ಈ ರಾಶಿಯಲ್ಲಿ ಜನಿಸಿದವರು 30 ವರ್ಷದೊಳಗೆ ಶ್ರೀಮಂತರಾಗುವುದು ಪಕ್ಕ...

By: Divya
Subscribe to Boldsky

ಸಾಮಾನ್ಯವಾಗಿ ಪ್ರತಿಯೊಬ್ಬರು ಶ್ರೀಮಂತರಾಗಬೇಕು, ಬೇಕೆನಿಸಿದ್ದನ್ನು ಪಡೆಯಲು ಕೈ ತುಂಬಾ ಹಣ ಇರಬೇಕು ಎಂದು ಬಯಸುತ್ತಾರೆ. ಆದರೆ ಕೆಲವು ಗ್ರಹಗತಿಗಳ ಕಾರಣದಿಂದ ನಷ್ಟ-ಕಷ್ಟಗಳನ್ನು ಅನುಭವಿಸುತ್ತಾರೆ. ಅದೇ ಕೆಲವರು ಉತ್ತಮ ಜೀವನವನ್ನು ಅನುಭವಿಸುತ್ತಾರೆ. ಅದಕ್ಕೆಲ್ಲಾ ನಮ್ಮ ಜನ್ಮ ಘಳಿಗೆ ಹಾಗೂ ಕುಂಡಲಿಯಲ್ಲಿ ಅಡಗಿರುವ ಭವಿಷ್ಯವೇ ಕಾರಣ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಕೆಲವರಿಗೆ ಅದೃಷ್ಟ ಎನ್ನುವುದು ಆಕಾಶ ದೀಪದಂತೆ ಆಗುವುದು. ಹುಟ್ಟಿದಾಗಿಂದಲೂ ಕಷ್ಟವನ್ನು ಅನುಭವಿಸುತ್ತಾ, ಕೊನೆಯವರೆಗೂ ಅದೇ ಜೀವನವನ್ನು ಅನುಭವಿಸುತ್ತಾರೆ. ಇನ್ನು ಕೆಲವರು ಬಹು ಬೇಗ ತಮ್ಮ ಜೀವನದಲ್ಲಿ ಶ್ರೀಮಂತಿಕೆಯನ್ನು, ಒಂದರ ಹಿಂದೊಂದು ಖುಷಿಯ ಕ್ಷಣಗಳನ್ನು ಪಡೆದುಕೊಳ್ಳುತ್ತಾರೆ. ಇವೆಲ್ಲದಕ್ಕೂ ಅವರ ರಾಶಿ ಫಲವೇ ಕಾರಣವಾಗಿರುತ್ತದೆ ಎನ್ನುವುದನ್ನು ನಾವು ಮರೆಯುವಂತಿಲ್ಲ.

ನಿಜ, ಕೆಲವು ರಾಶಿಗಳು ಬಹಳ ಅದೃಷ್ಟವಂತ ರಾಶಿಗಳು. ಅವುಗಳಲ್ಲಿ ಜನಿಸಿದವರು ಸಾಮಾನ್ಯವಾಗಿ ಹೆಚ್ಚು ಖುಷಿ ಹಾಗೂ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ. ಕೆಲವು ಮೂಲಗಳು ಹೇಳುವ ಪ್ರಕಾರ ಹನ್ನೆರಡು ರಾಶಿಗಳಲ್ಲಿ ಐದು ರಾಶಿ ಬಳ ಅದೃಷ್ಟವನ್ನು ತಂದು ಕೊಡುತ್ತದೆ. ಆ ರಾಶಿಯಲ್ಲಿ ಜನಿಸಿದವರು ತಮ್ಮ 30 ವರ್ಷದೊಳಗೆ ಅತ್ಯಂತ ಹಿರಿಮೆಯ ಸಾಧನೆ ಹಾಗೂ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಗಳು ಯಾವವು? ಅದರಲ್ಲಿ ಹುಟ್ಟಿದವರ ಶ್ರೀಮಂತಿಕೆಯ ಫಲವೇನು? ಎನ್ನುವುದನ್ನು ನಾವಿಲ್ಲಿ ವಿವರಿಸಿದ್ದೇವೆ...

ಕನ್ಯಾ ರಾಶಿ

ಕನ್ಯಾ ರಾಶಿ

ಈ ರಾಶಿಯಲ್ಲಿ ಜನಿಸಿದವರು ಬಹಳ ನಿರ್ಧಾರಯುತ ಪ್ರವೃತ್ತಿಯನ್ನು ಹೊಂದಿರುತ್ತಾರೆ. ತಾವು ಮಾಡುವ ಕೆಲಸದ ಸಂಪೂರ್ಣ ವಿವರ ಪಡೆಯುವುದು, ಅದರ ಏಳಿಗೆಗಾಗಿ ಎಲ್ಲಾ ಶ್ರಮವನ್ನು ವ್ಯಯಿಸುತ್ತಾರೆ. ಇವರು ತಮ್ಮ ಜೀವನದಲ್ಲಿ ಬಹು ಬೇಗ ಶ್ರೀಮಂತಿಕೆ ಹಾಗೂ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಇವರು ತಮ್ಮ ಗುರಿಯನ್ನು ಸಾಧಿಸಲು ಬೇಕಾದ ಎಲ್ಲಾ ಕೆಲಸಗಳನ್ನು ನೆರವೇರಿಸುತ್ತಾರೆ. ಮತ್ತು ಎಲ್ಲಾ ಪೂರ್ವತಯಾರಿಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡಿರುತ್ತಾರೆ.

ಕನ್ಯಾ ರಾಶಿ

ಕನ್ಯಾ ರಾಶಿ

ಕಷ್ಟದ ಕೆಲಸವನ್ನು ಬಹಳ ಸಹನೆಯಿಂದ ಯಶಸ್ವಿಯಾಗಿ ನಿರ್ವಹಿಸುವುದು ಹೇಗೆ? ಎನ್ನುವುದನ್ನು ಅರಿತಿರುತ್ತಾರೆ. ಅದೃಷ್ಟದ ಚಿಹ್ನೆ ಇವರಿಗೆ ಭೂಮಿಯಾದ್ದರಿಂದ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಅಥವಾ ಹಣ ಹೂಡಿಕೆಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹಣವನ್ನು ಗೌರವಿಸುವ ಇವರು ಅದರ ಸೂಕ್ತ ಬಗೆಯ ವ್ಯಯ ಹಾಗೂ ಉಳಿತಾಯದ ಬಗ್ಗೆ ಅರಿತಿರುತ್ತಾರೆ.

ವೃಷಭ

ವೃಷಭ

ಇವರು ಅತ್ಯಂತ ಶ್ರಮಜೀವಿಗಳು. ಶ್ರಮ ಪಟ್ಟು ದುಡಿದು ಹೇಗೆ ಹಣ ಗಳಿಸಬೇಕು? ಎನ್ನುವುದನ್ನು ಅರಿತಿರುತ್ತಾರೆ. ಅಲ್ಲದೆ ಜೀವನದಲ್ಲಿ ವಿನೋದದಿಂದ ಹೇಗೆ ಬದುಕಬೇಕು ಎನ್ನುವುದನ್ನು ಅರಿತಿರುತ್ತಾರೆ. ಇವರ ಸ್ವಭಾವ ಸ್ವಲ್ಪ ಮುಂಡಾಗಿದ್ದರೂ ಸಹ ಯಾವ ಕೆಲಸವನ್ನು ಮಾಡಬೇಕು ಎನ್ನುವ ವಿಚಾರದ ಕುರಿತು ಸೂಕ್ತ ನಿರ್ಭಯವನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಮನಸ್ಸಿಗೆ ತೋಚಿದ್ದನ್ನು ಸಾಧಿಸಿ ತೋರಿಸುತ್ತಾರೆ. ಇವರ ಗುಣವು ಅತ್ಯಂತ ವಿನಮ್ರತೆಯಿಂದ ಕೂಡಿರುತ್ತದೆ. ಈ ವ್ಯಕ್ತಿಗಳು ನಿಷ್ಠಾವಂತರು, ಬುದ್ಧಿವಂತರು ಮತ್ತು ಅವಲಂಬಿತರು ಆಗಿರುತ್ತಾರೆ. ಹಾಗಂತ ಇವರು ತಮ್ಮ ಸ್ವಭಾವದಲ್ಲಿ ಅವಲಂಬನೆಯನ್ನು ತೋರುವುದಿಲ್ಲ.

ವೃಷಭ

ವೃಷಭ

ಪ್ರತಿಯೊಂದು ವಿಚಾರದ ಕುರಿತು ತಾರ್ಕಿಕ ಮತ್ತು ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ಇವರು ತಮ್ಮ ಜೀವನದಲ್ಲಿ ಉತ್ತಮ ವಸ್ತುಗಳನ್ನು ಮಾತ್ರ ಬಯಸುತ್ತಾರೆ. ತಮ್ಮ ಹಣವನ್ನು ಬಹಳ ಎಚ್ಚರಿಕೆಯಿಂದ ವ್ಯಯ ಮಾಡುತ್ತಾರೆ. ಇತರ ರಾಶಿಚಕ್ರಗಳಿಗೆ ಹೋಲಿಸಿದರೆ ಹೆಚ್ಚು ಹಣವನ್ನು ಉಳಿಸಬಲ್ಲರು. ಜೀವನಲ್ಲಿ ಹೆಚ್ಚು ಸ್ಥಿರತೆ ಮತ್ತು ಸುರಕ್ಷತೆಗೆ ಹೆಚ್ಚು ಬೆಲೆ ಕೊಡುತ್ತಾರೆ. ತಮ್ಮ 30 ವರ್ಷದೊಳಗೆ ಹೆಚ್ಚು ಹಣವನ್ನು ಸಂಪಾದಿಸಿ ಐಶಾರಾಮಿ ಜೀವನವನ್ನು ಹೊಂದುವ ಇವರು ತಮ್ಮ ಕನಸುಗಳನ್ನು ಸಾಧಿಸಲು ಬಹಳ ತಾಳ್ಮೆಯಿಂದ ಮತ್ತು ನಿರಂತರವಾಗಿ ಕೆಲಸ ಕೈಗೊಳ್ಳುತ್ತಾರೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರು ಅರ್ಥಗರ್ಭಿತ ಮತ್ತು ಅತೀಂದ್ರಿಯ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರಲ್ಲಿರುವ ಉತ್ತಮ ಆತ್ಮವಿಶ್ವಾಸದಿಂದಲೇ ಎಲ್ಲವನ್ನೂ ಸಾಧಿಸಿ ತೋರುತ್ತಾರೆ. ಶೈಕ್ಷಣಿಕವಾಗಿ ಉತ್ತಮ ಯಶಸ್ಸು ಹೊಂದುವ ಇವರು ಚಿಕ್ಕ ವಯಸ್ಸಿನಲ್ಲೇ ಅಧಿಕ ಹಣ ಹಾಗೂ ಉತ್ತಮ ಕೆಲಸವನ್ನು ಪಡೆದುಕೊಳ್ಳುತ್ತಾರೆ. ಸುಲಭವಾಗಿ ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳಬಹುದು ಎನ್ನುವುದನ್ನು ಅರಿತಿರುತ್ತಾರೆ.

ವೃಶ್ಚಿಕ

ವೃಶ್ಚಿಕ

ತಮ್ಮ ತಪ್ಪುಗಳಿಂದ ಉಂಟಾದ ಪರಿಣಾಮಗಳ ಬಗ್ಗೆ ಸೂಕ್ತ ರೀತಿಯಲ್ಲಿ ಪಾಠ ಕಲಿತು. ಅದರ ವಿಶ್ಲೇಷಣೆ ಮಾಡಿಕೊಳ್ಳುತ್ತಾರೆ. ಸ್ಪರ್ಧಾತ್ಮ ಸ್ವಭಾವದವರಾದ ಇವರು ತಮ್ಮ 30 ವರ್ಷದೊಳಗೆ ಅತ್ಯಂತ ಗೌರವ ಹಾಗೂ ಸಂಪತ್ತನ್ನು ಪಡೆದುಕೊಳ್ಳುತ್ತಾರೆ. ಇವರು ಸಂತೋಷದ ಪ್ರಜ್ಞೆಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಚೆನ್ನಾಗಿ ಅರಿತವರಾಗಿರುತ್ತಾರೆ.

ಸಿಂಹ

ಸಿಂಹ

ಈ ರಾಶಿಯಲ್ಲಿ ಜನಿಸಿದವರು ಅತ್ಯಂತ ಶಕ್ತಿಯುತರು, ಉತ್ಸಾಹಿಗಳು, ಆಶಾವಾದಿಗಳು ಹಾಗೂ ಮನವನ್ನು ರಂಜಿಸುವ ಗುಣವನ್ನು ಹೊಂದಿರುತ್ತಾರೆ. ಇವರು ತಮ್ಮೊಂದಿಗೆ ಇತರರನ್ನು ಮುಂನ್ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸೃಜನಶೀಲ ಪ್ರವೃತ್ತಿಯವರಾದ ಇವರು ತಮ್ಮ 30 ವರ್ಷದೊಳಗೆ ಹೆಚ್ಚಿನ ಸಾಧನೆ ಹಾಗೂ ಐಶ್ವರ್ಯವನ್ನು ಪಡೆದುಕೊಳ್ಳುತ್ತಾರೆ.

ಸಿಂಹ

ಸಿಂಹ

ಪ್ರಮುಖ ನಿರ್ಧಾರಗಳನ್ನು ಬಹಳ ನಿಷ್ಠೆಯಿಂದ ತೆಗೆದುಕೊಳ್ಳುವ ಇವರ ಸ್ವಭಾವದಲ್ಲಿ ಸ್ವಲ್ಪ ಅಹಂಕಾರ ಮತ್ತು ಹೆಮ್ಮೆ ಇರುವುದನ್ನು ಗಮನಿಸಬಹುದು. ಇವರು ಶ್ರೀಮಂತಿಕೆಯನ್ನು ಪಡೆದುಕೊಳ್ಳು ಅನುವಾಗುವಂತೆ ಅನೇಕ ಅವಕಾಶಗಳು ಬಹು ಸುಲಭವಾಗಿ ಇವರಿಗೆ ಲಭಿಸುವುದು.

ಮಕರ

ಮಕರ

ಈ ರಾಶಿಯಲ್ಲಿ ಜನಿಸಿದವರು ಅತ್ಯಂತ ಶ್ರೀಮಂತಿಕೆಯನ್ನು ಪಡೆದುಕೊಳ್ಳುವರು. ಇವರು ಹೆಚ್ಚು ವಾಸ್ತವಿಕ ವಿಚಾರಗಳಿಗೆ ಮಹತ್ವ ನೀಡುವರು. ಯಾವುದೇ ದೊಡ್ಡ ದೊಡ್ಡ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ಸೂಕ್ತ ವಿವರಣೆ ಹಾಗೂ ಪರಿಶೀಲನೆಯನ್ನು ನಡೆಸುವರು. ಇವರು ತೆಗೆದುಕೊಳ್ಳುವ ನಿರ್ಣಯವನ್ನು ಮನಸ್ಸಿನಿಂದ ತೆಗೆದುಕೊಳ್ಳುವುದರಿಂದ ಜನರಿಗೆ ಇವರು ಅತ್ಯಂತ ಭಾವನಾತ್ಮ ಜೀವಿಗಳೆಂದು ಕಾಣಿಸುವರು. ಇವರು ಕೆಲವು ವಿಷಯಗಳಲ್ಲಿ ಹೆಚ್ಚು ಆರಾಮದಾಯಕ ಅನುಭವವನ್ನು ಪಡೆದುಕೊಳ್ಳುತ್ತಾರೆ. ಹಣ ಹೂಡಿಕೆ ಮಾಡುವಾಗ ಅತ್ಯಂತ ಜಾಗರೂಕತೆಯಿಂದ ಹಾಗೂ ಬುದ್ಧಿವಂತಿಕೆಯಿಂದ ವರ್ತಿಸುತ್ತಾರೆ. ಇವರು ಸದಾ ಆರ್ಥಿಕ ಭದ್ರತೆ ಹಾಗೂ ಸ್ಥಿರತೆಯನ್ನು ಬಯಸುತ್ತಾರೆ. ಶಿಸ್ತು ಬದ್ಧರಾಗಿ ಇರುವ ಇವರು ಹಣವನ್ನು ಗೌರವಿಸುತ್ತಾರೆ. ಜೊತೆಗೆ ಅದರ ಆಯ ವ್ಯಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಾರೆ.

English summary

Zodiac Signs Most Likely To Get Rich Before Turning 30

Anyone can become rich, but that doesn’t mean that everyone will become rich. Some of us are born with a better chance than others at becoming wealthy and astrologers believe that our good luck and fortune depends on our zodiac sign.Even though every sign of the zodiac has the potential to acquire wealth early in life if they have the ambition, courage, and determination to succeed, some signs stand a much better chance of achieving great financial success.Take a look at the top five zodiac signs that are most likely to get rich before turning 30!
Please Wait while comments are loading...
Subscribe Newsletter