Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್ 10, ಶುಕ್ರವಾರದ ದಿನ ಭವಿಷ್ಯ
ಪ್ರತಿಯೊಬ್ಬರಿಗೂ ತಾವು ಭವಿಷ್ಯದಲ್ಲಿ ಒಳ್ಳೆಯ ಜೀವನ ಸಾಗಿಸಬೇಕು ಮತ್ತು ಹೆಚ್ಚಿನ ಹಣ ಸಂಪಾದಿಸಬೇಕು ಎನ್ನುವ ಹಂಬಲ ಇದ್ದೇ ಇರುತ್ತದೆ. ಆದರೆ ಇದನ್ನು ತಿಳಿಯುವುದು ಹೇಗೆ? ಭಾರತೀಯರು ಹಿಂದಿನಿಂದಲೂ ಭವಿಷ್ಯ ತಿಳಿಯಲು ಜ್ಯೋತಿಷ್ಯ ಶಾಸ್ತ್ರ ನೆಚ್ಚಿಕೊಂಡಿದ್ದರು. ಭಾರತೀಯರು ಹಿಂದಿನಿಂದಲೂ ಜ್ಯೋತಿಷ್ಯವೆನ್ನುವುದು ತುಂಬಾ ಪ್ರಬಲ ವಿಜ್ಞಾನ. ಇದರ ಮೂಲಕ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯ ಹೇಗಿರುತ್ತದೆಯಾ ಎನ್ನುವ ಕುತೂಹಲ ಇದ್ದೇ ಇರುತ್ತದೆ. ನಿಮ್ಮ ಪ್ರತಿನಿತ್ಯದ ಆಗುಹೋಗುಗಳು ಯಾವ ರೀತಿ ಸಾಗಲಿದೆ ಎನ್ನುವ ಬಗ್ಗೆ ನಾವು ನಿಮಗೆ ನಿಮ್ಮ ರಾಶಿ ಮೂಲಕ ಹೇಳಲಿದ್ದೇವೆ. ನಿಮ್ಮ ದಿನಭವಿಷ್ಯ ಹೇಗಿದೆ ಎಂದು ತಿಳಿಯಲು ಮುಂದೆ ಓದುತ್ತಾ ಸಾಗಿ.

ಮೇಷ
ನೀವು ಇಂದು ಮಾಡುವಂತಹ ರಾಜಕೀಯ ಪ್ರಯತ್ನಗಳು ಯಶಸ್ಸು ನೀಡಲಿದೆ. ನಿಮ್ಮ ಹಿರಿಯರ ಮಾತು ಕೇಳಿದರೆ ಅದರಿಂದ ನಿಮಗೆ ಒಳ್ಳೆಯ ಲಾಭವಾಗಲಿದೆ. ಕಿರಿಯರ ಯಶಸ್ಸು ಇಂದು ನಿಮ್ಮ ಕುಟುಂಬದ ಗೌರವಕ್ಕೆ ಕಾರಣವಾಗಲಿದೆ. ಕೇಸರಿ ಬಣ್ಣದ ತಿಲಕವಿಟ್ಟರೆ ಅದರಿಂದ ಅದೃಷ್ಟವು ಒಲಿಯುವುದು.

ವೃಷಭ
ಇಂದು ಕೆಲವೊಂದು ಏರಿಳಿತಗಳು ನಿಮ್ಮ ಜೀವನದಲ್ಲಿರಲಿದೆ. ಪ್ರೀತಿಯಲ್ಲಿ ಸಿಲುಕಿರುವ ವ್ಯಕ್ತಿಗಳಿಗೆ ಇಂದು ದೊಡ್ಡ ಯಶಸ್ಸು ಸಿಗಲಿದೆ. ಹಳೆಯ ಗೆಳೆಯ ಅಥವಾ ಸಂಬಂಧಿಕರನ್ನು ಭೇಟಿಯಾಗುವುದು ಫಲಪ್ರದವಾಗಲಿದೆ.

ಮಿಥುನ
ನಿಮ್ಮ ರಾಶಿಗೆ ಇಂದು ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಡದು. ಹಳೆಯ ಸಮಸ್ಯೆ ಅಥವಾ ತೊಂದರೆಗಳು ನಿವಾರಣೆಯಾಗುವುದು. ಹಳೆಯ ಶತ್ರು ನಿಮಗೆ ಹಠಾತ್ ಆಗಿ ತೊಂದರೆ ನೀಡಬಹುದು. ಇದರ ಬಗ್ಗೆ ಎಚ್ಚರದಿಂದ ಇರಿ. ಶಿವನಿಗೆ ಬಿಲ್ವ ಪತ್ರ ಅರ್ಪಿಸುವುದರಿಂದ ಸಮಸ್ಯೆ ನಿವಾರಣೆಯಾಗುವುದು.

ಕರ್ಕಾಟಕ
ಸ್ನೇಹಿತರು ಹಾಗೂ ಕುಟುಂಬದವರು ಇಂದು ನಿಮ್ಮ ನೆರವಿಗೆ ಧಾವಿಸಿ ಬರುವರು. ಇಂದು ನಿಮಗೆ ಆರ್ಥಿಕವಾಗಿ ಲಾಭವಾಗುವ ದಿನವಾಗಿರುವುದು. ದಕ್ಷಿಣವರ್ತಿ ಶಂಖದಲ್ಲಿ ನೀರು ತುಂಬಿಸಿ ಅದನ್ನು ನಿಮಗೆ ಹಾಗೂ ನಿಮ್ಮ ಮನೆಗೆ ಚುಮುಕಿಸಿದರೆ ತುಂಬಾ ಒಳ್ಳೆಯದು. ಇದರಿಂದ ಭವಿಷ್ಯದಲ್ಲಿ ನಿಮಗೆ ಹೆಚ್ಚಿನ ಧನಲಾಭವಾಗುವುದು.

ಸಿಂಹ
ನಿಮ್ಮ ಸಾಮಾಜಿಕ ಜೀವನದಲ್ಲಿ ಇಂದು ಯಶಸ್ಸು ಸಿಗಲಿದೆ. ಪ್ರಯಾಣ ಮತ್ತು ಹೊಸ ವಾಹನ ಖರೀದಿಯ ನಿರೀಕ್ಷೆಯಿದೆ. ಈ ವಾಹನವು ನಿಮಗೆ ತುಂಬಾ ಅದೃಷ್ಟ ತರಲಿದೆ. ಹೊಸ ವಾಹನ ಖರೀದಿಸಿದ ಬಳಿಕ ನೀವು ಸಂಪ್ರದಾಯದ ಪ್ರಕಾರ ಅದಕ್ಕೆ ಒಳ್ಳೆಯ ರೀತಿ ಪೂಜೆ ಮಾಡಿಸಿ.

ಕನ್ಯಾ
ಕೆಲಸದ ಜಾಗದಲ್ಲಿ ಯಾರೊಂದಿಗಾದರೂ ವಾಗ್ವಾದ ನಡೆದರೆ ಅದನ್ನು ಮುಂದುವರಿಸಿಕೊಂಡು ಹೋಗಬೇಡಿ. ಹೀಗೆ ಮಾಡಿದರೆ ಅದು ದೊಡ್ಡ ವಿಷಯವಾಗಬಹುದು. ನಿಮ್ಮ ತಾಯಿಯ ಆರೋಗ್ಯದ ಕಡೆಗೆ ಗಮನವಿರಿಸಿ.

ತುಲಾ
ಹಿರಿಯರೊಂದಿಗೆ ನೀವು ಇಂದು ವಾಗ್ವಾದದಲ್ಲಿ ತೊಡಗಿಕೊಳ್ಳುತ್ತೀರಿ ಎನ್ನುವುದು ನಿಮ್ಮ ರಾಶಿಭವಿಷ್ಯವು ಹೇಳುತ್ತಿದೆ. ವೃತ್ತಿ ಜೀವನವು ಉತ್ತಮವಾಗಿರಲಿದೆ. ವ್ಯಯದ ಬಗ್ಗೆ ಗಮನಹರಿಸಿದರೆ ನಿಮ್ಮ ಆದಾಯವು ಹೆಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ.

ವೃಶ್ಚಿಕ
ವ್ಯಾಪಾರದಲ್ಲಿನ ನಿಮ್ಮ ಜತೆಗಾರರು ನಿಮಗಿಂದು ಮೋಸ ಮಾಡುವರು. ಇದನ್ನು ಹೊರತುಪಡಿಸಿ ವ್ಯಾಪಾರವು ಫಲಪ್ರದವಾಗಿರಲಿದೆ. ನೀವು ಯಾವುದೇ ಹೊಸ ವ್ಯಾಪಾರ ಆರಂಭಿಸಬೇಕೆಂದಿದ್ದರೆ ಅದರ ಬಗ್ಗೆ ಎಚ್ಚರಿಕೆ ವಹಿಸುವುದು ಅತೀ ಅಗತ್ಯ. ಅದರ ನೀತಿ ಮತ್ತು ನಿಯಮಾವಳಿಗಳನ್ನು ಸರಿಯಾಗಿ ತಿಳಿದುಕೊಳ್ಳಿ. ಒಳ್ಳೆಯ ಅದೃಷ್ಟ ಪಡೆಯಲು ನಾಭಿಗೆ ಕೇಸರಿ ತಿಲಕವಿಡಿ.

ಧನು
ಇಂದು ನಿಮಗೆ ಕುಟುಂಬ ಸದಸ್ಯರಿಗೆ ನೆರವು ಸಿಗಲಿದೆ. ನೀವು ಮಾಡುವಂತಹ ಪ್ರಯಾಣವು ನಿಮಗಿಂದು ಹೆಚ್ಚಿನ ಯಶಸ್ಸನ್ನು ತಂದುಕೊಡಲಿದೆ. ತುಂಬಾ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಕೆಲಸವು ನಿಮ್ಮ ಹಳೆಯ ಸ್ನೇಹಿತನಿಂದಾಗಿ ಪೂರ್ತಿಯಾಗಲಿದೆ.

ಮಕರ
ಇಂದು ನಿಮಗೆ ಯಶಸ್ಸು ಸಿಗುವುದು ಖಚಿತ. ನಿಮ್ಮ ಪ್ರಯಾಣವು ಫಲಪ್ರದವಾಗಿರಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವುದು ಕಂಡುಬರುತ್ತಿದೆ. ಆರೋಗ್ಯ ಸಮಸ್ಯೆಯು ನಿಮಗೆ ಚಿಂತೆ ಉಂಟು ಮಾಡಬಹುದು. ಇದರ ಬಗ್ಗೆ ಎಚ್ಚರಿಕೆಯಿಂದ ಇರಿ. ನಕಾರಾತ್ಮಕ ಶಕ್ತಿ ಹೋಗಲಾಡಿಸಲು ಮತ್ತು ಒಳ್ಳೆಯ ಅದೃಷ್ಟ ಪಡೆಯಲು ಶನಿ ದೇವರಿಗೆ ಬದನೆಕಾಯಿ ಅರ್ಪಿಸಿ.

ಕುಂಭ
ತುಂಬಾ ಯೋಜನಾಬದ್ಧವಾಗಿ ಆರಂಭಿಸುವ ವ್ಯಾಪಾರವು ನಿಮಗೆ ಒಳ್ಳೆಯ ಪ್ರತಿಫಲ ನೀಡಲಿದೆ. ಯಾವುದೇ ಹೊಸ ವಿಚಾರ ಒಪ್ಪಿಕೊಳ್ಳುವ ಮೊದಲು ಇದರ ಬಗ್ಗೆ ಹಲವಾರು ಸಲ ಯೋಚನೆ ಮಾಡಿ. ಹಿರಿಯರಿಂದ ಈ ವಿಚಾರವಾಗಿ ಸಲಹೆ ಪಡೆಯುವುದು ಸೂಕ್ತ.

ಮೀನ
ನಿಮಗಿಂದು ತುಂಬಾ ಒಳ್ಳೆಯ ದಿನವಾಗಿರಲಿದೆ. ಸಂಗಾತಿಯಿಂದ ನಿಮಗೆ ಬೆಂಬಲ ಸಿಗಲಿದೆ. ದಿನದಲ್ಲಿ ನಿಮಗೆ ತುಂಬಾ ಬಳಲಿಕೆ ಕಂಡುಬರಲಿದೆ. ವಿಶ್ರಾಂತಿಯಿಲ್ಲದೆ ಮನಸ್ಥಿತಿಯು ಹಾಳಾಗುವುದು. ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸುವುದರಿಂದ ನಿಮ್ಮ ಸಮಸ್ಯೆಗಳು ಕಡಿಮೆಯಾಗುವುದು.



Click it and Unblock the Notifications











