ಹಿಮಾಲಯದ ಈ 'ವಯಾಗ್ರಾ'ಕ್ಕಾಗಿ ಹಿ೦ಸೆ, ಕೊಲೆಗಳೇ ನಡೆಯುತ್ತವೆಯಂತೆ!

Posted By: Arshad
Subscribe to Boldsky

ಒಂದು ಹಂತದ ವಯಸ್ಸು ದಾಟಿದ ಬಳಿಕ ಸ್ವಾಭಾವಿಕವಾಗಿ ಕಡಿಮೆಯಾಗುವ ಲೈಂಗಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಹೆಚ್ಚಿಸಲು ವಯಾಗ್ರಾ ಎಂಬ ಅದ್ಭುತ ಔಷಧಿ ಎಷ್ಟೋ ಜನರಿಗೆ ಉಪಯುಕ್ತವಾಗಿದೆ. ಆದರೆ ಇದು ದುಬಾರಿಯಾಗಿರುವ ಕಾರಣ ಇದಕ್ಕೆ ಪರ್ಯಾಯವಾದ ಔಷಧಿಗಳತ್ತ ಹಲವರು ಇಣುಕುನೋಟ ಬೀರುತ್ತಲೇ ಇರುತ್ತಾರೆ.

ಒಂದು ವೇಳೆ ಇದಕ್ಕೆ ಸರಿಸಮಾನಾದ ಸಾಮರ್ಥ್ಯದ ನೈಸರ್ಗಿಕ ಔಷಧಿಯೊಂದು ಇದ್ದರೆ? ಇದೆ, ನಿಸರ್ಗ ಇದಕ್ಕೂ ಒಂದು ಉತ್ತರವನ್ನು ನೀಡಿದ್ದು 'ಯರ್ಸಗುಂಬಾ' ಎಂಬ ಹೆಸರಿನ ಗಿಡಮೂಲಿಕೆಯ ಮೂಲಕ ಈ ಕೊರತೆಯನ್ನು ನೀಗಿಸಿದೆ. ಇದೊಂದು ಅತ್ಯುತ್ತಮ ನೈಸರ್ಗಿಕ ಕಾಮೋತ್ತೇಜಕವಾಗಿದ್ದು ಕೇವಲ ಹಿಮಾಲಯದ ತಪ್ಪಲಿನಲ್ಲಿ ಮಾತ್ರವೇ ಕಂಡುಬರುತ್ತದೆ.

ವಯಾಗ್ರ ಮಾತ್ರೆ: ನೀವು ತಿಳಿದಿರದ ಇಂಟರೆಸ್ಟಿಂಗ್ ಸಂಗತಿಗಳು!

Ophiocordyceps sinensis ಎಂಬ ವೈಜ್ಞಾನಿಕ ಹೆಸರಿನ ಈ ಗಿಡಮೂಲಿಕೆ ವಾಸ್ತವವಾಗಿ ಒಂದು ಶಿಲೀಂಧ್ರವಾಗಿದ್ದು ಒಂದು ಜಾತಿಯ ಕಂಬಳಿಹುಳಗಳ ಮರಿಗಳ ಗೂಡಿನ ಮೇಲೆ ಬೆಳೆದು ಈ ಗೂಡನ್ನು ಆವರಿಸಿ ಒಳಗಿನ ಮರಿಯನ್ನು ಕೊಂದು ಅದರ ದೇಹದ ದ್ರವವನ್ನು ಹೀರಿಕೊಂಡು ಬೆಳೆಯುತ್ತವೆ. ಈ ಗೂಡುಗಳು ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳ, ಭಾರತ, ಚೀನಾ ಪ್ರದೇಶದಲ್ಲಿ ಮಾತ್ರವೇ ಕಾಣಿಸುತ್ತವೆ. ಸುಮಾರು ಒಂದು ಬೆಂಕಿಕಡ್ಡಿಯಷ್ಟು ಉದ್ದವಿರುವ ಒಣಗಿದ ಒಣಮೆಣಸಿನ ಕಡ್ಡಿಯಂತೆ ತೋರುವ ಈ ಗೂಡುಗಳು ಕಾಮೋತ್ತೇಜಕವೆಂದು ಕಂಡುಕೊಳ್ಳಲಾದ ಬಳಿಕ ಇವನ್ನು ಪಡೆಯಲು ಹೋರಾಟಗಳೇ ನಡೆದಿದ್ದು ಹಲವರ ಹತ್ಯೆಯೂ ಆಗಿದೆ!

ವಯಾಗ್ರದಂತೆ ಕೆಲಸ ಮಾಡುವ 10 ಅದ್ಭುತ ಆಹಾರಗಳು

ಅಷ್ಟಕ್ಕೂ ಓರ್ವ ಮನುಷ್ಯನ ಜೀವಕ್ಕೇ ಮಾರಕವಾಗಬಹುದಾದದ್ದು ಏನಿದೆ ಇದರಲ್ಲಿ? ಇದು ವಯಾಗ್ರಾದಂತಹ ಕಾಮೋತ್ತೇಜಕವೂ ಹೌದು ಹಾಗೂ ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವುದು ಇನ್ನೊಂದು ದೊಡ್ಡ ಅಂಶವಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ...

ಯರ್ಸಗುಂಬಾ ಎಂದರೇನು?

ಯರ್ಸಗುಂಬಾ ಎಂದರೇನು?

ಹಿಮಾಲಯದ ತಪ್ಪಲಿನ ಅತಿ ಚಳಿಯೂ ಅಲ್ಲದ, ಅತಿ ಬೆಚ್ಚಗೂ ಅಲ್ಲದ ಪ್ರದೇಶಗಳಲ್ಲಿ ಹಳದಿ ಬಣ್ಣದ ಚಿಟ್ಟೆಗಳು ಇಡುವ ಮೊಟ್ಟೆಗಳು ಮರಿಯಾಗಿ ಕಂಬಳಿಹುಳಗಳಾಗಿ ಮಾರ್ಪಟ್ಟ ಬಳಿಕ ತಮ್ಮ ಸುತ್ತ ನೂಲಿನ ಗೂಡೊಂದನ್ನು ಕಟ್ಟಿಕೊಳ್ಳುತ್ತವೆ. ಮಳೆಗಾಲಕ್ಕೂ ಮುನ್ನ ಗಾಳಿಯಲ್ಲಿರುವ ತೇವಾಂಶದಲ್ಲಿ ಈ ಗೂಡುಗಳೂ ಕೊಂಚ ತೇವವಾಗಿದ್ದು ಈಗ ಶಿಲೀಂಧ್ರದ ಬೀಜಗಳಿಗೆ ಬೆಳೆಯಲು ಅತ್ಯುತ್ತಮವಾದ ನೆಲವಾಗುತ್ತದೆ. ಈ ಬೀಜಗಳು ಗೂಡಿನಲ್ಲಿ ಬೇರು ಬಿಟ್ಟು ನಿಧಾನವಾಗಿ ತಮಗೆ ಆಶ್ರಯ ಕೊಟ್ಟ ಈ ಗೂಡನ್ನು ಪೂರ್ಣವಾಗಿ ಆವರಿಸಿಕೊಳ್ಳುತ್ತವೆ. ಒಳಭಾಗದಲ್ಲಿರುವ ಮರಿ ಈಗ ಶಿಲೀಂಧ್ರದಿಂದ ಪೂರ್ಣವಾಗಿ ಆವರಿಸಲ್ಪಟ್ಟು ಸತ್ತು ಹೋಗುತ್ತದೆ. ಶಿಲೀಂಧ್ರದ ಬೇರುಗಳು ಈ ಕೀಟದ ದೇಹದೊಳಗೆ ಇಳಿದು ಒಳಗಿನ ದ್ರವವನ್ನು ಆಹಾರವಾಗಿ ಸೇವಿಸಿ ದಷ್ಟಪುಷ್ಟವಾಗಿ ಬೆಳೆಯುತ್ತವೆ. ಬೆಳೆಯುತ್ತಾ ಬೆಳೆಯುತ್ತಾ ಒಳಗಿನ ಕೀಟವನ್ನು ಪೂರ್ಣವಾಗಿ ಹೀರಿ ಈ ಗೂಡು ಈಗ ಗಾಳಿ ಕಳೆದುಕೊಂಡ ಬೆಲೂನಿನಂತೆ ಕುಗ್ಗಿ ಕಡ್ಡಿಯಂತಾಗುತ್ತದೆ. ಶಿಲೀಂಧ್ರಗಳೂ ಬೆಳೆದು ಬೀಜಪ್ರಸಾರ ಮಾಡಿದ ಬಳಿಕ ಈ ಗೂಡು ಒಣಗಿ ಕಂದುಬಣ್ಣಕ್ಕೆ ತಿರುಗಿ ಒಣಮೆಣಸಿನಂತೆ ಕಾಣುತ್ತದೆ.

ಇದು ಎಲ್ಲಿ ಕಾಣಸಿಗುತ್ತದೆ?

ಇದು ಎಲ್ಲಿ ಕಾಣಸಿಗುತ್ತದೆ?

ಹಿಮಾಲಯದ ತಪ್ಪಲಿನಲ್ಲಿರುವ ನೇಪಾಳದ ಭಾಗದಲ್ಲಿ ಹೆಚ್ಚು ಕಾಣಬರುತ್ತವೆ. ವಾಸ್ತವವಾಗಿ ನೇಪಾಳ ಭಾಷೆಯ ನೆರ್ಚಾಗುಂಬು ಎಂಬ ಹೆಸರೇ ಯರ್ಸಗುಂಬಾ ಎಂಬ ಹೆಸರನ್ನು ಪಡೆದಿದೆ. ಇದು ತೇವಾಂಶ ಕಳೆದ ಬಳಿಕದ ತಿಂಗಳು ಅಂದರೆ ಮೇ ಹಾಗೂ ಜುಲೈ ಕಡೆಯವಾರದ ವರೆಗೂ ಕಾಣಸಿಗುತ್ತವೆ. ಸುಮಾರು ಮೂರರಿಂದ ಐದು ಸಾವಿರ ಮೀಟರ್ ಎತ್ತರದ ಪ್ರದೇಶಗಳಲ್ಲಿರುವ ಭಾರತ, ನೇಪಾಳ, ಟಿಬೆಟ್ ದೇಶಗಳ ಪ್ರದೇಶದಲ್ಲಿರುವ ಇಟ್ಟು ಇಪ್ಪತ್ತೇಳು ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಇಲ್ಲಿ ಬಿಟ್ಟರೆ ಜಗತ್ತಿನ ಬೇರೆಲ್ಲೂ ಇವು ಕಾಣಸಿಗುವುದಿಲ್ಲ.

ಈ ಸಮಯದಲ್ಲಿ ಜನರು ದೌಡಾಯಿಸುತ್ತಾರೆ

ಈ ಸಮಯದಲ್ಲಿ ಜನರು ದೌಡಾಯಿಸುತ್ತಾರೆ

ಯಾವಾಗ ಈ ಗೂಡುಗಳು ಕಾಮೋತ್ತೇಜಕವೆಂದು ಕಂಡುಕೊಳ್ಳಲಾಯಿತೋ, ಆಗ ಜನರು ಇದನ್ನು ಸಂಗ್ರಹಿಸಲು ತಪ್ಪಲುಗಳಿಗೆ ದೌಡಾಯಿಸುತ್ತಾ ಬಂದಿದ್ದಾರೆ. ಪ್ರತಿವರ್ಷ ಹೀಗೆ ಜನರು ಸಂಗ್ರಹಿಸುವ ಗೂಡುಗಳ ಪ್ರಮಾಣ ಸುಮಾರು ೧೩೫ ಟನ್! ಈ ಅಮೂಲ್ಯ ಗೂಡುಗಳ ಒಡೆತನಕ್ಕಾಗಿ ಗುಂಪುಗಳ ನಡುವೆ ಘರ್ಷಣೆ ನಡೆಯುವುದೂ ಸಾಮಾನ್ಯವಾಗಿದ್ದು ಈ ಕಲಹಗಳು ಕೆಲವರ ಪ್ರಾಣಹಾನಿಗೂ ಕಾರಣವಾಗಿವೆ.

ಸಂಗ್ರಹ ಅಷ್ಟು ಸುಲಭವಲ್ಲ

ಸಂಗ್ರಹ ಅಷ್ಟು ಸುಲಭವಲ್ಲ

ಈ ಗೂಡುಗಳನ್ನು ಸಂಗ್ರಹಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಈ ತಪ್ಪಲಿನಲ್ಲಿ ಗೂಡುಗಳನ್ನು ಹುಡುಕುವಾಗ ಹಲವಾರು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಜಾರುವ ಇಳಿಜಾರಿನಲ್ಲಿ ಒಂದು ಹೆಜ್ಜೆ ತಪ್ಪಿದರೂ ಕೊರಕಲಿನಲ್ಲಿ ಬಿದ್ದು ಸಾವಿಗೀಡಾಗಬಹುದು. ಉಕ್ಕೇರಿ ಹರಿಯುತ್ತಿರುವ ನದಿಗಳಲ್ಲಿ ಕೊಚ್ಚಿ ಹೋಗಬಹುದು, ಕಾಲ ಕೆಳಗಿನ ಮಂಜಿನ ಪದರವೇ ಅಡ್ಡಜಾರಿ ಬೆಟ್ಟದ ಅಂಚಿನಿಂದ ಬೀಳಬಹುದು. ಅಷ್ಟೇ ಅಲ್ಲ, ಈ ದುಬಾರಿ ವಯಾಗ್ರಾವನ್ನು ಮನೆಯಲ್ಲಿಟ್ಟುಕೊಂಡರೂ ಇದನ್ನು ಕದಿಯಲು ಹವಣಿಸುವವರಿಂದಲೂ ಅಪಾಯ ಇದ್ದೇ ಇರುತ್ತದೆ.

ಇದು ಸಾವಿರಾರು ಡಾಲರ್ ಬೆಲೆಬಾಳುವ ಸಾಮಾಗ್ರಿ

ಇದು ಸಾವಿರಾರು ಡಾಲರ್ ಬೆಲೆಬಾಳುವ ಸಾಮಾಗ್ರಿ

ನೇಪಾಳದಲ್ಲಿ ಈ ಗೂಡುಗಳನ್ನು ಸಂಗ್ರಹಿಸುವುದೊಂದು ಉಪಕಸುಬಾಗಿದ್ದು ಇದನ್ನು ಸಂಗ್ರಹಿಸುವವರು ತಮ್ಮ ಬ್ಯಾಂಕು ಖಾತೆಗಳಿಗೆ ಹಾಕುವ ಹಣದ ಸರಾಸರಿಯನ್ನು ಕಂಡುಕೊಂಡಾಗ ಪ್ರತಿಯೊಬ್ಬರೂ ಸುಮಾರು ಎರಡೂವರೆ ಸಾವಿರ ಡಾಲರು (ಸುಮಾರು 1,60,697.50ರೂ) ಜಮಾ ಮಾಡಿರುವುದನ್ನು ಗಮನಿಸಬಹುದು. ಇದು ಇವರ ವಾರ್ಷಿಕ ಗಳಿಕೆಯ 56 ಶೇಖಡಾದಷ್ಟು ಎಂದರೆ ಇದು ಗಮನಿಸಬೇಕಾದ ಅಂಶವೇ ಆಗಿದೆ. ಅಲ್ಲದೇ ಈ ಪ್ರದೇಶದಲ್ಲಿ ಆವರಿಸುವ ಬಡತನವನ್ನು ನಿವಾರಿಸಲು ಇದೊಂದು ಅಮೂಲ್ಯ ಕೊಡುಗೆಯೂ ಆಗಿದ್ದು ಈ ಜನರು ಈ ಮೂಲಕ ಗಳಿಸಿದ ಹಣದಿಂದ ವಿದ್ಯುತ್, ಆಸ್ಪತ್ರೆ, ಶಿಕ್ಷಣ ಮೊದಲಾದ ಮೂಲಸೌಕರ್ಯಗಳನ್ನೂ ಪಡೆದುಕೊಂಡಿದ್ದಾರೆ.

ಈ ಮೂಲಿಕೆ ಹೇಗೆ ಕೆಲಸ ಮಾಡುತ್ತದೆ?

ಈ ಮೂಲಿಕೆ ಹೇಗೆ ಕೆಲಸ ಮಾಡುತ್ತದೆ?

ಈ ಮೂಲಿಕೆಯಲ್ಲಿ ಹಲವಾರು ಪೋಷಕಾಂಶಗಳಿದ್ದರೂ ಇದರಲ್ಲಿರುವ ಕಾರ್ಡೈಸೆಪಿನ್ ಮತ್ತು ಕಾರ್ಡಿಸೆಪ್ಟಿಕ್ ಆಮ್ಲ (cordycepin and cordycepic acid) ಎಂಬ ಪೋಷಕಾಂಶಗಳು ಕಾಮೋತ್ತೇಜಕ ಗುಣಗಳನ್ನು ಹೊಂದಿವೆ. ಇದು ಕೊಂಚ ಅಣಬೆಯ ಮತ್ತು ಕೊಂಚವೇ ಸಿಹಿಯಾದ ರುಚಿಯನ್ನು ಹೊಂದಿದೆ. ಈ ಮೂಲಿಕೆಯನ್ನು ಹಾಗೆಯೇ ಅಥವಾ ಪುಡಿಮಾಡಿ ಹಾಲಿನೊಂದಿಗೆ ಅಥವಾ ನೀರಿನೊಂದಿಗೂ ಸೇವಿಸಬಹುದು. ಈ ಬಗ್ಗೆ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯ ಮೂಲಕ ಈ ಮೂಲಿಕೆಯನ್ನು ಸೇವಿಸಿದ ಬಳಿಕ ದೇಹದಲ್ಲಿ ಹೆಚ್ಚುವ ಆಂಡ್ರೋಜೆನ್ ಎಂಬ ಕಾಮೋತ್ತೇಜಕ ರಸದೂತ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವುದು ನಿಜ ಎಂದು ಕಂಡುಕೊಳ್ಳಲಾಗಿದೆ.

ಕಾಮೋತ್ತೇಜಕದ ಹೊರತಾಗಿ ಇದರ ಇತರ ಪ್ರಯೋಜನಗಳು

ಕಾಮೋತ್ತೇಜಕದ ಹೊರತಾಗಿ ಇದರ ಇತರ ಪ್ರಯೋಜನಗಳು

ಯರ್ಸಗುಂಬಾ ಕೇವಲ ಕಾಮೋತ್ತೇಜಕ ಮಾತ್ರವಲ್ಲ, ಬದಲಿಗೆ ಇದರಲ್ಲಿ ಶ್ವಾಸಕೋಶ ಹಾಗೂ ಶ್ವಾಸನಾಳಗಳ ಸೋಂಕನ್ನು ನಿವಾರಿಸುವ ಗುಣಗಳೂ ಇವೆ. ಅಲ್ಲದೇ ದೇಹದ ಒಳಗಣ ನೋವು, ಕಾಲುಗಳಲ್ಲಿ ಸಂವೇದನೆ ಇಲ್ಲದಿರುವ sciatica, ಬೆನ್ನುನೋವು ಮೊದಲಾದ ತೊಂದರೆಗಳಿಗೂ ಈ ಮೂಲಿಕೆ ಉತ್ತಮ ಔಷಧಿಯಾಗಿದೆ. ಅಲ್ಲದೇ ಒಟ್ಟಾರೆ ಆರೋಗ್ಯ ವೃದ್ದಿಸಲು ಹಾಗೂ ದೇಹದಾರ್ಢ್ಯತೆ ಹೆಚ್ಚಿಸಲೂ ಇದು ನೆರವಾಗುತ್ತದೆ. ಅಷ್ಟೇ ಅಲ್ಲ, ಮಾರಕ ಹೆಪಟೈಟಿಸ್ ಬಿ, ರೋಗ ನಿರೋಧಕ ವ್ಯವಸ್ಥೆ ಕುಸಿದಿರುವುದು, ಯಕೃತ್ ವೈಫಲ್ಯ ಮೊದಲಾದ ತೊಂದರೆಗಳಿಗೂ ಈ ಮೂಲಿಕೆ ಅದ್ಭುತವಾದ ಔಷಧಿಯಾಗಿದೆ.

All Image Source

For Quick Alerts
ALLOW NOTIFICATIONS
For Daily Alerts

    English summary

    Yarsagumba: The Viagra Drug That Is Found Only In The Himalayas!

    Viagra is a drug that people mostly depend on after a certain age, as it helps to improve their sexual life. Though this is one of the most used drugs, people still look out for other alternatives. And what better than finding out a natural Viagra that does not have any side effect? Well, 'Yarasagumba' is an ingredient that is also known as the Himalayan Viagra, which is known for its aphrodisiac properties.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more