ಶನಿವಾರದ ದಿನ ಭವಿಷ್ಯ

Posted By: Divya Pandith
Subscribe to Boldsky
ದಿನ ಭವಿಷ್ಯ - Kannada Astrology 23-12-2017 - Your Day Today - Oneindia Kannada

ಅಸೂಯೆ ಪಡುವವರಿಗೆ ಎಂದಿಗೂ ನಿದ್ರೆ ಸರಿಯಾಗಿ ಇರುವುದಿಲ್ಲ. ಅಹಂಕಾರ ಪಡುವವರಿಗೆ ಯಾರೂ ಸರಿಯಾದ ಸ್ನೇಹಿತರಿರುವುದಿಲ್ಲ. ಅನುಮಾನ ಪಡುವವರಿಗೆ ಸರಿಯಾದ ಜೀವನವೇ ಇರುವುದಿಲ್ಲ. ಹಾಗಾಗಿ ಮೊದಲು ನಮ್ಮ ಮನಸ್ಸನ್ನು ಶುದ್ಧಗೊಳಿಸಿಕೊಳ್ಳಬೇಕು. ನಂತರ ಪ್ರಪಂಚವೆಲ್ಲಾ ಸುಂದರ ಹಾಗೂ ಸತ್ಯದಿಂದ ಇರುವಂತೆ ಕಾಣುತ್ತದೆ. ಆಗಲೇ ನಮ್ಮೊಂದಿಗೆ ಇತರರೂ ಬೆರೆಯುತ್ತಾರೆ, ನಾವೂ ಸಂತೋಷದಿಂದ ಇರಲು ಸಾಧ್ಯ.

ಶನಿವಾರ ಎಂಬ ಬೇಸರಕ್ಕೆ ಒಳಗಾಗದೆ ಸುಂದರ ದಿನ ಹಾಗೂ ಶುಭ ದಿನ ಎನ್ನುವುದರ ಮೂಲಕ ದಿನದ ಆರಂಭವನ್ನು ಮಾಡಿ. ಈ ದಿನ ನಿಮ್ಮ ಭವಿಷ್ಯದಲ್ಲಿ ಉಂಟಾಗುವ ಏರು ಪೇರುಗಳನ್ನು ಇಂದಿನ ಭವಿಷ್ಯ ನೋಡಿ ತಿಳಿದುಕೊಳ್ಳಿ. ಹಾಗೊಮ್ಮೆ ದೋಷಗಳು ಹಾಗೂ ಕಷ್ಟಗಳ ಸೂಚನೆಯಿದ್ದರೆ ಪರಿಹಾರಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದಲ್ಲಿ ಯಶಸ್ಸನ್ನು ಪಡೆಯಿರಿ.... 

ಮೇಷ: ಮೇಷ 23 ಮಾರ್ಚ್ -20 ಏಪ್ರಿಲ್

ಮೇಷ: ಮೇಷ 23 ಮಾರ್ಚ್ -20 ಏಪ್ರಿಲ್

ಸಮಾಧಾನದ ಬದುಕು ನಿಮ್ಮ ಪಾಲಾಗುತ್ತದೆ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ನಿಮ್ಮ ಸುಂದರ ಕನಸಿಗೆ ಭಗವಂತನ ಆಶೀರ್ವಾದ ದೊರೆಯುವುದು. ಹಿರಿಯರ ಮಾತನ್ನು ಧಿಕ್ಕರಿಸದಿರಿ. ಪತ್ರಕರ್ತರಿಗೆ ಅನುಕೂಲ. ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಕಾಣುವಿರಿ. ನಿರ್ದಿಷ್ಟಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದಾಯಕ ಬದುಕಿಗಾಗಿ ಈಶ್ವರನ ಆರಾಧನೆ ಮಾಡಿ.

ವೃಷಭ: 23 ಏಪ್ರಿಲ್ -21 ಮೇ

ವೃಷಭ: 23 ಏಪ್ರಿಲ್ -21 ಮೇ

ಆರ್ಥಿಕ ಸ್ಥಿತಿ ಕುಸಿತವನ್ನು ಕಾಣುವುದು. ವಿಪರೀತವಾದ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುವುದು. ಇತರರಿಂದ ಆರೋಪವನ್ನು ಕೇಳಬೇಕಾಗುವುದು. ಇತರರಲ್ಲಿ ಸಾಲಕ್ಕೆ ಮೊರೆ ಹೋಗುವ ಸಾಧ್ಯತೆಗಳಿವೆ. ಖನಿಜೋತ್ಪನ್ನ ಕೆಲಸದಲ್ಲಿರುವವರಿಗೆ ಸೋಲು ಹಾಗೂ ಕೆಲವು ಆಪಾದನೆಗಳನ್ನು ಕೇಳುವ ಲಕ್ಷಣಗಳಿವೆ. ಸ್ತ್ರೀಯರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವು ಉಲ್ಭಣಗೊಳ್ಳುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧಿಯ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಿಥುನ:23 ಮೇ -21 ಜೂನ್

ಮಿಥುನ:23 ಮೇ -21 ಜೂನ್

ಇಂದು ನಿಮಗೆ ಸಾಮಾನ್ಯವಾದ ದಿನ. ಯಾವುದೇ ವಿಚಾರವಾಗಿ ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ರಾಜಕೀಯ ಕ್ಷೇತ್ರದಲ್ಲಿ ಹಿನ್ನೆಡೆಯನ್ನು ಅನುಭವಿಸುವಿರಿ. ವ್ಯಾಪಾರಿಗಳಿಗೆ ಅನುಕೂಲಕರವಾದ ದಿನ. ಆರಕ್ಷಣಾ ಅಧಿಕಾರಿಗಳಿಗೆ ಒಂದಿಷ್ಟು ಅನಾನುಕೂಲ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಯಶಸ್ವಿ ಬದುಕಿಗಾಗಿ ಶಿವನ ಆರಾಧನೆ, ಆಂಜನೇಯನ ಸ್ಮರಣೆ ಮಾಡಿ.

ಕರ್ಕ: 23 ಜೂನ್ -22 ಜುಲೈ

ಕರ್ಕ: 23 ಜೂನ್ -22 ಜುಲೈ

ಮಾನಸಿಕ ಕಿರಿಕಿರಿ ದೂರವಾಗುವುದು. ಸಮಾಧಾನಕರವಾದ ಜೀವನವನ್ನು ಅನುಭವಿಸುವಿರಿ. ಮನೆಯಲ್ಲಿ ನೆಮ್ಮದಿ, ಬಂಧುಮಿತ್ರರ ಸಹಕಾರ ದೊರೆಯುವುದು. ಎಲ್ಲಾ ಬಗೆಯ ವ್ಯಾಪಾರಿಗಳಿಗೂ ಧನಾತ್ಮಕವಾದ ಲಾಭ ಹಾಗೂ ವ್ಯವಸ್ಥೆ ದೊರೆಯುವುದು. ಮಕ್ಕಳಿಗೆ ಅನುಕೂಲಕರವಾತಾವರಣ. ವಿಧ್ಯಾರ್ಥಿಗಳಿಗೆ ಶುಭವಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶ ಮತ್ತು ಶಿವನ ಆರಾಧನೆ ಮಾಡಿ.

ಸಿಂಹ: 23 ಜುಲೈ -21 ಆಗಸ್ಟ್

ಸಿಂಹ: 23 ಜುಲೈ -21 ಆಗಸ್ಟ್

ವಿಪರೀತವಾದ ದೈಹಿಕ ಅನಾರೋಗ್ಯವು ನಿಮ್ಮನ್ನು ಆಸ್ಪತ್ರೆಗೆ ಸೇರುವಂತೆ ಮಾಡುವುದು. ರಕ್ತ ಸಂಬಂಧಿ ಕಾಯಿಲೆಗಳು ಅಧಿಕ ಪ್ರಮಾಣದಲ್ಲಿ ನಿಮ್ಮನ್ನು ಕಾಡಬಹುದು. ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆಯನ್ನು ತೋರಿಸಿ. ಮನಸ್ಸು ಡೋಲಾಯಮಾನವಾಗಿರುವುದು. ದೃಢ ನಿರ್ಧಾರ ಕೈಗೊಳ್ಳುವುದರಿಂದ ಕನಸು ನನಸಾಗುವುದು. ಉನ್ನತ ವ್ಯಾಸಂಗ ಮಾಡಬೇಕೆನ್ನುವ ವಿದ್ಯಾರ್ಥಿಗಳ ಕನಸಿಗೆ ತಣ್ಣೀರು ಎರಚುವ ಕೆಲಸ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗೆ ಶಿವನ ಆರಾಧನೆ ಮಾಡಿ.

ಕನ್ಯಾ: 23 ಆಗಸ್ಟ್ -23 ಸೆಪ್ಟೆಂಬರ್

ಕನ್ಯಾ: 23 ಆಗಸ್ಟ್ -23 ಸೆಪ್ಟೆಂಬರ್

ವಿಪರೀತವಾದ ದೇಹಾಯಾಸ ಹಾಗೂ ಮಾನಸಿಕ ಕಿರಿಕಿರಿ ಉಂಟಾಗುವುದು. ಕೆಲವರು ಮಾನಸಿಕ ನೋವಿನಿಂದ ಕೆಲಸದಲ್ಲಿ ಅಡೆತಡೆಯನ್ನು ಅನುಭವಿಸುವರು. ಅಷ್ಟಮ ಶನಿಯ ಪ್ರಭಾವ ಇರುವುದರಿಂದ ಆದಷ್ಟು ಕಾಳಜಿಯಿಂದ ಇರಬೇಕು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಹಾಗೂ ಆಂಜನೇಯನ ಸ್ಮರಣೆ ಮಾಡಿ.

ತುಲಾ: 24 ಸೆಪ್ಟೆಂಬರ್ -23 ಅಕ್ಟೋಬರ್

ತುಲಾ: 24 ಸೆಪ್ಟೆಂಬರ್ -23 ಅಕ್ಟೋಬರ್

ಇಂದು ನಿಮಗೆ ಅದೃಷ್ಟವಾದ ದಿನ. ಇಂದು ನಿಮಗೆ ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯುವುದು. ಸ್ಥಿರ ಆಸ್ತಿಯಿಂದ ಲಾಭ ಪಡೆದುಕೊಳ್ಳುವಿರಿ. ಮಕ್ಕಳಿಂದ ಶುಭವಾರ್ತೆಯನ್ನು ಕೇಳುವಿರಿ. ಮನೆಯಲ್ಲಿಯೂ ನೆಮ್ಮದಿಯ ವಾತಾವರಣ ಉಂಟಾಗುವುದು. ವಿದೇಶಯಾನದ ಕನಸು ನನಸಾಗುವುದು. ವಿದ್ಯಾರ್ಥಿಗಳಿಗೂ ಶುಭ ದಿನ. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಜೀವನಕ್ಕಾಗಿ ಶಿವನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್

ಒಂದಿಷ್ಟು ಅಡೆತಡೆಗಳನ್ನು ನೀವು ಅನುಭವಿಸುವಿರಿ. ಪ್ರಾಣಿ ಪ್ರಿಯರಿಗೆ ಅನುಕೂಲ ಲಭಿಸುವುದು. ನಿಮ್ಮ ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಅದೃಷ್ಟಕ್ಕಾಗಿ ಕೋತಿಗಳಿಗೆ, ಪಕ್ಷಿಗಳಿಗೆ ಆಹಾರವನ್ನು ನೀಡಿ. ಧೈರ್ಯದಿಂದ ಕಾರ್ಯವನ್ನು ಕೈಗೊಳ್ಳಿ. ಉತ್ತಮ ಫಲಿತಾಂಶ ಲಭಿಸುವುದು. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್

ಧನು: 23 ನವೆಂಬರ್ -22 ಡಿಸೆಂಬರ್

ಮಾನಸಿಕ ಕಿರಿಕಿರಿ ಮುಂದುವರಿಯುವುದು. ಹದಗೆಟ್ಟ ಆರೋಗ್ಯವು ಹೈರಾಣವನ್ನುಂಟುಮಾಡುವುದು. ಇಲ್ಲಸಲ್ಲದ ಆರೋಪಗಳನ್ನು ಎದುರಿಸಬೇಕಾಗುವುದು. ರಾಜಕೀಯದಲ್ಲಿ ಹಿನ್ನಡೆಯನ್ನು ಅನುಭವಿಸುವಿರಿ. ಸಣ್ಣ ಪುಟ್ಟ ವ್ಯಾಪಾರಿಗಳಿಂದ ಎಲ್ಲಾ ತರಹದ ವ್ಯಾಪಾರಿಗಳಿಗೂ ಅಡೆತಡೆ ಉಂಟಾಗುವುದು. ಕೆಲವು ಸಮಸ್ಯೆಗಳು ಎಡಬಿಡದೆ ನಿಮ್ಮನ್ನು ಕಾಡುವುದು. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಮಕರ: 23 ಡಿಸೆಂಬರ್ -20 ಜನವರಿ

ಮಕರ: 23 ಡಿಸೆಂಬರ್ -20 ಜನವರಿ

ಸಾಮಾನ್ಯವಾದಂತಹ ದಿನ. ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ಶನಿ ಪ್ರಭಾವ ಇರುವುದರಿಂದ ಆದಷ್ಟು ಕಾಳಜಿಯಿಂದ ಇರಿ. ಅಹಂಕಾರ ತೋರದಿರಿ. ಬಂಧು ಮಿತ್ರರೊಂದಿಗೆ ಕಲಹವನ್ನು ತೋರದಿರಿ. ಮಕ್ಕಳಿಗೆ ಅತಿಯಾದ ಕಟ್ಟುಪಾಡು ಹೇರದಿರಿ. ಸ್ತ್ರೀಯರ ಮನಸ್ಸನ್ನು ನೋಯಿಸದಿರಿ. ಸಮಸ್ಯೆಗಳ ಪರಿಹಾರಕ್ಕೆ ಶಿವನ ಆರಾಧನೆ ಮಾಡಿ.

ಕುಂಬ: 21 ಜನವರಿ -19 ಫೆಬ್ರುವರಿ

ಕುಂಬ: 21 ಜನವರಿ -19 ಫೆಬ್ರುವರಿ

ಶುಭಪ್ರದವಾದ ದಿನ. ಅನೇಕ ದಿನಗಳಿಂದ ಬರಬೇಕಾಗಿದ್ದ ಹಣ ನಿಮ್ಮ ಕೈ ಸೇರುವುದು. ಕೆಲವು ನಿದರ್ಶನಗಳು ನಿಮಗೆ ಸತ್ಯದರ್ಶನ ಮಾಡುವುದು. ಅನೇಕ ವಿಚಾರದಲ್ಲಿ ಲಾಭವನ್ನೇ ಗಳಿಸುವಿರಿ. ಕೆಲವು ವಿಚಾರದಲ್ಲಿ ಕಸಿವಿಸಿ ಉಂಟಾಗುವುದು. ಸ್ತ್ರೀಯರಿಗೆ ಪ್ರೇಮ ವೈಫಲ್ಯ ಉಂಟಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವ ಮತ್ತು ಆಂಜನೇಯನ ಆರಾಧನೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್

ಮೀನ: 20 ಫೆಬ್ರವರಿ -20 ಮಾರ್ಚ್

ನಿಮಗೆ ಶುಭಕರವಾದ ದಿನ. ಎಲ್ಲಾ ಬಗೆಯ ಲಾಭವನ್ನು ನೀವುಗಳಿಸಿ ಕೊಳ್ಳುವಿರಿ. ಮನೆಯಲ್ಲಿ ನೆಮ್ಮದಿಯನ್ನು ಕಾಣುವಿರಿ. ಬಂಧು ಮಿತ್ರರಿಂದ ಸಂಪೂರ್ಣವಾದ ಸಹಕಾರ ದೊರೆಯುವುದು. ನಿರ್ದಿಷ್ಟಗುರಿಯನ್ನು ನೀವು ತಲುಪುವಿರಿ. ದಿನದಿಂದ ದಿನಕ್ಕೆ ಜನಪ್ರಿಯ ವ್ಯಕ್ತಿಗಳಾಗಿ ಮಿಂಚುವಿರಿ. ಕಲಾವಿದರಿಗೆ ಅನುಕೂಲ. ನೆಮ್ಮದಿಯ ವಾತಾವರಣ ನಿಮಗೆ ಸಿಗುವುದು. ಸಮಸ್ಯೆಗಳ ನಿವಾರಣೆಗೆ ಗಣೇಶನ ಆರಾಧನೆ ಹಾಗೂ ಕುಲದೇವರ ಸ್ಮರಣೆ ಮಾಡಿ.

English summary

your-daily-horoscope-for-23-December-2017

Know what astrology and the planets have in store for you today. Choose your zodiac sign and read the details..