For Quick Alerts
ALLOW NOTIFICATIONS  
For Daily Alerts

  ಸಡನ್ ಆಗಿ ಈ ರಾಶಿಯವರಿಗೆ ಅದೃಷ್ಟ ಕೈಕೊಡಬಹುದು! ಆದರೆ ಪರಿಹಾರವಿದೆ...

  By Deepu
  |

  ಕತ್ತಲೆ ಕಳೆದ ಮೇಲೆ ಬೆಳಕು ಬರಲೇ ಬೇಕು. ಕೆಳಗಿರುವ ಚಕ್ರ ಮೇಲೆ ತಿರುಗಲೇ ಬೇಕು. ಎನ್ನುವ ಮಾತು ಕೆಲವೊಮ್ಮೆ ಎಷ್ಟು ನಿಜ ಎನಿಸುತ್ತವೆ. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ ಸುಖಗಳು ಎನ್ನುವುದು ಹಗಲು ರಾತ್ರಿ ಇದ್ದ ಹಾಗೆ. ಕಷ್ಟಗಳು ಕಳೆದ ಮೇಲೆ ಸುಖ ಬರಲೇ ಬೇಕು. ಸುಖವು ಮುಗಿದ ಮೇಲೆ ಕಷ್ಟಗಳನ್ನು ಅನುಭವಿಸಲೇ ಬೇಕು. ಅದೇ ಜೀವನ ಎನಿಸಿಕೊಳ್ಳುತ್ತದೆ. ಬದುಕು ಎಂದರೆ ಹಾಗೆಯೇ ಎನ್ನುವುದನ್ನು ಎಲ್ಲರು ಅರಿಯಬೇಕು.

  ಅದೇ ರೀತಿ ಕೆಲವು ರಾಶಿ ಚಕ್ರವು ಇಷ್ಟು ದಿನ ಬಹಳ ಅದೃಷ್ಟದ ಪತದಲ್ಲಿತ್ತು. ಅದೀಗ ತನ್ನ ಅದೃಷ್ಟವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬರುತ್ತಿದೆ. ಕೆಲವು ರಾಶಿಚಕ್ರದವರು ತಮ್ಮ ನತದೃಷ್ಟದಿಂದ ಅದೃಷ್ಟದ ಹಾದಿಯನ್ನು ಹಿಡಿದಿವೆ. ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕು ಎಂದಾದರೆ ಮಂದಿರುವ ವಿವರಣೆಯನ್ನು ಪರಿಶೀಲಿಸಿ.... 

  ಕನ್ಯಾ

  ಕನ್ಯಾ

  ಈ ರಾಶಿಚಕ್ರದವರು ಅತ್ಯಂತ ಅದೃಷ್ಟವಂತರು. ಇವರು ಎಲ್ಲಾ ವಿಚಾರದಲ್ಲೂ ಅತ್ಯಂತ ಅದೃಷ್ಟಗಳಿಗೆ ಆಶೀರ್ವದಿಸಲ್ಪಟ್ಟಿದ್ದಾರೆ. ಈ ರಾಶಿಯವರು ಕೆಲವು ವಿಚಾರದಲ್ಲಿ ಅತ್ಯಂತ ಭದ್ರತೆಯನ್ನು ಪಡೆದುಕೊಂಡವರಾಗಿದ್ದರು. ಇವರ ಅದೃಷ್ಟವು ಎಂದಿಗೂ ಬದಲಾಗದು ಎನ್ನುವ ರೀತಿಯಲ್ಲಿ ಭವಿಷ್ಯವನ್ನು ಅನುಭವಿಸುತ್ತಿದ್ದರು. ಆದರೆ ಇದೀಗ ಇವರ ಅದೃಷ್ಟವು ಕೊಂಚ ಬದಲಾವಣೆಯನ್ನು ಪಡೆದುಕೊಳ್ಳುತ್ತಿದೆ. ಇದೀಗ ತಮ್ಮ ಅದೃಷ್ಟವನ್ನು ಒಂದೊಂದಾಗಿಯೇ ಕಳೆದುಕೊಳ್ಳುತ್ತಾ ಬರುತ್ತಿದೆ. ನತದೃಷ್ಟದ ಹಾದಿಯನ್ನು ಮೆಟ್ಟಿರುವ ರಾಶಿಚಕ್ರದಲ್ಲಿ ಮೊದಲ ಸ್ಥಾನ ಕನ್ಯಾ ರಾಶಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದಕ್ಕೆ ಪರಿಹಾರವೇನೆಂದರೆ ಕನ್ಯಾರಾಶಿಯಲ್ಲಿ ಬುಧಗ್ರಹ ಪ್ರಾಬಲ್ಯ ಹೊಂದಿದೆ. ಬುಧನ ಅಧಿಪತಿಯಾದ ಶ್ರೀಮನ್ನಾರಾಯಣ ವಿಷ್ಣುವಿನ ಅವತಾರವಾಗಿದ್ದು ಈ ರಾಶಿಯವರು ಶ್ರೀಮನ್ನಾರಾಯಣನನ್ನೇ ಪೂಜಿಸುವ ಮೂಲಕ ಜೀವನದಲ್ಲಿ ಸಮೃದ್ಧಿ ಮತ್ತು ಕ್ಷಿಪ್ರವಾದ ಆದಾಯವನ್ನು ಪಡೆಯಬಹುದು. ಸಾಮಾನ್ಯವಾಗಿ ಈ ರಾಶಿಯ ಜನರು ಇತರರಿಗಿಂತ ಎರಡು ಹೆಜ್ಜೆ ಮುಂದಿರುತ್ತಾರೆ. ಇದಕ್ಕೆ ನೀವು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಗುಣವೇ ಕಾರಣ. ನೀವು ಸಾಮಾನ್ಯವಾಗಿ ಎಲ್ಲರಿಗೂ ಸಹಾಯ ಮಾಡುವ ಮನಸ್ಸುಳ್ಳವರಾಗಿದ್ದು ವ್ಯವಹಾರಿಕ ಅಥವಾ ಕಾರ್ಯರೂಪದ ಕೆಲಸಗಳನ್ನೇ ಹಮ್ಮಿಕೊಳ್ಳುತ್ತೀರಿ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಒಂಟಿತನ. ಒಂಟಿಯಾಗಿದ್ದಾಗ ನೀವು ನಡೆಸುವ ಚಿಂತನೆ ಮತ್ತು ವಿಮರ್ಶೆಗಳ ಪರಿಣಾಮವಾಗಿ ನಿಮ್ಮಲ್ಲಿ ಬಹಳವಾದ ಸಂಗತಿಗಳು ಹೊಮ್ಮುತ್ತವೆ. ಯಾರೇ ಎಷ್ಟೇ ಸಲಹೆಗಳನ್ನು ನೀಡಿದರೂ ನೀವು ಒಂಟಿಯಾಗಿದ್ದಾಗ ತಳೆದ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ.

  ವೃಶ್ಚಿಕ

  ವೃಶ್ಚಿಕ

  ಈ ರಾಶಿಯು ಅತ್ಯಂತ ಅದೃಷ್ಟದ ದಿನವನ್ನು ಪಡೆದುಕೊಂಡಿತ್ತು. ಸ್ನೇಹಿತರೊಂದಿಗೆ ಪ್ರವಾಸ ಹಾಗೂ ಆರ್ಥಿಕವಾಗಿ ಅನುಕೂಲ ಲಭಿಸಿತ್ತು. ಉತ್ತಮ ಭವಿಷ್ಯಕ್ಕಾಗಿ ನೀವು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ ಇದೀಗ ನಿಮ್ಮ ಭವಿಷ್ಯದಲ್ಲಿ ಸ್ವಲ್ಪ ಬದಲಾವಣೆ ಉಂಟಾಗುತ್ತಿದೆ. ನಿಮ್ಮ ಭವಿಷ್ಯದಲ್ಲಿ ಸದಾ ಖುಷಿಯನ್ನೇ ಅನುಭವಿಸಿದ ನಿಮಗೆ ಇದೀಗ ಕೆಲವು ಅದೃಷ್ಟವು ಕೈಕೊಡಲಿದೆ. ಕೆಲವೊಮ್ಮೆ ಅದೃಷ್ಟ ಎನ್ನುವುದು ನಿಮ್ಮಿಂದ ಮರೆಯಾಗುತ್ತಾ ಸಾಗಲಿದೆ. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ, ಈ ರಾಶಿಯಲ್ಲಿ ಮಂಗಳನೇ ಅಧಿಪತ್ಯ ವಹಿಸಿರುತ್ತಾನೆ. ಆದ್ದರಿಂದ ಮಂಗಳನ ಅಧಿಪತಿಯಾದ ಶಿವನನ್ನು ಆರಾಧಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು. ನೆನಪಿಡಿ ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಸ್ವಂತಿಕೆ. ನಿಮ್ಮ ಸ್ವಂತಿಕೆಯ ಮೇರೆಯಂತೆಯೇ ನಡೆಯುವ ನಿಮಗೆ ಬೇರೆಯವರಿಂದ ಎರವಲು ಪಡೆದ ಯಾವುದೇ ಕ್ರಮ ಇಷ್ಟವಾಗುವುದಿಲ್ಲ. ಇವರಿಗೆ ನೀರು ಮತ್ತು ಚಂದ್ರನ ಆಜೃತಿಯು ಹೆಚ್ಚು ಅದೃಷ್ಟವನ್ನು ತಂದು ಕೊಡುತ್ತದೆ. ಸ್ಟಾರ್ ಆಕಾರದ ಬೆಳ್ಳಿಯ ಆಭರಣ ಧರಿಸಿದರೆ ಯಶಸ್ಸು ನಿಮ್ಮ ಜೊತೆಗೆ ಇರುವುದು.

  ಸಿಂಹ

  ಸಿಂಹ

  ನೀವು ಸೂರ್ಯನ ಪ್ರಕಾಶ ಹಾಗೂ ಆಶೀರ್ವಾದದಲ್ಲಿ ಜನಿಸಿದವರಾಗಿದ್ದೀರಿ. ನಿಮ್ಮ ಭರವಸೆ ಹಾಗೂ ವಿಶ್ವಾಸ ಉತ್ತಮ ಮಟ್ಟದಲ್ಲಿತ್ತು. ನಿಮ್ಮ ಲೈಗಿಂಕ ಆಕರ್ಷಣೆಯೂ ಹೆಚ್ಚು ಆಕರ್ಷಣೀಯವಾಗಿತ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ಪ್ರಪಂಚದ ಎಲ್ಲಾ ಸುಖವು ನಿಮ್ಮ ಜೇಬಿನಲ್ಲಿ ಇರುವಂತೆ ಇತ್ತು. ಆದರೆ ಇದೀಗ ಅದೃಷ್ಟವು ಸ್ವಲ್ಪ ಕೈಕೊಡಲು ಪ್ರಾರಂಭಿಸಿದೆ. ಎಲ್ಲಾ ವಿಚಾರದಲ್ಲೂ ಕೊಂಚ ನೋವನ್ನು ಹಾಗೂ ಕಷ್ಟವನ್ನು ಅನುಭವಿಸುವ ಸಾಧ್ಯತೆಗಳಿವೆ. ಇದಕ್ಕೆ ಪರಿಹಾರವೆನೆಂದರೆ ಈ ರಾಶಿಯಲ್ಲಿ ಸೂರ್ಯ ಅಧಿಪತ್ಯ ವಹಿಸಿರುತ್ತಾನೆ. ಅಂತೆಯೇ ಶಿವನೇ ಲೋಕಾಧಿಪತಿಯಾಗಿದ್ದು ಶಿವನನ್ನು ಆರಾಧಿಸುವುದು ಸುಲಭ ಮತ್ತು ಶಿವ ಸುಲಭವಾಗಿ ಒಲಿಯುವವನಾಗಿದ್ದಾನೆ. ಆದ್ದರಿಂದ ಈ ರಾಶಿಯವರು ಪವಿತ್ರ ಮಂತ್ರವನ್ನು ಸದಾ ಪಠಿಸುತ್ತಾ ಶಿವನನ್ನು ಆರಾಧಿಸುವ ಮೂಲಕ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.

  ವೃಷಭ

  ವೃಷಭ

  ನೀವು ನಿಮ್ಮ ಕುಟುಂಬದಲ್ಲಿ ಹಾಗೂ ವೃತ್ತಿ ಕ್ಷೇತ್ರದಲ್ಲಿ ಅತ್ಯಂತ ಅದೃಷ್ಟವನ್ನು ಅನುಭವಿಸುತ್ತಿದ್ದಿರಿ. ಆದರೆ ಈಗ ನಿಮ್ಮ ಅದೃಷ್ಟವನ್ನು ಒಂದು ಪ್ರೀತಿಯಲ್ಲಿ ಕಳೆದುಕೊಳ್ಳುವಿರಿ. ಕೆಲವೊಮ್ಮೆ ನಿಮ್ಮ ನತದೃಷ್ಟವು ನಿಮ್ಮನ್ನು ಈ ಸ್ಥಿತಿಗೆ ತರುವುದು. ಮುಂದಿನ ಅವಕಾಶದಲ್ಲಿ ಉತ್ತಮ ವ್ಯಕ್ತಿಯನ್ನು ಆಯ್ಕೆಮಾಡಿಕೊಳ್ಳಿ. ಆಗ ನಿಮ್ಮ ಅದೃಷ್ಟದ ಸಂಖ್ಯೆ ಮೊದಲನೇ ಸ್ಥಾನಕ್ಕೆ ಬರಬಹುದು. ಚಿಂತಿಸದಿರಿ, ಈ ರಾಶಿಯಲ್ಲಿಯೂ ಶುಕ್ರನೇ ಆಳುತ್ತಾನೆ. ಆದ್ದರಿಂದ ಈ ರಾಶಿಯವರೂ ಶುಕ್ರನ ಅಧಿಪತಿಯಾಗಿರುವ ಲಕ್ಷ್ಮಿಯನ್ನೇ ಪೂಜಿಸುವ ಮೂಲಕ ಧನಾತ್ಮಕ ಶಕ್ತಿ, ಸಮೃದ್ಧಿ ಮತ್ತು ಅದೃಷ್ಟವನ್ನು ಪಡೆಯಬಹುದು.

  ಮೇಷ

  ಮೇಷ

  ನಿಮ್ಮ ಅದೃಷ್ಟವು ಇದೀಗ ನಿಮ್ಮೆಡೆಗೆ ಇಲ್ಲ. ಯಾವುದೂ ಸಹ ನಿಮ್ಮ ಹಿಡಿತದಲ್ಲಿ ಇರುವುದಿಲ್ಲ. ನೀವು ಇದೀಗ ಉತ್ತಮ ಸಮಯಕ್ಕಾಗಿ ಕಾಯಬೇಕು ಅಷ್ಟೆ. ಶಾಂತ ಪ್ರವೃತ್ತಿಯಿಂದ ನಿಮ್ಮ ವರ್ತನೆಯನ್ನು ತೋರಿ.ಅದೃಷ್ಟವು ನಿಧಾನವಾಗಿ ಪುನಃ ಒಲಿಯುವುದು. ಈ ರಾಶಿಯಲ್ಲಿ ಪ್ರಾಬಲ್ಯ ಹೊಂದಿರುವ ಗ್ರಹವೆಂದರೆ ಬುಧ. ಬುಧನನ್ನು ಆಳುವ ದೇವರೆಂದರೆ 'ಶ್ರೀಮನ್ನಾರಾಯಣ' ಆದ್ದರಿಂದ ಮಿಥುನ ರಾಶಿಯವರು ಸ್ವಾಮಿ ಶ್ರೀಮನ್ನಾರಾಯಣನನ್ನು ಪೂಜಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು.

  ಮೀನ

  ಮೀನ

  ನಿಮಗೆ ಎರಡು ದಿಕ್ಕಿನಿಂದಲೂ ಗಾಳಿ ಬೀಸುತ್ತಿದೆ ಎಂದು ಹೇಳಬಹುದು. ನೀವು ಪ್ರೀತಿ ಮತ್ತು ಹಣದ ವಿಚಾರದಲ್ಲಿ ಅತ್ಯಂತ ಅದೃಷ್ಟವಂತರಾಗಿದ್ದೀರಿ. ಇದೀಗ ಅದೃಷ್ಟವು ಸ್ವಲ್ಪ ಬದಲಾವಣೆ ತರುವುದು. ನತದೃಷ್ಟ ಎನ್ನುವುದು ನಿಮ್ಮೆಡೆಗೆ ತಿರುಗಿದೆ. ಕೆಲವು ವ್ಯಕ್ತಿಗಳಿಂದ ನಿಮಗೆ ಅತೃಪ್ತಿ ಉಂಟಾಗುವುದು. ಸಂತೋಷದ ದಿನಗಳಿಂದ ಕಷ್ಟದ ದಿನಗಳು ಗೋಚರವಾಗುತ್ತಿದೆಯಾದರೂ, ಅದೃಷ್ಟವು ಪುನಃ ಬರುವುದು ಎನ್ನುವದರ ಮೇಲೆ ಭರವಸೆ ಇರಿಸಿ. ಈ ರಾಶಿಯಲ್ಲಿಯೂ ಗುರು ಪ್ರಾಬಲ್ಯ ಹೊಂದಿರುತ್ತಾನೆ. ಗುರುಗ್ರಹದ ಅಧಿಪತಿ ದಕ್ಷಿಣಾಮೂರ್ತಿಯನ್ನು ಆರಾಧಿಸುವ ಮೂಲಕ ಉತ್ತಮ ಫಲವನ್ನು ಪಡೆಯಬಹುದು.

  ಕರ್ಕ

  ಕರ್ಕ

  ನಿಮ್ಮ ಅದೃಷ್ಟವು ಈಗ ನತದೃಷ್ಟದ ಕಡೆಗೆ ತಿರುಗಿದೆ. ಕೆಟ್ಟ ಅದೃಷ್ಟ ಮತ್ತು ನಿರ್ಧಾರಗಳ ನಡುವಿನ ವ್ಯತ್ಯಾಸವನ್ನು ಅರಿಯಿರಿ. ಆಗ ನಿಮಗೆ ಒಳ್ಳೆಯದಾಗುವುದು. ಪ್ರೀತಿ ಪಾತ್ರರ ಮರಣ, ವ್ಯವಹಾರದಲ್ಲಿ ನಷ್ಟಗಳು ನಿಮಗೆ ಚಿಂತೆಯನ್ನು ನೀಡುವವು. ಆದಷ್ಟು ಧೈರ್ಯ ಮತ್ತು ಭರವಸೆಯಿಂದ ಮುಂದೆ ಸಾಗಿ. ಅಲ್ಲದೆ ಈ ರಾಶಿಯಲ್ಲಿ ಚಂದ್ರ ಅಧಿಪತ್ಯ ವಹಿಸಿರುತ್ತಾನೆ. ಚಂದ್ರನ ಅಧಿಪತಿಯಾದ ದೇವತೆ ಎಂದರೆ ಗೌರಿ. ಗೌರಿ ಎಂದರೆ ಶಾಂತಿ, ಸಹಾನುಭೂತಿ, ಕರುಣೆಯ ಸಾಕಾರರೂಪವಾಗಿದ್ದು ಗೌರಿಯನ್ನು ಪೂಜಿಸುವ ಮೂಲಕ ಈ ಗುಣಗಳನ್ನೂ ಪಡೆಯಬಹುದು.

  ಧನು

  ಧನು

  ಕೆಲವು ವ್ಯಕ್ತಿಗಳಿಂದ ನಿಮಗೆ ಅನ್ಯಾಯವಾಗುವುದು. ಅದು ನಿಮ್ಮ ಅದೃಷ್ಟವನ್ನು ನತದೃಷ್ಟದ ಹಾದಿಗೆ ನೂಕುವುದು. ನಿಮಗೆ ಉಂಟಾದ ಪ್ರತಿಕೂಲಕ್ಕೆ ಸೂಕ್ತ ನಿರ್ಧಾರ ಹಾಗೂ ಕಾರ್ಯವನ್ನು ಕೈಗೊಳ್ಳುವುದರ ಮೂಲಕ ಪುನಃ ಅದೃಷ್ಟವನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ಸೂಕ್ತ ಸಮಯದವರೆಗೆ ನೀವು ಕಾಯಬೇಕು. ಈ ರಾಶಿಯಲ್ಲಿ ಗುರು ಪ್ರಾಬಲ್ಯ ಹೊಂದಿರುತ್ತಾನೆ. ಗುರುಗ್ರಹದ ಅಧಿಪತಿ ಎಂದರೆ "ಶ್ರೀ ದಕ್ಷಿಣಾಮೂರ್ತಿ" ದಕ್ಷಿಣಾಮೂರ್ತಿಯೂ ಶಿವನ ಅವತಾರಗಳಲ್ಲೊಂದಾಗಿದ್ದು ಈತನು ಬುದ್ಧಿಮತ್ತೆ ಮತ್ತು ಜ್ಞಾನದ ಆಗರವಾಗಿದ್ದಾನೆ. ಆದ್ದರಿಂದ ಧನುರಾಶಿಯವರು ದಕ್ಷಿಣಾಮೂರ್ತಿಯನ್ನು ಆರಾಧಿಸುವ ಮೂಲಕ ಅಪಾರ ಜ್ಞಾನ ಮತ್ತು ತಿಳಿವಳಿಕೆ ಪಡೆದು ಜೀವನದಲ್ಲಿ ಬಹಳಷ್ಟನ್ನು ಸಾಧಿಸಬಹುದು.

  ತುಲಾ

  ತುಲಾ

  ನಿಮ್ಮ ಆಲೋಚನೆಗಳ ಮೇಲೆ ಹಾಗೂ ನಿರ್ಧಾರಗಳ ಮೇಲೆ ಸದಾ ನೀರೆರೆಚುವ ಪ್ರಕ್ರಿಯೆ ನಡೆಯುತ್ತದೆ. ಅದು ನೀವು ಪುನಃ ಹಿಂತಿರುಗಲಿ ಎಂದಾಗಿರುತ್ತದೆ. ಇದೀಗ ನಿಮ್ಮ ಪಾಲಿಗೆ ಅದೃಷ್ಟವು ಅಷ್ಟು ಸೂಕ್ತ ಫಲವನ್ನು ಕೊಡುವುದಿಲ್ಲ. ಆದರೆ ನೀವು ಮಳೆಯ ನಂತರ ಕಾಮನ ಬಿಲ್ಲು ಬರುವಂತೆ ಆ ಅದೃಷ್ಟಕ್ಕೆ ಕಾಯಬೇಕು. ಈ ರಾಶಿಯನ್ನು ಶುಕ್ರ ಆಳುತ್ತಾನೆ. ಮತ್ತು ಶುಕ್ರನ ಅಧಿಪತ್ಯ ವಹಿಸಿರುವ ದೇವತೆ ಎಂದರೆ ಲಕ್ಷ್ಮಿ. ಆದ್ದರಿಂದ ಈ ರಾಶಿಯವರು ಲಕ್ಷ್ಮಿಯನ್ನು ಆರಾಧಿಸಿದರೆ ಜೀವನದಲ್ಲಿ ಸಮೃದ್ಧಿ ಮತ್ತು ಧನವನ್ನು ಪಡೆಯಬಹುದು. ಇನ್ನು ಇವರಿಗೆ ಪಕ್ಷಿ ಮತ್ತು ಗಾಳಿಯ ಚಿಹ್ನೆಯು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ. ವ್ಯವಹಾರವು ಉತ್ತಮ ಪಡಿಸಿಕೊಳ್ಳಲು ಈ ಚಿಹ್ನೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿರಬೇಕು. ಗ್ರೀಕ್ ಶಾಸ್ತ್ರದ ಪ್ರಕಾರ ಇವರಿಗೆ ತ್ರಿಕೋನವನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಈ ಚಿಹ್ನೆಯನ್ನು ಮಾನವ ಮತ್ತು ದೇವರ ನಡುವಿನ ಸಂಬಂಧವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗುತ್ತಿದೆ. ಇದು ಜಗತ್ತಿನ ಸಮತೋಲನವನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರಿಗೆ ತ್ರಿಕೋನವೇ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುವುದು.

  ಮಕರ

  ಮಕರ

  ನಿಮ್ಮ ಅದೃಷ್ಟವು ಹಾವು ಏಣಿಯ ಆಟದಂತೆ ಏರಿಳಿತವನ್ನು ಕಾಣುತ್ತಿದೆ. ನೀವು ತಾಳ್ಮೆ ಮತ್ತು ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ದಳವನ್ನು ಬಿಡುವಾಗ ನಿಮ್ಮ ಪ್ರತಿಭೆಯನ್ನು ಉಪಯೋಗಿಸಬೇಕು. ಹಾಗೆಯೇ ಜೀವನದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸೂಕ್ತ ರೀತಿಯಲ್ಲಿ ಕೈಗೊಳ್ಳಬೇಕು. ಆಗ ಜೀವನ ಉತ್ತಮವಾಗಿರುತ್ತದೆ ಎನ್ನುವುದನ್ನು ಅರಿಯಬೇಕು. ಈ ರಾಶಿಯಲ್ಲಿ ಮಂಗಳ ಪ್ರಾಬಲ್ಯ ಹೊಂದಿರುತ್ತಾನೆ. ಮಂಗಳಗ್ರಹದ ಅಧಿಪತಿಯಾದ ಶಿವನನ್ನು ಆರಾಧಿಸುವ ಮೂಲಕ ಮಕರ ರಾಶಿಯವರು ಜೀವನದಲ್ಲಿ ಸಮೃದ್ಧಿ, ನೆಮ್ಮದಿಗಳನ್ನು ಪಡೆಯಬಹುದು. ಸಾಮಾನ್ಯವಾಗಿ ಈ ರಾಶಿಯ ಜನರು ವ್ಯವಹಾರ ಕುಶಲರಾಗಿದ್ದು ಕೆಲಸವನ್ನು ಹೇಗೆ ಮಾಡಿಸಿಕೊಳ್ಳಬೇಕು ಎಂದು ಗೊತ್ತಿರುವ ಜನರಾಗಿದ್ದಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ಸಿನೇಮಾ ವೀಕ್ಷಣೆ. ಸಿನೇಮಾ ಅಥವಾ ನೆಚ್ಚಿನ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ಮುಳುಗುವ ನೀವು ಆ ಲೋಕದಲ್ಲಿಯೇ ಮುಳುಗಿಬಿಡುತ್ತೀರಿ. ಜೀವನದಲ್ಲಿ ಯಾವಾಗ ತೊಂದರೆ ಕಾಡಿತೋ ಆಗೆಲ್ಲಾ ಈ ಸಿನೆಮಾದಲ್ಲಿ ಎದುರಾದ ಸನ್ನಿವೇಶದಲ್ಲಿ ನಾಯಕ ಅನುಸರಿಸಿದ ನೀತಿಯನ್ನೇ ಅನುಸರಿಸಿ ಈ ತೊಂದರೆಯಿಂದ ಬಿಡುಗಡೆ ಪಡೆಯಲು ಯತ್ನಿಸುತ್ತೀರಿ.

  ಕುಂಬ

  ಕುಂಬ

  ನೀವು ಎಲ್ಲಾ ಕೆಟ್ಟ ಸಂಗತಿಗಳನ್ನು ಅನುಭವಿಸಲೇ ಬೇಕಾಗಿದೆ. ನಿಮಗೆ ನೀವು ಸರಿ ಎನ್ನುವುದನ್ನು ತಿಳಿದುಕೊಂಡಿರಬೇಕು. ಸಮಸ್ಯೆಗಳು ಅನೇಕ ಬಗೆಯಲ್ಲಿ ಪರಿಣಾಮವನ್ನು ಬೀರಬಹುದು. ಅದರ ಸಹಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿರಲಿ. ಒಳ್ಳೆಯ ದಿನ ನಿಮಗೆ ಮುಂದೆ ಬರುವುದು. ಕುಂಭರಾಶಿಯಲ್ಲಿ ಮಂಗಳ ಅಧಿಪತ್ಯ ವಹಿಸಿರುತ್ತಾನೆ. ಶಿವನೇ ಮಂಗಳನ ಅಧಿಪತಿಯೂ ಆಗಿರುವ ಕಾರಣ ಈ ರಾಶಿಯವರು ಶಿವನನ್ನು ತುಂಬುಹೃದಯದಿಂದ ಪ್ರಾರ್ಥಿಸಿ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.

  ಮಿಥುನ

  ಮಿಥುನ

  ನಿಮಗೀಗ ವಿರಾಮ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮೋಡದಲ್ಲಿ ಮುಚ್ಚಿರುವ ನಕ್ಷತ್ರದಂತೆ ನೀವಾಗಿದ್ದೀರಿ. ಸಮಯ ಹಾಗೂ ಅದೃಷ್ಟದ ಬದಲಾವಣೆ ಹೊಂದುತ್ತಿದ್ದಂತೆ ಯಶಸ್ಸನ್ನು ಗಳಿಸುವಿರಿ. ಅಲ್ಲಿಯ ವರೆಗೂ ನೀವು ಕೊಂಚ ಸಹನೆ ಹಾಗೂ ಭರವಸೆಯಿಂದ ವರ್ತಿಸಬೇಕು. ಈ ರಾಶಿಯಲ್ಲಿ ಪ್ರಾಬಲ್ಯ ಹೊಂದಿರುವ ಗ್ರಹವೆಂದರೆ ಬುಧ. ಬುಧನನ್ನು ಆಳುವ ದೇವರೆಂದರೆ 'ಶ್ರೀಮನ್ನಾರಾಯಣ' ಆದ್ದರಿಂದ ಮಿಥುನ ರಾಶಿಯವರು ಸ್ವಾಮಿ ಶ್ರೀಮನ್ನಾರಾಯಣನನ್ನು ಪೂಜಿಸುವ ಮೂಲಕ ಜೀವನದಲ್ಲಿ ಬಹಳಷ್ಟನ್ನು ಪಡೆಯಬಹುದು.

  English summary

  Zodiac Signs Ranked From Luckiest To Unluckiest

  Know what astrology and the planets have in store for you today. Choose your zodiac sign and read the details...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more