For Quick Alerts
ALLOW NOTIFICATIONS  
For Daily Alerts

  ಈ ಮಹಿಳೆಯ ಕಾಲಿನಿಂದ ಸೂಜಿ, ಸಿರಿಂಜಿನ ಮುಳ್ಳು, ಪಿನ್ನುಗಳು ಹೊರಬರುತ್ತಿವೆ!

  By Arshad
  |

  ಭಾರತದಲ್ಲಿ ಓರ್ವ ಮಹಿಳೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜಿನ ಮುಳ್ಳುಗಳು ಹಾಗೂ ಪಿನ್ನುಗಳು ನಿಯಮಿತವಾಗಿ ಹೊರಗೆ ಬರುತ್ತಿವೆ ಎಂದು ಹೇಳಿಕೊಂಡಿದ್ದಾಳೆ. ಈ ತೊಂದರೆ ತನಗೆ ಕೆಲವು ಕಾಲದಿಂದಲೂ ಇದ್ದು ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.  ಆದರೆ ಕಾಲಿನಿಂದ ಸೂಜಿ ಹೊರಬರುವುದೆಂದರೆ? ಇದು ನೈಸರ್ಗಿಕವಂತೂ ಆಗಿರಲಿಕ್ಕಿಲ್ಲ.

  ಆಕೆಯೇ ತಾನೇ ಚುಚ್ಚಿಕೊಂಡು ಬಳಿಕ ಇದು ದೇಹದೊಳಗಿನಿಂದ ಬರುತ್ತಿದೆ ಎನ್ನುತ್ತಿದ್ದಾಳೆಯೇ? ಈ ಪ್ರಶ್ನೆಗೆ ಆಕೆ ಸ್ಪಷ್ಟವಾಗಿ ನಿರಾಕರಿಸುತ್ತಾ ಇವೆಲ್ಲವೂ ತಾವೇ ತಾವಾಗಿ ಹೊರಬರುತ್ತಿವೆ ಎಂದು ಹೇಳುತ್ತಾಳೆ. ಇದಲ್ಲೇನೋ ಮೋಸ ಇದೆ. ಈ ಮಹಿಳೆಯೇ ಮೋಸ ಮಾಡುತ್ತಿರಬಹುದು ಅಥವಾ ಮೋಸದಿಂದ ಆಕೆಯ ದೇಹದಲ್ಲಿ ಬೇರೆ ಯಾರೋ ಸೂಜಿಗಳನ್ನು ಚುಚ್ಚಿರಬಹುದು ಎಂಬ ಅನುಮಾನ ಕಾಡುತ್ತದೆ. ಬನ್ನಿ, ಈ ಅನುಮಾನವನ್ನು ಪರಿಹರಿಸಲು ಮುಂದೆ ಓದಿ....

  ಈಕೆ ಈ ಸ್ಥಿತಿಯಿಂದ ಬಳಲಲು ತೊಡಗಿ ಬಹುಕಾಲವೇ ಆಗಿದೆ

  ಈಕೆ ಈ ಸ್ಥಿತಿಯಿಂದ ಬಳಲಲು ತೊಡಗಿ ಬಹುಕಾಲವೇ ಆಗಿದೆ

  ಅನುಸೂಯ್ಯಾ ದೇವಿ ಎಂಬ ಹೆಸರಿನ ಈ ಮಹಿಳೆ ಉತ್ತರಪ್ರದೇಶ ರಾಜ್ಯದ ಫತೆಹ್ ಪುರ್ ಜಿಲ್ಲೆಯ ಒಂದು ಪುಟ್ಟ ಗ್ರಾಮದ ನಿವಾಸಿಯಾಗಿದ್ದಾಳೆ. ಈಕೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜುಗಳು ಹಾಗೂ ಪಿನ್ನುಗಳು ಹೊರಬರುವುದು 2012 ರಿಂದ ಪ್ರಾರಂಭವಾಯಿತು ಎಂದು ವಿವರಿಸಿದ್ದಾಳೆ.

  ಈಕೆ ವೈದ್ಯಕೀಯ ನೆರವನ್ನೂ ಯಾಚಿಸಿದ್ದಳು

  ಈಕೆ ವೈದ್ಯಕೀಯ ನೆರವನ್ನೂ ಯಾಚಿಸಿದ್ದಳು

  ಸುಮಾರು ಐದು ವರ್ಷಗಳಿಂದಲೂ ಸತತವಾಗಿ ಸೂಜಿಗಳ ಯಾತನೆಯಿಂದ ಬಳಲಿದ ಈಕೆ ಮೊದಮೊದಲು ನೋವನ್ನು ಸಹಿಸಿಕೊಳ್ಳಲು ಶಕ್ತಳಿದ್ದರೂ ಈಗ ಹೆಚ್ಚೂ ಕಡಿಮೆ ಸೋತು ಹೋಗಿದ್ದಾಳೆ. ನೋವಿಲ್ಲದೇ ನಡೆಯಲು, ಕುಳಿತುಕೊಳ್ಳಲು ಅಥವಾ ನಿಲ್ಲಲೂ ಆಕೆಗೆ ಸಾಧ್ಯವಿಲ್ಲ. ಈ ನೋವನ್ನು ವಿವರಿಸಿ ಆಕೆ ಹಲವಾರು ವೈದ್ಯರ ನೆರವನ್ನೂ ಯಾಚಿಸಿದ್ದಳು.

  ಈಕೆಯ ವಿವರಣೆಯ ಪ್ರಕಾರ

  ಈಕೆಯ ವಿವರಣೆಯ ಪ್ರಕಾರ

  ಈ ಸ್ಥಿತಿ ಹೇಗೆ ಎದುರಾಯಿತು ಎಂಬ ಪ್ರಶ್ನೆಗೆ ಆಕೆ ಹೀಗೆ ಹೇಳುತ್ತಾಳೆ: "ನನಗೆ ಈ ತೊಂದರೆ ಕಳೆದ ಐದು ವರ್ಷಗಳಿಂದಲೂ ಇದೆ. ಸೂಜಿಗಳು ನನ್ನ ಕಾಲಿನಿಂದ ಹೊರಬರುತ್ತವೆ. ಇದು ಹೇಗೆ, ಏಕೆ ಎಂದು ನನಗೆ ವಿವರಿಸಲು ಸಾಧ್ಯವಿಲ್ಲ. ಇವು ಹೇಗೆ ಒಳಗೆ ಬಂದವು ಎಂದು ನನಗೆ ಗೊತ್ತಿಲ್ಲ. ಆದರೆ ಈ ನೋವಿನಿಂದಂತೂ ಜರ್ಝರಿತಳಾಗಿದ್ದೇನೆ, ಇನ್ನು ಸಹಿಸಲು ಸಾಧ್ಯವಿಲ್ಲ"

  ವೈದ್ಯರ ವಿವರಣೆ

  ವೈದ್ಯರ ವಿವರಣೆ

  ವೈದ್ಯರು ಇದೊಂದು ಮಾನಸಿಕ ರೋಗ ಎಂದು ಊಹಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ರೋಗಿ ತನಗೆ ಅರಿವೇ ಇಲ್ಲದಂತೆ ಕೆಲವು ಮೊನಚಾದ ವಸ್ತುಗಳನ್ನು ತನ್ನ ದೇಹದೊಳಗೆ ತೂರಿಸಿಕೊಳ್ಳುವುದು ಒಂದು ಮಾನಸಿಕ ವ್ಯಾಧಿಯ ಲಕ್ಷಣವಾಗಿದೆ. ಈ ಮಹಿಳೆಯೂ ಇಂತಹ ಯಾವುದೋ ಮಾನಸಿಕ ವ್ಯಾಧಿಗೆ ತುತ್ತಾಗಿದ್ದು ತನಗರಿವಿಲ್ಲದಂತೆಯೇ ಚೂಪಾದ ವಸ್ತುಗಳನ್ನು ತನ್ನ ಕಾಲುಗಳ ಒಳಗೆ ಚುಚ್ಚಿಕೊಳ್ಳುತ್ತಿದ್ದರಬಹುದು. ಆದರೆ ಈ ಆರೋಪವನ್ನು ಅನುಸೂಯ್ಯಾ ಸ್ಪಷ್ಟವಾಗಿ ತಳ್ಳಿ ಹಾಕಿ ತನಗಾವುದೇ ರೋಗವಿಲ್ಲ ಹಾಗೂ ತಾನು ತನ್ನ ಕಾಲುಗಳಿಗೆ ಚುಚ್ಚಿಕೊಂಡಿಲ್ಲ ಎಂದೇ ವಾದಿಸುತ್ತಾಳೆ.

  ಬಗೆಬಗೆಯ ಮೊನಚಾದ ವಸ್ತುಗಳು

  ಬಗೆಬಗೆಯ ಮೊನಚಾದ ವಸ್ತುಗಳು

  ಮೂಲಗಳ ಪ್ರಕಾರ ಈಕೆಯ ಶರೀರದಿಂದ ಮೂರು ಬಗೆಯ ಚೂಪಾದ ವಸ್ತುಗಳು ಹೊರಬರುತ್ತಿವೆ. ಇವೆಂದರೆ ಬಟ್ಟೆ ಹೊಲಿಯುವ ದಾರದ ಸೂಜಿಗಳು, ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಲು ಬಳಸುವ ಸಿರಿಂಜಿನ ಸೂಜಿ ಹಾಗೂ ಮೊಳೆಗಳು. ದೇಹದಲ್ಲಿ ಇವನ್ನು ಉತ್ಪಾದಿಸುವ ಯಾವುದೇ ವ್ಯವಸ್ಥೆ ಇಲ್ಲದೇ ಇರುವ ಕಾರಣ ಸ್ಪಷ್ಟವಾಗಿ ಇವು ದೇಹದೊಳಗೆ ತೂರಿಸಲ್ಪಟ್ಟಿರಬೇಕು. ಅಷ್ಟಕ್ಕೂ ಸಿರಿಂಜಿನ ಸೂಜಿ ದಪ್ಪನಾಗಿದ್ದು ಇದು ದೇಹದೊಳಗೆ ತೂರಿಕೊಳ್ಳಲು ಹೇಗಾದರೂ ಸಾಧ್ಯವಾಯಿತು ಎಂದು ಅಚ್ಚರಿಯಾಗುತ್ತದೆ.

  ಈಕೆಯ ವಿವರಣೆ

  ಈಕೆಯ ವಿವರಣೆ

  ಈ ಬಗ್ಗೆ ಈಕೆ ನೀಡುವ ವಿವರಣೆಯಂತೆ ಮೊದಲು ಚರ್ಮದ ಯಾವುದೋ ಒಂದು ಭಾಗದಲ್ಲಿ ಚಿಕ್ಕ ಮೊಡವೆಯೊಂದು ಮೂಡುತ್ತದೆ. ಕೆಲದಿನಗಳ ಬಳಿಕ ಇದು ಸಾಕಷ್ಟು ದೊಡ್ಡದಾಗಿ ಬಳಿಕ ಸಿಡಿದು ಒಡೆಯುತ್ತದೆ. ಸಿಡಿಯುವ ಸಮಯದಲ್ಲಿ ಮೊಡವೆಯೊಳಗೆ ಸಂಗ್ರಹವಾಗಿದ್ದ ಕೀವು ಸಹಾ ಹೊರಚೆಲ್ಲಲ್ಪಟ್ಟು ಇದರೊಂದಿಗೇ ಸೂಜಿ ಅಥವಾ ಮೊಳೆಯೊಂದು ಹೊರಬೀಳುತ್ತದೆ. ಇದು ಕೇಳಲು ಅಥವಾ ನೋಡಲು ಕಷ್ಟಕರವಾದರೂ ಇದು ತನ್ನಿಂತಾನೇ ಆಗಲು ಸಾಧ್ಯವಿಲ್ಲ ಎಂದೇ

  ವೈದ್ಯರು ತಿಳಿಸುತ್ತಾರೆ. ನಮ್ಮ ದೇಹ ಮೊಳೆ, ಸೂಜಿಗಳನ್ನು ಸೃಷ್ಟಿಸಲಾರದು. ಅದೂ ಅಲ್ಲದೇ ಸ್ಪಷ್ಟವಾದ ಮಾನವನಿರ್ಮಿತ ಆಕಾರದ ಸೂಜಿ ಮೊಳೆಗಳನ್ನು ಮಾನವ ದೇಹ ಹೇಗೆ ನಿರ್ಮಿಸಲು ಸಾಧ್ಯ?

  ನಿಮ್ಮ ಅಭಿಪ್ರಾಯವೇನು

  ನಿಮ್ಮ ಅಭಿಪ್ರಾಯವೇನು

  ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಈಕೆ ಮಾನಸಿಕ ರೋಗಿಯೇ? ಅಥವಾ ಇವಳನ್ನು ಎಚ್ಚರ ತಪ್ಪಿಸಿ ಬೇರೆ ಯಾರಾದರೂ ಈಕೆಯ ಕಾಲಿನೊಳಗೆ ಸೂಜಿಗಳನ್ನು ಚುಚ್ಚುತ್ತಿರಬಹುದೇ? ಅಥವಾ ಈಕೆ ಹೇಳುವಂತೆ ಈಕೆಯ ಶರೀರವೇ ಮೊಳೆಯನ್ನು ಉತ್ಪಾದಿಸುತ್ತಿದೆಯೇ? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆಯುವ ಮೂಲಕ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.

  English summary

  WTF! Needles, Syringes & Pins Come Out Of Her Legs!

  Here are more details on the bizarre condition of the woman who claims that she does not insert them and they come out of her body on their own!!The more bizarre it sounds, the more weird it is to imagine of such a thing, isn't it? So check out on the actual bizarre case of this Indian woman who claims to have pins, syringes and needles removed from her body...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more