For Quick Alerts
ALLOW NOTIFICATIONS  
For Daily Alerts

ನೋಡಿ, ಈ ವಸ್ತುಗಳನ್ನೆಲ್ಲಾ ಸಾಲವಾಗಿ ಕೊಡಲೂಬಾರದು, ಪಡೆಯಲೂಬಾರದು!

By Arshad
|

ಸಾಮಾನ್ಯವಾಗಿ ಪುಸ್ತಕಗಳನ್ನು ಓದಲೆಂದು ಎರವಲು ಪಡೆದವರು ಹಿಂದಿರುಗಿಸುವುದನ್ನೇ ಮರೆತುಬಿಡುತ್ತಾರೆ. ನಿಮಗೆ ಇಷ್ಟವಾದ ಪುಸ್ತಕ ಅಥವಾ ಬೇರಾವುದೋ ವಸ್ತು ಇನ್ನೊಬ್ಬರೂ ಓದಿ ಅಥವಾ ಉಪಯೋಗಿಸಿ ಪ್ರಯೋಜನ ಪಡೆದುಕೊಳ್ಳಲಿ ಎಂಬ ನಿಮ್ಮ ನಿಃಸ್ವಾರ್ಥ ಮನೋಭಾವ ನಿಮ್ಮ ಮನಕ್ಕೆ ಉಲ್ಲಾಸ ನೀಡಿದರೂ ಇದನ್ನು ಪಡೆದವರೂ ನಿಮ್ಮಂತಹ ಮನೋಭಾವವನ್ನೇ ಹೊಂದಿರಬೇಕೆಂದಿಲ್ಲ. ಎಷ್ಟೋ ಸಲ, ಅಗತ್ಯಕ್ಕನುಗುಣವಾಗಿ ನಮ್ಮ ಅಕ್ಕಪಕ್ಕದವರಿಂದ ಪೆನ್ನು, ವಾಚು, ಕರ್ಚೀಫು, ವೃತ್ತಪತ್ರಿಕೆ ಇತ್ಯಾದಿಗಳನ್ನು ಎರವಲು ಪಡೆದು ಹಿಂದಿರುಗಿಸುವುದನ್ನೇ ಮರೆತು ಬಿಡುತ್ತೇವೆ.

ಸಾರ್ವಜನಿಕ ಸ್ಥಳಗಳಲ್ಲಿ ಇದು ಆಗುವುದು ಹೆಚ್ಚು. ಕೊಟ್ಟವರೂ ಅಷ್ಟೇ, ವಸ್ತುಗಳನ್ನು ಕೊಟ್ಟ ಬಳಿಕ ಯಾವುದೋ ಯೋಚನೆಯಲ್ಲಿದ್ದು ಪಡೆದವರಿಂದ ತಮ್ಮ ವಸ್ತುಗಳನ್ನು ಹಿಂದೆ ಪಡೆಯಲು ಮರೆಯುತ್ತಾರೆ ಅಥವಾ ಹಾಗೇ ತಮ್ಮ ದಾರಿ ಹಿಡಿದುಬಿಡುತ್ತಾರೆ. ಆದರೆ ಈ ಪ್ರಕ್ರಿಯೆಯಲ್ಲಿಯೂ ಕೆಲವೊಂದು ರಹಸ್ಯಾತ್ಮಕ ಶಕ್ತಿಗಳು ತಮ್ಮ ಕೆಲಸ ಮಾಡಿವೆ ಎಂದು ಕೊಟ್ಟವರಿಗೂ, ಪಡೆದವರಿಗೂ ಗೊತ್ತೇ ಇರುವುದಿಲ್ಲ!

ಉದಾಹರಣೆಗೆ, ಕೆಲವು ಖ್ಯಾತ ವ್ಯಕ್ತಿಗಳು ತಮ್ಮ ಪುಸ್ತಕಗಳನ್ನು ಸರ್ವಥಾ ಇನ್ನೊಬ್ಬರಿಗೆ ನೀಡುವುದಿಲ್ಲ. ಪುಸ್ತಕಗಳನ್ನು ಹಂಚಿಕೊಳ್ಳುವುದರಿಂದ ಪಡೆದ ಜ್ಞಾನ ಹೊರಟು ಹೋಗುತ್ತದೆ ಎಂದು ಇವರು ಭಾವಿಸುತ್ತಾರೆ. ಇದೇ ಪ್ರಕ್ರಿಯೆ ಗೆಜ್ಜೆಗಳ ವಿಷಯದಲ್ಲಿಯೂ ಇದೆ. ನೃತ್ಯಪಟುಗಳು ತಮ್ಮ ಗೆಜ್ಜೆಗಳನ್ನು ಸರ್ವಥಾ ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಿಲ್ಲ. ಇದರಿಂದ ತಮ್ಮ ಪ್ರತಿಭ ಹಾಗೂ ನರ್ತನೆ ಇನ್ನೊಬ್ಬರಿಗೆ ದಾಟುತ್ತದೆ ಎಂದು ಭಾವಿಸುತ್ತಾರೆ.

ಅರಿವಿಲ್ಲದೇ ಯಾವುದಾದರೊಂದು ವಸ್ತುವನ್ನು ಸಾಲವಾಗಿ ಪಡೆಯುವುದರಿಂದ ಈ ವಸ್ತುಗಳನ್ನು ಪಡೆದ ವ್ಯಕ್ತಿಗೆ ದುರಾದೃಷ್ಟ ಎದುರಾಗುತ್ತದೆ, ಹೀಗೆ ಪಡೆದವರಿಗೆ ಆರೋಗ್ಯ, ಹಣಕಾಸಿನ ತೊಂದರೆಗಳು ಎದುರಾಗುತ್ತವೆ ಎಂದು ನಮ್ಮ ಹಿರಿಯರು ಭಾವಿಸಿದ್ದಾರೆ. ಹಿರಿಯರು ನಂಬಿಕೊಂಡು ಬಂದಿರುವ ಈ ನಂಬಿಕೆ ಸತ್ಯವೋ ಸುಳ್ಳೋ ಎಂದು ವ್ಯಾಖ್ಯಾನಿಸುವ ಬದಲು ನಮ್ಮ ಹಿರಿಯರು ಯಾವ ವಸ್ತುಗಳನ್ನು ಎರವಲು ಪಡೆಯುವುದರಿಂದ ನಮ್ಮನ್ನು ತಡೆಯುತ್ತಾರೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ....

ಲೇಖನಿ

ಲೇಖನಿ

ಕೆಲವೊಂದು ಮೂಢನಂಬಿಕೆಗಳ ಪ್ರಕಾರ, ನೀವೆಂದೂ ಇತರರಿಂದ ಲೇಖನಿಯನ್ನು ಎರವಲು ಪಡೆಯಬಾರದು! ಇದಕ್ಕೆ ಸಂಬಂಧಿಸಿದ ದಂತಕತೆಗಳ ಪ್ರಕಾರ ಇತರರಿಂದ ಪೆನ್ನು ಪಡೆದು ತಮ್ಮದಾಗಿಸಿಕೊಳ್ಳುವ ಮೂಲಕ ಆರ್ಥಿಕ ದಿವಾಳಿತನ ಎದುರಾಗುತ್ತದೆ. ಈ ನಂಬಿಕೆ ಶತಮಾನಗಳಿಂದ ನಂಬಿಕೊಂಡು ಬರಲಾಗಿದ್ದು ನಿಮ್ಮ ಲೇಖನಿ ನಿಮ್ಮ ಉತ್ತಮ ಕರ್ಮದ ಫಲ ಎಂದೂ ಹೇಳಲಾಗುತ್ತದೆ. ಆದ್ದರಿಂದ ನಿಮ್ಮ ಲೇಖನಿಯನ್ನು ಇತರರಿಗೆ ಎರವಲು ಅಥವಾ ದಾನ ನೀಡುವ ಮೂಲಕ ನಿಮ್ಮ ಕರ್ಮವನ್ನೂ ಇತರರೊಂದಿಗೆ ಹಂಚಿಕೊಂಡಂತಾಗುತ್ತದೆ ಎಂದು ನಂಬಲಾಗಿದೆ.

ಕೈಗಡಿಯಾರ

ಕೈಗಡಿಯಾರ

ದಂತಕಥೆ ಹಾಗೂ ಮೂಢನಂಬಿಕೆಗಳ ಇನ್ನೊಂದು ಮಗ್ಗುಲಲ್ಲಿ ಕೈಗಡಿಯಾರಗಳನ್ನೂ ಎರವಲು ಪಡೆಯಬಾರದು ಎಂದು ಹೇಳಲಾಗಿದೆ. ಇನ್ನೊಬ್ಬರ ಕೈಗಡಿಯಾರವನ್ನು ಕಟ್ಟಿಕೊಳ್ಳುವ ಮೂಲಕ ನಿಮ್ಮ ವೃತ್ತಿಪರ ಜೀವನದಲ್ಲಿ ತೊಂದರೆ ಹಾಗೂ ಹಣಕಾಸಿನ ವಿಷಯದಲ್ಲಿಯೂ ತೊಂದರೆ ಹಾಗೂ ನಷ್ಟ ಎದುರಾಗಬಹುದು. ಆದ್ದರಿಂದ ಒಂದು ವೇಳೆ ನಿಮಗೆ ನೆಮ್ಮದಿಯ ಹಾಗೂ ಆರ್ಥಿಕವಾಗಿ ಸುದೃಢ ಜೀವನ ಬೇಕಾದರೆ ಎಂದಿಗೂ ಕೈಗಡಿಯಾರವನ್ನು ಎರವಲು ಪಡೆಯಲೂಬಾರದು, ನೀಡಲೂಬಾರದು.

ಮದುವೆಯ ಹಣ

ಮದುವೆಯ ಹಣ

ಒಂದು ವೇಳೆ ನಿಮ್ಮ ಮನೆಯಲ್ಲಿ ನಡೆಯುವ ಮದುವೆ ಅದ್ದೂರಿಯಾಗಿರಬೇಂದು ನಿಮಗೆ ಅನ್ನಿಸಿದ್ದರೆ ಇದಕ್ಕೆ ಅಗತ್ಯವಾದ ಹಣವನ್ನೂ ನೀವೇ ಸ್ವತಃ ಹೊಂದಿಸಿಕೊಳ್ಳಬೇಕು. ಈ ಹಣವನ್ನು ಎಂದಿಗೂ ಎರವಲು ಪಡೆಯಬಾರದು ಅಥವಾ ಇದೇ ಅಗತ್ಯವುಳ್ಳ ಇತರರಿಗೆ ಎರವಲು ನೀಡಲೂಬಾರದು. ಏಕೆಂದರೆ ಎರವಲು ಪಡೆದು ಪ್ರಾರಂಭಿಸಿದ ವಿವಾಹಜೀವನದಲ್ಲಿ ಸದಾ ಆರ್ಥಿಕ ನಷ್ಟಗಳು ತುಂಬಿರುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಮದುವೆಗೂ ಮುನ್ನ ಅಗತ್ಯವಿದ್ದಷ್ಟು ಹಣವನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹೊಂದಿದ್ದು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮಾತ್ರವೇ ಖರ್ಚು ಮಾಡುವುದು ಜಾಣತನ.

ನಿಶ್ಚಿತಾರ್ಥದ ಉಂಗುರ ಖರೀದಿಸಲು ಎಂದು ಹಣ ಸಾಲ ಪಡೆಯಬಾರದು

ನಿಶ್ಚಿತಾರ್ಥದ ಉಂಗುರ ಖರೀದಿಸಲು ಎಂದು ಹಣ ಸಾಲ ಪಡೆಯಬಾರದು

ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ವಿಶೇಷವಾಗಿ ಜೀವನಸಂಗಾತಿಯಾಗಿ ಆರಿಸಿಕೊಳ್ಳುವ ವ್ಯಕ್ತಿಗೆ ತೊಡಿಸುವ ಉಂಗುರವನ್ನು ಸರ್ವಥಾ ಸಾಲ ಪಡೆದ ಹಣದಲ್ಲಿ ಖರೀದಿಸಬಾರದು. ಒಂದು ವೇಳೆ ನಿಮ್ಮ ಜೀವನಸಂಗಾತಿ ನಿಮ್ಮನ್ನು ಇಷ್ಟಪಟ್ಟಿದ್ದು ನಿಮ್ಮನ್ನು ವರಿಸಲು ಸಿದ್ಧಳಾಗಿದ್ದರೆ ಈ ಉಂಗುರ ಕೋಟಿ ರೂಪಾಯಿ ಬೆಲೆಬಾಳದೇ, ನಿಮ್ಮ ಸಾಮರ್ಥ್ಯಕ್ಕೆ ಸೂಕ್ತವಾದ ಉಂಗುರ ಇದ್ದರೂ ಸರಿ, ನಿಶ್ಚಿತಾರ್ಥಕ್ಕೆ ಸಿದ್ಧಳಾಗುತ್ತಾಳೆ. ಇದಕ್ಕೆ ಪ್ರೀತಿ ಹಾಗೂ ವಿಶ್ವಾಸವೇ ಕಾರಣವೇ ಹೊರತು ಉಂಗುರದ ಬೆಲೆಯಲ್ಲ! ಅಷ್ಟಕ್ಕೂ ಮುಂದಿನ ಐದು ವರ್ಷಗಳ ಸಂಪಾದನೆಯನ್ನು ಕಬಳಿಸುವ ಒಂದು ಉಂಗುರವನ್ನು ನಿಶ್ಚಿತಾರ್ಥದಲ್ಲಿ ಪಡೆಯಲು ಆತ್ಮಾಭಿಮಾನವುಳ್ಳ ಯಾವುದೇ ವ್ಯಕ್ತಿ ಒಪ್ಪಿಕೊಳ್ಳುವುದಿಲ್ಲ.

ಪುಸ್ತಕಗಳು

ಪುಸ್ತಕಗಳು

ಪುಸ್ತಕಗಳು ಜ್ಞಾನದ ಭಂಡಾರ ಎಂದು ಎಲ್ಲರೂ ನಿರ್ವಿವಾದವಾಗಿ ಒಪ್ಪುತ್ತೇವೆ. ಆದರೆ ಈ ಪುಸ್ತಕಳನ್ನೆಂದೂ ಎರವಲು ಪಡೆಯಬಾರದು ಅಥವಾ ನೀಡಬಾರದು. ಒಂದು ವೇಳೆ ನಿಮ್ಮ ಆತ್ಮೀಯರೇ ನಿಮ್ಮಲ್ಲಿರುವ ಪುಸ್ತಕವನ್ನು ಕೇಳಿದಾದ ಇವರಿಗೆ ಇಲ್ಲವೆನ್ನಲೂ ಆಗುವುದಿಲ್ಲ, ಪುಸ್ತಕ ಕೊಡುವಂತೆಯೂ ಇಲ್ಲ!. ಈ ಪರಿಸ್ಥಿತಿಯಲ್ಲಿ ಹೊಸ ಪುಸ್ತಕವೊಂದನ್ನು ಖರೀದಿಸಿ ಅವರಿಗೆ ಉಡುಗೊರೆಯಾಗಿ ನೀಡುವುದೇ ಉತ್ತಮ. ನಿಮಗಾಗಿ ಎಂದು ಖರೀದಿಸಿದ ಪುಸ್ತಕದ ಜ್ಞಾನವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಮೂಲಕ ಅಥವಾ ದಾನವಾಗಿ ನೀಡುವ ಮೂಲಕ ನಿಮ್ಮ ಜ್ಞಾನವನ್ನು ಇನ್ನೊಬ್ಬರು ಸೆಳೆಯುತ್ತಾರೆ ಎಂದು ಭಾವಿಸಲಾಗುತ್ತದೆ.

ಉಪಯೋಗಿಸಿದ ಬಟ್ಟೆಗಳು

ಉಪಯೋಗಿಸಿದ ಬಟ್ಟೆಗಳು

ಒಂದು ವೇಳೆ ನಿಮ್ಮ ಮನೆಯಲ್ಲಿ ಒಬ್ಬರ ಬಟ್ಟೆಗಳನ್ನು ಇನ್ನೊಬ್ಬರು ತೊಟ್ಟುಕೊಳ್ಳುವ ಅಭ್ಯಾಸವಿದ್ದರೆ ಈ ಬಗ್ಗೆ ಕೊಂಚ ಎಚ್ಚರ ವಹಿಸುವುದು ಅಗತ್ಯ. ದಂತಕಥೆಗಳ ಪ್ರಕಾರ ಇನೊಬ್ಬರ ಬಟ್ಟೆಗಳನ್ನು ಎರವಲು ಪಡೆದು ತೊಟ್ಟುಕೊಳ್ಳುವ ಮೂಲಕ ದುರಾದೃಷ್ಟವನ್ನು ಮೈಮೇಲೆ ಧರಿಸಿಕೊಂಡಂತಾಗುತ್ತದೆ ಹಾಗೂ ಋಣಾತ್ಮಕ ಕಂಪನಗಳನ್ನು ತಂದೊಡ್ಡುತ್ತವೆ. ಹಸ್ತಸಾಮುದ್ರಿಕೆಯ ಪ್ರಕಾರ ಉಡುಪುಗಳು ಶುಕ್ರಗ್ರಹಕ್ಕೆ ಸಂಬಂಧಿಸಿದ್ದು ಇನ್ನೊಬ್ಬರಿಗೆ ಸೇರಿದ ಬಟ್ಟೆಗಳನ್ನು ಎರವಲು ಪಡೆದು ತೊಡುವುದರಿಂದ ನಿಮ್ಮ ಗ್ರಹಬಲವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಇನ್ನೊಬ್ಬರಿಗೆ ಸೇರಿದ ಬಟ್ಟೆಗಳನ್ನು ಸರ್ವಥಾ ತೊಡಬಾರದು! ಅಷ್ಟೇ ಅಲ್ಲ, ನಿಮ್ಮ ಬಟ್ಟೆಗಳು, ಅದು ಯಕಃಶ್ಚಿತ್ ಒಂದು ಕರವಸ್ತ್ರವೇ ಆಗಿರಲಿ, ಇದನ್ನು ಎರವಲು ಕೊಡಬಾರದು ಅಥವಾ ಪಡೆಯಬಾರದು. ಒಂದು ವೇಳೆ ಅನಿವಾರ್ಯವಾಗಿ ಕರವಸ್ತ್ರ ನೀಡಬೇಕಾಗಿ ಬಂದರೆ ಹೊಸದನ್ನೇ ನೀಡುವುದು ಉತ್ತಮ. ಹೊಸ ಕರವಸ್ತ್ರವನ್ನು ನೀಡುವುದು ಒಳ್ಳೆಯದು ಎಂದು ನಂಬಲಾಗಿದೆ.

English summary

You Should Never Lend Or Borrow These Things

People pass on things very easily! Besides the feeling of love you show by lending things to others, there are many factors which can affect the energies of the body as it affects your and the borrower's destiny. We might borrow things like pen, watches and handkerchief and even keep them with ourselves without knowing there are some secret energies which may affect your destiny.
X
Desktop Bottom Promotion