For Quick Alerts
ALLOW NOTIFICATIONS  
For Daily Alerts

2018ರ ರಾಶಿ ಭವಿಷ್ಯ: ನಿಮ್ಮ ನಿರ್ಧಾರ ಹೀಗಿರಲಿ, ಜೀವನದಲ್ಲಿ ಸಂತೋಷವಾಗಿರುವಿರಿ

By Deepu
|

ನಮ್ಮನ್ನು ನಾವು ಎಷ್ಟು ಸಂತೋಷವಾಗಿಟ್ಟುಕೊಳ್ಳುತ್ತೇವೆ ಎನ್ನುವುದರ ಮೇಲೆಯೇ ನಮ್ಮ ಮಾನಸಿಕ ಸ್ಥಿತಿಯ ಮಟ್ಟ ನಿರ್ಧಾರವಾಗುತ್ತದೆ. ಇದ್ದುದ್ದರಲ್ಲೇ ಸಂತೋಷಪಟ್ಟುಕೊಳ್ಳುವ ಸ್ವಭಾವ ನಮ್ಮದಾಗಿದ್ದರೆ ಅದೆಂತಹದ್ದೇ ಪರಿಸ್ಥಿತಿ ಬಂದರೂ ಎದುರಿಸುವ ಸಾಮಥ್ರ್ಯ ನಮ್ಮಲ್ಲಿರುತ್ತದೆ. ಸನ್ನಿವೇಶಗಳನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದರ ಆಧಾರದ ಮೇಲೆ ಸಮಾಜದಲ್ಲಿ ನಮ್ಮ ವ್ಯಕ್ತಿತ್ವವೂ ನಿರ್ಧಾರವಾಗುತ್ತದೆ. ನಮ್ಮ ವ್ಯಕ್ತಿತ್ವ ಹಾಗೂ ಮಾನಸಿಕ ಸ್ಥಿತಿಯು ನಮ್ಮ ಹಿಡಿತದಲ್ಲಷ್ಟೇ ಇರುವುದಿಲ್ಲ. ಅದು ನಮ್ಮ ಗ್ರಹಗತಿಗಳನ್ನು ಆಧರಿಸಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

2018ರಲ್ಲಿ ರಾಶಿ ಚಕ್ರದ ಅನ್ವಯವಾಗಿ ನಮ್ಮ ಮಾನಸಿಕ ಸ್ಥಿತಿಯಲ್ಲಿ ಕೆಲವು ಬದಲಾವಣೆಯನ್ನು ತಂದುಕೊಳ್ಳಬಹುದು. ಅದಕ್ಕೆ ಪೂರಕವಾಗಿ ಗ್ರಹಗತಿಗಳ ಸಹಕಾರ ದೊರೆಯುವುದು ಎಂದು ಕೆಲವು ಜ್ಯೋತಿಷ್ಯ ಶಾಸ್ತ್ರ ದೃಢ ಪಡಿಸುತ್ತಿದೆ. ಹಾಗಾದರೆ ಈ ಹಿಂದೆ ನಾವು ಯಾವೆಲ್ಲಾ ಮಾನಸಿಕ ಸ್ಥಿತಿಗಳನ್ನು ಹೊಂದಿದ್ದೆವು? 2018ರಲ್ಲಿ ಯಾವ ಬದಲಾವಣೆಗೆ ಸಿದ್ಧರಾಗಬೇಕು? ಅದರಿಂದ ನಮ್ಮನ್ನು ನಾವು ಸಂತೋಷವಾಗಿ ಇರಿಸಿಕೊಳ್ಳುವುದು ಹೇಗೆ? ಎನ್ನುವ ಸೂಕ್ತ ಮಾಹಿತಿಯನ್ನು ಬೋಲ್ಡ್ ಸ್ಕೈ ನಿಮಗಾಗಿ ಪರಿಚಯಿಸುತ್ತಿದೆ...

ಮೇಷ: ಮಾರ್ಚ್ 21- ಏಪ್ರಿಲ್ 20

ಮೇಷ: ಮಾರ್ಚ್ 21- ಏಪ್ರಿಲ್ 20

ಈ ರಾಶಿ ಚಕ್ರದವರು ನಕಾರಾತ್ಮಕ ಚಿಂತನೆಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. 2018ರಲ್ಲಿ ನಿಮ್ಮನ್ನು ನೀವು ಹೇಗೆ ಸಂತೋಷಪಡಿಸಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳಲು ಉತ್ತಮವಾದ ಸಮಯ ಎಂದು ಹೇಳಬಹುದು. ಆದರೆ ಇದು ಕೇವಲ ಒಂದೇ ರಾತ್ರಿಯಲ್ಲಿ ನಿರ್ಧರಿತವಾಗುವ ವಿಚಾರವಲ್ಲ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ನಿಮ್ಮ ಭಾವನೆಯನ್ನು ನೀವು ಸಂತೈಸುವುದು ಹಾಗೂ ಸಂತೋಷ ಪಡಿಸಿಕೊಳ್ಳುವ ಕೆಲಸವನ್ನು ಮುಂದುವರಿಸಬೇಕು. ಆಗ ವರ್ಷ ಪೂರ್ತಿ ನೀವು ಸಂತೋಷದಿಂದ ಇರಲು ಸಾಧ್ಯ ಎಂದು ಹೇಳಲಾಗುವುದು. ಮೇಷ ರಾಶಿಯವರು ಉತ್ಸಾಹಿಗಳು ಮತ್ತು ಸ್ಪರ್ಧಾತ್ಮಕ ನಾಯಕರು ಎಂದು ಹೇಳಲಾಗುವುದು. ಇವರಿಗೆ ಮಿಲಿಟರಿ, ಸರ್ಕಾರಿ ಉದ್ಯೋಗ, ಅಥ್ಲೆಟಿಕ್ಸ್, ಮ್ಯಾನೇಜ್‍ ಮೆಂಟ್ ಮತ್ತು ಜಾಹೀರಾತುಗಳಲ್ಲಿ ಉದ್ಯೋಗಗಳನ್ನು ಶ್ರಮಶೀಲರಾಗಿ ಮಾಡಬಹುದು. ಈ ಉದ್ಯೋಗಗಳು ಉತ್ತಮ ಲಾಭ ಹಾಗೂ ಗೌರವ ತಂದುಕೊಡುವುದು. ಇವರ ಬುದ್ಧಿ ಬಲಿಷ್ಠವಾಗಿರುವುದು. ಬೇರೆಯವರ ಸಲಹೆ ಅಥವಾ ಆದೇಶ ಪಾಲಿಸುವುದಿಲ್ಲ. ಇವರು ಯಾವಾಗಲೂ ನಾಯಕ ಅಥವಾ ಕಂಪನಿಯ ಮಾಲಕರಾಗುವರು. ಇವರಿಗೆ ಕೈಕೆಳಗೆ ಕೆಲಸ ಮಾಡಲು ಆಗುವುದಿಲ್ಲ. ಇವರಿಗೆ ತುಂಬಾ ಸ್ಪರ್ಧೆಯಿರುವ ಕೆಲಸ ಬೇಕಾಗಿದೆ.

ವೃಷಭ: ಏಪ್ರಿಲ್21- ಮೇ21:

ವೃಷಭ: ಏಪ್ರಿಲ್21- ಮೇ21:

ಕಳೆದ ವರ್ಷ ನೀವು ನಿಮ್ಮ ಆಪ್ತರನ್ನು ಕಳೆದುಕೊಂಡಿದ್ದೀರಿ. ಇವರು ಸಾಮಾನ್ಯವಾಗಿ ತಮ್ಮ ಅಸಮಧಾನಕ್ಕೆ ಇತರರನ್ನು ದೂಷಿಸುತ್ತಾರೆ. ಇವರು ವಿಶಾಲ ಹೃದಯದವರಾಗಿದ್ದರೂ ಕೆಲವೊಮ್ಮೆ ತಪ್ಪಾಗಿ ಗ್ರಹಿಸುತ್ತಾರೆ. ಇವರಲ್ಲಿರುವ ಕೆಲವು ಮಾನಸಿಕ ಸ್ಥಿತಿಗಳು ಇವರ ಸಂತೋಷವನ್ನು ಹಾಳುಮಾಡುತ್ತದೆ. ನೀವು ನಿಮ್ಮನ್ನು ಸಂತೋಷವಾಗಿಟ್ಟು ಕೊಳ್ಳಲು ನಕಾರಾತ್ಮಕ ಭಾವನೆಗಳನ್ನು ಬಿಡಬೇಕು. ಆಗ ನೀವು ನಿಮ್ಮನ್ನು ಸಂತೋಷಪಡಿಸಿಕೊಳ್ಳುವಿರಿ. ಜೊತೆಗೆ ನಿಮ್ಮ ಸುತ್ತಲಿನವರನ್ನೂ ಸಂತೋಷವಾಗಿಟ್ಟುಕೊಳ್ಳುವಿರಿ. ಇವರು ಕೆಲವು ವಿಷಯಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಳ್ಳಬಲ್ಲರು. ಮಸಾಜ್ ಥೆರಪಿಸ್ಟ್, ಬಾಣಸಿಗ, ಹೂಗಾರ ಅಥವಾ ಕಲಾತ್ಮಕವಾಗಿ ಆಸಕ್ತಿ ತೋರಿದರೆ ಚಿತ್ರಕಲೆ, ಶಿಲ್ಪ ಕಲಾಕೃತಿ, ಸ್ಟಾಕ್ ಬ್ರೋಕರ್, ಆಭರಣ ವ್ಯಾಪಾರ, ವ್ಯವಹಾರ ಕಾರ್ಯನಿರ್ವಾಹಕ ಮತ್ತು ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ನಿರ್ವಹಿಸಬಹುದು. ಇವರು ಈ ಕೆಲಸವನ್ನು ಹೆಚ್ಚು ಆನಂದಿಸಿಕೊಂಡು ಕೆಲಸ ಮಾಡುವರು. ಈ ರಾಶಿಯವರಿಗೆ ಅಸುರಕ್ಷತೆ, ಹಠಾತ್ ಬದಲಾವಣೆ ಅಥವಾ ಅಚ್ಚರಿ, ತಕ್ಷಣ ನಿರೋದ್ಯೋಗಿ ಯಾಗುವುದನ್ನು ಸಂಭಾಲಿಸಲು ಆಗಲ್ಲ. ಇವರು ಹಣದ ರಿಸ್ಕ್ ತೆಗೆದುಕೊಳ್ಳುವರು. ಆದರೆ ಬೇರೆಯವರ ಹಣ ಮಾತ್ರ!. ಯಾವುದೇ ಸ್ಥಿರ ಕೆಲಸ ಅಥವಾ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವಾಗ ಇವರು ತುಂಬಾ ಸಂತೋಷವಾಗಿರುವರು.

ಮಿಥುನ: ಮೇ22-ಜೂನ್ 21

ಮಿಥುನ: ಮೇ22-ಜೂನ್ 21

ಇವರು ಸದಾ ಸಕಾರಾತ್ಮಕ ಭಾವನೆಯನ್ನು ಹೊಂದಿರುತ್ತಾರೆ. ಇದು ಅವರ ಉತ್ತಮ ಸಾಮರ್ಥ್ಯ ಎನ್ನಬಹುದು. ಈ ಗುಣವೇ ಅವರಿಗೆ ಶ್ರೇಯಸ್ಸು ಹಾಗೂ ಜೀವನದಲ್ಲಿ ಮುಂದೆ ಬರಲು ಸಹಾಯ ಮಾಡುತ್ತದೆ. ಇವರು ಸಂತೋಷವಾಗಿರುವುದು ಹೇಗೆ ಎಂಬುದನ್ನು ತಿಳಿದಿರುತ್ತಾರೆ. ಅದಕ್ಕೆ ತಕ್ಕಂತೆ ಈ ವರ್ಷವು ಅವರು ಬಯಸಿದ್ದನ್ನು ಪಡೆಯುವ ಅದೃಷ್ಟವನ್ನು ಹೊಂದಿದ್ದಾರೆ.ಇವರು ಇಬ್ಬರು ಸೇರಿ ಮಾಡುವ ಕೆಲಸದಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಇವರು ಬೇಸರದಿಂದ ಇರಲು ಇಷ್ಟಪಡುವುದಿಲ್ಲ. ಇವರಿಗೆ ಆಸಕ್ತಿದಾಯಕ ಮತ್ತು ಅತ್ಯಾಕರ್ಷಕ ಕೆಲಸ, ಸಹ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸುವುದನ್ನು ಹೆಚ್ಚು ಇಷ್ಟಪಡುತ್ತಾರೆ.ಇವರು ಸ್ಟಾಕ್ ಬ್ರೋಕರ್, ಜಾಹೀರಾತು, ಮನರಂಜನೆ, ರೇಡಿಯೋ, ಮಾರ್ಕೆಟಿಂಗ್, ಟೆಕ್ ಸಪೋರ್ಟ್, ಶಿಕ್ಷಕ ವೃತ್ತಿ, ವಾಸ್ತು ಶಿಲ್ಪಗಳಲ್ಲಿ ಹೆಚ್ಚು ಹಣವನ್ನು ಗಳಿಸಬಹುದು. ಅಲ್ಲದೆ ಮಾನಸಿಕ ಉತ್ತೇಜನ ಸಂತೋಷವಾಗಿಡಲು ಈ ರಾಶಿಯವರಿಗೆ ಕೆಲಸ ಬೇಕು. ಇವರು ತಮ್ಮ ಸಂವಹನ ಸಾಮರ್ಥ್ಯದಿಂದಲೇ ಕೆಲಸ ಮಾಡಿಕೊಳ್ಳುತ್ತಾರೆ.ಇವರಿಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ಏಕತಾನತೆಯ ಕೆಲಸ ಇವರಿಗೆ ಇಷ್ಟವಿಲ್ಲ.ಇವರು ಸಾಮಾಜಿಕ ಕೆಲಸ ಕಾರ್ಯ ಅಥವಾ ಯಾವುದಾದರೂ ಹವ್ಯಾಸದಲ್ಲಿ ತೊಡಗಿಕೊಂಡು ತಮ್ಮ ವೃತ್ತಿಯ ಬೇಸರ ಕಡಿಮೆ ಮಾಡಿಕೊಳ್ಳುವರು.

ಕರ್ಕ: ಜೂನ್ 22-ಜುಲೈ22

ಕರ್ಕ: ಜೂನ್ 22-ಜುಲೈ22

ಈ ರಾಶಿಯವರು ಅತ್ಯಂತ ನಿಷ್ಕಲ್ಮಶ ವ್ಯಕ್ತಿಗಳು ಹಾಗೂ ಸರಳ ವ್ಯಕ್ತಿಗಳಾಗಿರುತ್ತಾರೆ. ಆದರೆ ಜನರು ಅವರ ಈ ಸ್ವಭಾವವನ್ನೇ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಇವರ ಸುತ್ತಲಿನ ವ್ಯಕ್ತಿಗಳನ್ನು ಹೇಗೆ ಕಾಯ್ದುಕೊಳ್ಳಬೇಕು ಎನ್ನುವುದೇ ಈ ರಾಶಿಯವರಿಗೆ ಈ ವರ್ಷದ ಅತ್ಯಂತ ದೊಡ್ಡ ಸವಾಲು ಎಂದು ಹೇಳಬಹುದು. ಇತರರಿಗೆ ಬೇಕಾದುದ್ದನ್ನು ನೀಡುವುದರ ಮೂಲಕ ನಿಮ್ಮನ್ನು ನೀವು ಸಂತೋಷ ಪಡಿಸಿಕೊಳ್ಳಬಹುದು ಎಂದು ಹೇಳಲಾಗುವುದು. ಕರ್ಕ ರಾಶಿಯಲ್ಲಿ ಜನಿಸಿದವರಿಗೆ ಕಾಳಜಿ ಮತ್ತು ಪೋಷಣೆ ಮಾಡುವ ಕೆಲಸವು ಹೆಚ್ಚು ಆಸಕ್ತಿದಾಯಕವಾಗಿರುತ್ತದೆ. ಇವರು ಶಿಕ್ಷಕರಾಗಿ, ವೈದ್ಯರಾಗಿ, ತೋಟಗಾರಿಕೆ, ಭೂದೃಶ್ಯ, ಸಾಮಾಜಿಕ ಕಾರ್ಯಕರ್ತ ಅಥವಾ ದಾದಿಯ ವೃತ್ತಿಯನ್ನು ಪರಿಪೂರ್ಣವಾಗಿ ನಿರ್ವಹಿಸುತ್ತಾರೆ. ಇವರಿಗೆ ಕೆಲಸದಲ್ಲಿ ಸುರಕ್ಷತೆಯಿರುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದಾಗಿ ಒಳ್ಳೆಯ ಸಂಬಳ ಸಿಗುವ ಕೆಲಸ ಇವರು ಆಯ್ಕೆ ಮಾಡಿಕೊಳ್ಳುವರು. ಇವರು ಕೆಲವೊಮ್ಮೆ ತುಂಬಾ ಭಾವನಾತ್ಮಕವಾಗಿ ವರ್ತಿಸುವ ಕಾರಣದಿಂದ ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಇಲ್ಲವಾದರೆ ಕೆಲಸವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುವರು. ಇತರರನ್ನು ಪಾಲನೆ ಮಾಡುವ ಉದ್ಯೋಗ ಇವರಿಗೆ ಒಳ್ಳೆಯದು.

ಸಿಂಹ: ಜುಲೈ23-ಆಗಸ್ಟ್ 22

ಸಿಂಹ: ಜುಲೈ23-ಆಗಸ್ಟ್ 22

ಈ ರಾಶಿವರು ಕಳೆದ ವರ್ಷದಲ್ಲಿ ಬಹಳಷ್ಟು ನೋವು ಹಾಗೂ ಅಡಚಣೆಗಳನ್ನು ಅನುಭವಿಸಿದ್ದರು ಎಂದು ಹೇಳಬಹುದು. ಆದರೆ ಈವರ್ಷ ಎಲ್ಲಾ ಬಗೆಯ ವಿಚಾರದಲ್ಲೂ ಸಂತೋಷ ಹಾಗೂ ಹೊಸತನವನ್ನು ಅನುಭವಿಸುವ ವರ್ಷ ಎನ್ನುವುದನ್ನು ತಿಳಿದುಕೊಳ್ಳಬೇಕು. ಯಾವಾಗ ಇವರು ತಮ್ಮ ಸಂತೋಷವನ್ನು ತಾವೇ ಅರಿತುಕೊಳ್ಳುತ್ತಾರೋ ಅಂದಿನಿಂದಲೇ ಸಂತೋಷದ ದಿನಗಳು ಆರಂಭವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇವರು ಸ್ವತಂತ್ರವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಕೇಂದ್ರಬಿಂದುವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಇವರಿಗೆ ಸೂಕ್ತವಾಗುವ ಉದ್ಯೋಗ ಸಿಇಓ, ಪ್ರವಾಸ ಮಾರ್ಗದರ್ಶಿ, ನಿರ್ವಾಹಕ ಕಾರ್ಯಕ್ರಮ ಯೋಜಕ, ಉದ್ಯಮಿ, ರಿಯಲ್ ಎಸ್ಟೇಟ್, ಕಲಾವಿದ/ಮನರಂಜನೆ ಮತ್ತು ಮಾರಾಟಗಾರನಾಗಿ ಕೆಲಸ ನಿರ್ವಹಿಸಬಲ್ಲರು. ಇವು ಉತ್ತಮ ಲಾಭ ತಂದುಕೊಡುತ್ತವೆ. ಈ ರಾಶಿಯವರ ಕಠಿಣ ಪರಿಶ್ರಮದಿಂದಲೇ ಇವರ ಕೆಲಸವು ಗುರುತಿಸಲ್ಪಡುವುದು. ಇವರು ಪ್ರಾಜೆಕ್ಟ್ ಗಳನ್ನು ಆಯೋಜಿಸುವ ಸಾಮರ್ಥ್ಯ ಹೊಂದಿರುವರು. ಏಕಾಂಗಿಯಾಗಿ ಅಥವಾ ತಂಡವಾಗಿ ಅವರು ತಮ್ಮ ಕೆಲಸ ಮಾಡಬಲ್ಲರು. ಅವರು ಕೆಲಸದಲ್ಲಿ ತುಂಬಾ ಭಾವನಾತ್ಮಕವಾಗಿ ತೊಡಗಿಕೊಳ್ಳುವರು.

ಕನ್ಯಾ: ಆಗಸ್ಟ್ 23-ಸಪ್ಟೆಂಬರ್ 22

ಕನ್ಯಾ: ಆಗಸ್ಟ್ 23-ಸಪ್ಟೆಂಬರ್ 22

ಈ ರಾಶಿಯವರು ತಮ್ಮ ಭಾವನೆ ಹಾಗೂ ವರ್ತನೆಗಳನ್ನು ಹೇಗೆ ಸಂತೋಷ ಪಡಿಸಿಕೊಳ್ಳಬೇಕು ಅಥವಾ ಹೇಗೆ ಸಮತೋಲನದಲ್ಲಿ ಇರಿಸಿಕೊಳ್ಳಬೇಕು ಎನ್ನುವುದನ್ನು ತಿಳಿದಿರುತ್ತಾರೆ. ಇವರ ನ್ಯೂನತೆಯ ಲಕ್ಷಣವೆಂದರೆ ಇತರರೊಂದಿಗೆ ತಮ್ಮನ್ನು ಹೋಲಿಸಿ ಕೊಳ್ಳುವುದು. ಈ ಒಂದು ಪ್ರಕ್ರಿಯೆಯಿಂದ ತಮ್ಮ ಸಂತೋಷವನ್ನು ಕಳೆದು ಕೊಳ್ಳುತ್ತಾರೆ. ಎಂದು ಅವರು ತಮ್ಮ ಬಗ್ಗೆ ಹಾಗೂ ತಾವು ಪಡೆದುಕೊಂಡಿರುವುದರ ಬಗ್ಗೆ ಹೆಮ್ಮೆ ಹಾಗೂ ಖುಷಿಯನ್ನು ಪಡುತ್ತಾರೋ ಅಂದಿನಿಂದಲೇ ಸಂತೋಷದ ದಿನಗಳು ಆರಂಭವಾಗುತ್ತದೆ ಎನ್ನಲಾಗುವುದು. ಈ ರಾಶಿಯಲ್ಲಿ ಜನಿಸಿದವರು ಸಂಘಟಿತ ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸುತ್ತಾರೆ. ಇವರು ಮಾಡುವ ಕೆಲಸದಲ್ಲಿ ಅಚ್ಚುಕಟ್ಟನ್ನು ಪರಿಗಣಿಸುತ್ತಾರೆ. ಇವರಿಗೆ ಗ್ರಂಥಾಲಯಗಳು, ಹಸ್ತಾಲಂಕಾರಿಗಳು, ಯಂತ್ರ ಶಾಸ್ತ್ರಜ್ಞರು, ವಾಸ್ತುಶಿಲ್ಪಿಗಳು, ಸಂಪಾದಕರು, ಬರಹಗಾರರು, ವೈದ್ಯರು, ವಿಜ್ಞಾನಿಗಳು, ಸಂಶೋಧಕರು ಅಥವಾ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ತಮ್ಮ ಬುದ್ಧಿಯು ಕೆಲಸ ಮಾಡುತ್ತಾ ಇರಬೇಕೆಂದರೆ ಇವರಿಗೆ ಪ್ರತೀ ದಿನವು ಸಾವಿರಾರು ಮಾಹಿತಿಗಳು ಬೇಕೇಬೇಕು. ಸಣ್ಣ ವಿಚಾರಗಳನ್ನು ಸಂಭಾಲಿಸುವಲ್ಲಿ ಇವರು ಒಳ್ಳೆಯ ರೀತಿ ಕೆಲಸ ಮಾಡುವರು. ಬೇರೆಯವರು ಪಾಲಿಸಬೇಕಾದ ವೇಳಾಪಟ್ಟಿ ತಯಾರಿಸಲು ಇವರಿಗೆ ಯಾವುದೇ ಸಮಸ್ಯೆಯಿಲ್ಲ. ಇತರರನ್ನು ಟೀಕಿಸುವಂತಹ ತಮ್ಮ ನಡವಳಿಕೆ ಬಗ್ಗೆ ಗಮನವಿಡಬೇಕು.

ತುಲಾ: ಸೆಪ್ಟೆಂಬರ್ 23-ಅಕ್ಟೋಬರ್ 22

ತುಲಾ: ಸೆಪ್ಟೆಂಬರ್ 23-ಅಕ್ಟೋಬರ್ 22

ಈ ಹಿಂದೆ ಕಳೆದ ವರ್ಷ ನಿಮಗೆ ಅತ್ಯುತ್ತಮ ವರ್ಷವಾಗಿತ್ತು. ನಿಮ್ಮ ಕಷ್ಟ ಕಾಲದಲ್ಲಿ ಯಾರಿದ್ದರು ಎನ್ನುವುದನ್ನು ನೀವು ನೆನಪಿಟ್ಟುಕೊಳ್ಳಬೇಕು. ಅವರು ನಿಮ್ಮ ಕಷ್ಟ-ಸುಖಕ್ಕೆ ಬರುವ ನಿಜವಾದ ವ್ಯಕ್ತಿಗಳು. ಇವರಿಗೆ ಈ ವರ್ಷ ಅತ್ಯಂತ ಸಂತೋಷಕರವಾದ ವರ್ಷವಾಗಲಿದೆ. ನಿಮ್ಮ ಪ್ರಾಮಾಣಿಕತೆ ಮತ್ತು ನಿಷ್ಠೆಯ ಗುಣಗಳು ನಿಮಗೆ ಸಂತೋಷವನ್ನು ತಂದುಕೊಡುವುದು. ಈ ರಾಶಿಯವರು ಹುಟ್ಟಿನಿಂದಲೇ ಉತ್ತಮ ಮಾತುಗಾರಿಕೆಯುಳ್ಳ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ವಕೀಲ ವೃತ್ತಿ, ಪ್ರಾಧ್ಯಾಪಕ, ಬರಹ, ಪತ್ರಿಕೋದ್ಯಮ, ಮಾರುಕಟ್ಟೆ, ಜಾಹೀರಾತು, ಮಾರಾಟ ಮತ್ತು ಪ್ರಯಾಣ ಏಜೆಂಟ್ ಕೆಲಸವು ಹೆಚ್ಚು ಆದಾಯವನ್ನು ತಂದುಕೊಡುತ್ತದೆ. ಇವರು ಕೆಲಸ ಮಾಡುವಾಗ ಬೇರೆಯವರು ತಮ್ಮ ಸುತ್ತಲು ಇರಬೇಕೆಂದು ಬಯಸುವರು. ಗ್ರಾಹಕರು, ಸಹೋದ್ಯೋಗಿಗಳು ಅಥವಾ ತಮ್ಮ ಸಿಬ್ಬಂದಿ ಯಾರೇ ಆದರೂ ತಮ್ಮ ಜತೆಗಿರಬೇಕೆಂದು ಬಯಸುವರು. ಅವರಿಗೆ ನಿರ್ಧಾರ ತೆಗೆದುಕೊಳ್ಳುವಾಗ ತಪ್ಪಾಗುವ ಭೀತಿಯಿರುತ್ತದೆ. ಇದರಿಂದ ತುಂಬಾ ದೀರ್ಘ ಸಮಯ ಇದನ್ನು ಮುಂದೂಡುವರು. ಇತರರು ತೆಗೆದುಕೊಳ್ಳುವ ಕಠಿಣ ನಿರ್ಧಾರದಂತಹ ಕೆಲಸಗಳಲ್ಲಿ ತುಲಾ ರಾಶಿಯವರು ಸಂತೋಷವಾಗಿರುವರು. ಇಂತಹ ಕೆಲಸಗಳು ಇವರಿಗೆ ಹೊಂದಿಕೊಳ್ಳುವುದು.

ವೃಶ್ಚಿಕ: ಅಕ್ಟೋಬರ್ 23-ನವೆಂಬರ್ 21

ವೃಶ್ಚಿಕ: ಅಕ್ಟೋಬರ್ 23-ನವೆಂಬರ್ 21

ಇವರು ಆಳವಾದ ಹಾಗೂ ಭಾವನಾತ್ಮಕ ಸ್ವಭಾವದವರು. ಇವರು ಪ್ರತಿಯೊಬ್ಬರನ್ನೂ ಅರ್ಥಮಾಡಿಕೊಳ್ಳುವುದು ಅಥವಾ ಪ್ರಶಂಸಿಸುವ ಗುಣವನ್ನು ಹೊಂದಿರುವುದಿಲ್ಲ. ತಮ್ಮನ್ನು ತಾವು ಪ್ರತ್ಯೇಕವಾಗಿಟ್ಟು ಕೊಳ್ಳುವುದರಲ್ಲಿಯೇ ಖುಷಿಯನ್ನು ಕಾಣುತ್ತಾರೆ. ದುರ್ಬಲತೆಯು ಇವರನ್ನು ಹೆದರಿಸುತ್ತದೆ. ತಮ್ಮದೇ ಆದ ನಂಬಿಕೆಯನ್ನು ನಂಬುವುದಕ್ಕಿಂತ ಇತರ ವ್ಯಕ್ತಿಗಳನ್ನು ನಂಬುವುದು ಅವರಿಗೆ ಈ ವರ್ಷ ಸವಾಲಿನ ಕೆಲಸವಾಗಿರುತ್ತದೆ. ಈ ರಾಶಿಯಲ್ಲಿ ಜನಿಸಿದವರು ಅಂತರ್ಬೋಧೆಯಿಂದ ಯೋಚಿಸುವ ಅತ್ಯಂತ ತೀವ್ರವಾದ ವ್ಯಕ್ತಿಗಳಾಗಿರುತ್ತಾರೆ. ಇವರು ವೈದ್ಯರು, ವಕೀಲರು, ಸಮಾಲೋಚಕರು, ಪತ್ತೆದಾರರು, ವಿಜ್ಞಾನಿಗಳು, ಭೌತವಿಜ್ಞಾನಿಗಳು ಅಥವಾ ಕಾನೂನು ಅಧಿಕಾರಿಗಳಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇವರು ಸಾಕಷ್ಟು ಏಕಾಗ್ರತೆಯಲ್ಲಿ ಉದ್ಯೋಗ ಮಾಡುವ ವ್ಯಕ್ತಿಗಳಾಗಿರುತ್ತಾರೆ. ಅಲ್ಲದೆ ಇವರು ಕೆಲಸ ಮಾಡುವಾಗ ಬೇರೆಯವರು ತಮ್ಮ ಸುತ್ತಲು ಇರಬೇಕೆಂದು ಬಯಸುವರು. ಗ್ರಾಹಕರು, ಸಹೋದ್ಯೋಗಿಗಳು ಅಥವಾ ತಮ್ಮ ಸಿಬ್ಬಂದಿ ಯಾರೇ ಆದರೂ ತಮ್ಮ ಜತೆಗಿರಬೇಕೆಂದು ಬಯಸುವರು. ಅವರಿಗೆ ನಿರ್ಧಾರ ತೆಗೆದುಕೊಳ್ಳುವಾಗ ತಪ್ಪಾಗುವ ಭೀತಿಯಿರುತ್ತದೆ. ಇದರಿಂದ ತುಂಬಾ ದೀರ್ಘ ಸಮಯ ಇದನ್ನು ಮುಂದೂಡುವರು. ಇತರರು ತೆಗೆದುಕೊಳ್ಳುವ ಕಠಿಣ ನಿರ್ಧಾರದಂತಹ ಕೆಲಸಗಳಲ್ಲಿ ತುಲಾ ರಾಶಿಯವರು ಸಂತೋಷವಾಗಿರುವರು. ಇಂತಹ ಕೆಲಸಗಳು ಇವರಿಗೆ ಹೊಂದಿಕೊಳ್ಳುವುದು.

ಧನು: ನವೆಂಬರ್ 22-ಡಿಸೆಂಬರ್ 21

ಧನು: ನವೆಂಬರ್ 22-ಡಿಸೆಂಬರ್ 21

ಈ ಹಿಂದೆ ಕಳೆದ ವರ್ಷದಲ್ಲಿ ಪ್ರಮುಖ ಬದಲಾವಣೆಯನ್ನು ನೀವು ಅನುಭವಿಸಿರಿ, ಕೆಲವು ಕಠಿಣವಾದ ಸಮಸ್ಯೆಗಳನ್ನು ಎದುರಿಸುವುದರ ಮೂಲಕ ನಿಮ್ಮ ಪ್ರಯಾಣವನ್ನು ಮುಂದುವರಿಸಿದ್ದೀರಿ. ಈ ವರ್ಷ ಕೆಲವು ಅನುಭವಗಳನ್ನು ಪಡೆಯಲು ನೀವು ಎದುರು ನೋಡಬೇಕಿದೆ. ನಿಮಗೆ ಈ ವರ್ಷ ಒಂದಿಷ್ಟು ಉತ್ತಮ ಬದಲಾವಣೆಯು ಉಂಟಾಗುವುದು. ಕೆಲವು ಕಾರಣಗಳಿಗೆ ವರ್ಷದುದ್ದಕ್ಕೂ ಸಂತೋಷವನ್ನು ನೀವು ಅನುಭವಿಸುವ ಸಾಧ್ಯತೆಗಳಿವೆ. ಈ ರಾಶಿಯವರು ಹೆಚ್ಚು ಶಕ್ತಿಯುಳ್ಳವರು. ಹೊರಾಂಗಣವನ್ನು ಇಷ್ಟಪಡುವ ವ್ಯಕ್ತಿಗಳು. ಪ್ರಯಾಣ ಮಾಡಲು ಇಷ್ಟಪಡುವ ಆಧ್ಯಾತ್ಮಿಕ ಜನರು. ಇವರು ಪ್ರಾಣಿ ಮತ್ತು ಜನರನ್ನು ಹೆಚ್ಚು ಇಷ್ಟಪಡುವರು. ಶಿಕ್ಷಕರ, ಟ್ರಾವೆಲ್ ಏಜೆಂಟ್, ಬರಹಗಾರ/ಸಂಪಾದಕ, ನಟ, ಆಧ್ಯಾತ್ಮಿಕ ನಾಯಕ, ತರಬೇತುದಾರ, ಪ್ರಾಣಿ ತರಬೇತುದಾರ ಕೆಲಸವು ಹೆಚ್ಚು ಆಸಕ್ತಿ ಹಾಗೂ ಲಾಭವನ್ನು ತರುವಂತಹ ಕೆಲಸವಾಗಿದೆ. ಶಿಸ್ತಿನ ದೈನಂದಿನ ಚಟುವಟಿಕೆಯು ಈ ರಾಶಿಯವರಿಗೆ ಇಷ್ಟವಾಗುವುದಿಲ್ಲ. ಇವರು ಸ್ವಾತಂತ್ರ್ಯವಾಗಿ ಅಂದರೆ ಯಾವುದೇ ಕಟ್ಟುಪಾಡು ಇಲ್ಲದೆ ಕೆಲಸ ಮಾಡಿದರೆ ತಮ್ಮ ಶ್ರೇಷ್ಠ ಶ್ರಮ ವಹಿಸುವರು. ಪ್ರಯಾಣ ಇರುವಂತಹ ವೃತ್ತಿಯಲ್ಲಿ ಇವರು ಉತ್ತಮವಾಗಿರುವರು. ಯಾವುದೇ ಬದಲಾವಣೆಗೆ ಇವರು ಹೊಂದಿಕೊಳ್ಳುವರು. ಇವರು ತಮ್ಮ ಕೆಲಸದ ಬಗ್ಗೆ ಸಂತೋಷವಾಗಿರುವರು. ಆದರೆ ಬೇರೆ ಯಾರಾದರೂ ಯೋಜನೆಗಳ ವರದಿ ಓದಲಿ ಎಂದು ಬಯಸುವರು.

ಮಕರ: ಡಿಸೆಂಬರ್ 22- ಜನವರಿ 20

ಮಕರ: ಡಿಸೆಂಬರ್ 22- ಜನವರಿ 20

ಇವರು ಈ ಹಿಂದೆ ಅನೇಕ ಕಷ್ಟಗಳನ್ನು ಅನುಭವಿಸಿದ್ದಾರೆ. ನೀವು ನಿಮ್ಮ ಹಿಂದಿನ ವಿಚಾರವನ್ನೇ ಹೆಚ್ಚು ಚಿಂತಿಸುತ್ತಿದ್ದರೆ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಭವಿಷ್ಯದ ಬಗ್ಗೆ ಯೋಚಿಸುವುದು ಹಾಗೂ ಆಸಕ್ತಿ ತೋರುವುದನ್ನು ಕಲಿಯಬೇಕಿದೆ. ಇವರು ಈ ಕ್ಷಣ ಬಂದಿರುವ ಸಮಯವನ್ನು ಅನುಭವಿಸಲು ಅಥವಾ ಆನಂದಿಸಲು ಕಲಿಯಬೇಕಿದೆ. ಆಗಲೇ ವರ್ಷ ಪೂರ್ತಿ ಸಂತೋಷ ನಿಮ್ಮದಾಗಿರುತ್ತದೆ. ಇವರು ವೃತ್ತಿ ಜೀವನದಲ್ಲಿ ಹೆಚ್ಚು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಹಾಗಾಗಿಯೇ ಇವರು ವೃತ್ತಿ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಇವರು ತುಂಬಾ ಜವಾಬ್ದಾರರಾಗಿ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಇವರು ಐಟಿ, ವಿಜ್ಞಾನಿ, ಮ್ಯಾನೇಜರ್, ಬ್ಯಾಂಕರ್, ಸಂಪಾದಕ, ವಾಣಿಜ್ಯೋದ್ಯಮಿ ಮತ್ತು ಆಡಳಿತಗಾರರಾಗಿ ಕೆಲಸ ನಿರ್ವಹಿಸಬಹುದು. ಆರ್ಥಿಕ ಹಾಗೂ ಸ್ಥಾನಮಾನವನ್ನು ಬಯಸುವಂತಹ ರಾಶಿಯವರು ಇವರಾಗಿರುವರು. ಇವರು ತುಂಬಾ ಮುಂದಾಲೋಚನೆ ಮಾಡುವವರು. ಪ್ರಾಯೋಗಿಕವಾಗಿ ಏನು ಸರಿಯಾಗಿದೆಯೋ ಅದನ್ನೇ ಇವರು ನೆಚ್ಚಿಕೊಳ್ಳುವರು. ಇವರಿಗೆ ದೈನಂದಿನ ಚಟುವಟಿಕೆ ಬಗ್ಗೆ ಸಮಸ್ಯೆಯಿಲ್ಲ. ಆದರೆ ಎಲ್ಲವೂ ಮೊದಲೇ ತಿಳಿಯಬೇಕೆಂದು ಬಯಸುವರು. ತಮ್ಮ ಅಧಿಕಾರದಲ್ಲಿ ಯಾರಿಗೂ ಪಾಲು ಕೊಡಲ್ಲ.

ಕುಂಬ: ಜನವರಿ 21- ಫೆಬ್ರವರಿ 19

ಕುಂಬ: ಜನವರಿ 21- ಫೆಬ್ರವರಿ 19

ಇವರು ಈ ಹಿಂದಿನ ವರ್ಷ ಕಷ್ಟದ ಸನ್ನಿವೇಶಗಳನ್ನು ಹೇಗೆ ಕಳೆದಿದ್ದಾರೆ? ಯಾವ ತಪ್ಪುಗಳನ್ನು ಮಾಡಿರುವುದರಿಂದ ಅತೃಪ್ತ ಜೀವನವನ್ನು ಅನುಭವಿಸಿದ್ದಾರೆ ಎನ್ನುವುದನ್ನು ತಿಳಿದಿದ್ದಾರೆ. ಇವರು ತಮ್ಮ ಪ್ರಿಯವಾದ ಸ್ನೇಹಿತರೊಂದಿಗೆ ಮಾತ್ರ ನಿಕಟತೆ ಹೊಂದಿರಲು ಬಯಸುತ್ತಾರೆ. ಯಾವುದೋ ವಿಚಾರದ ಹಿಂದೆ ಅಥವಾ ಹುಡುಕಾಟದಲ್ಲಿ ಸಂತೋಷ ಅಡಗಿರುವುದಿಲ್ಲ. ನಾವು ಅದನ್ನು ಕಂಡುಕೊಳ್ಳುವುದರಲ್ಲಿ ಸಂತೋಷ ದೊರೆಯುತ್ತದೆ ಎನ್ನುವುದನ್ನು ಇವರು ತಿಳಿಯ ಬೇಕಿದೆ. ಇವರು ಬಹಳಷ್ಟು ಕೆಲಸವನ್ನು ನಿರ್ವಹಿಸಬಲ್ಲರು. ಇವರು ತಾಂತ್ರಿಕ ಮತ್ತು ವೈಜ್ಞಾನಿಕ ವಿಷಯಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ಒಬ್ಬ ವಿಜ್ಞಾನಿಗಳು ಎಂದು ಹೇಳಬಹುದು. ಇವರು ಸಂಶೋಧಕ, ಡಿಸೈನರ್, ಸಾವಯವ ರೈತ, ಏವಿಯೇಟರ್, ರಾಜಕೀಯ ಮತ್ತು ತಂತ್ರಜ್ಞರಾಗಿ ಕೆಲಸ ನಿರ್ವಹಿಸಬಹುದು. ಇವು ಅವರಿಗೆ ಉತ್ತಮ ಹೆಸರು ಮತ್ತು ಲಾಭವನ್ನು ತಂದುಕೊಡುತ್ತವೆ. ಇವರು ತಮ್ಮ ಕೆಲಸದಲ್ಲಿ ಸಂತೋಷವಾಗಿರುವರು. ಇವರು ಎರಡು ರೀತಿಯ ಗೊಂದಲದಲ್ಲಿ ಸಿಲುಕಿಕೊಂಡಿರುವಂತೆ ಇರುವರು. ಒಂದು ಕಡೆ ಇವರು ಏಕಾಂಗಿಯಾಗಿರುವಾಗ ಜನರೊಂದಿಗೆ ಸಂಪರ್ಕ ಸಾಧಿಸಲು ಬಯಸುವರು. ಇನ್ನೊಂದೆಡೆಯಲ್ಲಿ ಇವರು ತಮ್ಮ ಕೆಲಸದಲ್ಲಿ ಶಾಂತಿ ಬಯಸುವರು ಮತ್ತು ಯಾರು ಕೂಡ ತಮ್ಮ ಕೆಲಸದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಬಯಸುವರು.

ಮೀನ: ಫೆಬ್ರವರಿ 20-ಮಾರ್ಚ್ 20

ಮೀನ: ಫೆಬ್ರವರಿ 20-ಮಾರ್ಚ್ 20

ಜನರು ಇವರನ್ನು ಯಾರೆಂದು ನೋಡುತ್ತಾರೆ. ಆದರೆ ಇವರಿಗೆ ಇವರು ಯಾರು? ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇವರು ತಮ್ಮ ಆತ್ಮೀಯರನ್ನು ಹಾಗೂ ಸಂಬಂಧಗಳನ್ನು ಕಾಪಾಡಿಕೊಳ್ಳಲು ಕಷ್ಟಪಟ್ಟು ಪ್ರಯತ್ನಿಸುತ್ತಾರೆ. ಇವರು ಅನುಭವಿಸಿರುವ ಕೆಲವು ಕಹಿ ಘಟನೆಯಿಂದ ತೃಪ್ತಿಯನ್ನು ಹೊಂದಿಲ್ಲ ಎಂದು ಹೇಳಬಹುದು. ತಮಗೆ ತಾವು ಆದ್ಯತೆ ನೀಡುವುದಿಲ್ಲ. 2018ರಲ್ಲಿ ಇದನ್ನು ಅವರು ತಿಳಿದುಕೊಳ್ಳಬೇಕು. ಆಗ ಜೀವನವು ಸಂತೋಷದಿಂದ ಕೂಡಿರುತ್ತದೆ ಎನ್ನುವರು. ಈ ರಾಶಿಯಲ್ಲಿ ಜನಿಸಿದವರು ಸೃಜಾನಾತ್ಮಕ, ಭಾವೋದ್ರಿಕ್ತ ಮತ್ತು ಸಹಾನೂಭೂತಿಯುಳ್ಳ ಜನರಾಗಿದ್ದಾರೆ. ಇವರು ಆರೋಗ್ಯ, ಕಲೆ, ನರ್ಸ್, ವೈದ್ಯರು, ಭೌತಿಕ ಚಿಕಿತ್ಸಕ, ಪಶುವೈದ್ಯ, ಜ್ಯೋತಿಷ್ಯ, ಬರಹಗಾರ, ಗ್ರಾಫಿಕ್ ಕಲೆ, ಚಲನಚಿತ್ರ, ಕೇಶ ವಿನ್ಯಾಸಕಾರರಾಗಿ ಕೆಲಸ ನಿರ್ವಹಿಸಬಹುದು. ಇವು ಉತ್ತಮ ಹೆಸರು ಮತ್ತು ಲಾಭವನ್ನು ತಂದುಕೊಡುತ್ತವೆ. ಈ ರಾಶಿಯವರು ಗುಪ್ತ ಶಕ್ತಿಯ ಪ್ರವೀಣರು ಎಂದು ನಂಬಲಾಗಿದೆ. ನಿಷ್ಕ್ರೀಯ ನಿರೋಧಕತೆ ಬಳಸಿಕೊಳ್ಳುವಲ್ಲಿ ಇವರು ಉತ್ತಮವರು. ಇತರರನ್ನು ತುಂಬಾ ಕುಶಲತೆಯಿಂದ ಭಾವನಾತ್ಮಕವಾಗಿ ಮೋಹಗೊಳಿಸುವರು. ಇವರು ರಹಸ್ಯ ತಿಳಿದುಕೊಳ್ಳುವರು. ಕೆಲಸದಿಂದ ಸಂತೋಷವಾಗಿದ್ದರೂ ಇವರು ಉನ್ನತ ಉದ್ದೇಶದಿಂದ ವೃತ್ತಿಯಲ್ಲಿರಲು ಬಯಸುವರು.

English summary

2018: How To Find Happiness As Per Your Zodiac Sign

We never fail at setting resolutions, come any New Year. And we're sure many of you have set individual goals for your own self. To make our goals and aims successful, our zodiac signs need to be in our favour. Here, in this article, we are sharing the list of the zodiac signs and how and what could keep them happy in 2018. This extensive list would let each zodiac sign know what they need to concentrate on to find happiness this year. Like they say, the key to happiness lies within you. So, read on to find out what changes you need to make to be happy in 2018.
X
Desktop Bottom Promotion