ್ನು ಹೇಗೆ ಕಾಪಾಡಿಕೊಳ್ಳಬೇಕು? ಹೇಗೆ ವ್ಯಯಿಸಬೇಕು ಎನ್ನುವುದರ ಮೇಲೆ ನಿಮ್ಮ ಹಿಡಿತ ಇರಬೇಕಾಗುವುದು. ಇಲ್ಲವಾದರೆ ಪರಿಸ್ಥಿತಿ ಚಿಂತನೆಗೆ ಒಳಗಾಗಿಸುತ್ತದೆ. ಈ ವರ್ಷ ನಿಮಗೆ ಗೆಲವು ನಿಧಾನಗತಿಯಲ್ಲಿ ದೊರೆಯುವುದು. ಹಾಗಾಗಿ ಆದಷ್ಟು ತಾಳ್ಮೆ ಮತ್ತು ಎಚ್ಚರಿಕೆಯಿಂದ ವ್ಯವಹರಿಸಬೇಕು. 2018ರಲ್ಲಿ ಬರುವ ಸಮಸ್ಯೆಗಳನ್ನು ನಿಭಾಯಿಸುವುದರ ಮೂಲಕ ನಿಮ್ಮ ಜೀವನದಲ್ಲಿ ಯಾವುದು ಮುಖ್ಯ ಎನ್ನುವುದನ್ನು ನೀವು ಅರಿತುಕೊಳ್ಳುವಿರಿ.



Click it and Unblock the Notifications











