ಸೋಮವಾರದ ದಿನ ಭವಿಷ್ಯ

Posted By: Divya Pandith
Subscribe to Boldsky

ಜೀವನ ಸಾಗಿಸಲು ಬಹಳಷ್ಟು ದುಡ್ಡು ಬೇಕೆಂದಿಲ್ಲ. ನೀವು ಇನ್ನೊಬ್ಬರ ಜೀವನವನ್ನು ನೋಡಿ ಬದುಕು ಸಾಗಿಸಲು ಎಷ್ಟು ಹಣವಿದ್ದರೂ ಸಾಕಾಗುವುದಿಲ್ಲ. ಜೀವನ ಎನ್ನುವುದು ಬಹಳ ಸರಳ. ಅದರ ನಿರ್ವಹಣೆಯನ್ನು ಆದರ್ಶ ರೀತಿಯಲ್ಲಿ ನಿರ್ವಹಿಸಬೇಕು. ಆಗಲೇ ಬದುಕು ಸುಖ ಹಾಗೂ ಶಾಂತಿಯಿಂದ ಕೂಡಿರುತ್ತದೆ.

ಸೋಮವಾರವಾದ ಇಂದು ನಿಮ್ಮ ಬದುಕಿನಲ್ಲಿ ಶಿವನು ಯಾವೆಲ್ಲಾ ಬದಲಾವಣೆಯನ್ನು ತರುವನು? ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಇದ್ದರೆ ಈ ಮುಂದೆ ನೀಡಿರುವ ರಾಶಿ ಭವಿಷ್ಯವನ್ನು ಅರಿಯಿರಿ.....

ಮೇಷ: 25 ಮಾರ್ಚ್ -20 ಏಪ್ರಿಲ್

ಮೇಷ: 25 ಮಾರ್ಚ್ -20 ಏಪ್ರಿಲ್

ಉದ್ಯೋಗದಲ್ಲಿ ಬಡ್ತಿ ಹಾಗೂ ಪ್ರಗತಿಯನ್ನು ಸಾಧಿಸುವಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಪಡೆದುಕೊಳ್ಳುವಿರಿ. ಮಕ್ಕಳಿಗೆ ಇಂದು ಶುಭದಿನ. ವಿದ್ಯಾಭ್ಯಾಸದಲ್ಲಿ ಪ್ರಗತಿ. ನಿಮ್ಮ ಕನಸು ನನಸಾಗುವುದು. ಹೊಸ ವಿಚಾರಗಳಿಂದ ವ್ಯಾಪಾರೋದ್ಯಮದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಇನ್ನಷ್ಟು ಪ್ರಗತಿ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ವೃಷಭ: ಏಪ್ರಿಲ್ 25-ಮೇ 20

ವೃಷಭ: ಏಪ್ರಿಲ್ 25-ಮೇ 20

ಅಷ್ಟಮ ಶನಿಯ ಪ್ರಭಾವ ಇರುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಏರು ಪೇರು ಉಂಟಾಗುವ ಸಾಧ್ಯತೆಗಳಿವೆ. ಹದಗೆಟ್ಟಂತಹ ಆರೋಗ್ಯ ನಿಮ್ಮ ವಿಚಾರವನ್ನು ಜನರಿಗೆ ತಲುಪಿಸಲು ಅಡ್ಡಿಯನ್ನುಂಟು ಮಾಡುವುದು. ಇಲ್ಲಸಲ್ಲದ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ. ವಿಪರೀತ ಆಯಾಸ ಉಂಟಾಗುವುದು. ಸ್ತ್ರೀಯರಿಂದ ಅಪವಾದ ಕೇಳುವ ಸಾಧ್ಯತೆಗಳಿವೆ. ಆದಷ್ಟು ಕಾಳಜಿಯಿಂದ ಇರಿ. ಎಲ್ಲಾರೀತಿಯ ಪ್ರಗತಿಯನ್ನು ಪಡೆಯಲು ಶಿವನ ಆರಾಧನೆ ಮಾಡಿ.

ಮಿಥುನ: ಮೇ 25 ಜೂನ್ 20

ಮಿಥುನ: ಮೇ 25 ಜೂನ್ 20

ಸಮಾಧಾನಕರವಾದ ವಾತಾವರಣ ನಿಮಗೆ ಸಿಗುವುದು. ಸ್ತ್ರೀಯರಿಂದ ಪುರುಷರಿಗೆ ಉಡುಗೊರೆ ಲಭಿಸುವ ಸಾಧ್ಯತೆಗಳಿವೆ. ಪ್ರೇಮಿಗಳಿಗೆ ಸಮಾಧಾನಕರವಾದಂತಹ ವಾತಾವರಣ ಲಭಿಸುವುದು. ಮನೆಯಲ್ಲಿ ನೆಮ್ಮದಿ ಹಾಗೂ ಇಷ್ಟ ಮಿತ್ರರಿಂದ ಸಹಕಾರ ದೊರೆಯುವುದು. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿಯನ್ನು ತಂದುಕೊಡುವುದು. ಇನ್ನಷ್ಟು ಸಮಾಧಾನ ಹಾಗೂ ಉತ್ತಮ ಪ್ರಗತಿಗೆ ಗಣೇಶ ಮತ್ತು ಶಿವನ ಆರಾಧನೆ ಮಾಡಿ.

ಕರ್ಕ: ಜೂನ್ 25-ಜುಲೈ 22

ಕರ್ಕ: ಜೂನ್ 25-ಜುಲೈ 22

ನೀವು ಮಾಡುತ್ತಿರುವ ವೃತ್ತಿಯಲ್ಲಿ ಅಭಿವೃದ್ಧಿಯನ್ನು ಕಾಣುವಿರಿ. ಮನೆಯಲ್ಲಿ ಸಮಾಧಾನ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಬಂಧುಮಿತ್ರರ ಆಗಮನ. ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ಉಂಟಾಗುವುದು. ಲಾಭವನ್ನು ಪಡೆದುಕೊಳ್ಳುವಿರಿ. ಬ್ಯಾಂಕ್ ಉದ್ಯಮದಲ್ಲಿ ಪ್ರಗತಿ ಹಾಗೂ ಅನುಕೂಲವನ್ನು ಪಡೆದುಕೊಳ್ಳುವಿರಿ. ಸ್ನೇಹಿತರಿಂದ ಉತ್ತಮ ಸಹಕಾರ ದೊರೆಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಸಿಂಹ: ಜುಲೈ 25-ಆಗಸ್ಟ್ 23

ಸಿಂಹ: ಜುಲೈ 25-ಆಗಸ್ಟ್ 23

ಆದಷ್ಟು ಕಾಳಜಿಯಿಂದ ಇರಿ. ಇಲ್ಲಸಲ್ಲದ ಅಪವಾದಗಳು ನಿಮ್ಮ ಬೆನ್ನೇರುವುದು. ಷೇರು ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಕೊಂಡವರು ಹೆಚ್ಚು ಕಾಳಜಿಯಿಂದ ವ್ಯವಹಾರ ಮುಂದುವರಿಸಬೇಕು. ಖನಿಜೋತ್ಪನ್ನಗಳು ಒಂದಿಷ್ಟು ನಷ್ಟವನ್ನು ಉಂಟುಮಾಡುವುದು. ತೈಲೋದ್ಯಮದಲ್ಲೂ ಒಂದಿಷ್ಟು ಕಿರಿಕಿರಿ ಉಂಟಾಗುವ ಲಕ್ಷಣಗಳಿವೆ. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಹಾಗೂ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ.

ಕನ್ಯಾ: ಆಗಸ್ಟ್ 25-ಸೆಪ್ಟಂಬರ್ 23

ಕನ್ಯಾ: ಆಗಸ್ಟ್ 25-ಸೆಪ್ಟಂಬರ್ 23

ಇಂದು ನಿಮಗೆ ಉತ್ತಮವಾದ ದಿನ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಸ್ತ್ರೀಯರು ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸುವರು. ನಿರ್ದಿಷ್ಟ ಗುರಿಯನ್ನು ನೀವು ತಲುಪುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳು ಉತ್ತಮ ಫಲಿತಾಂಶವನ್ನು ತಂದುಕೊಡುವುದು. ತಾಂತ್ರಿಕ ಕ್ಷೇತ್ರ ಮತ್ತು ಪತ್ರಿಕೋದ್ಯಮದಲ್ಲಿ ತೊಡಗಿಕೊಂಡವರಿಗೆ ಅನುಕೂಲ ಮತ್ತು ಉತ್ತಮ ಫಲಿತಾಂಶ ದೊರೆಯುವುದು. ಸಮಸ್ಯೆಗಳ ನಿವರಣೆ ಹಾಗೂ ಉತ್ತಮ ಪ್ರಗತಿಗಾಗಿ ಶಿವನ ಆರಾಧನೆ ಮಾಡಿ.

ತುಲಾ: ಸೆಪ್ಟಂಬರ್ 25-ಅಕ್ಟೋಬರ್ 23

ತುಲಾ: ಸೆಪ್ಟಂಬರ್ 25-ಅಕ್ಟೋಬರ್ 23

ಇಂದು ನಿಮಗೆ ಅನುಕೂಲಕರವಾದಂತಹ ದಿನ. ಸ್ಥಿರಾಸ್ತಿ ಖರೀದಿಸುವ ಉದ್ದೇಶದಿಂದ ತಂದೆ ಅಥವಾ ಸ್ನೇಹಿತರೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ. ಹಣಕಾಸಿನ ವ್ಯವಸ್ಥೆ ಸುಗಮಗೊಳ್ಳುವುದು. ವ್ಯಾಪಾರ ವಹಿವಾಟು ಹಾಗೂ ಮಾಡುತ್ತಿರುವ ಉದ್ಯಮಗಳು ಉತ್ತಮ ಲಾಭಾಂಶವನ್ನು ಹಾಗೂ ಸಮಾಧಾನವನ್ನು ತಂದುಕೊಡುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ವೃಶ್ಚಿಕ: 25 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 25 ಅಕ್ಟೋಬರ್ -22 ನವೆಂಬರ್

ಮಾನಸಿಕ ಕಿರಿಕಿರಿಯನ್ನು ನೀವು ಅನುಭವಿಸುವಿರಿ. ವಿಪರೀತವಾದ ಆಯಾಸ ನಿಮ್ಮ ನೆಮ್ಮದಿಯನ್ನು ಹಾಳುಮಾಡುವುದು. ಆರೋಗ್ಯ ಸುಧಾರಣೆಗೆ ಹಣ ವ್ಯಯ. ಮಕ್ಕಳಿಂದ ಅಶುಭ ವಾರ್ತೆ ಕೇಳುವಿರಿ. ಕೆಲವರಿಗೆ ಅಪಘಾತ ಉಂಟಾಗುವ ಸಾಧ್ಯತೆಗಳಿವೆ. ಮನೆಯಿಂದ ಹೊರಡುವಾಗ ಶಿವ ನಾಮ ಸ್ಮರಣೆ ಮಾಡಿ. ಜೀವನದಲ್ಲಿ ಇನ್ನಷ್ಟು ನೆಮ್ಮದಿಗಾಗಿ ಶಿವನ ಆರಾಧನೆ ಮಾಡಿ.

ಧನು: 25 ನವೆಂಬರ್ -22 ಡಿಸೆಂಬರ್

ಧನು: 25 ನವೆಂಬರ್ -22 ಡಿಸೆಂಬರ್

ವಿಪರೀತವಾದ ಆಯಾಸ ಹಾಗೂ ಮಾನಸಿಕ ಕಿರಿಕಿರಿಯನ್ನು ಅನುಭವಿಸುವಿರಿ. ಅನಾರೋಗ್ಯ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಉಂಟಾಗುವುದು. ಅಲ್ಲದೆ ಹತ್ತಾರು ಸಮಸ್ಯೆಗಳು ನಿಮ್ಮನ್ನು ಕಾಡುವುದು. ಜನ್ಮದಲ್ಲಿ ಶನಿಯ ಪ್ರಭಾವ ಇರುವುದರಿಂದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡುವುದು. ಸಮಸ್ಯೆಗಳ ನಿವಾರಣೆಗೆ ಗಣೇಶ ಮತ್ತು ಶಿವನ ಆರಾಧನೆ ಮಾಡಿ.

ಮಕರ: ಡಿಸೆಂಬರ್ 25-ಜನವರಿ 20

ಮಕರ: ಡಿಸೆಂಬರ್ 25-ಜನವರಿ 20

ಸಮಾಧಾನಕರವಾದ ವಾತಾವರಣ ನಿಮಗೆ ಲಭಿಸುವುದು. ಕೆಲವರಿಗೆ ಮನೆಯಲ್ಲಿ ನೆಮ್ಮದಿ ತಂದುಕೊಡುವುದು. ಶನಿಯ ಪ್ರಭಾವ ಇರುವುದರಿಂದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಆದಷ್ಟು ಕಾಳಜಿಯನ್ನು ವಹಿಸಬೇಕಾಗುವುದು. ನಿರ್ದಿಷ್ಟ ಗುರಿಯನ್ನು ತಲುಪಲು ವಿಫಲತೆಯನ್ನು ಅನುಭವಿಸುವಿರಿ. ಸ್ಥಿರಾಸ್ತಿಗಾಗಿ ಸಹೋದರರ ನಡುವೆ ಕಿತ್ತಾಟ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಕುಂಬ: 25 ಜನವರಿ -19 ಫೆಬ್ರುವರಿ

ಕುಂಬ: 25 ಜನವರಿ -19 ಫೆಬ್ರುವರಿ

ಸಮಾಧಾನಕರವಾದ ವಾತಾವರಣವನ್ನು ನೀವು ಅನುಭವಿಸುವಿರಿ. ಮನೆಯಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಬಂಧು ಮಿತ್ರರ ಸಮಾಗಮನ. ನಿರ್ದಿಷ್ಟ ಗುರಿಯನ್ನು ತಲುಪಲು ಸಫಲರಾಗುವಿರಿ. ಸ್ನೇಹಿತರ ನಡುವೆ ಹಾಗೂ ಪ್ರೇಮಿಗಳ ಮಧ್ಯೆ ಒಂದಿಷ್ಟು ಒಡಂಬಡಿಕೆ ಮಾಡಿಕೊಳ್ಳುವ ಲಕ್ಷಣಗಳಿವೆ. ಶಿವನ ಆರಾಧನೆ ಮಾಡುವುದರಿಂದ ನಿಮ್ಮ ಬದುಕಲ್ಲಿ ಸಂತೋಷ ಇಮ್ಮಡಿಯಾಗುವುದು.

ಮೀನ: 25 ಫೆಬ್ರವರಿ -20 ಮಾರ್ಚ್

ಮೀನ: 25 ಫೆಬ್ರವರಿ -20 ಮಾರ್ಚ್

ಇದು ನಿಮಗೆ ಸಮಾಧಾನ ಲಭಿಸುವುದು. ಸ್ತ್ರೀಯರು ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಕಾಣುವಿರಿ. ಗೃಹ ಕೈಗಾರಿಕೆ ಹಾಗೂ ಗುಡಿಕೈಗಾರಿಕೆಯು ನಿಮಗೆ ಉತ್ತಮ ಲಾಭವನ್ನು ತಂದುಕೊಡುವುದು. ತರಕಾರಿ ಹಾಗೂ ಸಣ್ಣ-ಪುಟ್ಟ ವ್ಯಾಪಾರಿಗಳಿಗೆ ಉತ್ತಮ ಲಾಭಾಂಶ ಲಭ್ಯವಾಗುವುದು. ಚಾಲಕರಿಗೆ ಸಮಾಧಾನ ಲಭ್ಯವಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶ ಮತ್ತು ಶಿವನ ಆರಾಧನೆ ಮಾಡಿ.

English summary

your-daily-horoscope-for-25-December-2017

Know what astrology and the planets have in store for you today. Choose your zodiac sign and read the details..