ಕೂಲಿ ಕೆಲಸ ಮಾಡಿ, ತನ್ನ ಮಕ್ಕಳನ್ನು ಸಾಕುತ್ತಿರುವ ಮಹಿಳೆಯ ಕಥೆ ಇದು...

By: Arshad
Subscribe to Boldsky

ಒಂದು ವೇಳೆ ನೀವು ಮಧ್ಯಪ್ರದೇಶದ ಜಬಲ್ಪುರದಿಂದ ಹೊರಟ ರೈಲಿನಲ್ಲಿ ಪ್ರಯಾಣಿಸುತ್ತಿದ್ದು ಕಟನಿ ಜಂಕ್ಷನ್ ಎಂಬ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದರೆ ಅಲ್ಲಿ ಪ್ರಯಾಣಿಕರ ಸಾಮಾನುಗಳನ್ನು ಇಳಿಸಿಕೊಳ್ಳಲು ನೂಕು ನುಗ್ಗುವ ಕೂಲಿಗಳಲ್ಲಿ ಮೂವತ್ತು ವರ್ಷದ ಮಹಿಳೆಯೂ ಇರುವುದನ್ನು ಗಮನಿಸಬಹುದು.

ಈಕೆಯೇ ಸಂಧ್ಯಾ ಮರಾವಿ. ಪುರುಷರಿಗೇ ಮೀಸಲಾಗಿರುವಂತೆ ತೋರುವ ಈ ಕಾಯಕವನ್ನು ಈಕೆ ಸಂತೋಷವಾಗಿಯೇ ನಿರ್ವಹಿಸಿದಂತೆ ಕಂಡುಬಂದರೂ ಇದರ ಹಿಂದೆ ಆಕೆಯ ದಾರುಣ ಕಥೆ, ಹತಾಷೆ ಹಾಗೂ ದಿಟ್ಟತನದ ನಿರ್ಧಾರಗಳಿವೆ....

ಅಸೌಖ್ಯದಿಂದ ವಿಧಿವಶ

ಅಸೌಖ್ಯದಿಂದ ವಿಧಿವಶ

ಈಕೆಯ ಕಥೆಯನ್ನು ಕೇಳಲು ಉತ್ಸುಕರಾದವರಿಗೆ ಈಕೆ ಹೇಳಿರುವ ವಿವರಗಳ ಪ್ರಕಾರ ಕಳೆದ ವರ್ಷದ ಅಕ್ಟೋಬರ್ 22 ಅಂದು ಆಕೆಯ ಪತಿ ಬಹುದಿನಗಳ ಅಸೌಖ್ಯದಿಂದ ವಿಧಿವಶನಾಗಿದ್ದ.

Image Courtesy

ಪುಟ್ಟ ಮಕ್ಕಳ ಜೀವನ ನಿರ್ವಹಣೆ

ಪುಟ್ಟ ಮಕ್ಕಳ ಜೀವನ ನಿರ್ವಹಣೆ

ಮನೆಯ ಯಜಮಾನ ಇಲ್ಲವಾದ ಬಳಿಕ ಮನೆಯಲ್ಲಿರುವ ಮೂವರು ಪುಟ್ಟ ಮಕ್ಕಳ ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕಲ್ಲ, ಇವರೊಂದಿಗೆ ಪತಿಯ ತಾಯಿ ಅಥವಾ ಅತ್ತೆಯೂ ಇದ್ದು ವೃದ್ಧೆಯಾದ ಆಕೆಯನ್ನೂ ನೋಡಿಕೊಳ್ಳುವ ಜವಾಬ್ದಾರಿ ಬೇರೆ.

Image Courtesy

ಬಡವಿಯಾದರೂ ಈಗೆ ಧೈರ್ಯಸ್ಥಳು...

ಬಡವಿಯಾದರೂ ಈಗೆ ಧೈರ್ಯಸ್ಥಳು...

ಸಾಮಾನ್ಯರಾಗಿದ್ದರೆ ಈ ಪರಿಸ್ಥಿತಿಯನ್ನು ಜೀವನದ ಕೊನೆ ಎಂದು ಗೋಳೋ ಎಂದು ಅತ್ತು ಮಕ್ಕಳನ್ನು ಯಾರ ಸುಪರ್ದಿಗಾದರೂ ಒಪ್ಪಿಸುವ ನಿರ್ಧಾರಕ್ಕೆ ಬರುತ್ತಿದ್ದರು. ಆದರೆ ಸಂಧ್ಯಾ ಬಡವಿಯಾದರೂ ಧೈರ್ಯಸ್ಥಳು ಹಾಗೂ ಆತ್ಮಾಭಿಮಾನವುಳ್ಳ ಮಹಿಳೆಯಾಗಿದ್ದರಿಂದ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ.

Image Courtesy

ಕೂಲಿ ಕೆಲಸಕ್ಕೂ ಸೈ...

ಕೂಲಿ ಕೆಲಸಕ್ಕೂ ಸೈ...

ತನಗೊಂದು ಉದ್ಯೋಗ ದೊರಕಿಸಿಕೊಳ್ಳಲು ಹತ್ತು ಹಲವು ಜನರ ನೆರವನ್ನು ಯಾಚಿಸಿದ ಈಕೆಯ ಸ್ಥಿತಿಯನ್ನು ಅರಿತ ಕೆಲವು ಸಹೃದಯಿಗಳು ಕಟನಿ ಜಂಕ್ಷನ್ ನಲ್ಲಿ ಕೂಲಿ ಕೆಲಸವೊಂದಿದೆ, ಆದರೆ ಇದು ಕಷ್ಟದ ಕೆಲಸವಾಗಿದ್ದು ಪುರುಷರು ಮಾಡುವ ಕೆಲಸವಾಗಿದೆ, ಮಹಿಳೆಯಾಗಿ ಇವರಿಗೆ ಸಾಧ್ಯವೇ ಎಂಬ ಅನುಮಾನವನ್ನೂ ಪ್ರಕಟಿಸಿದ್ದರು.

Image Courtesy

ಕೂಲಿ ಕೆಲಸವನ್ನು ಸವಾಲಿನಂತೆ ಸ್ವೀಕರಿಸಿದರು

ಕೂಲಿ ಕೆಲಸವನ್ನು ಸವಾಲಿನಂತೆ ಸ್ವೀಕರಿಸಿದರು

ಆದರೆ ತನ್ನ ಮೂವರು ಮಕ್ಕಳ ಅನ್ನದ ಪ್ರಶ್ನೆಯಾಗಿದ್ದ ಕಾರಣ ಈಕೆ ತನಗೆ ಒದಗಿದ ಈ ಅವಕಾಶವನ್ನು ಬಿಡಲಿಚ್ಛಿಸದೇ ಒಂದು ಕೈ ನೋಡೇ ಬಿಡೋಣವೆಂದು ಈ ಉದ್ಯೋಗವನ್ನು ಒಂದು ಸವಾಲಿನಂತೆ ಸ್ವೀಕರಿಸಿದರು.

Image Courtesy

ದೇಶದ ಪ್ರಥಮ ಮಹಿಳಾ ಕೂಲಿ ಎಂಬ ಹೆಗ್ಗಳಿಕೆ

ದೇಶದ ಪ್ರಥಮ ಮಹಿಳಾ ಕೂಲಿ ಎಂಬ ಹೆಗ್ಗಳಿಕೆ

ಅಂತೆಯೇ, ಈ ವರ್ಷದ ರೈಲ್ವೇ ಇಲಾಖೆಯ ಉದ್ಯೋಗಿಯಾಗಿ ಭರ್ತಿಯಾದ ಸಂಧ್ಯಾ ಕಟನಿ ಸ್ಟೇಷನ್ ನಲ್ಲಿ ಇತರ ನಲವತ್ತೈದು ಪುರುಷ ಕೂಲಿಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಬ್ಯಾಜ್ ನಂ 36 ಧರಿಸಿಕೊಂಡು ಆತ್ಮವಿಶ್ವಾಸದಿಂದ ಪ್ರಯಾಣಿಕರ ಸರಕು ಸರಂಜಾಮುಗಳನ್ನು ಎತ್ತುತ್ತಾರೆ. ಈ ಮೂಲಕ ದೇಶದ ಪ್ರಥಮ ಮಹಿಳಾ ಕೂಲಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.

Image Courtesy

 ನಲವತ್ತೈದು ಕಿ.ಮೀ ದೂರ ಪ್ರಯಾಣ...

ನಲವತ್ತೈದು ಕಿ.ಮೀ ದೂರ ಪ್ರಯಾಣ...

ಈಕೆಯ ಮನೆ ಕಟನಿಯಿಂದ ನಲವತ್ತೈದು ಕಿ.ಮೀ ದೂರವಿರುವ ಕುಂಡುಂ ಎಂಬ ಗ್ರಾಮದಲ್ಲಿದ್ದು ಅಲ್ಲಿಂದ ನಿತ್ಯವೂ ಈಕೆ ಕಾರ್ಯನಿರ್ವಹಿಸಲು ಆಗಮಿಸುತ್ತಾರೆ. ಇಡಿಯ ದಿನ ಕೆಲಸ ಮಾಡಿ ಸಂಜೆಯ ವೇಳೆ ಹಿಂದಿರುಗುವ ಆಕೆ ತನ್ನ ಗಳಿಕೆಯನ್ನು ಮಕ್ಕಳ ವಿದ್ಯಾಭ್ಯಾಸ ಹಾಗೂ ಅತ್ತೆಯನ್ನು ನೋಡಿಕೊಳ್ಳಲು ವ್ಯಯಿಸುತ್ತಾರೆ.

Image Courtesy

ಸಹಾಯದ ಮಹಾಪೂರವನ್ನು ನಯವಾಗಿ ನಿರಾಕರಿಸಿದ ಸ್ವಾಭಿಮಾನಿ

ಸಹಾಯದ ಮಹಾಪೂರವನ್ನು ನಯವಾಗಿ ನಿರಾಕರಿಸಿದ ಸ್ವಾಭಿಮಾನಿ

ಈಕೆಯ ಬಗ್ಗೆ ವರದಿಯೊಂದು ಮಾಧ್ಯಮಗಳಲ್ಲಿ ಬಂದಿದ್ದೇ ತಡ, ಆತ್ಮವಿಶ್ವಾಸಕ್ಕೆ ಇನ್ನೊಂದು ಪದ ಎಂಬಂತೆ ಈಕೆಯನ್ನು ಬೆಂಬಲಿಸಲು ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಆದರೆ ತನ್ನ ಮಕ್ಕಳನ್ನು ತನ್ನ ಗಳಿಕೆಯಿಂದಲೇ 'ಆಫೀಸರು' ಗಳನ್ನಾಗಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳುವ ಈಕೆ ಸ್ವಾಭಿಮಾನಕ್ಕೊಂದು ನಿದರ್ಶನವಾಗಿದ್ದಾರೆ.

English summary

Working As A Coolie To Feed Her Three Children After Her Husband’s Death

Get off the train at Katni Junction in Madhya Pradesh's Jabalpur and chances are you will run into 30-year-old Sandhya Marawi, lugging baggage of passengers. The woman works as a coolie (porter) at the station and on asking why she chose to take up the man’s job told us her story and the struggles.The determined woman, who never wanted her children to survive on handouts, got in touch with some known people who told her how she could get a job of a porter at Kanti Junction, and that’s when she became the sole bread earner of the family.
Subscribe Newsletter