ಮಹಿಳೆಯರು ಸುಲಭವಾಗಿ ಈ 4 ರಾಶಿ ಚಕ್ರದವರಿಗೆ ಆಕರ್ಷಿಸಲ್ಪಡುತ್ತಾರೆ

By: Divya pandith
Subscribe to Boldsky

ಒಬ್ಬ ವ್ಯಕ್ತಿ ನಮಗೆ ಇಷ್ಟವಾಗಬೇಕು ಅಥವಾ ಹೆಚ್ಚು ಹತ್ತಿರವಾಗಬೇಕು ಎಂದರೆ ಅವರ ಅನೇಕ ಸಂಗತಿಗಳು ನಮ್ಮ ಮನಸ್ಸಿಗೆ ಹಿಡಿಸಬೇಕು. ಇಲ್ಲವಾದರೆ ಅವರೆಷ್ಟೇ ಒಳ್ಳೆಯವರಾದರೂ ನಮಗೆ ಅಷ್ಟು ಇಷ್ಟದ ವ್ಯಕ್ತಿಗಳಾಗುವುದಿಲ್ಲ. ಅವರಿಂದ ನಾವು ಆಕರ್ಷಿತರಾಗಲು ಸಾಧ್ಯವಿಲ್ಲ. ಇದು ಪ್ರಕೃತಿ ದತ್ತವಾದ ಸಾಮಾನ್ಯ ಪ್ರಕ್ರಿಯೆ ಎನ್ನಬಹುದು. ಅದರಲ್ಲೂ ಒಬ್ಬ ಮಹಿಳೆಗೆ ಒಬ್ಬ ಪುರುಷ ಇಷ್ಟವಾಗಬೇಕೆಂದರೆ ಆತನ ಅನೇಕ ವಿಚಾರಗಳು ಹಾಗೂ ನಡತೆ ಆಕೆಗೆ ಇಷ್ಟವಾಗಬೇಕು.

ಮದುವೆಗೆ ಈ 4 ರಾಶಿಗಳಲ್ಲಿ ಜನಿಸಿದ ಹುಡುಗ ಸಿಕ್ಕಿದರೆ ಅವರೇ ಅದೃಷ್ಟವಂತರು!

ಹೀಗಿರುವಾಗ ಕೆಲವು ಪುರುಷರಿಗೆ ಮಹಿಳೆಯರು ಬಹು ಬೇಗ ಆಕರ್ಷಣೆಗೆ ಒಳಗಾಗುತ್ತಾರೆ ಎಂದರೆ ನಂಬುತ್ತೀರಾ? ನಿಜಾ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಪುರುಷರಿಗೆ ಮಹಿಳೆಯರು ಆಕರ್ಷಿತರಾಗುತ್ತಾರೆ. ಆ ಕ್ಷಣಕ್ಕೆ ಮಹಿಳೆಯರಿಗೆ ಅವರ ಆಯ್ಕೆಗಳು ಪ್ರಮುಖ ಎನಿಸದು. ತಾವಾಗಿಯೇ ಪುರುಷರಿಂದ ಆಕರ್ಷಣೆಗೆ ಒಳಗಾಗುತ್ತಾರೆ ಎನ್ನಲಾಗುತ್ತದೆ. ಅದಕ್ಕೆ ಕಾರಣ ಪುರುಷರ ರಾಶಿಚಕ್ರ. ಈ ರಾಶಿಚಕ್ರದವರಲ್ಲಿ ಇರುವ ಸಾಮಾನ್ಯ ನಡವಳಿಕೆಗಳೇ ಮಹಿಳೆಯರಿಗೆ ಹಿತವೆಸುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಎನ್ನುವ ಕುತೂಹಲ ಉಂಟಾಗುತ್ತಿದ್ದರೆ ಮುಂದೆ ಓದಿ...

ಮಹಿಳೆಯರ ಆಧ್ಯೆತೆಯ ಪಟ್ಟಿ

ಮಹಿಳೆಯರ ಆಧ್ಯೆತೆಯ ಪಟ್ಟಿ

ಮಹಿಳೆಯರು ತಮ್ಮ ಸಂಗಾತಿ ಅಥವಾ ಗೆಳೆಯರ ಆಯ್ಕೆ ಮಾಡಿಕೊಳ್ಳುವಾಗ ಅನೇಕ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡಿರುತ್ತಾರೆ. ಕೆಲವು ಗುಣವನ್ನು ಬಯಸಿದರೆ, ಕೆಲವರು ವರ್ತನೆಗೆ ಆಧ್ಯತೆ ನೀಡುತ್ತಾರೆ, ಇನ್ನುಕೆಲವರು ಅವರ ಸ್ಥಿತಿ ಗತಿಯನ್ನು ಪರಿಗಣಿಸುತ್ತಾರೆ. ಹೀಗೆ ಅವರ ಮನಸ್ಸಿಗೆ ಅಥವಾ ಬಯಕೆಗೆ ಪರಿಪೂರ್ಣರು ಎನಿಸಿದಾಗ ಮಾತ್ರ ಅವರ ಆಯ್ಕೆಯ ಪಟ್ಟಿಯಲ್ಲಿ ಪುರುಷರು ಸೇರಿಸಿಕೊಳ್ಳುತ್ತಾರೆ.

ಜ್ಯೋತಿಷ್ಯ ಮತ್ತು ಹೊಂದಾಣಿಕೆ

ಜ್ಯೋತಿಷ್ಯ ಮತ್ತು ಹೊಂದಾಣಿಕೆ

ಸಂಬಂಧಗಳ ವಿಚಾರದಲ್ಲಿ ಜ್ಯೋತಿಷ್ಯವು ಹೆಚ್ಚು ಸಹಕಾರಿಯಾಗಿ ಕೆಲಸ ನಿರ್ವಹಿಸುತ್ತದೆ. ಸಂಬಂಧ ಸಿಹಿಯಾಗಿರಲಿ ಅಥವಾ ಹುಳಿಯಾಗಿರಲಿ ಅದು ನಮ್ಮ ಜಾತಕ ಹಾಗೂ ರಾಶಿಚಕ್ರವನ್ನು ಆಧರಿಸಿರುತ್ತದೆ. ಪ್ರತಿಯೊಬ್ಬರು ತನ್ನ ಮಹಿಳೆ ಅಥವಾ ಸಂಗಾತಿ ನಮ್ಮಿಂದ ಆಕರ್ಷಿತಳಾಗಿದ್ದಾಳೆಯೇ ಇಲ್ಲವೇ ಎನ್ನುವುದನ್ನು ಕಚಿತಪಡಿಸಿಕೊಳ್ಳಬೇಕು.

ಯಾವ ರಾಶಿಚಕ್ರ ಮಹಿಳೆಯರನ್ನು ಆಕರ್ಷಿತ್ತದೆ?

ಯಾವ ರಾಶಿಚಕ್ರ ಮಹಿಳೆಯರನ್ನು ಆಕರ್ಷಿತ್ತದೆ?

12 ರಾಶಿಚಕ್ರದಲ್ಲಿ 4 ರಾಶಿಚಕ್ರಗಳು ಪ್ರಮುಖವಾಗಿ ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತವೆ. ಆ ರಾಶಿ ಚಕ್ರದ ವ್ಯಕ್ತಿಗಳು ಬಹು ಬೇಗ ಅವರ ಮನಸ್ಸಿಗೆ ಇಷ್ಟವಾಗುತ್ತಾರೆ.

ಮಿಥುನ

ಮಿಥುನ

ಮಿಥುನ ರಾಶಿ ಚಕ್ರದವರು ಅದೃಷ್ಟವಂತರು. ಇವರು ಮಹಿಳೆಯರ ಗಮನ ಸೆಳೆಯಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಇವರ ವ್ಯಕ್ತಿತ್ವ, ಮೃದು ಸ್ವಭಾವ ಹಾಗೂ ಪ್ರಣಯ ಪೂರಕ ವರ್ತನೆಗಳು ಮಹಿಳೆಯರನ್ನು ಬಹುಬೇಗ ಆಕರ್ಷಿಸುತ್ತವೆ. ಮಹಿಳೆಯರು ಇವರ ಸಾಂಗತ್ಯ ಬೆಳೆಸಲು ಬಯಸುತ್ತಾರೆ.

ಮಿಥುನ

ಮಿಥುನ

ಈ ರಾಶಿಚಕ್ರದ ಪುರುಷರಿಗೆ ಮಹಿಳೆಯರೊಂದಿಗೆ ಹೇಗೆ ಮಾತನಾಡಬೇಕು ಎನ್ನುವುದು ಚೆನ್ನಾಗಿ ತಿಳಿಸಿರುತ್ತದೆ. ಇವರು ಬಹಳ ಭಾವನಾತ್ಮ ಸ್ವಭಾವದವರಾಗಿರುತ್ತಾರೆ. ಅಲ್ಲದೆ ಮಹಿಳೆಯರ ಭಾವನೆ ಹಾಗೂ ಹೃದಯದ ಮಾತನ್ನು ಬಹು ಬೇಗ ಅರ್ಥಮಾಡಿಕೊಳ್ಳುತ್ತಾರೆ. ಈ ರಾಶಿಚಕ್ರದಲ್ಲಿ ಜನಿಸಿದವರು ವಿಶಾಲ ವೃದಯವಂತರಾಗಿರುತ್ತಾರೆ.

ಸಿಂಹ

ಸಿಂಹ

ಈ ರಾಶಿಚಕ್ರದವರು ಹೃದಯವಂತರಾಗಿರುತ್ತಾರೆ ಮತ್ತು ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ. ಮಹಿಳೆಯರು ಇವರೊಂದಿಗೆ ಸಮಯ ಕಳೆಯಲು ಯಾವುದೇ ಬಗೆಯ ಹಿಂಜರಿಕೆಯನ್ನು ವ್ಯಕ್ತಪಡಿಸುವುದಿಲ್ಲ. ಈ ರಾಶಿಯವರು ಬಹಳ ಪ್ರಭಾವ ಶಾಲಿಗಳು. ಆದರೆ ಕೆಲವರು ತಮ್ಮ ಹೃದಯದ ಸಂವೇದನೆಯನ್ನು ಮಾತ್ರ ವ್ಯಕ್ತ ಪಡಿಸುತ್ತಾರೆ.

ಸಿಂಹ

ಸಿಂಹ

ಇವರು ಹೆಚ್ಚು ಸ್ನೇಹ ಪೂರಕ ವರ್ತನೆಯನ್ನು ತೋರುತ್ತಾರೆ. ಇವರ ಈ ಗುಣಕ್ಕೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇವರು ಮೊದಲ ನೋಟದಲ್ಲೇ ಮಹಿಳೆಯರು ಆಕರ್ಷಣೆಗೆ ಒಳಪಡುವಂತೆ ಮಾಡುತ್ತಾರೆ. ಇವರ ವರ್ತನೆಗಳು ಹಾಗೂ ಹವ್ಯಾಸಗಳು ಮಹಿಳೆಯರನ್ನು ಹೆಚ್ಚು ಆಕರ್ಷಿಸುವಂತೆ ಮಾಡುತ್ತವೆ. ಜೊತೆಗೆ ಅವರ ಹೃದಯವನ್ನು ಗೆಲ್ಲುತ್ತಾರೆ.

ಮಕರ

ಮಕರ

ಇವರಿಗೆ ತಮ್ಮ ಬಗ್ಗೆ ಹೆಚ್ಚು ಅಭಿಮಾನ ಹಾಗೂ ಸಂತೋಷವಿರುತ್ತದೆ. ಈ ರಾಶಿಚಕ್ರದ ಹುಡುಗರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಹುಡುಗಿಯರು ಇವರ ಸ್ನೇಹಿತೆಯಾಗಿರಲು ಬಯಸುತ್ತಾರೆ. ಈ ರಾಶಿಯ ಹುಡುಗರು ಹಾಗೂ ಹುಡುಗಿಯರು ಬಹು ಬೇಗ ಆಕರ್ಷಣೆಗೆ ಒಳಗಾಗುತ್ತಾರೆ.

English summary

Women are attracted to these 4 zodiac signs

Based on the accurate study through astrology, we can map out one’s personality trait, true nature, likes-dislikes, future - love, career, relationship, wealth, etc.The most important one that remains on our list is to find our perfect match on this planet. While, some of us dream to find our soul mate, others desire a compatible life partner and a few just want constant attention from the opposite sex.
Subscribe Newsletter