For Quick Alerts
ALLOW NOTIFICATIONS  
For Daily Alerts

ಅಂದು ಸುಂದರಿಯಾಗಿದ್ದ, ಈಕೆ-ಇಂದು ಹೀಗಾಗಿಬಿಟ್ಟಿದ್ದಾಳೆ! ಯಾಕೆ ಗೊತ್ತೇ?

By Arshad
|

ಬೆಳಿಗ್ಗೆ ಎಚ್ಚರ ಆದಾಗ ಹೊಸ ಜನ್ಮವನ್ನೇ ಪಡೆದಂತೆ ನಿನ್ನೆಯ ಆರೋಗ್ಯ ಇಂದಿಗೂ ಹಾಗೇ ಉಳಿದಿದ್ದರೆ ನಿಮಗಿಂತ ಅದೃಷ್ಟವಂತರು ಇನ್ನೊಬ್ಬರಿಲ್ಲ. ಆದರೆ ಒಂದು ವೇಳೆ ಬೆಳಿಗ್ಗೆದ್ದಾಗ ನಿನ್ನೆಯ ಆರೋಗ್ಯಕ್ಕಿಂದ ಇಂದಿನ ಆರೋಗ್ಯ ಕುಂದಿದ್ದರೆ, ಅಥವಾ ನಿಮ್ಮ ಮೈಕಟ್ಟು ಅಥವಾ ಮುಖದ ಚಹರೆಯೇ ಬದಲಾಗಿದ್ದರೆ? ಇದೊಂದು ಭಯಾನಕ ಅನುಭವವಾಗಿರಬಹುದು.

ಉಳಿದವರಿಗೆ ಇದೊಂದು ಕಲ್ಪನೆಯಂತೆ ಕಂಡರೂ ಖಲಿಯಾ ಷಾ ಎಂಬ ಮಹಿಳೆಗೆ ಮಾತ್ರ ಒಂದು ದಿನ ಬೆಳಿಗ್ಗೆದ್ದಾಗ ತಮ್ಮ ದೇಹದಲ್ಲಿ ಏನೋ ಬದಲಾವಣೆಯಾದಂತೆ, ಮೈಯ ಚರ್ಮ ಪದರಪದರವಾಗಿ ಸಿಪ್ಪೆ ಸುಲಿದಂತೆ ಕಳಚಿಕೊಳ್ಳುತ್ತಿರುವುದು, ಚರ್ಮದ ತುಂಡುಗಳು ಕರಗುತ್ತಾ ದೇಹದಿಂದ ಬೇರ್ಪಡುತ್ತಿರುವಂತೆ ಅನ್ನಿಸುತ್ತಿತ್ತು.

Also Read: ಅಚ್ಚರಿ ಜಗತ್ತು: ಈ ಮಹಿಳೆಗೆ ಮುಜುಗರ ತರಿಸುವ ವಿಚಿತ್ರ ಕಾಯಿಲೆ!

ಕಲ್ಪಿಸಿಕೊಳ್ಳಲೂ ಭಯಾನಕವಾದ ಈ ಕಥನ ವಾಸ್ತವದಲ್ಲಿ ಅನುಭವಿಸುತ್ತಿರುವ ಆಕೆಗೆ ಹೇಗಾಗಿರಬಾರದು? ಸುಂದರ ಮೈಕಟ್ಟು ಹೊಂದಿದ್ದ ಈ ಮಹಿಳೆಗೆ ಈ ಸ್ಥಿತಿ ಬರಲು ಆಕೆಗೆ ನೀಡಿದ ಯಾವುದೋ ಔಷಧಿಯ ಅಡ್ಡಪರಿಣಾಮವಾಗಿದ್ದು ಮುಂದೇನಾಯಿತು ಎಂಬುದನ್ನು ಈಗ ನೋಡೋಣ:

ಈಕೆಗೆ ಬೈಪೋಲಾರ್ ಡಿಸಾರ್ಡರ್ ಎಂಬ ತೊಂದರೆಯಿತ್ತು

ಖಲಿಯಾ ಷಾ ಸ್ಟೇಟ್ ವಿಶ್ವವಿದ್ಯಾಯಲಕ್ಕೆ ಸೇರಿದ ಜಾರ್ಜಿಯಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಇವರಿಗೆ ಬೈಪೋಲಾರ್ ಡಿಸಾರ್ಡರ್ ಎಂಬ ತೊಂದರೆ ಇರುವುದನ್ನು ವೈದ್ಯರು ಕಂಡುಕೊಂಡು ಇದಕ್ಕಾಗಿ ಕೆಲವು ಔಷಧಿಗಳನ್ನು ಸೂಚಿಸಿದ್ದರು.

ಇದರ ಅಡ್ಡಪರಿಣಾಮ ಪ್ರಕಟಗೊಳ್ಳಲು ಕೆಲವೇ ದಿನ ಸಾಕಾಯಿತು

ಯಾವುದೇ ಔಷಧಿಗಳಲ್ಲಿ ಕೆಲವು ಅಡ್ಡಪರಿಣಾಮಗಳು ಇದ್ದೇ ಇರುತ್ತವೆ. ಇದನ್ನು ವೈದ್ಯರೂ ಅರಿತಿರುತ್ತಾರೆ. ಆದರೆ ಈಕೆಗೆ ನೀಡಿದ ಔಷಧಿಯ ಅಡ್ಡಪರಿಣಾಮ ಒಂದೇ ತಿಂಗಳಲ್ಲಿ ತನ್ನ ಪ್ರಭಾವ ತೋರಿಸಲು ಪ್ರಾರಂಭಿಸಿದೆ. ಪ್ರಾರಂಭದಲ್ಲಿ ಮುಖದ ಮೇಲೆ ಚರ್ಮ ಕೆಂಪಗಾಗಲು ಆರಂಭಿಸಿ ಬಳಿಕ ತುಟಿಗಳ ಚರ್ಮ ಒಣಗಿ ಪರೆಯಂತೆ ಏಳಲು ಪ್ರಾರಂಭವಾಗಿದೆ. ಈ ತೊಂದರೆಯನ್ನು ಸ್ಥಳೀಯ ವೈದ್ಯರಲ್ಲಿ ತೋರಿಸಿದ್ದರೂ ಪ್ರಾಥಮಿಕ ಪರೀಕ್ಷೆಯಲ್ಲಿ ವೈದ್ಯರು ಇದು ಫ್ಲೂ ಜ್ವರದ ಪ್ರಭಾವ ಎಂದು ತಿಳಿಸಿದ್ದರು.

ಸ್ಥಳೀಯ ವೈದ್ಯರಲ್ಲಿ ಮತ್ತೊಮ್ಮೆ ಭೇಟಿ

ಆದರೆ ಒಂದೆರಡೇ ದಿನಗಳಲ್ಲಿ ಆಕೆಗೆ ಅತಿ ಹೆಚ್ಚಿನ ನೋವು ಕಾಣಿಸಿಕೊಂಡು ಮುಖ, ಕುತ್ತಿಗೆ, ಎದೆಯಭಾಗದ ಚರ್ಮ ಪದರ ಪದರವಾಗಿ ಸುಲಿದು ಕಳಚಿದಂತೆ ಅನ್ನಿಸಿತ್ತು. ಮುಖವಂತೂ ದೊಡ್ಡ ದೊಡ್ಡ ಬೊಬ್ಬೆಗಳಿಂದ ತುಂಬಿಹೋಗಿತ್ತು. ತಕ್ಷಣವೇ ಸ್ಥಳೀಯ ವೈದ್ಯರ ಬಳಿ ಮತ್ತೊಮ್ಮೆ ಕರೆದೊಯ್ಯಲಾಯಿತು.

ತಜ್ಞರು ಇದು ಸೋಂಕಿನ ರೋಗವಿರಬಹುದೆಂದು ತಿಳಿದರು

ಈಕೆಯ ಪರಿಸ್ಥಿತಿಯನ್ನು ಕಂಡ ವೈದ್ಯರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿ ತಜ್ಞರ ನೆರವನ್ನು ಕೋರಿದರು. ಆಸ್ಪತ್ರೆಯಲ್ಲಿ ಈಕೆಯನ್ನು ಪರೀಕ್ಷಿಸಿದ ತಜ್ಞರು ಈಕೆಗೆ ಸೋಂಕುರೋಗವಿರಬೇಕೆಂದು ತಿಳಿದು ತಕ್ಷಣವೇ ಕೋಣೆಯೊಂದರಲ್ಲಿ ಪ್ರತ್ಯೇಕವಾಗಿರಿಸಲಾಯಿತು.

ಬಳಿಕ ಆಕೆಗೆ Stevens-Johnson Syndrome (SJS) ತೊಂದರೆ ಇರುವುದು ಗೊತ್ತಾಯಿತು

ಆಸ್ಪತ್ರೆಯಲ್ಲಿ ಆಕೆಯ ಆರೋಗ್ಯವನ್ನು ಮತ್ತು ರಕ್ತವನ್ನು ಪರೀಕ್ಷೆಗೊಳಪಡಿಸಿದ ಬಳಿಕ ಈಕೆಗೆ ಸ್ಟೀವನ್ಸ್ ಜಾನ್ಸನ್ ಸಿಂಡ್ರೋಮ್ ಎಂಬ ಅತ್ಯಪರೂಪದ ಕಾಯಿಲೆ ಇರುವುದು ಗೊತ್ತಾಯಿತು. ಇದರ ಲಕ್ಷಣಗಳು ಫ್ಲೂ ಜ್ವರದಂತೆಯೇ ಇರುವ ಕಾರಣ ಪ್ರಾಥಮಿಕವಾಗಿ ಫ್ಲೂ ಜ್ವರವೆಂದು ಅನುಮಾನಿಸಿದ್ದು ಸರಿಯೇ ಇತ್ತು. ಈ ಸ್ಥಿತಿ ವಾಸ್ತವವಾಗಿ ಔಷಧಿಯೊಂದರ ಅಡ್ಡಪರಿಣಾಮವಾಗಿದ್ದು ಕೆಲವೊಮ್ಮೆ ಉಗ್ರರೂಪ ತಾಳಬಹುದಾಗಿದೆ. ಆದರೆ ಈ ಮಹಿಳೆಯಲ್ಲಿ ಮಾತ್ರ ಇದು ಭೀಕರ ರೂಪ ತಾಳಿತ್ತು.

ಈಕೆ ವೈದ್ಯಕೀಯವಾಗಿ ಕೋಮಾ ಸ್ಥಿತಿ ತಲುಪಿದಳು

ಔಷಧಿಯ ಅಡ್ಡಪರಿಣಾಮವಾಗಿ ಚರ್ಮ ಮಾಂಸಖಂಡಗಳಿಗೆ ಅಂಟಿರುವ ಅಂಗಾಂಶ ತನ್ನ ಗುಣವನ್ನು ಕಳೆದುಕೊಳ್ಳುವ ಕಾರಣ ಚರ್ಮ ಸಡಿಲವಾಗಿ ಹುರುಪೆಯಂತೆ ಎದ್ದು ಬರುತ್ತದೆ. ರೋಗಿಗೆ ಅಪಾರವಾದ ನೋವು ಕಾಡುತ್ತದೆ. ಈ ನೋವನ್ನು ವೈದ್ಯರಿಗೆ ನೋಡಲಿಕ್ಕೂ ಸಾಧ್ಯವಾಗದೇ ಅಕೆಯನ್ನು ವೈದ್ಯಕೀಯ ಕೋಮಾ ಸ್ಥಿತಿಗೆ ತಲುಪಿಸಲು ನಿರ್ಧರಿಸಿದರು.

ಈಕೆ ಐದು ವಾರಗಳ ಬಳಿಕ ಎಚ್ಚೆತ್ತರು

ಕೋಮಾ ಸ್ಥಿತಿಯಲ್ಲಿ ಈಕೆಯ ಚಿಕಿತ್ಸೆಯನ್ನು ಮುಂದುವರೆಸಿದ ವೈದ್ಯರು ಅತಿ ಹೆಚ್ಚಿನ ಕಾಳಜಿ ತೆಗೆದುಕೊಂಡ ಪರಿಣಾಮವಾಗಿ ಐದು ವಾರಗಳ ಬಳಿಕ ಆಕೆಗೆ ಎಚ್ಚರಾಯಿತು. ಆದರೆ ಆಕೆಗೆ ಇನ್ನೊಂದು ಆಘಾತ ಕಾದಿತ್ತು. ಆಕೆಗೆ ಏನೂ ಕಾಣುತ್ತಿರಲಿಲ್ಲ ಹಾಗೂ ಅಕೆ ಟ್ರೇಖಿಯೋಟೋಮಿ ಎಂಬ ಸಲಕರಣೆಯ ಮೂಲಕ ಉಸಿರಾಡುತ್ತಿದ್ದರು. ಅಷ್ಟೇ ಅಲ್ಲ, ಕೈಬೆರಳುಗಳ ಉಗುರಗಳೆಲ್ಲಾ ಉದುರಿ ಹೋಗಿದ್ದವು.

ಆಕೆ ತನ್ನ ಅನುಭವವನ್ನು ಬ್ಲಾಗ್ ಮೂಲಕ ಹಂಚಿಕೊಂಡರು

ಈಕೆ ತನ್ನ ಬ್ಲಾಗ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ:" ನಾನು ಆಸ್ಪತ್ರೆಯಲ್ಲಿದ್ದಷ್ಟೂ ದಿನ ನನಗೇನು ಆರೈಕೆ ನೀಡಲಾಯಿತು ಎಂಬುದು ನನಗೆ ಸತತವಾಗಿ ಕಾಡುತ್ತಿದೆ. ಪಕ್ಕದ ಐವಿ ಯಂತ್ರಗಳು ಈಗಲೂ ಬೀಪ್ ಬೀಪ್ ಎನ್ನುತ್ತಿದೆ ಅನ್ನಿಸುತ್ತಿದೆ. ಆ ಸುಟ್ಟಗಾಯದ ಚಿಕಿತ್ಸ ಕೋಣೆಗೆ ನಾನೆಂದೂ ಹೋಗಲಿಚ್ಛಿಸಲಾರೆ"

ಈಗ ಆಕೆ ಗುಣಮುಖರಾಗುತ್ತಿದ್ದಾರೆ

ಒಂದು ಸಮಾಧಾನಕರ ಅಂಶವೆಂದರೆ ಈಕೆ ಹೆಚ್ಚೂ ಕಡಿಮೆ ಹಾಸಿಗೆ ಹಿಡಿದ ಸ್ಥಿತಿಯಲ್ಲಿಯೇ ಈಗಲೂ ಇದ್ದರೂ ಈಕೆಯ ದೇಹದಲ್ಲಿ ನಿಧಾನವಾಗಿ ಮಾರ್ಪಾಡು ಕಂಡುಬರುತ್ತಿದೆ. ಕೂದಲು ಹೊಸದಾಗಿ ಹುಟ್ಟುತ್ತಿದೆ, ಚರ್ಮವೂ ಹೊಸದಾಗಿ ಮೂಡುತ್ತಿದೆ. ತನ್ನ ಹಳೆಯ ಬ್ಲಾಗ್ ನಲ್ಲಿ ಬರೆದುಕೊಂಡಂತೆ " ಸ್ಫೂರ್ತಿಭರಿತ, ತಮಾಷೆಯ ಮನೋಭಾವದ, ದಾರ್ಷ್ಟ್ಯ, ಸೂಕ್ಷ್ಮಮತಿ ಹಾಗೂ ವಾಚಾಳಿ" ವ್ಯಕ್ತಿತ್ವವನ್ನು ಮತ್ತೆ ಪಡೆಯುತ್ತೇನೆ ಎಂಬ ಆಶಾಭಾವದಲ್ಲಿದ್ದಾರೆ. ಈಕೆ ಶೀಘ್ರವಾಗಿ ಗುಣಮುಖರಾಗಲಿ ಎಂದು ಬೋಲ್ಡ್ ಸ್ಕೈ ತಂಡ ಹಾರೈಸುತ್ತದೆ.

English summary

Wrong Medicine Burnt A Woman's Skin!

Could you imagine that you wake up on a fine day and realise that you are no more your normal self and there is something creepy that you find in your self? This would be the worst nightmare that one can have. Check out this bizarre yet sad story of this beautiful woman whose life changed completely after she was administered a wrong medicine dose.
X
Desktop Bottom Promotion