Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ರಾಕ್ಷಸನಂತೆ ವರ್ತಿಸಿದ ಪತಿ, ಸಾಲದಕ್ಕೆ ಸಹೋದರನೂ ಸಾಥ್ ನೀಡಿದ!
ಅತ್ಯಾಚಾರದಂತಹ ಕೃತ್ಯಗಳಿಗೆ ಯಾವತ್ತೂ ಬೆಂಬಲವಾಗಿ ನಿಲ್ಲಬಾರದು. ಇದು ಮಹಿಳೆಯ ಜೀವನದಲ್ಲಿ ನಡೆಯುವಂತಹ ಅತ್ಯಂತ ಹೇಯ ಕೃತ್ಯವಾಗಿದೆ.
ಯಾವುದೇ ಪತ್ರಿಕೆ ಅಥವಾ ನ್ಯೂಸ್ ಚಾನೆಲ್‌ಗಳನ್ನು ನೋಡಿದರೂ ಅದರಲ್ಲಿ ಒಂದು ಸುದ್ದಿ ಅತ್ಯಾಚಾರದ್ದಾಗಿರುತ್ತದೆ. ಅತ್ಯಾಚಾರದಂತಹ ಸುದ್ದಿಯನ್ನು ಕೇಳಿದರೆ ಮನಸ್ಸು ರೊಚ್ಚಿಗೇಳುತ್ತದೆ. ಇಂತಹ ಹೇಯ ಕೃತ್ಯವನ್ನು ಮಾಡುವವರು ಸಮಾಜದಲ್ಲಿ ಹಲವಾರು ಇದ್ದಾರೆ.
ಅತ್ಯಾಚಾರದಂತಹ ಕೃತ್ಯಗಳಿಗೆ ಯಾವತ್ತೂ ಬೆಂಬಲವಾಗಿ ನಿಲ್ಲಬಾರದು. ಇದು ಮಹಿಳೆಯ ಜೀವನದಲ್ಲಿ ನಡೆಯುವಂತಹ ಅತ್ಯಂತ ಹೇಯ ಕೃತ್ಯವಾಗಿದೆ. ಮಹಿಳೆಯ ಜೀವನವೇ ಇಂತಹ ಕೃತ್ಯಗಳಿಂದಾಗಿ ಬದಲಾಗಿ ಹೋಗುತ್ತದೆ. ಪ್ರತಿ ಕ್ಷಣವೂ ಆಕೆಗೆ ಈ ಕೃತ್ಯದ ಕಹಿ ನೆನಪು ಕೆಟ್ಟ ಕನಸಾಗಿ ಕಾಡುತ್ತಾ ಇರುತ್ತದೆ. ಹೆಂಡತಿ ಮೇಲೇ ಅತ್ಯಾಚಾರ ಮಾಡಲು ಸ್ನೇಹಿತನಿಗೆ ಸಹಕರಿಸಿದ ಪಾಪಿ ಪತಿ!
ಆದರೆ ಮದುವೆಯಾಗಿ ಹಲವಾರು ಕನಸುಗಳನ್ನು ಕಟ್ಟಿಕೊಂಡು ಮೊದಲ ರಾತ್ರಿಯ ತಯಾರಿಯಲ್ಲಿರುವ ಮಹಿಳೆಯೊಬ್ಬಳು ಗಂಡನಿಂದಲೇ ಅತ್ಯಾಚಾರಕ್ಕೊಳಗಾದರೆ ಆಗ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿರುತ್ತದೆ. ಆಕೆಯ ಮನಸ್ಸು ಒಡೆದು ಚೂರು ಚೂರಾಗಿರುತ್ತದೆ. ಮುಟ್ಟಾಗಿದ್ದ ಮಹಿಳೆಯೊಬ್ಬಳನ್ನು ಮೊದಲ ರಾತ್ರಿ ದಿನವೇ ಪತಿ ಅತ್ಯಾಚಾರಕ್ಕೆ ಒಳಪಡಿಸಿದ ನಿಜ ಘಟನೆಯಿದು....

ಆಕೆ ಇನ್ನೂ ಮದುಮಗಳ ಧಿರಿಸಿನಲ್ಲಿದ್ದಳು!
ಮದರಂಗಿಯ ಕಂಪು ಇನ್ನೂ ಆಕೆಯ ಕೈಯಿಂದ ಮಾಸಿರಲಿಲ್ಲ. ಮುಖದಲ್ಲಿನ ಅಲ್ಪಸ್ವಲ್ಪ ಮೇಕಪ್ ನಡುವೆ ಕಣ್ಣೀರು ದಾರಿ ಮಾಡುತ್ತಾ ಬರುತ್ತಿತ್ತು. ಆಸ್ಪತ್ರೆಯಲ್ಲಿ ಆಕೆ ತನ್ನ ಮೇಲಿನ ಹೇಯ ಕೃತ್ಯದಿಂದ ಆದ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಾ ಇದ್ದಳು.

ಸಹೋದರನೇ ವಿಲನ್!!
ಸಹೋದರ ತನ್ನ ಜತೆಗಿದ್ದರೆ ಆಗ ಸಹೋದರಿಗೆ ವಿಶ್ವವನ್ನು ಗೆಲ್ಲಬಹುದೆಂಬ ನಂಬಿಕೆ ಇರುತ್ತದೆ. ಆದರೆ ಇಲ್ಲಿ ಆಕೆ ಜೋರಾಗಿ ಅಳುತ್ತಿರುವುದಕ್ಕೆ ಸಹೋದರ ಆಕೆಯನ್ನೇ ಬೈಯುತ್ತಲಿದ್ದ. ಮೊದಲ ರಾತ್ರಿಯಂದು ಪತಿ ಆಕೆಯನ್ನು ಹೀನಾಯವಾಗಿ ಬೈಯ್ದಿದ್ದ.

ಸಹೋದರ ಕುಪಿತನಾಗಿದ್ದ
ಮುಟ್ಟಾಗಿದ್ದರೂ ಮೊದಲ ರಾತ್ರಿಯಂದು ಪತಿಗೆ ಲೈಂಗಿಕ ಕ್ರಿಯೆ ನಡೆಸಲು ಅವಕಾಶ ನೀಡದ ತನ್ನ ಸಹೋದರಿ ವಿರುದ್ಧ ಆತ ಕುಪಿತನಾಗಿದ್ದ. ಪತಿಯ ಲೈಂಗಿಕ ಆಸೆಯನ್ನು ತೀರಿಸುವುದು ಆಕೆಯ ಕರ್ತವ್ಯ. ಆಕೆಯನ್ನು ಮದುವೆಯಾಗಿರುವ ಕಾರಣ ಆತನಿಗೆ ಇದರ ಹಕ್ಕಿದೆ ಎಂದು ಆತ ಹೇಳುತ್ತಲಿದ್ದ.

ಅನ್ಯಾಯ ಮಾಡಿದವರ ಪರವಾಗಿ ಆತ ಮಾತನಾಡುತ್ತಲಿದ್ದ
ಈ ಆಧುನಿಕ ಯುಗದಲ್ಲೂ ನಾವು ಇಂತವರನ್ನು ಕಾಣುತ್ತಲಿದ್ದೇವೆ. ತನ್ನ ತಂಗಿಯ ಪರವಾಗಿ ನಿಲ್ಲುವ ಬದಲು ಆಕೆಗೆ ಅನ್ಯಾಯ ಮಾಡಿದವರ ಪರವಾಗಿ ಆತ ಮಾತನಾಡುತ್ತಲಿದ್ದ.

ತೊಂದರೆಯಲ್ಲಿ ಸಿಲುಕಿದಳು
ಆಕೆ ತನಗಾದ ದೈಹಿಕ ಹಾಗೂ ಮಾನಸಿಕ ಗಾಯದಿಂದ ನೋವಿನಿಂದ ಅಳುತ್ತಾ ಇದ್ದರೆ ಸಹೋದರ ಮಾತ್ರ ಆಕೆ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು ಎಂದು ಕಿರುಚುತ್ತಾ ಇದ್ದ. ಮಹಿಳೆಯರಿಗೆ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಕೃತ್ಯ ಇದಾಗಿದೆ. ಆಕೆ ಮಾನಸಿಕ ಅಥವಾ ದೈಹಿಕ ನೋವಿನಿಂದ ಬಳಲುತ್ತಿದ್ದರೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು.



Click it and Unblock the Notifications