Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
22-12-2017 ಶುಕ್ರವಾರದ ದಿನ ಭವಿಷ್ಯ

ನಮ್ಮ ದೇಹದಲ್ಲಿ ಚೈತನ್ಯ, ವಯಸ್ಸು ಹಾಗೂ ಶಕ್ತಿ ಇರುವಾಗಲೇ ಶ್ರಮಪಟ್ಟು ದುಡಿಯಬೇಕು. ನಾವು ದುಡಿಯುವ ಪರಿಯಲ್ಲಿ ಒಂದು ಸೂಕ್ತ ಕ್ರಮವಿರಬೇಕು. ಆ ಕ್ರಮಕ್ಕೆ ನಿಗದಿತವಾದ ನಿಯಮವಿರಬೇಕು. ನಿಯಮವು ಸರಾಗವಾಗಿ ಸಾಗಬೇಕಾದರೆ ಅದ್ಭುತವಾದ ಗುರಿಯನ್ನು ಹೊಂದಿರಬೇಕು. ಗುರಿ ಸಾಧನೆಗೆ ಉತ್ತಮ ದಕ್ಷತೆ ಹಾಗೂ ವಿವೇಚನೆಯು ಇರಬೇಕು.
ಆಗಲೇ ನಾವು ಅಂದುಕೊಂಡಿದ್ದು ಸಾಧಿಸಲು ಸಾಧ್ಯ. ಉತ್ತಮ ಪರಿಶ್ರಮವಿದ್ದರೆ ಆ ದೇವರು ಸಹ ಒಳ್ಳೆಯದನ್ನು ನಮಗೆ ಕರುಣಿಸುತ್ತಾನೆ. ಶುಕ್ರವಾರವಾದ ಇಂದು ನಮ್ಮ ಬದುಕಲ್ಲಿ ಲಕ್ಷ್ಮಿ ದೇವಿ ಹೇಗೆ ಪ್ರವೇಶ ಪಡೆಯುತ್ತಾಳೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ಕೊಂಡಿದ್ದರೆ ಈ ಮುಂದಿರುವ ರಾಶಿ ಭವಿಷ್ಯವನ್ನು ಅರಿಯಿರಿ.....

ಮೇಷ: 21 ಮಾರ್ಚ್ -20 ಏಪ್ರಿಲ್
ಆರೋಗ್ಯದ ಸುಧಾರಣೆ ಕಾಣುವಿರಿ. ಮಾಡುತ್ತಿರುವ ಉದ್ಯೋಗದಲ್ಲೂ ಪ್ರಗತಿ ಉಂಟಾಗುವುದು. ಸಮಾಧಾನದ ಬದುಕು ಇಂದು ನಿಮಗೆ ಲಭಿಸುವುದು. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲಕರವಾದ ದಿನ. ಸಣ್ಣ ಪುಟ್ಟ ಉದ್ಯೋಗದಲ್ಲಿರುವವರಿಗೂ ಉತ್ತಮ ಲಾಭ ಉಂಟಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ವೃಷಭ: 21 ಏಪ್ರಿಲ್ -21 ಮೇ
ಸಮಾಧಾನ ಪಡೆದುಕೊಳ್ಳುವಲ್ಲಿ ವಿಫಲರಾಗುವಿರಿ. ವಿಪರೀತ ಆಯಾಸ ನಿಮ್ಮನ್ನು ಹೈರಾಣಗೊಳಿಸುವುದು. ನಿರ್ದಿಷ್ಟ ಗುರಿ ತಲುಪಲು ಅಸಾಧ್ಯವಾಗುವುದು. ಮಾಡುತ್ತಿರುವ ಕೆಲಸದಲ್ಲಿ ಅಡೆತಡೆಗಳು ಉಂಟಾಗುವುದು. ಇದರಿಂದ ಸಾಕಷ್ಟು ನೋವನ್ನು ಅನುಭವಿಸುವಿರಿ. ವಿದ್ಯಾರ್ಥಿಗಳು ಶಾರದೆಯ ಆರಾಧನೆ ಮಾಡಿ. ಪತ್ರಕರ್ತರಿಗೆ ಅಪಮಾನದ ವಾತಾವರಣ ಉಂಟಾಗುವುದು. ಸಮಸ್ಯೆಗಳ ನಿವಾಋಣೆ ಹಾಗೂ ಉತ್ತಮ ಬದುಕಿಗಾಗಿ ಗಣೇಶ ಮತ್ತು ಲಕ್ಷ್ಮಿಯ ಆರಾಧನೆ ಮಾಡಿ.

ಮಿಥುನ:22 ಮೇ -21 ಜೂನ್
ಸಮಾಧಾನದ ಬದುಕನ್ನು ಕಾಣುವಿರಿ. ಮನೆಯಲ್ಲಿ ನೆಮ್ಮದಿ ದೊರೆಯುವುದು. ಸ್ತ್ರೀಯರಿಂದಲೂ ಸಹಕಾರ ದೊರೆಯುವುದು. ಅನೇಕದಿನಗಳಿಂದ ಅಂದುಕೊಂಡ ಕಾರ್ಯವು ಸುಗಮವಾಗಿ ನೆರವೇರುವುದು. ಖನಿಜೋತ್ಪನ್ನಗಳಲ್ಲಿ ಲಾಭವನ್ನು ಪಡೆಯುವಿರಿ. ಇನ್ನಷ್ಟು ಪ್ರಗತಿಯ ಜೀವನಕ್ಕಾಗಿ ದೇವಿಯ ಆರಾಧನೆ ಮಾಡಿ.

ಕರ್ಕ: 22 ಜೂನ್ -22 ಜುಲೈ
ನಿಮ್ಮನ್ನು ಕಾಡುತ್ತಿದ್ದ ಮಾನಸಿಕ ಕಿರಿಕಿರಿ ದೂರವಾಗುವುದು. ಸುಂದರ ಕನಸುಗಳು ನನಸಾಗುವುದು. ವ್ಯಾಪಾರೋದ್ಯಮಗಳು ಲಾಭವನ್ನು ಕಾಣುವುದು. ಹೋಟೇಲ್ ಉದ್ಯಮ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಗೂ ಉತ್ತಮ ಲಾಭ ಪಡೆದುಕೊಳ್ಳುವರು. ಕಲಾವಿದರಿಗೆ ಅವಕಾಶ ದೊರೆಯುವುದು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಸಿಂಹ: 23 ಜುಲೈ -21 ಆಗಸ್ಟ್
ಸಾಲಗಾರರ ಬಾಧೆ ಉಂಟಾಗುವುದು. ಮಾಣಸಿಕ ಕಿರಿಕಿರಿಯನ್ನು ಅನುಭವಿಸುವುವಿರಿ. ಆರೋಗ್ಯದಲ್ಲಿ ವಿಪರೀತ ಆಯಾಸ ಉಂಟಾಗುವುದು. ಬ್ಯಾಂಕ್ ನೌಕರರಿಗೆ ಅವಮಾನ ಉಂಟಾಗುವ ಸಾಧ್ಯತೆಗಳಿವೆ. ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಾಗದು. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳು ಕಾರ್ಯರೂಪಕ್ಕೆ ಬರದು. ಸಮಸ್ಯೆಗಳ ನಿವಾರಣೆ ಹಾಗೂ ಯಶನ್ನು ಹೊಂದಲು ಗಣೇಶ ಮತ್ತು ದೇವಿಯ ಆರಾಧನೆ ಮಾಡಿ.

ಕನ್ಯಾ: 22 ಆಗಸ್ಟ್ -23 ಸೆಪ್ಟೆಂಬರ್
ಮಾನಸಿಕ ಕಿರಿಕಿರಿಯನ್ನು ಅನುಭವಿಸುವ ಲಕ್ಷಣ ಗೋಚರವಾಗುತ್ತಿದೆ. ವಿದ್ಯಾರ್ಥಿಗಳಿಗೆ ಆತಂಕ ಹಾಗೂ ಅಡೆತಡೆಗಳನ್ನು ಎದುರಿಸಬೇಕಾದಂತಹ ಪರಿಸ್ಥಿತಿ ಒದಗಿ ಬರುವುದು. ವ್ಯಾಪಾರ ವಹಿವಾಟಿನಲ್ಲೂ ಏರು ಪೇರು ಉಂಟಾಗುವ ಲಕ್ಷಣಗಳಿವೆ. ರಾಹುಕಾಲದ ಪ್ರಯಾಣವನ್ನು ಆರಂಭಿಸದಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಪ್ರಗತಿ ಉಂಟಾಗುವುದು. ಸಮಸ್ಯೆಗಳ ನಿವಾರಣೆಗೆ ಶಿವನ ಆರಾಧನೆ ಹಾಗೂ ದೇವಿಯ ಉಪಾಸನೆ ಮಾಡಿ.

ತುಲಾ: 24 ಸೆಪ್ಟೆಂಬರ್ -23 ಅಕ್ಟೋಬರ್
ಮನೆಯಲ್ಲಿ ಮಾನಸಿಕ ನೆಮ್ಮದಿ ದೊರೆಯುವುದು. ನಿಮ್ಮ ಎಲ್ಲಾ ಕನಸುಗಳು ನನಸಾಗುವುದು. ಸ್ಥಿರಾಸ್ತಿಯಿಂದ ಲಾಭ ಪಡೆಯುವಿರಿ. ಮಾಡುತ್ತಿರುವ ಉದ್ಯಮದಲ್ಲಿ ಪ್ರಗತಿಯನ್ನು ಕಾಣುವಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧಿಯ ಬದುಕಿಗಾಗಿ ಗಣೇಶನ ಆರಾಧನೆ ಮಾಡಿ.

ವೃಶ್ಚಿಕ: 24 ಅಕ್ಟೋಬರ್ -22 ನವೆಂಬರ್
ಮಾನಸಿಕ ಕಿರಿಕಿರಿ, ಸ್ತ್ರೀಯರ ಆರೋಗ್ಯದಲ್ಲಿ ಏರು ಪೇರು ಉಂಟಾಗುವುದು. ನಿರ್ದಿಷ್ಟ ಗುರಿಯನ್ನು ತಲುಪಲು ಅಸಾಧ್ಯವಾಗುವುದು. ಬಂಧುಮಿತ್ರರಿಂದ ಕಿರಿಕಿರಿ. ವಿದ್ಯಾರ್ಥಿಗಳಿಗೆ ಹಿನ್ನೆಡೆ ಉಂಟಾಗುವುದು. ಜೀವನದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಸಂತೋಷದಾಯಕ ಬದುಕಿಗಾಗಿ ಶಿವನ ಆರಾಧನೆ ಮಾಡಿ.

ಧನು: 23 ನವೆಂಬರ್ -22 ಡಿಸೆಂಬರ್
ವಿಪರೀತವಾದ ದೇಹದ ಆಯಾಸ ಹಾಗೂ ಮಾನಸಿಕ ಕಿರಿಕಿರಿ ನಿಮ್ಮನ್ನು ಕಾಡುವುದು. ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಅಸಮಧಾನವನ್ನು ಅನುಭವಿಸುವ ಸಾಧ್ಯತೆಗಳಿವೆ. ಜೀವನದ ಎಲ್ಲಾ ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಶಿವನ ಆರಾಧನೆ ಹಾಗೂ ಆಂಜನೇಯನ ಉಪಾಸನೆ ಮಾಡಿ.

ಮಕರ: 23 ಡಿಸೆಂಬರ್ -20 ಜನವರಿ
ಬಂಧುಮಿತ್ರರ ಸಹಕಾರ ದೊರೆಯುವುದು. ಸಮಾಧಾನಕರವಾದ ಜೀವನವನ್ನು ಅನುಭವಿಸುವಿರಿ. ನಿರೀಕ್ಷಿತ ಮಟ್ಟದ ಯಶಸ್ಸು ದೊರೆಯುವುದು. ಪತ್ರಕರ್ತರಿಗೆ ತಂದೆಯ ಆಶೀರ್ವಾದ ಮತ್ತು ಸಹಾಯ ಲಭಿಸುವುದು. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ ಹಾಗೂ ವೈದ್ಯರಿಗೆ ಸನ್ಮಾನಗಳು ನಡೆಯುವ ಸಾಧ್ಯತೆಗಳಿವೆ. ಸ್ತ್ರೀಯರು ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಸಾಧಿಸುವರು. ಸಮಸ್ಯೆಗಳ ನಿವಾರಣೆ ಹಾಗೂ ಪ್ರಗತಿಪರ ಜೀವನಕ್ಕಾಗಿ ಶಿವ ಮತ್ತು ಪಾರ್ವತಿಯ ಆರಾಧನೆ ಮಾಡಿ.

ಕುಂಬ: 21 ಜನವರಿ -19 ಫೆಬ್ರುವರಿ
ಮನೆಯಲ್ಲಿ ನೆಮ್ಮದಿಯ ವಾತಾವರಣ. ಸಮಾಧಾನದ ಬದುಕು ಲಭಿಸುವುದು. ಸ್ಥಿರಾಸ್ತಿಯಿಂದ ಲಾಭ ಲಭಿಸುವುದು. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಚಾಲಕರಿಗೆ ಉತ್ತಮ ಚಿಂತನೆ ಹಾಗೂ ಕ್ರಿಯಾತ್ಮಕ ಕೆಲಸಗಳಿಂದ ಉತ್ತಮ ಲಾಭ ಲಭಿಸುವುದು. ಆಮದು ಮತ್ತು ರಫ್ತು ವ್ಯಾಪಾರದಲ್ಲಿ ವಿಪರೀತವಾದ ಧನಾಕರ್ಷಣೆಯನ್ನು ಪಡೆಯಬಹುದು. ಇನ್ನಷ್ಟು ಲಾಭ ಹಾಗೂ ಸಮೃದ್ಧ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ದೇವಿಯ ಸ್ಮರಣೆ ಮಾಡಿ.

ಮೀನ: 20 ಫೆಬ್ರವರಿ -20 ಮಾರ್ಚ್
ಮಾಡಬೇಕೆಂದುಕೊಂಡ ಕಾರ್ಯದಲ್ಲಿ ಯಶಸ್ಸು ಕಾಣುವಿರಿ. ಮನೆಯಲ್ಲಿ ನೆಮ್ಮದಿ. ಮನಸ್ಸಿಗೆ ಶಾಂತಿ ಲಭಿಸುವುದು. ಮೂರನೇ ವ್ಯಕ್ತಿಯ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗದಿರಿ. ಸಾಲ ನೀಡುವುದು ಅಥವಾ ಪಡೆಯುವ ಪರಿಗೆ ಮುಂದಾಗದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಶಿವ ಮತ್ತು ದೇವಿಯ ಆರಾಧನೆ ಮಾಡಿ.



Click it and Unblock the Notifications











